Breaking News

2028ಕ್ಕೂ ಗ್ಯಾರಂಟಿಗಳು ಮುಂದುವರೆಯುತ್ತವೆ: ಡಿಕೆಶಿ

Spread the love

ಚಾಮರಾಜನಗರ: ಮುಂದಿನ ಚುನಾವಣೆಯಲ್ಲಿ ಕೂಡ ನಿಮ್ಮ ಶಕ್ತಿ, ಸ್ಪೂರ್ತಿಯಿಂದ ನಮ್ಮದೇ ಸರ್ಕಾರ ಬರುತ್ತದೆ. 2028ಕ್ಕೂ ಕೂಡ ಗ್ಯಾರಂಟಿಗಳು ಮುಂದುವರೆಯುತ್ತದೆ ಎಂದು ಸಿಎಂ ಡಿಕೆ ಶಿವಕುಮಾರ್  ಹೇಳಿದ್ದಾರೆ.

ಕೊಳ್ಳೇಗಾಲ, ಹನೂರು ಕ್ಷೇತ್ರಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಕ್ಸಿಜನ್ ದುರಂತ ಸಂತ್ರಸ್ತರಿಗೆ ಸರ್ಕಾರಿ ನೌಕರಿ ಕೊಡಲಾಗಿದೆ. ಇದು ಒಂದು ಐತಿಹಾಸಿಕ ಕಾರ್ಯ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. ಇದು ಒಂದು ಇತಿಹಾಸವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದೇವರು ನಮಗೆ ಎರಡು ಆಯ್ಕೆ ಕೊಟ್ಟಿದ್ದಾನೆ. ಒಂದು ಕೊಟ್ಟು ಹೋಗೋದು ಇನ್ನೊಂದು ಬಿಟ್ಟು ಹೋಗೋದು. ಮಲೆ ಮಹದೇಶ್ವರ ಬೆಟ್ಟದಲ್ಲಿ ಸಂಪುಟ ಸಭೆ ನಡೆಸಿ ಮೂರು ಸಾವಿರಕ್ಕೂ ಹೆಚ್ಚು ಕೋಟಿ ಅಭಿವೃದ್ಧಿ ಕೆಲಸಕ್ಕೆ ತೀರ್ಮಾನ ಮಾಡಿದ್ದೆವು. ಇಡೀ ರಾಜ್ಯ ಸರ್ಕಾರ ನಿಮ್ಮ ಜೊತೆ ಇದೆ ಎಂಬ ಸಂದೇಶ ರವಾನಿಸಲು ನಾವು ಬಂದಿದ್ದೇವೆ. ಟೀಕೆ ಎದುರಿಸಿ ಗೆದ್ದರೆ ನಾಯಕನಾಗುತ್ತಾನೆ, ಸೋತರೆ ಮಾರ್ಗದರ್ಶಕನಾಗುತ್ತಾನೆ. ಶಿವ ತನ್ನ ತಲೆ ಮೇಲೆ ಗಂಗೆಗೆ ಸ್ಥಳ ನೀಡಿದ್ದಾನೆ. ಆದರೆ ಕಾಂಗ್ರೆಸ್‌ಗೆ ನಿಮ್ಮ ಹೃದಯದಲ್ಲಿ ಸ್ಥಾನ ಕೊಟ್ಟಿದ್ದಿರಿ ಎಂದು ಹೇಳಿದರು.

ರೇಷ್ಮೆ ಪರಿಚಯಿಸಿದ್ದು ಟಿಪ್ಪು ಸುಲ್ತಾನ್. ಈಗ ರೇಷ್ಮೆಯನ್ನು ರಾಮನಗರ, ಮಂಡ್ಯ, ಬಳ್ಳಾರಿ, ಹಾವೇರಿ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ. ಇದನ್ನು ಶಾಶ್ವತವಾಗಿ ಉಳಿಸಬೇಕೆಂಬುದು ಸರ್ಕಾರದ ಉದ್ದೇಶ. ಕೈಮಗ್ಗಗಳಿಗೆ ಕೈಗಾರಿಕಾ ಸ್ಥಾನಮಾನ ಕೊಡಲು ತೀರ್ಮಾನಿಸಿದ್ದೇವೆ. ಅಭಿವೃದ್ಧಿ ಎಂಬುದು ಪವಾಡದಿಂದ ಸಾಧ್ಯವಿಲ್ಲ. ಎಲ್ಲರು ಶ್ರಮಪಟ್ಟರೆ ಮಾತ್ರ ಸಾಧ್ಯ. ಭಾರತ್ ಜೋಡೋ ಯಾತ್ರೆ ಈ ಜಿಲ್ಲೆಯಿಂದ ಆರಂಭವಾಯಿತು. ಎಲ್ಲರೂ ಕೂಡ ನಮ್ಮ ಜೊತೆಗೆ ಕೈ ಜೋಡಿಸಿದ್ದಿರಿ. ಪಾದಯಾತ್ರೆ ಮಾಡಿದ ಕಡೆಯೆಲ್ಲಾ ಕಾಂಗ್ರೆಸ್ ಪಕ್ಷದ ಶಾಸಕರು ಗೆದ್ದಿದ್ದಾರೆ. ಕಮಲ ಕೆಸರಿನಲ್ಲಿದ್ದರೆ ಚೆನ್ನ, ತೆನೆ ಹೊಲದಲ್ಲಿದ್ದರೆ ಚೆನ್ನ ದಾನ ಧರ್ಮ ಮಾಡುವ ಕೈ ಅಧಿಕಾರಿದಲ್ಲಿದ್ದರೆ ಚೆನ್ನ ಎಂದು ಮತ್ತೊಮ್ಮೆ ಒತ್ತಿ ಹೇಳಿದರು.

ಸಿದ್ದರಾಮಯ್ಯ ನೇತೃತ್ವದಲ್ಲಿ ಮಾಜಿ ಸಚಿವರಾದ ಮಹದೇವಪ್ಪ, ವೆಂಕಟೇಶ್ ಇಬ್ಬರು ಕೂಡ ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡಿದ್ದಾರೆ. ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಕೊಟ್ಟಿದ್ದೇವೆ. ಚಾಮರಾಜನಗರ ಜಿಲ್ಲೆಗೆ ಒಂದು ಸಾವಿರಕ್ಕೂ ಹೆಚ್ಚು ಕೋಟಿ ನೀರಾವರಿಗೆ ಕೊಟ್ಟಿದ್ದೇವೆ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ. ಗಿರಿಜನರಿಗೆ ಪೌಷ್ಠಿಕ ಆಹಾರ ಕಿಟ್ ಕೊಡುವ ಬಗ್ಗೆ ಗಮನ ಹರಿಸುತ್ತೇನೆ ಎಂದು ತಿಳಿಸಿದರು.


Spread the love

About Laxminews 24x7

Check Also

ಬೆಂಗಳೂರಿನಲ್ಲಿ ಬಿಕಾಂ ವಿದ್ಯಾರ್ಥಿಗೆ ಸಹಪಾಠಿಯಿಂದಲೇ ಚಾಕು ಇರಿತ

Spread the loveಬೆಂಗಳೂರು: ವಿದ್ಯಾರ್ಥಿಗಳ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ