Breaking News
Home / Uncategorized / ಹಿರಿಯರ ಸ್ಮರಣಾರ್ಥ ಆಹಾರ ಕಿಟ್ ವಿತರಣೆ

ಹಿರಿಯರ ಸ್ಮರಣಾರ್ಥ ಆಹಾರ ಕಿಟ್ ವಿತರಣೆ

Spread the love

 

ಘಟಪ್ರಭಾ: ದಿ.ಜಾನ್ ಆರ್.ಕಲಾರಕೊಪ್ಪ, ಹಾಗೂ ದಿ.ಎಂ.ಬಿ.ಐಹೊಳಿ ಅವರ ಸ್ಮರನಾರ್ಥ ದೈಹಿಕ ಶಿಕ್ಷಕ ಡಿ.ಜೆ.ಕಲಾರಕೊಪ್ಪ ಅವರಿಂದ ಸರ್ಕಾರಿ ಶಾಲೆಗಳ ಬಿಸಿ ಊಟ ಸಿಬ್ಬಂದಿಗೆ ಆಹಾರ ಧಾನ್ಯ ಕಿಟ್‌ಗಳನ್ನು ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಶನಿವಾರ ವಿತಿರಿಸಲಾಯಿತು.

 

ಸಮಾರಂಭಕ್ಕೆ ಮುಖ್ಯ ಅತಿಥಿಗಾಳಗಿ ಆಗಮಿಸಿದ ಮೂಡಲಗಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಅವರು ಮಲ್ಲಾಪೂರ ಪಿ.ಜಿ ಹಾಗೂ ಶಿಂದಿಕುರಬೇಟ ಸಿ.ಆರ್.ಸಿ ವ್ಯಾಪ್ತಿಯ ಸರ್ಕಾರಿ ಶಾಲೆಗಳ 30 ಕ್ಕೂ ಹೆಚ್ಚು ಬಿಸಿ ಊಟ ಸಿಬ್ಬಂದಿಗೆ ಆಹಾರ ಧಾನ್ಯ ಕಿಟ್‌ಗಳು ಹಾಗೂ ನಗದು 200 ರೂಪಾಯಿಗಳನ್ನು ವಿತರಿಸಿದರು.

ನಂತರ ಮಾತನಾಡಿದ ಅವರು ಕಳೆದ 18 ತಿಂಗಳಿಂದ ಶಾಲೆಗಳು ಬಂದಿರುವ ಕಾರಣ ಬಿಸಿ ಊಟ ಸಿಬ್ಬಂದಿಗೆ ಕೆಲಸ ಇಲ್ಲದಂತಾಗಿದ್ದು, ಅವರು ಕೂಡಾ ಲಾಕ್ ಡೌನ್ ನಿಂದ ತೊಂದರೆ ಗೀಡಾಗಿದ್ದಾರೆ. ಬ್ಬಂದಿಗಳು ಕೆಲಸು ಇಲ್ಲ ಅಂತ ಸುಮ್ಮನಿರದೇ ತಮ್ಮ ತಮ್ಮ ಶಾಲೆಗಳ ದಾಖಲಾತಿಗಳ ಹೆಚ್ಚಳಕ್ಕೆ ಶ್ರಮಿಸಬೇಕು. ಕನಿಷ್ಠ ಓರ್ವ ಸಿಬ್ಬಂದಿಯಿಂದ ಐದು ಮಕ್ಕಳು ಸರ್ಕಾರಿ ಶಾಲೆಗೆ ದಾಖಲಾದರೆ ತಾವು ಸೇವೆ ಸಲ್ಲಿಸುತ್ತಿರುವ ಶಾಲೆಗೆ ಸಹಕಾರಿ ಆಗುತ್ತದೆ.

 

ದೈಹಿಕ ಶಿಕ್ಷಕ ಕಲಾರಕೊಪ್ಪ ಅವರು ತಮ್ಮ ಹಿರಿಯರ ಸ್ಮರನಾರ್ಥಾವಾಗಿ ಸಂಕಷ್ಟದಲ್ಲಿರುವ ತಮ್ಮ ಸಹುದ್ಯೋಗಿಗಳಿಗೆ ಆಹಾರ ಧಾನ್ಯ ಕಿಟ್‌ಗಳನ್ನು ವಿತರಿಸುತ್ತಿರುವ ಕಾರ್ಯ ಮಾದರಿಯಾಗಿದೆ ಎಂದು ಹೇಳಿದರು.

 

ಈ ಸಂರ್ಭದಲ್ಲಿ ಅಕ್ಷರ ದಾಸೋಹ ನಿರ್ದೇಶಕರಾದ ಮಲಬನ್ನವರ, ಎಸ್.ಡಿ.ಎಂ.ಸಿ ಅಧ್ಯಕ್ಷ ಅಲ್ತಾಪ ಉಸ್ತಾದ, ಪ.ಪಂ ಸದಸ್ಯ ಸಲೀಮ ಕಬ್ಬೂರ, ಮುಖ್ಯೋಪಾದ್ಯಾಪಕಿ ಆಸ್.ಎಂ. ಖಾನಜಾದೆ, ಶಿಕ್ಷಕರಾದ ಎಸ್.ಡಿ.ಹಂಚಿನಾಳ, ಡಿ.ಜೆ.ಕಲಾರಕೊಪ್ಪ, ಶಿಫೀಕ ಬಾಗಸಿರಾಜ, ಡಿ.ಕೆ.ಜಮಾದಾರ, ರೋಣ, ಹಣಮಂತ ಕರೆವ್ವಗೋಳ, ಶಿಕ್ಷಕಿಯರಾದ ಎಂ.ಎ.ಸಿದ್ದಿಕಿ, ಎನ್.ಬಿ.ಭಜಂತ್ರಿ, ಜೆ.ಎ.ಬಂಡಿ ಸೇರಿದಂತೆ ಅನೇಕರು ಇದ್ದರು.

 

 


Spread the love

About Laxminews 24x7

Check Also

ನೀರಿಲ್ಲದಿದ್ದರೇನು..? ಬಿಯರ್ ಇದೆಯಲ್ಲ.. : ಬೆಂಗಳೂರಲ್ಲಿ ಬಿಯರ್‌ಗೆ ಫುಲ್ ಡಿಮ್ಯಾಂಡ್!

Spread the loveಬೆಂಗಳೂರು : ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನದಿಂದ ಹೆಚ್ಚಾಗುತ್ತಿದ್ದು, ಬಿಯರ್‌ಗೂ ಬೇಡಿಕೆ ಹೆಚ್ಚಾಗಿದೆ. ಮದ್ಯಪ್ರಿಯರು ಹಾಟ್​ ಡ್ರಿಂಕ್ಸ್​ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ