Breaking News

ಮೋದಿ ನಿರ್ಧಾರಕ್ಕೆ ನಮ್ಮ ಬೆಂಬಲ ಇದ್ದೆ ಇರುತ್ತೆ, ಇದರಲ್ಲಿ ಯಾವುದೇ ಸಂಕೋಚ ಇಲ್ಲ ” : ದೇವೇಗೌಡರು

Spread the love

ಬೆಂಗಳೂರು, -ನಮ್ಮ ರಾಜ್ಯದಲ್ಲಿ ಕೊರೋನಾದಿಂದ ಜನ ಸತ್ತಿದ್ದು, ಪ್ರಧಾನಿ‌ ನರೇಂದ್ರಮೋದಿ ಅವರ ಕಾರ್ಯಕ್ರಮಕ್ಕೆ ನಾವು ಬೆಂಬಲ ಕೊಡುತ್ತೇವೆ. ಇದರಲ್ಲಿ ಯಾವುದೇ ಸಂಕೋಚ ಇಲ್ಲ. ಸರ್ಕಾರದ ತೀರ್ಪಿಗೆ ಬೆಂಬಲ ಕೊಡುತ್ತೇವೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಪ್ರಧಾನಿಗಳು ಮೇ 3 ರವರೆಗೂ ಲಾಕ್ ಡೌನ್ ಘೋಷಣೆ ಮಾಡಿದ್ದಾರೆ. ಕೋರೋನಾ ಹೊಡೆದೋಡಿಸಲು ಮಹಡಿಯ ಮೇಲೆ ನಿಂತು ಶಬ್ಧ ಮಾಡುವುದು. ಕತ್ತಲ್ಲಿನಿಂದ ಬೆಳಕಿನೆಡೆಗೆ ಎಂಬ ಸಂದೇಶದೊಂದಿಗೆ ದೀಪ ಹಚ್ಚುವುದು. ಹೀಗೆ ಪ್ರಧಾನಿ ಗಳ ಹೋರಾಟಕ್ಕೆ ಎಲ್ಲ ರೀತಿಯ ಸಹಕಾರ ನೀಡಿದ್ದೆವೆ. ಮುಂದೆಯೂ ಸಹಕಾರ ನೀಡ್ತಾ ಇರುತ್ತೇವೆ ಎಂದರು.

ರಾಜಕಾರಣ ಬೇರೆ. ಆದರೆ ದೇಶದ ವಿಚಾರದಲ್ಲಿ ನಾವು ಜೊತೆಗಿರುತ್ತೆವೆ. ಲಾಕ್ ಡೌನ್ ಸಂದರ್ಭದಲ್ಲಿ ಕೆಲವು ದೋಷಗಳಿವೆ. ಅನೇಕ ಕೂಲಿ ಕಾರ್ಮಿಕರು ಕಾಲ್ನಡಿಗೆಯಲಿ ಗುಳೆ ಹೋಗ್ತಾ ಇದ್ದಾರೆ. ಅವರಿಗೆ ಊಟ, ತಿಂಡಿಯ ವ್ಯವಸ್ಥೆ ಮಾಡಲಾಗುತ್ತಿಲ್ಲ. ಗುತ್ತಿಗೆದಾರರಿಗೆ ಕಾರ್ಮಿಕರ ರಕ್ಷಣೆ ಮಾಡುವಂತೆ ರಾಜ್ಯ ಸರ್ಕಾರ ಸೂಚನೆ ಕೊಟ್ಟಿದ್ದರೂ ಅನೇಕ ಕಡೆ ಇದನ್ನು ಪಾಲಿಸಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಆರ್ಥಿಕವಾಗಿ ಕೇಲವು ಸಂಕಷ್ಟ ಇದೆ. ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ವಿಡಿಯೊ ಕಾನ್ಫರೆನ್ಸ್ ಮಾಡಿದ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದ ಬಗ್ಗೆ ಮುಖ್ಯಮಂತ್ರಿಗಳು ಹೇಳಿದ್ದಾರೆ. ಇದುವರೆಗೂ ಪ್ರಧಾನಿಯಿಂದ ಯಾವುದೆ ಉತ್ತರ ಬಂದಿಲ್ಲ. ಬೇರೆ ರಾಷ್ಟ್ರಗಳಲ್ಲಿ ವೇಗವಾಗಿ ಸೋಂಕು ಹರಡುತ್ತಿದೆ. ನಮ್ಮ ದೇಶದಲ್ಲಿ ಜನ ಸಂಖ್ಯೆಗೆ ಹೊಲಿಸಿದ್ರೆ ಸಾವಿನ ಪ್ರಮಾಣ ಕಡಿಮೆ ಇದೆ. ಬಡವರು ನಾನಾ ರೀತಿ ತೊಂದರೆ ಅನುಭವಿಸುತ್ತಿದ್ದಾರೆ. ಇದು ಮೋದಿ ಅವರ ಗಮನಕ್ಕೆ ಬಂದಿದೆ. ಕೆಲವರಿಗೆ ಊಟವೂ ಸಿಗುತ್ತಿಲ್ಲ.

ಡೆಲ್ಲಿ, ಯುಪಿ, ಹೀಗೆ ಅನೇಕ ಕಡೆಗೆ ಜನ ಹೋಗುತ್ತಿದ್ದಾರೆ.‌ ಕಾರ್ಮಿಕರು ಗುಳೆ ಹೋಗುತ್ತಿದ್ದಾರೆ. ಮಾಲೀಕರಿಗೆ ಸಂಬಳ ಕೊಡಿ ಅಂದ್ರು ಕೊಡ್ತಿಲ್ಲ ಎಂದು ಹೇಳಿದರು. ಸರ್ಕಾರದ ಸೂಚನೆಯನ್ನು ಕಟ್ಟಡ ಮಾಲೀಕರು ಪಾಲನೆ ಮಾಡಿಲ್ಲ. ಅನೇಕ ರಾಜ್ಯದಲ್ಲಿ ಇದು ಜಾರಿಗೆ ಬಂದಿಲ್ಲ. ಕೆಲ ರಾಜ್ಯದಲ್ಲಿ ಮಾತ್ರ ಇದು ಜಾರಿಗೆ ಬಂದಿದೆ. ದೆಹಲಿಯಲ್ಲಿ 5 ಸಾವಿರ, ಬೇರೆ ಕಡೆ 2 ಸಾವಿರ ಕೊಡ್ತಿದ್ದಾರೆ. ಆದರೆ, ಕೆಲವು ಕಡೆ ಕಾರ್ಮಿಕರಿಗೆ ಸಂಬಳ ಕೊಡ್ತಿಲ್ಲ.

ನಾಳೆ ಕೆಲ ಘೋಷಣೆ ಮಾಡೋದಾಗಿ ಹೇಳಿದ್ದಾರೆ. ನಾಳಿನ ಘೋಷಣೆ ನೋಡಿಕೊಂಡು ಏನು ಮಾಡಬೇಕು ಅಂತ ತೀರ್ಮಾನ ಮಾಡ್ತೀನಿ. ಪ್ರಧಾನಿಗಳು ಘೋಷಣೆ ನಂತರ ನಾನು ಮಾತಾಡುತ್ತೇನೆ.

ಪ್ರಧಾನಿಗೆ ಬರೆದಿರುವ ನನ್ನ ಪತ್ರಕ್ಕೆ ಇನ್ನು ಉತ್ತರ ಬಂದಿಲ್ಲ. ನಾನು ಕೇವಲ ನಮ್ಮ ರಾಜ್ಯಕ್ಕಾಗಿ ಪತ್ರ ಬರೆದಿಲ್ಲ. ಎಲ್ಲಾ ರಾಜ್ಯದ ವಿಚಾರ ಗ್ರಹಿಸಿ ಪತ್ರ ಬರೆದಿದ್ದೇನೆ. ಪತ್ರದಲ್ಲಿ ನನ್ನ ಅನುಭವದ ಅನೇಕ ಸಲಹೆ ನೀಡಿದ್ದೆನೆ. ಅದರ ಬಗ್ಗೆ ಕ್ರಮ ತೆಗೆದುಕೊಳ್ತಾರಾ ನೋಡೋಣ ಎಂದರು.


Spread the love

About Laxminews 24x7

Check Also

ಚಾಲಕರಿಗೆ ತಲೆನೋವಾದ ‘ಪ್ಯಾನಿಕ್ ಬಟನ್’

Spread the love ಕಲಬುರಗಿ: ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ನೋಂದಣಿಯಾದ ಜಿಲ್ಲೆಯ ಸಾರ್ವಜನಿಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ