Breaking News
Home / ಜಿಲ್ಲೆ / ಕೊರೊನಾ ಸೋಂಕಿತ ವ್ಯಕ್ತಿ ಬಡವರಿಗೆ ಆಹಾರ ಧಾನ್ಯ ವಿತರಿಸಿದ್ದು ಈ ವಿಚಾರ ಇದೀಗ ಆಘಾತವನ್ನುಂಟು ಮಾಡಿದೆ.

ಕೊರೊನಾ ಸೋಂಕಿತ ವ್ಯಕ್ತಿ ಬಡವರಿಗೆ ಆಹಾರ ಧಾನ್ಯ ವಿತರಿಸಿದ್ದು ಈ ವಿಚಾರ ಇದೀಗ ಆಘಾತವನ್ನುಂಟು ಮಾಡಿದೆ.

Spread the love

ಹುಬ್ಬಳ್ಳಿ: ಕೊರೊನಾ ಸೋಂಕಿತ ವ್ಯಕ್ತಿ ಬಡವರಿಗೆ ಆಹಾರ ಧಾನ್ಯ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಿದ್ದು, ಈ ವಿಚಾರ ಇದೀಗ ಆಘಾತವನ್ನುಂಟು ಮಾಡಿದೆ.

ಹುಬ್ಬಳ್ಳಿಯ ಮುಲ್ಲಾ ಓಣಿಯ ರೋಗಿ ನಂ.236 ತನ್ನ ಗೆಳೆಯರು, ಬಂಧುಗಳ ಜೊತೆಗೂಡಿ ಮಾ.27ರಂದು ಮುಲ್ಲಾ ಓಣಿಯ ಜನತೆಗೆ ಆಹಾರ ಧಾನ್ಯ ವಿತರಿಸಿದ್ದು, ಜನ ಆತಂಕಗೊಂಡಿದ್ದಾರೆ. ಡಾಕಪ್ಪಾ ಸರ್ಕಲ್ ನಿಂದ ಕಾಳಮ್ಮನ ಅಗಸಿಯವರೆಗೆ ವಾಸಿಸುತ್ತಿರುವ ಸಾರ್ವಜನಿಕರಿಗೆ 5 ಕೆ.ಜಿ ಅಕ್ಕಿ, 2 ಕೆ.ಜಿ ತೊಗರಿಬೇಳೆ, 1 ಕೆ.ಜಿ ಸಕ್ಕರೆ, 2 ಕೆ.ಜಿ ಗೋಧಿ, 250 ಗ್ರಾಂ. ಚಹಾಪುಡಿ ವಿತರಿಸಿದ್ದಾರೆ ಎಂದು ಪರಿಶೀಲನೆ ವೇಳೆ ದೃಢಪಟ್ಟಿರುತ್ತದೆ.

ಪಡಿತರವನ್ನು ಪಡೆದ ಸಾರ್ವಜನಿಕರಿಗೆ ಕೊರೊನಾ ಸೋಂಕು ತಗಲುವ ಸಾಧ್ಯತೆ ಇದ್ದು, ಸಂಬಂಧಪಟ್ಟವರು ಕೂಡಲೇ ಕೊರೊನಾ ಸಹಾಯವಾಣಿ 1077 ಕರೆಮಾಡಿ ಪರೀಕ್ಷೆಗೆ ಒಳಪಡಬೇಕು ಎಂದು ಸಾರ್ವಜನಿಕ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಅಭಿವೃದ್ಧಿಯ ಚಿಂತನೆಗಳ ಒಂದು ದಿನದ ಅಂತರರಾಷ್ಟ್ರೀಯವಿಚಾರ ಸಂಕಿರಣ ಇಂದು

Spread the love ಸವದತ್ತಿ: ಬಹುಭಾಷಾ ಸಂಗಮ ಸಂಸ್ಥೆಯಿಂದ ಜ.28ರಂದು ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯಾನಂತರ ಭಾರತ ಅಭಿವೃದ್ಧಿಯ ಚಿಂತನೆಗಳ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ