ಸೋಮವಾರ ಗೋಧೂಳಿ ಮುಹೂರ್ತದಲ್ಲಿ ಡಿಕೆ ಶಿವಕುಮಾರ್‌ ಪಟ್ಟಾಭಿಷೇಕ?

Spread the love

ಬೆಂಗಳೂರು: ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ, ಡಿಸಿಎಂ ಡಿ.ಕೆ ಶಿವಕುಮಾರ್  ಅವರ ರಾಜ್ಯಭಾರಕ್ಕೆ ಕೌಂಟ್‌ಡೌನ್‌ ಶುರುವಾಗಿದೆ. ರಾಜ್ಯಪಾಲರು ರಾಜೀನಾಮೆ ಅಂಗೀಕರಿಸುತ್ತಿದ್ದಂತೆ, ಹೊಸ ಸರ್ಕಾರ ರಚನೆ ಪ್ರಕ್ರಿಯೆ ಆರಂಭಗೊಳ್ಳಲಿದೆ.

ಶುಕ್ರವಾರ (ಮೇ 29) ಉಪರಾಷ್ಟ್ರಪತಿಗಳು ಬೆಂಗಳೂರಿಗೆ ಆಗಮಿಸುತ್ತಿದ್ದು, ರಾಜ್ಯಪಾಲರು ಕಾರ್ಯದ ಒತ್ತಡದಲ್ಲಿದ್ದಾರೆ. ಶುಕ್ರವಾರ ಸಂಜೆಯೊಳಗೆ ರಾಜೀನಾಮೆ ಅಂಗೀಕಾರವಾಗಬೇಕಿದೆ. ಶನಿವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯುವ ಸಾಧ್ಯತೆಗಳಿದೆ. ಸಿಎಲ್‌ಪಿ ನಾಯಕರಾಗಿ ಡಿಕೆಶಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸೋಮವಾರ ಸಂಜೆ ಗೋದೂಳಿ ಮುಹೂರ್ತದಲ್ಲಿ ಡಿಕೆಶಿ ಪ್ರಮಾಣವಚನ ಸ್ವೀಕರಿಸೋ ಸಾಧ್ಯತೆಗಳಿವೆ.

ವಿಧಾನಸೌಧದ ಗ್ರ್ಯಾಂಡ್‌ ಸ್ಟೆಪ್ ಮೇಲೆ ಅಥವಾ ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣವಚನ ಸ್ವೀಕರಿಸೋ ಸಾಧ್ಯತೆಗಳಿವೆ. ದೊಡ್ಡ ಪ್ರಮಾಣದಲ್ಲಿ ಜನರನ್ನ ಸೇರಿಸಿ ಪದಗ್ರಹಣ ನಡೆಸಲು ಸಿದ್ಧತೆ ನಡೆಸಲಾಗಿದೆ.
ಸೂರ್ಯಾಸ್ತ ಅಥವಾ ಕತ್ತಲಿನ ನಡುವಿನ ಸಮಯವನ್ನು ಗೋಧೂಳಿ ಅವಧಿ ಎಂದು ಕರೆಯಲಾಗುತ್ತದೆ. ಈ ಸಮಯ ಸಂಜೆ 05 ರಿಂದ 07 ರವರೆಗೆ ಮಾತ್ರ ಇರುತ್ತದೆ. ಈ ಗೋಧೂಳಿ ಅವಧಿಯನ್ನು ಅಥವಾ ಸಮಯವನ್ನು ಹಿಂದೂ ಧರ್ಮದಲ್ಲಿ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಏಕೆಂದರೆ ಈ ಸಮಯದಲ್ಲಿ ಹಸುಗಳು ತಮ್ಮ ಮನೆಗಳಿಗೆ ಹಿಂದಿರುಗುತ್ತವೆ ಮತ್ತು ಇದನ್ನು ಲಕ್ಷ್ಮಿ ದೇವಿಯ ಆಗಮನದ ಸಮಯವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಹಸುಗಳು, ಪ್ರಾಣಿಗಳು, ಪಕ್ಷಿಗಳು ಮತ್ತು ಇತರ ಜನರು ತಮ್ಮ ಮನೆಗಳಿಗೆ ಮರಳುತ್ತಾರೆ. ಪಕ್ಷಿಗಳು ಸಹ ತಮ್ಮ ಗೂಡಿನ ಕಡೆಗೆ ಆಕಾಶದಲ್ಲಿ ಸಾಲಾಗಿ ಹಾರುತ್ತವೆ. ಈ ಸಮಯವು ಉತ್ಸಾಹ, ಸಂತೋಷ ಮತ್ತು ತಂಪಾದ ವಾತಾವರಣದಿಂದ ಕೂಡಿರುತ್ತದೆ.
ಈ ಸಮಯವನ್ನು ಶುಭ ಕೆಲಸಗಳಿಗೆ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಶುಭ ಸಮಯದಲ್ಲಿ ಲಕ್ಷ್ಮಿಯನ್ನು ಪೂಜಿಸುವುದರಿಂದ ಶುಭ ಫಲಗಳು ದೊರೆಯುತ್ತವೆ. ಈ ಸಮಯದಲ್ಲಿ ಮಾಡುವ ಪೂಜೆಯು ಅನೇಕ ದೋಷಗಳನ್ನು ಕೂಡ ತೆಗೆದುಹಾಕುತ್ತದೆ. ಅಲ್ಲದೆ, ಸಂಧ್ಯಾಕಾಲವು ಲಗ್ನದ ದೋಷಗಳನ್ನು ಸಹ ತೆಗೆದುಹಾಕುತ್ತದೆ ಮತ್ತು 8ನೇ ಮನೆಯಲ್ಲಿ ಅಂದರೆ ಪಾಪ ಮನೆಯಲ್ಲಿ ಗ್ರಹಗಳ ಸಂಚಾರದಿಂದ ಉಂಟಾಗುವ ದುಷ್ಪರಿಣಾಮಗಳಿಂದ ನಿಮ್ಮನ್ನು ಮುಕ್ತವಾಗಿಸುತ್ತದೆ.


Spread the love

About Laxminews 24x7

Check Also

ಮಾಜಿ ಸಚಿವ ವೆಂಕಟರಮಣಪ್ಪ ಅಗಲಿಕೆಗೆ ಜಿ.ಪರಮೇಶ್ವರ್‌ ಕಂಬನಿ

Spread the loveತುಮಕೂರು: ಗೃಹ ಸಚಿವ ಡಾ. ಜಿ.ಪರಮೇಶ್ವರ್‌  ಅವರು ಪಾವಗಡ ಮಾಜಿ ಶಾಸಕರು ಹಾಗೂ ಮಾಜಿ ಸಚಿವ ವೆಂಕಟರಮಣಪ್ಪ ಅವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ