Breaking News

ಶಾಲೆಗೆ ಹೋಗದ ಶಿಕ್ಷಕರು – ಅಧಿಕಾರಿಗಳ ಸನ್ಮಾನಕ್ಕೆ ದಂಡಾಗಿ ಹಾಜರಾತಿ!

Spread the love

ಶಾಲೆಗೆ ಹೋಗದ ಶಿಕ್ಷಕರು – ಅಧಿಕಾರಿಗಳ ಸನ್ಮಾನಕ್ಕೆ ದಂಡಾಗಿ ಹಾಜರಾತಿ!
ಅಥಣಿ, ಜುಲೈ 2:ತಾಲೂಕಿನ ಹಲವು ಸರಕಾರಿ ಶಾಲೆಗಳಲ್ಲಿ ಹಾಜರಾತಿ ತಪ್ಪಿಸುತ್ತಿರುವ ಹಾಗೂ ಕರ್ತವ್ಯ ಮರೆತ ಶಿಕ್ಷಕರು, ಈ ಬಾರಿ ತರಗತಿ ಕೊಠಡಿಗೆ ಅಲ್ಲ, ಬದಲಿಗೆ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸನ್ಮಾನಕ್ಕೆ ದಂಡಾಗಿ ಹಾಜರಾಗಿ ಗಮನಸೆಳೆದಿದ್ದಾರೆ.
ಅಥಣಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಹೊಸ ಬಿಇಒ ಎಂ. ಆರ್. ಮುಂಜೆ ಅವರು ಅಧಿಕಾರ ಸ್ವೀಕರಿಸಿದರು. ಅವರನ್ನು ಅಭಿನಂದಿಸಲು ಹಲವಾರು ಶಾಲೆಗಳ ಶಿಕ್ಷಕರು ಶಿಕ್ಷಕಿಯರು ಶಾಲೆಗೆ ಬಾರದೆಯೇ ಕಚೇರಿಗೆ ಚಕ್ಕರ್ ಹಾಕಿ, ಹೂವಿನ ಹಾರ, ಶಾಲ್, ಫಲಪುಷ್ಪಗಳೊಂದಿಗೆ ಅಭಿನಂದನೆ ಸಲ್ಲಿಸಲು ಮುಗಿಬಿದ್ದರು.
ಆದರೆ ಈ ಹಾಜರಾತಿ ವೈಖರಿಯ ಬಗ್ಗೆ ಸಾರ್ವಜನಿಕರ ಮಧ್ಯೆ ತೀವ್ರ ವಾದ, ಚರ್ಚೆ ಉಂಟಾಗಿದೆ. ಶಾಲೆಯ ಮಕ್ಕಳಿಗೆ ಪಾಠ ಹೇಳುವಲ್ಲಿ ನಿರ್ಲಕ್ಷ್ಯ ತೋರಿಸುತ್ತಿರುವ ಕೆಲವೊಂದು ಶಿಕ್ಷಕರು, ನಾಯಕತ್ವ ತೋರಿಸಲು ಮಾತ್ರ ಆಸಕ್ತಿ ತೋರಿರುವುದು ಶಿಕ್ಷಣ ವ್ಯವಸ್ಥೆಯ ಆಂತರಿಕ ವೈಫಲ್ಯವನ್ನೇ ಚಿತ್ರೀಕರಿಸುತ್ತಿದೆ ಎಂದು ಹಲವರು ಆಕ್ಷೇಪಿಸಿದ್ದಾರೆ.
ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಭರಮು ನಾಯಕ ಶಿಕ್ಷಕರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದು “ಮಕ್ಕಳಿಗೆ ಪಾಠ ಹೇಳೋಕೆ ಶಿಕ್ಷಕರಿಗೆ ಸಮಯ ಇಲ್ಲ.
ಆದರೆ ಬಾಸ್‌ಗೆ ಹೂವಿನ ಹಾರ ಹಾಕೋಕೆ ಎಲ್ಲರೂ ತಕ್ಷಣ ಸಿದ್ಧ! ಇದು ಯಾವ ತರದ ನಿಷ್ಠೆ?” ಮೇಲಾಧಿಕಾರಿಗಳು ಇಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇನೆ ಎಂದು ತಿಳಿಸಿದರು.
ಬೈಟ್ :ಭರಮು ನಾಯಿಕ.. ಸಾಮಾಜಿಕ ಹೋರಾಟಗಾರ

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ