Breaking News

ಮೇಕೆದಾಟು ಅಣೆಕಟ್ಟು ಯೋಜನೆಗೆ ಅನುಮತಿ ಕೊಡಬೇಡಿ: ಮೋದಿಗೆ ಸಿಎಂ ವಿಜಯ್‌ ಪತ್ರ

Spread the love

ನವದೆಹಲಿ: ಮೇಕೆದಾಟು ಅಣೆಕಟ್ಟು ಯೋಜನೆಗೆ ಅನುಮತಿ ನೀಡಬೇಡಿ ಎಂದು ಪ್ರಧಾನಿ ಮೋದಿಗೆ ತಮಿಳುನಾಡು ಸಿಎಂ ವಿಜಯ್‌ ಪತ್ರ ಬರೆದಿದ್ದಾರೆ.

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಅಧಿಕಾರಿಗಳ ಸ್ಥಳ ಪರಿಶೀಲನೆಗೆ ತಮಿಳುನಾಡು ಸಿಎಂ ವಿಜಯ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜಲಾನಯನ ಪ್ರದೇಶದ ಇತರೆ ರಾಜ್ಯಗಳ ಒಪ್ಪಿಗೆ ಇಲ್ಲದೆ ಯೋಜನೆಗೆ ಶಾಸನಬದ್ಧ ಅಥವಾ ಆಡಳಿತಾತ್ಮಕ ಅನುಮತಿ ನೀಡದಂತೆ ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ.

ಕೇಂದ್ರ ಅಧಿಕಾರಿಗಳ ಸ್ಥಳ ಪರಿಶೀಲನೆಯಿಂದ ಕಾವೇರಿ ಡೆಲ್ಟಾ ರೈತರಲ್ಲಿ ಆತಂಕ ಹೆಚ್ಚಳವಾಗಿದೆ. 2026–27ರ ನೀರಿನ ಕೊರತೆಯ ವರ್ಷದಲ್ಲಿ ತಮಿಳುನಾಡಿಗೆ ನ್ಯಾಯಯುತ ಪಾಲಿನ ನೀರು ಸಿಗುತ್ತಿಲ್ಲ. ಕೆಳಹರಿವಿನ ರಾಜ್ಯಗಳ ಹಕ್ಕುಗಳನ್ನು ಸಂಪೂರ್ಣವಾಗಿ ರಕ್ಷಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ನೀರಿನ ಪ್ರಮಾಣ ಹಾಗೂ ಮಾಸಿಕ ನೀರು ಬಿಡುಗಡೆ ನಿಯಮಿತ ವ್ಯವಸ್ಥೆಯನ್ನು ಸಂರಕ್ಷಿಸುವಂತೆ ಪ್ರಧಾನಿ ಮೋದಿಗೆ ವಿಜಯ್ ಮನವಿ ಮಾಡಿದ್ದಾರೆ.


Spread the love

About Laxminews 24x7

Check Also

ಮಹಾರಾಜರು ಅರಮನೆ ಕಟ್ಟಿಸಿದ್ದು ಜನರ ತೆರಿಗೆಯ ಹಣದಿಂದಲೇ, ಎಲ್ಲವೂ ಜನರಿಗೇ ಸೇರಬೇಕು: ಯತೀಂದ್ರ ಸಿದ್ದರಾಮಯ್ಯ

Spread the loveಮೈಸೂರು: ಮಹಾರಾಜರು ಅರಮನೆ ಕಟ್ಟಿಸಿದ್ದು ಕೂಡ ಜನರ ತೆರಿಗೆಯ ಹಣದಿಂದಲೇ, ಹೀಗಾಗಿ ಎಲ್ಲವೂ ಜನರಿಗೇ ಸೇರಬೇಕು ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ