Breaking News
Home / ನವದೆಹಲಿ / ಭಾರತದಲ್ಲಿ ಕೊರೋನಾಗೆ 825 ಮಂದಿ ಸಾವು, 26,496 ಸೋಂಕಿತರು..!

ಭಾರತದಲ್ಲಿ ಕೊರೋನಾಗೆ 825 ಮಂದಿ ಸಾವು, 26,496 ಸೋಂಕಿತರು..!

Spread the love

ನವದೆಹಲಿ/ಮುಂಬೈ,ಏ.26-ಕೊರೊನಾ ವೈರಸ್ ರಣಕೇಕೆ ಭಾರತದಲ್ಲಿ ಅವ್ಯಾಹತವಾಗಿ ಮುಂದುವರಿದಿದೆ. ಲಾಕ್‍ಡೌನ್ ನಡುವೆಯೂ ಸಾವು ಮತ್ತು ಸೋಂಕು ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಕಳೆದ 24 ತಾಸುಗಳ ಅವಧಿಯಲ್ಲಿ ದೇಶದ ವಿವಿಧೆಡೆ ಒಟ್ಟು 49 ಮಂದಿಯನ್ನು ಕೊರೊನಾ ಬಲಿ ಪಡೆದಿದೆ. ಇದೇ ಅವಧಿಯಲ್ಲಿ 1,990 ಹೊಸ ಸೋಂಕು ಪ್ರಕರಣಗಳು ದೃಢಪಟ್ಟಿವೆ.

ಭಾರತದಲ್ಲಿ ಮೃತರ ಸಂಖ್ಯೆ 900 ತಲುಪುತ್ತಿರುವುದು ಆತಂಕಕಾರಿಯಾಗಿದೆ. ಮತ್ತೊಂದಡೆ ಸೋಂಕು ಪೀಡಿತರ ಸಂಖ್ಯೆ 27,000 ಸನಿಹದಲ್ಲಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವೂ ಇದೆ.

ಕೇಂದ್ರ ಆರೋಗ್ಯ ಸಚಿವಾಲಯದ ನಿನ್ನೆ ಮಧ್ಯರಾತ್ರಿವರೆಗಿನ ಅಧಿಕೃತ ವರದಿ ಪ್ರಕಾರ, ಡೆಡ್ಲಿ ವೈರಸ್ ಈವರೆಗೆ ದೇಶಾದ್ಯಂತ 824 ಜನರನ್ನು ಬಲಿ ಪಡೆದಿದ್ದು, ಸೋಂಕಿತರ ಸಂಖ್ಯೆ 26,496ಕ್ಕೇರಿದೆ.

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 19,668ರಷ್ಟಿರುವುದು ಕಳವಳಕಾರಿ. ಈ ಮಧ್ಯೆ, ಈವರೆಗೆ 5,803 ಮಂದಿ ಗುಣಮುಖರಾಗಿ ಮನೆಗಳಿಗೆ ಮರಳಿದ್ದಾರೆ. ದೇಶದಲ್ಲಿ ವೈರಾಣು ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ವೃದ್ದಿ ಕಂಡುಬಂದಿರುವುದು ಸಮಾಧಾನಕರ ಸಂಗತಿಯಾಗಿದೆ.

ಇಂದು ಬೆಳಗ್ಗೆಯೂ ಕೆಲವು ರಾಜ್ಯಗಳಲ್ಲಿ ಸಾವು ಪ್ರಕರಣಗಳು ವರದಿಯಾಗಿದೆ. ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ತಾನ, ಆಂಧ್ರಪ್ರದೇಶ, ಒಡಿಶಾ ಮತ್ತಿತರ ರಾಜ್ಯಗಳಲ್ಲಿ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಕಳೆದ 24 ತಾಸುಗಳ ಅವಧಿಯಲ್ಲಿ ಒಟ್ಟು 49 ಮಂದಿಯನ್ನು ಕೊರೊನಾ ಬಲಿ ಪಡೆದಿದೆ. ಮಹಾರಾಷÀ್ಟ್ರದಲ್ಲಿ 24, ಮಧ್ಯಪ್ರದೇಶ ಎಂಟು ಹಾಗೂ ಗುಜರಾತ್ ಏಳು ಮಂದಿ ಬಲಿಯಾಗಿದ್ದಾರೆ. ಈವರೆಗೆ ಸಂಭವಿಸಿರುವ 824 ಸಾವು ಪ್ರಕರಣಗಳಲ್ಲಿ, ಮಹಾರಾಷ್ಟ್ರ ಪ್ರಥಮ ಸ್ಥಾನದಲ್ಲಿದೆ. ಆ ರಾಜ್ಯದಲ್ಲಿ ಒಟ್ಟು 323 ಸಾವುಗಳು ವರದಿಯಾಗಿವೆ.

ನಂತರದ ಸ್ಥಾನಗಳಲ್ಲಿ ಗುಜರಾತ್ (133), ಮಧ್ಯಪ್ರದೇಶ (99), ದೆಹಲಿ (54), ರಾಜಸ್ತಾನ (35), ಆಂಧ್ರಪ್ರದೇಶ (31), ತೆಲಂಗಾಣ(26), ಉತ್ತರ ಪ್ರದೇಶ (25), ತಮಿಳುನಾಡು (22), ಪಶ್ಚಿಮ ಬಂಗಾಳ ಮತ್ತು ಕರ್ನಾಟಕ (ತಲಾ 18), ಪಂಜÁಬ್ (17) ರಾಜ್ಯಗಳಿವೆ.

ಜಮ್ಮು-ಕಾಶ್ಮೀರದಲ್ಲಿ ಆರು, ಕೇರ¼ದಲ್ಲಿ ನಾಲ್ಕು, ಜಾರ್ಖಂಡ್ ಮತ್ತು ಹರಿಯಾಣ ತಲಾ ಮೂರು, ಬಿಹಾರ ಎರಡು, ಮೇಘಾಲಯ, ಹಿಮಾಚಲ ಪ್ರದೇಶ, ಒಡಿಶಾ ಮತ್ತು ಅಸ್ಸಾಂ ರಾಜ್ಯಗಳಲ್ಲಿ ತಲಾ ಒಂದೊಂದು ಸಾವುಗಳು ವರದಿಯಾಗಿವೆ. ಮತ್ತೊಂದು ಮೂಲಗಳ ಪ್ರಕಾರ ಈವರೆಗೆ ದೇಶದ ವಿವಿಧೆಡೆ 832 ಸಾವುಗಳು ಸಂಭವಿಸಿವೆ.

ಇನ್ನು ಹಲವು ರಾಜ್ಯಗಳಲ್ಲಿ ಕಳೆದ 12 ತಾಸುಗಳ ಅವಧಿಯಲ್ಲಿ ಹೊಸ ಸೋಂಕು ಮತ್ತು ಸಾವು ಪ್ರಕರಣಗಳು ವರದಿಯಾಗುತ್ತಿರುವುದು ಕಳವಳಕಾರಿಯಾಗಿದೆ. ರಾಜಸ್ತಾನದಲ್ಲಿ 58 ಮಂದಿಗೆ ಹೊಸದಾಗಿ ಸೋಂಕು ತಗುಲಿದ್ದು, ಅಲ್ಲಿ ವೈರಾಣು ರೋಗ ಪೀಡಿತರ ಸಂಖ್ಯೆ 2,141ಕ್ಕೇರಿದೆ. ಒಡಿಶಾದಲ್ಲೂ ಎರಡು ಹೊಸ ಪ್ರಕರಣಗಳು ವರದಿಯಾಗಿದ್ದು, ಕೊರೊನಾ ಬಾಧಿತರ ಸಂಖ್ಯೆ 103ಕ್ಕೇರಿದೆ.


Spread the love

About Laxminews 24x7

Check Also

ಕಾಂಗ್ರೆಸ್​ ತೊರೆದು ಶಿಂಧೆ ಬಣ ಸೇರ್ಪಡೆಯಾದ ಬಾಲಿವುಡ್​ ನಟ ಗೋವಿಂದ; ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

Spread the loveಮುಂಬೈ: ಹಿರಿಯ ಬಾಲಿವುಡ್​ ನಟ, ಮಾಜಿ ಸಂಸದ ಗೋವಿಂದ ಗುರುವಾರ (ಮಾರ್ಚ್​ 28) ಕಾಂಗ್ರೆಸ್​ ತೊರೆದು ಶಿವಸೇನೆ (ಏಕನಾಥ್​ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ