Breaking News

ಗೋಲ್ಡ್ ಸ್ಮಗ್ಲಿಂಗ್ ಕೇಸ್‌ – ರನ್ಯಾ ರಾವ್‌ಗೆ ಬರೋಬ್ಬರಿ 89.91 ಕೋಟಿ ದಂಡ

Spread the love

ಬೆಂಗಳೂರು: ಬಹುಕೋಟಿ ಚಿನ್ನ ಕಳ್ಳಸಾಗಣೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್‌ನ ನಟಿ ರನ್ಯಾರಾವ್‌ಗೆ ಕಸ್ಟಮ್ಸ್ ಇಲಾಖೆಯು ಬರೋಬ್ಬರಿ 89.91 ಕೋಟಿ ರೂ. ದಂಡ ವಿಧಿಸಿ ಐತಿಹಾಸಿಕ ಆದೇಶ ಹೊರಡಿಸಿದೆ.

ಕಸ್ಟಮ್ಸ್ ಜಂಟಿ ನಿರ್ದೇಶಕ ಸಂದೀಪ್ ಅವರು ಹೊರಡಿಸಿರುವ 399 ಪುಟಗಳ ಸುದೀರ್ಘ ಆದೇಶದಲ್ಲಿ ನಟಿ ರನ್ಯಾರಾವ್ ಅಂತರರಾಷ್ಟ್ರೀಯ ಮಟ್ಟದ ಗೋಲ್ಡ್ ಸ್ಮಗ್ಲಿಂಗ್ ಜಾಲದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದನ್ನು ಸಾಕ್ಷಿ ಸಮೇತ ಸಾಬೀತುಪಡಿಸಲಾಗಿದೆ. ದಂಡದ ಮೊತ್ತ ಹಾಗೂ ಆದೇಶದ ಅಧಿಕೃತ ಪ್ರತಿಯನ್ನು ಕಸ್ಟಮ್ಸ್ ಇಲಾಖೆ ಈಗಾಗಲೇ ರನ್ಯಾರಾವ್‌ಗೆ ಕಳುಹಿಸಿದೆ.

ಕಂದಾಯ ಗುಪ್ತಚರ ನಿರ್ದೇಶನಾಲಯ  ಅಧಿಕಾರಿಗಳು ನಟಿ ರನ್ಯಾ ಬಂಧಿಸಿ ನಡೆಸಿದ ತೀವ್ರ ವಿಚಾರಣೆ ವೇಳೆ ಬೆಚ್ಚಿಬೀಳಿಸುವ ಮಾಹಿತಿ ಹೊರಬಿದ್ದಿದೆ. ಮಾರ್ಚ್‌ 7, 2024 ಮತ್ತು ಫೆಬ್ರವರಿ 2, 2025ರ ನಡುವಿನ ಕೇವಲ ಒಂದು ವರ್ಷದ ಅವಧಿಯಲ್ಲಿ ಈ ದಂಧೆ ನಡೆದಿದೆ. ದುಬೈನಿಂದ ಭಾರತಕ್ಕೆ ಬರೋಬ್ಬರಿ 113 ಕೆ.ಜಿ. ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡಿರುವುದು ತನಿಖೆಯಲ್ಲಿ ಸ್ಪಷ್ಟವಾಗಿ ಸಾಬೀತಾಗಿದೆ.

ನಟಿ ರನ್ಯಾರಾವ್ ತನ್ನ ಸಹ ಆರೋಪಿಗಳಾದ ತರುಣ್ ಸೇರಿದಂತೆ ಇತರ ಮೂವರ ಜೊತೆಗೂಡಿ ಈ ಬೃಹತ್ ಚಿನ್ನದ ಕಳ್ಳಸಾಗಣೆ ವಹಿವಾಟು ನಡೆಸಿದ್ದು ಬಯಲಾಗಿದೆ. ಈ ಹಿಂದೆ ಹಿಂದೆ ಡಿಆರ್‌ಐ ಅಧಿಕಾರಿಗಳು ರನ್ಯಾರಾವ್ ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ 2.5 ಕೋಟಿ ರೂ. ನಗದು ಮತ್ತು 2.06 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳುಪತ್ತೆಯಾಗಿದ್ದವು. ಮನೆಯಲ್ಲಿ ಪತ್ತೆಯಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳ ಫೋಟೋ ಹಾಗೂ ವಿವರವಾದ ಪಟ್ಟಿ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಮನೆಯಲ್ಲಿ ಸಿಕ್ಕಿದ್ದೇನು?
ಪಚ್ಚೆ ಕುಂದನ್ ಮೋಪು ನೆಕ್ಲೇಸ್ (2 ಕ್ಯಾರೆಟ್) – 1
ವಜ್ರ ಹಾಗೂ ಕೆಂಪು ಹರಳುಗಳ ವಂಕಿ (1.2 ಕ್ಯಾರೆಟ್)
ಪೋಲ್ಕಿ ಕೆಂಪು ಜುಮುಕಿ – 1 ಜೋಡಿ
ಮುತ್ತಿನ ಮಾಟಿಲ್ (ಕಿವಿ ಸರ) – 1 ಜೋಡಿ
ಹಸಿರು ಹರಳಿನ ಬಳೆ – 1
ಕುಂದನ್ ನೆಕ್ಲೇಸ್ ಸೆಟ್
ಕುಂದನ್ ಹಾರ – 1
ವಜ್ರ ಮತ್ತು ಪಚ್ಚೆ ಕಿವಿಯೋಲೆ/ಟಾಪ್ಸ್ (2 ಕ್ಯಾರೆಟ್)
ಮುತ್ತಿನ ನೆಕ್ಲೇಸ್/ಸರ (2 ಕ್ಯಾರೆಟ್)
ಪದಕ (ಪೆಂಡೆಂಟ್) – 1
ಕರಿಮಣಿ ಸರ

ದುಬೈನಿಂದ ಬೆಂಗಳೂರಿಗೆ ಅಕ್ರಮವಾಗಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ 2025ರ ಮಾರ್ಚ್ 2ರಂದು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಅಧಿಕಾರಿಗಳು ‘ಮಾಣಿಕ್ಯ’ ಸಿನಿಮಾ ಖ್ಯಾತಿಯ ನಟಿ ರನ್ಯಾ ರಾವ್‌ ಅವರನ್ನು ಬಂಧಿಸಿದ್ದರು.

ವಿಮಾನ ನಿಲ್ದಾಣದಲ್ಲಿ ರನ್ಯಾ ರಾವ್ ತಪಾಸಣೆ ನಡೆಸಿದಾಗ ಸುಮಾರು 12 ಕೋಟಿ ರೂಪಾಯಿ ಮೌಲ್ಯದ 14.8 ಕೆಜಿ ವಿದೇಶಿ ಮೂಲದ ಚಿನ್ನದ ಬಿಸ್ಕತ್ತುಗಳು ಪತ್ತೆಯಾಗಿದ್ದವು. ಆರ್ಥಿಕ ಅಪರಾಧಗಳ ನ್ಯಾಯಾಲಯವು ಈ ಪ್ರಕರಣದಲ್ಲಿ ಮೇ 2025ರಲ್ಲಿ ರನ್ಯಾಗೆ ಡಿಫಾಲ್ಟ್ ಜಾಮೀನು ಮಂಜೂರು ಮಾಡಿತ್ತಾದರೂ, ಕೇಂದ್ರ ಸರ್ಕಾರವು ರನ್ಯಾ ಮೇಲೆ ಕಠಿಣವಾದ ಕಾಫಿಪೋಸಾ (COFEPOSA – Conservation of Foreign Exchange and Prevention of Smuggling Activities Act) ಕಾಯ್ದೆಯನ್ನು ಜಾರಿಗೊಳಿಸಿದ್ದರಿಂದ ಜೈಲಿನಿಂದ ಬಿಡುಗಡೆಯಾಗಲು ಸಾಧ್ಯವಾಗಲಿಲ್ಲ ಈ ಕಾಯ್ದೆಯಡಿ ಆರೋಪಿಯನ್ನು ಜಾಮೀನಿಲ್ಲದೆ ಸುಮಾರು ಒಂದು ವರ್ಷದವರೆಗೆ ಬಂಧನದಲ್ಲಿಡಬಹುದು.


Spread the love

About Laxminews 24x7

Check Also

ಬರ ಪರಿಹಾರ ನೀಡಿಲ್ಲ, ಬೇಡಿಕೆ ಈಡೇರಿಸಿಲ್ಲ; ಜನತಾ ನ್ಯಾಯಾಲಯಕ್ಕೆ ಹೋಗುತ್ತೇವೆ: ಆರ್. ಅಶೋಕ್

Spread the loveಬೆಂಗಳೂರು: ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗಾಗಿ ಪ್ರತಿಪಕ್ಷ ಬಿಜೆಪಿ  ಇಟ್ಟಿರುವ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸಿಲ್ಲ. ಬದಲಾಗಿ ರೈತರಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ