Breaking News

ಪತಿಯನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿದ್ದ ಪತ್ನಿ ಹಾಗೂ ಕೊಲೆ ಮಾಡಲು ಯತ್ನಿಸಿದ್ದ ಆರೋಪಿಗೆ ತಲಾ ಹತ್ತು ವರ್ಷ ಜೈಲು ಶಿಕ್ಷೆ

Spread the love

ಕಾರವಾರ: ದಾಂಡೇಲಿ ಸಮೀಪದ ಅಂಬೇವಾಡಿ ಗಾಂವಠಾಣ ನಿವಾಸಿ ಅಂಕುಶ್​ ಸುತಾರ ಅವರ ಕೊಲೆಗೆ ಸುಪಾರಿ ಕೊಟ್ಟಿದ್ದ ಪ್ರಕರಣದಲ್ಲಿ ಅಂಕುಶ್​ ಅವರ ಪತ್ನಿ ತೇಜಸ್ವಿನಿ ಹಾಗೂ ಕೊಲೆಗೆ ಯತ್ನಿಸಿದ ಗಣೇಶ್ ಪಾಟೀಲ್​ಗೆ ತಲಾ 10 ವರ್ಷಗಳವರೆಗೆ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಪ್ರಕಟಿಸಿದೆ.

ಪ್ರಕರಣ ಹಿನ್ನೆಲೆ: 11 ಜೂನ್ 2021 ರಂದು ರಾತ್ರಿ ಅಂಕುಶ್​ ಕೊಲೆಗೆ ಯತ್ನ ನಡೆದಿತ್ತು‌. ಅಂಕುಶ್​ ಪತ್ನಿ ಗಣೇಶ್ ಎಂಬಾತನಿಗೆ 30 ಸಾವಿರ ಹಣ ನೀಡುವುದಾಗಿ ಹೇಳಿ ಪತಿಯ ಕೊಲೆಗೆ ಸುಪಾರಿ ನೀಡಿದ್ದಳು. ಗಣೇಶ್ ಹಾಗೂ ಮತ್ತೊಬ್ಬ ಬಾಲಾಪರಾಧಿ ಸೇರಿ, ಗಾಂವಠಾಣದಲ್ಲಿನ ಅಂಕುಶ್​ ಸುತಾರ ಮನೆಯನ್ನು ಹಿಂಬಾಗಿಲಿನಿಂದ ಪ್ರವೇಶಿಸಿ, ಅಂಕುಶ್​ ಅವರ ಎದೆಯ ಮೇಲೆ ಕುಳಿತು ಕುತ್ತಿಗೆಗೆ ಕೈ ಹಾಕಿ, ಸಾಯಿಸಲು ಪ್ರಯತ್ನಿಸಿದ್ದ.

ಆಗ ಎಚ್ಚರವಾದ ಅಂಕುಶ್​ ಗಣೇಶ್​​ನನ್ನು ತಳ್ಳಿ, ಬೊಬ್ಬೆ ಹಾಕಿದ್ದರು. ಆಗ ಗಣೇಶ್ ಪರಾರಿಯಾಗಿದ್ದ. ಆರೋಪಿಗಳನ್ನು ನಾಕಾಬಂಧಿ ಮಾಡಿ ಹಿಡಿಯಲಾಗಿತ್ತು. ಕೋರ್ಟ್​ನಲ್ಲಿ ಅಪರಾಧ ಸಾಬೀತಾದ ಹಿನ್ನೆಲೆ ಮೊದಲ ಆರೋಪಿ ಗಣೇಶ್ ಶಾಂತಾರಾಮ ಪಾಟೀಲ್ ಹಾಗೂ ಸುಪಾರಿ ಕೊಟ್ಟ ಪತ್ನಿ ತೇಜಸ್ವಿನಿಗೆ ತಲಾ ಹತ್ತು ವರ್ಷ ಶಿಕ್ಷೆ ಹಾಗೂ 30 ಸಾವಿರ ರೂಪಾಯಿ ದಂಡ ವಿಧಿಸಿ ನ್ಯಾಯಾಧೀಶ ಕಿರಣ್ ಕಿಣಿ ಆದೇಶ ಹೊರಡಿಸಿದ್ದಾರೆ.ಪಿಎಸ್​ಐ ಗಡ್ಡೇಕರ್ ಪ್ರಕರಣ ದಾಖಲಿಸಿ, ತನಿಖೆ ಮಾಡಿದ್ದರು. ಸರ್ಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ್ ಎಂ. ಮಳಗೀಕರ್ ವಾದಿಸಿದ್ದರು‌.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ