Breaking News

ಮೂಲ ಸೌಕರ್ಯ ವಿಕಾಸಕ್ಕೆ ಮೊದಲ ಆದ್ಯತೆ

Spread the love

ಅಥಣಿ: ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ೨೦೨೬-೨೭ನೇ ಸಾಲಿನ ಬಜೆಟ್‌ನ್ನು ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳೆ ಮಂಡಿಸಿದರು.
ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪುರಸಭೆಯ ಒಟ್ಟು ಆದಾಯ ೩೮,೭೭,೭೯,೦೦೦ ರೂ. ಎಂದು ನಿರೀಕ್ಷಿಸಲಾಗಿದ್ದು, ಇದರಲ್ಲಿ ಮುಂಬರುವ ವರ್ಷದಲ್ಲಿ ೩೮,೪೩,೦೧,೬೦೩ ರೂ. ಒಟ್ಟು ಖರ್ಚು ಮಾಡಲು ಅಂದಾಜಿಸಲಾಗಿದೆ. ಒಟ್ಟು ೩೪,೭೬,೮೯೭ ರೂ. ಉಳಿತಾಯವಾಗಲಿದ್ದು, ಪುರಸಭೆ ಆರ್ಥಿಕವಾಗಿ ಸದೃಢ ಸ್ಥಿತಿಯಲ್ಲಿದೆ. ರಸ್ತೆ ನಿರ್ಮಾಣ, ಕುಡಿಯುವ ನೀರು ಪೂರೈಕೆ, ಒಳಚರಂಡಿ, ಬೀದಿದೀಪ ನಿರ್ವಹಣೆಗೆ ಆದ್ಯತೆ ನೀಡಲಾಗುವುದು ಎಂದರು.
ಸದಸ್ಯ ಸಂತೋಷ ಸಾವಡಕರ ಮಾತನಾಡಿ, ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಅಧ್ಯಕ್ಷರ ಜತೆಗೂಡಿ, ಮುಖ್ಯಾಧಿಕಾರಿ ಶ್ರಮಿಸುತ್ತಿದ್ದು, ಜನರಿಗೆ ತೊಂದರೆಯಾಗದಂತೆ ಎಲ್ಲ ವಾರ್ಡ್ಗಳ ಅಭಿವೃದ್ಧಿಗೂ ಅನುದಾನ ಮೀಸಲಿಡಬೇಕು. ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸಬೇಕು ಎಂದರು.
ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಮಾತನಾಡಿ, ಆಡಳಿತ ಮಂಡಳಿ ಸಹಕಾರದಿಂದ ಪಟ್ಟಣದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದ್ದು, ಮೂಲ ಸೌಕರ್ಯ ಒದಗಲಾಗಿಸುವುದು ಎಂದರು.
ಪುರಸಭೆ ಉಪಾಧ್ಯಕ್ಷೆ ಭುವನೇಶ್ವರಿ ಯಂಕ್ಕಚಿ, ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್, ಸದಸ್ಯರಾದ ಮಲ್ಲಿಕಾರ್ಜುನ ಬುಟಾಳೆ, ಸಯ್ಯದ್ ಗದ್ಯಾಳ, ಪ್ರಮೊದ ಬಿಳ್ಳೂರ, ಉದಯ ಸೊಳಸಿ, ಕಲ್ಲೇಶ ಮಡ್ಡಿ, ಬಸವರಾಜ ನಾಯಿಕ, ಮೃಣಾಲಿನಿ ದೇಶಪಾಂಡೆ, ಮಲ್ಲು ಹುದ್ದಾರ, ರಾಜು ಗುಡೋಡಗಿ, ಶಶಿಕಾಂತ ಹುಲಕುಂದ, ವಿಲಿನ ಯಳಮಲಿ, ರಮೇಶ ಪವಾರ, ಬಸವರಾಜ ಪಾಟೀಲ, ಶಾಂತಾ ಲೋನಾರಿ ಇತರರಿದ್ದರು.

Spread the love

About Laxminews 24x7

Check Also

ತಾಳ್ಮೆಯಿಂದ ಪರೀಕ್ಷೆ ಎದುರಿಸಬೇಕು

Spread the loveಅಥಣಿ: ಸತತ ಪರಿಶ್ರಮದೊಂದಿಗೆ ತಾಳ್ಮೆಯಿಂದ ಪರೀಕ್ಷೆ ಎದುರಿಸಬೇಕು ಎಂದು ಸ್ಥಳೀಯ ಕೆಎಲ್‌ಇ ಸಂಸ್ಥೆಯ ಸಿ.ಎಸ್.ಕಿತ್ತೂರ ಪ್ರೌಢಶಾಲೆ ಮುಖ್ಯಶಿಕ್ಷಕ ಎಸ್.ಜಿ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ