Breaking News

ರಜನಿ, ಕಮಲ್ ಮಾಡದ ಸಾಧನೆ ‘ದಳಪತಿ’ ವಿಜಯ್‌ಗೆ ಹೇಗೆ ಸಾಧ್ಯವಾಯಿತು? ಇಲ್ಲಿದೆ ಅಸಲಿ ‘ಸಕ್ಸಸ್’ ಸೀಕ್ರೆಟ್! 

Spread the love

ತಮಿಳುನಾಡು ಚುನಾವಣಾ ಇತಿಹಾಸದಲ್ಲಿ ಇಂದು ಹೊಸ ಅಧ್ಯಾಯ ಬರೆಯಲಾಗಿದೆ. ಸೂಪರ್‌ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಬಂದು ಹಿಂದೆ ಸರಿದರು, ‘ಉಳಗನಾಯಗನ್’ ಕಮಲ್ ಹಾಸನ್ ಪಕ್ಷ ಕಟ್ಟಿದರೂ ಹೇಳಿಕೊಳ್ಳುವ ಯಶಸ್ಸು ಕಾಣಲಿಲ್ಲ. ಆದರೆ ವಿಜಯ್ ಮಾತ್ರ ಮೊದಲ ಯತ್ನದಲ್ಲೇ ಸೆಂಚುರಿ ಬಾರಿಸಿದ್ದು ಹೇಗೆ?

ವಿಜಯ್ ಅವರ ಗೆಲುವಿನ ಹಿಂದೆ ಈ ಕೆಲವು ಮುಖ್ಯ ಕಾರಣಗಳಿವೆ:

1. “ಕ್ಯಾಮಿಯೋ ಅಲ್ಲ, ಫುಲ್ ಟೈಮ್ ರೋಲ್!”
ರಜನಿಕಾಂತ್ ವರ್ಷಗಟ್ಟಲೆ ಯೋಚಿಸಿ ಕೊನೆಗೆ ಹಿಂದೆ ಸರಿದರು. ಕಮಲ್ ಹಾಸನ್ ಸಿನಿಮಾ ಮತ್ತು ರಾಜಕೀಯ ಎರಡನ್ನೂ ಸರಿದೂಗಿಸಲು ಯತ್ನಿಸಿದರು. ಆದರೆ ವಿಜಯ್ ತನ್ನ 30 ವರ್ಷದ ಅದ್ಭುತ ಸಿನಿಮಾ ಕೆರಿಯರ್‌ಗೆ ಗುಡ್‌ಬೈ ಹೇಳಿ, “ನಾನು ಇನ್ನು ಮುಂದೆ ಪೂರ್ಣಾವಧಿ ರಾಜಕಾರಣಿ” ಎಂದು ಘೋಷಿಸಿದರು. ಈ ಸ್ಪಷ್ಟತೆ  ಜನರಿಗೆ ಅವರ ಮೇಲೆ ನಂಬಿಕೆ ಬರುವಂತೆ ಮಾಡಿತು. ‘ಎಂ.ಜಿ.ಆರ್ ಅವರಷ್ಟು ವರ್ಚಸ್ಸು ವಿಜಯ್‌ಗೆ ಇಲ್ಲ’ ಎಂದವರಿಗೆ ವಿಜಯ್ ಇಂದು ಉತ್ತರ ನೀಡಿದ್ದಾರೆ. ದಶಕಗಳ ರಾಜಕೀಯ ಅನುಭವವಿದ್ದ ಎಂ.ಜಿ.ಆರ್ ಅವರೇ ಪಕ್ಷ ಕಟ್ಟಿ ಸಿಎಂ ಆಗಲು 5 ವರ್ಷ ಬೇಕಾಯಿತು. ಆದರೆ ವಿಜಯ್ ಕೇವಲ 2 ವರ್ಷಗಳಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ! 🚀

2. ಇದು ಅಭಿಮಾನಿ ಸಂಘವಲ್ಲ, ಒಂದು ಸೈನ್ಯ!
ವಿಜಯ್ ಸುಮ್ಮನೆ ಚುನಾವಣೆ ಬಂದಾಗ ಪಕ್ಷ ಕಟ್ಟಲಿಲ್ಲ. ಕಳೆದ 10 ವರ್ಷಗಳಿಂದ ಅವರ 85,000ಕ್ಕೂ ಹೆಚ್ಚು ಅಭಿಮಾನಿ ಸಂಘಗಳು ರಕ್ತದಾನ, ವೈದ್ಯಕೀಯ ಶಿಬಿರ ಮತ್ತು ಸಂಕಷ್ಟದ ಸಮಯದಲ್ಲಿ ಜನಸೇವೆ ಮಾಡುವ ಮೂಲಕ ‘ಶ್ಯಾಡೋ ಪೊಲಿಟಿಕಲ್ ಪಾರ್ಟಿ’ಯಂತೆ ಕೆಲಸ ಮಾಡಿದ್ದವು. ಈ ಭದ್ರ ಬುನಾದಿಯೇ ಇಂದು ಮತಗಳಾಗಿ ಬದಲಾಗಿದೆ. ಬೂತ್ ಮಟ್ಟದ ಏಜೆಂಟ್‌ಗಳು ಬೇಕು, ರಾಜ್ಯಾದ್ಯಂತ ಪ್ರಚಾರ ಮಾಡಬೇಕು ಎಂಬ ನಿಯಮಗಳನ್ನು ವಿಜಯ್ ಗಾಳಿಗೆ ತೂರಿದರು. ಕೇವಲ 50% ಕ್ಷೇತ್ರಗಳಲ್ಲಿ ಅವರು ಮಾಡಿದ ಭಾಷಣಗಳು, ಜನರ ಭಾವನೆಗಳನ್ನು ತಟ್ಟಿ ಇಡೀ ತಮಿಳುನಾಡನ್ನು ಗೆದ್ದಿವೆ.

3. ದ್ರಾವಿಡ ಪಕ್ಷಗಳಿಗೆ ನೇರ ಸವಾಲು!
ಕಮಲ್ ಅಥವಾ ರಜನಿ ಎಂದೂ ಡಿಎಂಕೆ ಅಥವಾ ಎಐಎಡಿಎಂಕೆ ಪಕ್ಷಗಳನ್ನು ನೇರವಾಗಿ ಎದುರು ಹಾಕಿಕೊಳ್ಳಲು ಹೋಗಿರಲಿಲ್ಲ. ಆದರೆ ವಿಜಯ್ ಮೊದಲ ದಿನವೇ “ಡಿಎಂಕೆ ನಮ್ಮ ರಾಜಕೀಯ ಶತ್ರು, ಬಿಜೆಪಿ ಸೈದ್ಧಾಂತಿಕ ವಿರೋಧಿ” ಎಂದು ಗುಡುಗಿದರು. ಈ ಧೈರ್ಯ ಮತ್ತು ನೇರ ಮಾತು ಯುವ ಮತದಾರರನ್ನು ಸೆಳೆಯಿತು. ಒಂಟಿ ಸಲಗನ ನಡಿಗೆ: ಯಾವುದೇ ಜಾತಿ, ಧರ್ಮ ಆಧಾರಿತ ಪಕ್ಷಗಳಿಲ್ಲದೆ, ಕಮ್ಯುನಿಸ್ಟ್ ಅಥವಾ ಇತರ ದೊಡ್ಡ ಪಕ್ಷಗಳ ಮೈತ್ರಿ ಇಲ್ಲದೆ ವಿಜಯ್ ಒಂಟಿಯಾಗಿ ಕಣಕ್ಕಿಳಿದರು. 234 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ನಿಲ್ಲಿಸಿ, ಅದರಲ್ಲಿ ಬಹುಪಾಲು ಹೊಸಬರಿಗೆ (Debutants) ಅವಕಾಶ ನೀಡಿ ಗೆದ್ದು ತೋರಿಸಿದ್ದಾರೆ.  ಡಿಎಂಕೆ ಪಕ್ಷದ ಭದ್ರಕೋಟೆ ಎಂದೇ ಕರೆಯಲ್ಪಡುವ ಚೆನ್ನೈನಲ್ಲಿ ವಿಜಯ್ ಅವರ ಅಲೆ ಎಷ್ಟಿತ್ತೆಂದರೆ, ಒಬ್ಬ ಸಾಮಾನ್ಯ ಅಭ್ಯರ್ಥಿ ಹಾಲಿ ಸಿಎಂ ಎಂ.ಕೆ. ಸ್ಟಾಲಿನ್ ಅವರನ್ನೇ ಸೋಲಿಸುವಂತೆ ಮಾಡಿದ್ದಾರೆ. ಇಂದು ಇಡೀ ಚೆನ್ನೈ ವಿಜಯ್ ವಶವಾಗಿದೆ! ವಿಜಯ್​ ಪಕ್ಷದ ಸಾಮಾನ್ಯ ಕಾರ್ಯಕರ್ತರ ಮುಂದೆ ಡಿಎಂಕೆ ಸರ್ಕಾರದ ದೊಡ್ಡ ದೊಡ್ಡ ಸಚಿವರೇ ಮಣ್ಣು ಮುಕ್ಕಿದ್ದಾರೆ.

ಬರಿ ಸ್ಟಾರ್ ಪವರ್ ಇದ್ದರೆ ಸಾಲದು, ಜನರೊಂದಿಗೆ ಬೆರೆಯುವ ‘ಸಾಮಾನ್ಯ ಗುಣ’  ಮತ್ತು ಅಧಿಕಾರಕ್ಕಾಗಿ ಹಂಬಲಿಸದೆ ಸೇವೆ ಮಾಡುವ ಮನೋಭಾವ ಬೇಕು ಎಂಬುದನ್ನು ವಿಜಯ್ ಸಾಬೀತುಪಡಿಸಿದ್ದಾರೆ. ಇದರೊಂದಿಗೆ ಒಂದು ಕಾಲದಲ್ಲಿ ‘ಅನಿಲ್’ (ಅಳಿಲು) ಎಂದು ಟ್ರೋಲ್ ಮಾಡುತ್ತಿದ್ದವರಿಗೆ, ಇಂದು ಅದೇ ವಿಜಯ್ ಬೆಂಕಿ ಉಗುಳುವ ದೈತ್ಯ ‘ಡ್ರ್ಯಾಗನ್’ ಆಗಿ ಕಾಣಿಸುತ್ತಿದ್ದಾರೆ.

ಈಗ ತಮಿಳುನಾಡು ಹೇಳುತ್ತಿದೆ – “ವಂದೂಟಾನ್ ದಳಪತಿ!” (ದಳಪತಿ ಬಂದೇ ಬಿಟ್ಟರು!)  ಇದರೊಂದಿಗೆ ತಮಿಳುನಾಡಿನಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. 49 ವರ್ಷಗಳ ದಾಖಲೆ ಪುಡಿಪುಡಿ ಮಾಡಿದ ‘ದಳಪತಿ’ ವಿಜಯ್!  ದಶಕಗಳ ಕಾಲ ಬೆಳ್ಳಿ ಪರದೆಯ ಮೇಲೆ ಅಬ್ಬರಿಸಿ , ಈಗ ತಮಿಳುನಾಡಿನ ರಾಜಕೀಯ ರಣಾಂಗಣದಲ್ಲಿ ನಿಜವಾದ ‘ಮಾಸ್ಟರ್’ ಆಗಿ ಹೊರಹೊಮ್ಮಿದ್ದಾರೆ! 2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಇಡೀ ದಕ್ಷಿಣ ಭಾರತವನ್ನೇ ಬೆರಗುಗೊಳಿಸಿದೆ.


Spread the love

About Laxminews 24x7

Check Also

ಹಳೇ ವೈಷಮ್ಯ – ಮೂವರ ಮೇಲೆ ತಲ್ವಾರ್‌ ದಾಳಿ

Spread the loveಬೆಳಗಾವಿ: ಇಲ್ಲಿನ  ಅಮನ್ ನಗರದಲ್ಲಿ ಮೂವರು ಯುವಕರ ಮೇಲೆ ದುಷ್ಕರ್ಮಿಗಳು ತಲ್ವಾರ್‌ ದಾಳಿ ನಡೆಸಿದ್ದಾರೆ. ಹಳೇ ವೈಷಮ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ