Breaking News

ಕಲಬುರಗಿಯಲ್ಲಿ ಭೀಕರ ಅಪಘಾತ – ತಾಯಿಯೊಂದಿಗೆ 3 ತಿಂಗಳ ಮಗು ಸ್ಥಳದಲ್ಲೇ ಸಾವು

Spread the love

ಕಲಬುರಗಿ: ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣ ಹೊರವಲಯದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿತಾಯಿಯೊಂದಿಗೆ ಮೂರು ತಿಂಗಳ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಆಟೋ – ಲಾರಿ ಮಧ್ಯೆ ಭೀಕರ ಅಪಘಾತ ನಡೆದು ಶರಣಮ್ಮ (30) ಎಂಬ ಮಹಿಳೆ ಮತ್ತು ಆಕೆಯ 3 ತಿಂಗಳ ಮಗು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ವಾಡಿ ಪಟ್ಟಣಕ್ಕೆ ಆಗಮಿಸುವ ವೇಳೆ ಆಟೋಗೆ ಲಾರಿ ಡಿಕ್ಕಿಯಾಗಿ ದುರಂತ ಸಂಭವಿಸಿದೆ.

ತಾಯಿ ಮತ್ತು ಮಗು ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಅತ್ತೆ ಸಾಬಮ್ಮ, ಆಟೋ ಚಾಲಕ ಖಾಜಾ ಪಟೇಲ್‌ಗೆ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನೂ ಘಟನೆ ಸಂಬಂಧ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಸಾಲ ತೀರಿಸಲು ಹಣ ಕೊಟ್ಟಿಲ್ಲವೆಂದು ರಾಡ್‌ನಿಂದ ಹೊಡೆದು ತಂದೆಯನ್ನೇ ಕೊಂದ ಮಗ

Spread the loveಕೋಲಾರ: ಸಾಲ (Debt) ತೀರಿಸಲು ಹಣ ನೀಡಲಿಲ್ಲವೆಂದು ತಂದೆಯನ್ನೇ ರಾಡ್‌ನಿಂದ ಹೊಡೆದು ಮಗ ಕೊಂದಿರುವ ಘಟನೆ ಕೋಲಾರದಲ್ಲಿ  …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ