Breaking News

ಬೆಳಗಾವಿ:ಆಚೆಗೆ ಬಂದು ಗಲ್ಲಿಗಳಲ್ಲಿ ಹರಟೆ ಹೊಡೆಯುವವರ ಮೇಲೆ ನಿಗಾ ಇಡಲು ದ್ರೋಣ ಕ್ಯಾಮರಾ

Spread the love

ಹೊರಗೆ ಬಂದ್ರೆ ದ್ರೋಣ….
ರಸ್ತೆಗೆ ಬಂದ್ರೆ ಕೊರೋನಾ….
ಅದಕ್ಕೆಮನ್ಯಾಗ ಇರೋಣ…!!

ಬೆಳಗಾವಿ- ಬೆಳಗಾವಿ ನಗರ ಪೋಲೀಸ್ ಮನೆಯಿಂದ ಆಚೆಗೆ ಬಂದು ಗಲ್ಲಿಗಳಲ್ಲಿ ಹರಟೆ ಹೊಡೆಯುವವರ ಮೇಲೆ ನಿಗಾ ಇಡಲು ದ್ರೋಣ ಕ್ಯಾಮರಾಗಳನ್ನು ಉಪಯೋಗಿಸುತ್ತಿದೆ.

ಮಾಳ ಮಾರುತಿ ಠಾಣೆಯ ಪೋಲೀಸರು ದ್ರೋಣ ಕ್ಯಾಮರಾ ಗಳನ್ನು ಹಾರಿ ಬಿಟ್ಟು,ಗಾಂದೀ ನಗರ,ಉಜ್ವಲ ನಗರ,ಮಹಾಂತೇಶ ನಗರ ಸೇರಿದಂತೆ ಠಾಣಾ ವ್ಯಾಪ್ತಿಯ ಗಲ್ಲಿ,ಗಲ್ಲಿ ಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ‌.

ದ್ರೋಣ ಕ್ಯಾಮರಾದ ದೃಶ್ಯಗಳನ್ನು ಆಧರಿಸಿ ಕಿಡಗೇಡಿಗಳ ಬೆನ್ನಟ್ಟಿ ರುವ ಮಾಳ ಮಾರುತಿ ಪೋಲೀಸರು , ತಂತ್ರಜ್ಞಾನದ ಸದಯಪಯೋಗ ಪಡೆದುಕೊಂಡು,ಕಟ್ಟು ನಿಟ್ಟಿನ ಲಾಕ್ ಡೌನ್ ಮಾಡುತ್ತಿದ್ದಾರೆ.

ದ್ರೋಣ ಕ್ಯಾಮರಾ ಆಧರಿಸಿ,ಅನವಶ್ಯಕವಾಗಿ ಸುತ್ತಾಡುವ,ಬೈಕ್ ಗಳನ್ನು ವಶಪಡಿಸಿಕೊಂಡಿರುವ ಮಾಳ ಮಾರುತಿ ಪೋಲೀಸರು.ಹಲವಾರು ಜನ ಕಿಡಗೇಡಿಗಳ ಬೆವರಿಳಿಸಿದ್ದಾರೆ.

ಗಾಂಧಿ ನಗರ,ಉಜ್ವಲ ನಗರ,ಕಣಬರ್ಗಿ ರಸ್ತೆ ಯಲ್ಲಿ ದ್ರೋಣ ಕ್ಯಾಮರಾಗಳು ಹಾರಾಟ ನಡೆಸಿರುವದರಿಂದ.ಕಿಡಗೇಡಿಗಳು ಮನೆ ಸೇರಿಕೊಂಡಿರುವದು ಸತ್ಯ….

ಅನಗತ್ಯವಾಗಿನೆಯಿಂದ ಹೊರಗಡೆ ಸುತ್ತಾಡದೇ ಸೇಫಾಗಿ ಮನೆಯಲ್ಲಿ ಇರೋಣ..ಹೊರಗೆ ಬಂದು ಸುತ್ತಾಡಿದ್ರೆ ಕೊರೋಣ….

ನಿಮ್ಮ ಜೀವ ನಿಮ್ಮ ಕೈಯಲ್ಲಿ ….


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ