Breaking News

‘ತಾತ’ನಾದ ಕನಕಪುರ ಬಂಡೆ: ಡಿ.ಕೆ. ಶಿವಕುಮಾರ್ ಮನೆಗೆ ಮಹಾಲಕ್ಷ್ಮಿಯ ಆಗಮನ! 

Spread the love

ಕರ್ನಾಟಕ ರಾಜಕಾರಣದ ಬಲಿಷ್ಠ ನಾಯಕರಲ್ಲಿ ಒಬ್ಬರಾದ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಡಿ.ಕೆ. ಶಿವಕುಮಾರ್ ಅವರು ಈಗ ‘ತಾತ’ನಾಗಿ ಬಡ್ತಿ ಪಡೆದಿದ್ದಾರೆ!

ಡಿ.ಕೆ. ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಹೆಗ್ಡೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಗುರುಗಳಾದ ದಿವಂಗತ ಎಸ್.ಎಂ. ಕೃಷ್ಣ ಅವರ ಜನ್ಮದಿನದಂದೇ ಅವರ ಮೊಮ್ಮಗ ಅಮರ್ತ್ಯ ಹೆಗಡೆ ಮತ್ತು ಐಶ್ವರ್ಯ ದಂಪತಿಗೆ ಮಗು ಜನಿಸಿರುವುದು ವಿಶೇಷ.

ರಾಜಕೀಯದ ಜಂಜಾಟಗಳ ನಡುವೆ ಮಗಳ ಮನೆಗೆ ಬಂದಿರುವ ಪುಟ್ಟ ದೇವತೆಯನ್ನು ಕಂಡು ಡಿ.ಕೆ. ಶಿವಕುಮಾರ್ ಕುಟುಂಬ ಖುಷಿಯ ಕಡಲಲ್ಲಿ ತೇಲುತ್ತಿದೆ.

ತಾತನಾದ ಸಂಭ್ರಮದಲ್ಲಿರುವ ಡಿ.ಕೆ. ಶಿವಕುಮಾರ್ ಮತ್ತು ಹೊಸ ಪೋಷಕರಾದ ಅಮರ್ತ್ಯ-ಐಶ್ವರ್ಯ ದಂಪತಿಗೆ ಹಾರ್ದಿಕ ಶುಭಾಶಯಗಳು


Spread the love

About Laxminews 24x7

Check Also

ಶಿಕ್ಷಿಸುವುದಕ್ಕಿಂತ ಸರಿಯಾದ ದಾರಿಗೆ ತರೋದೇ ನಮ್ಮ ಧರ್ಮ: ನಿಂದಿಸಿದ ಮಕ್ಕಳನ್ನು ಕ್ಷಮಿಸಿದ ಮೋದಿ

Spread the loveನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಘಟನೆ ಮತ್ತು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ವ್ಯಕ್ತವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ