Breaking News

ವಿಡಿಯೋ ಕಾಲ್‌ನಲ್ಲಿ ಮಗು ತೋರಿಸಿಲ್ಲವೆಂದು ಅತ್ತೆಗೆ ಚಾಕು ಇರಿದ ಪಾಪಿ ಅಳಿಯ!

Spread the love

ಬೆಳಗಾವಿ : ಕ್ಷುಲ್ಲಕ ಕಾರಣಕ್ಕಾಗಿ ಅಳಿಯನೊಬ್ಬ ತನ್ನ ಅತ್ತೆಗೆ ಚಾಕು ಇರಿದು ಕೊಲೆಗೆ ಯತ್ನಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ನಡೆದಿದೆ.

ಹುಬ್ಬಳ್ಳಿ ತಾಲೂಕಿನ ಮಂಟೂರಿನ ಅರವಿಂದ ಗವಳಿ(26) ಎಂಬಾತನಿಗೆ ಮಹಾದೇವಿ ಕರಿಗಾರ(45) ಎಂಬುವವರು ಒಂದೂವರೆ ವರ್ಷದ ಹಿಂದೆ ತಮ್ಮ ಮಗಳನ್ನು ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಎರಡು ತಿಂಗಳ ಹಿಂದೆಯಷ್ಟೇ ಮಗಳು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಸದ್ಯ ಆಕೆ ತವರು ಮನೆಯಲ್ಲಿದ್ದಾಳೆ.

ಆದರೆ, ಅಳಿಯ ಅರವಿಂದ್ ಪದೇ ಪದೇ ವಿಡಿಯೋ ಕಾಲ್ ಮಾಡಿ ಮಗುವನ್ನು ತೋರಿಸುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ವಿಷಯವಾಗಿ ಅತ್ತೆ ಮಹಾದೇವಿ ಅವರು, “ಕೆಲಸ ಬಿಟ್ಟು ಸದಾ ಮೊಬೈಲ್ ಹಿಡಿದುಕೊಳ್ಳಲು ಸಾಧ್ಯವಿಲ್ಲ, ದಿನಕ್ಕೆ ಒಂದು ಬಾರಿ ಮಾತ್ರ ವಿಡಿಯೋ ಕಾಲ್ ಮಾಡು” ಎಂದು ಬುದ್ಧಿ ಹೇಳಿದ್ದರಂತೆ.

ಈ ಮಾತಿನಿಂದ ಕೆರಳಿದ ಅಳಿಯ ಅರವಿಂದ್, ಅತ್ತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅತ್ತೆ ಕೂಡ “ನನ್ನ ಮನೆ ಬಾಗಿಲಿಗೆ ಬಂದರೆ ಬಿಡುವುದಿಲ್ಲ” ಎಂದು ಎಚ್ಚರಿಕೆ ನೀಡಿದ್ದರು. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡ ಅಳಿಯ, ಆಲದಕಟ್ಟಿ ಗ್ರಾಮದ ಮನೆಗೆ ಬಂದು ಅತ್ತೆ ಮಹಾದೇವಿಯವರಿಗೆ ಚಾಕು ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ.

ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿರುವ ಮಹಾದೇವಿಯವರನ್ನು ಕೂಡಲೇ ಬೆಳಗಾವಿಯ ಬಿಮ್ಸ್ (BIMS) ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅತ್ತೆ ಐಸಿಯುನಲ್ಲಿ (ICU) ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಕೌಟುಂಬಿಕ ಕಲಹವೊಂದು ಈ ಮಟ್ಟಕ್ಕೆ ವಿಕೋಪಕ್ಕೆ ಹೋಗಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.


Spread the love

About Laxminews 24x7

Check Also

ಜೂನ್ 20-21ಕ್ಕೆ ಮತ್ತೆ 6 ಜಿಲ್ಲೆಗಳಿಗೆ ಮುಂಗಾರು ಚುರುಕು – ಯೆಲ್ಲೋ ಅಲರ್ಟ್

Spread the loveಜೂನ್ 20 ಹಾಗೂ 21 ರಂದು ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರಿಗೆ ಭಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ