Breaking News
Home / ಜಿಲ್ಲೆ / ಇಂದು ರಾಜ್ಯದಲ್ಲಿ ಒಂದೇ ಒಂದು ಕೊರೋನಾ ಕೇಸ್ ಪತ್ತೆ, ಮಂಗಳೂರು ಮಹಿಳೆಗೆ ಸೋಂಕು

ಇಂದು ರಾಜ್ಯದಲ್ಲಿ ಒಂದೇ ಒಂದು ಕೊರೋನಾ ಕೇಸ್ ಪತ್ತೆ, ಮಂಗಳೂರು ಮಹಿಳೆಗೆ ಸೋಂಕು

Spread the love

ಬೆಂಗಳೂರು, ಮಾ.26- ಕಳೆದ 32 ದಿನಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದರೂ ಇಂದು ಮಾತ್ರ ಒಂದೇ ಒಂದು ಸೋಂಕಿನ ಪ್ರಕರಣ ಪತ್ತೆಯಾಗಿ ನಿಟ್ಟುಸಿರು ಬಿಡುವಂತಾಗಿದೆ.

ಕಳೆದ 18 ಗಂಟೆಗಳಲ್ಲಿ ಒಬ್ಬ ಮಹಿಳೆಗೆ ಮಾತ್ರ ಕೊರೊನಾ ಸೋಂಕು ತಗುಲಿರುವುದರ ಬಗ್ಗೆ ವರದಿಯಾಗಿರುವುದನ್ನು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.ಕಳೆದ ಎರಡು- ಮೂರು ದಿನಗಳಿಂದ ಸೋಂಕಿತರ ಪ್ರಮಾಣ ರಾಜಧಾನಿ ಬೆಂಗಳೂರು, ಬೆಳಗಾವಿ, ಕಲಬುರಗಿ ಇನ್ನಿತರೆಡೆ ಹೆಚ್ಚುತ್ತಲೇ ಇದ್ದ ಪರಿಣಾಮ ಜನರಲ್ಲಿ ಆತಂಕ ಹೆಚ್ಚಾಗುತ್ತಿತ್ತು.

ಅಚ್ಚರಿಯ ಬೆಳವಣಿಗೆಯಲ್ಲಿ ಇಂದು ಒಬ್ಬರಿಗೆ ಮಾತ್ರ ಕೊರೊನಾ ತಗುಲಿರುವುದು ಬೆಳಕಿಗೆ ಬಂದಿದೆ. ದಕ್ಷಿಣಕನ್ನಡದ ಪಾಣೆ ಮಂಗಳೂರಿನ 47 ವರ್ಷದ ಮಹಿಳೆ ರೋಗಿ ನಂ.432ರ 78 ವರ್ಷದ ಬಂಟ್ವಾಳ ಮೂಲದ ಸೋಂಕಿತ ವೃದ್ಧೆಯೊಂದಿಗೆ ಸಂಪರ್ಕದಲ್ಲಿದ್ದ ಪರಿಣಾಮ ರೋಗ ತಗುಲಿದೆ. ಇವರನ್ನು ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅದನ್ನು ಹೊರತುಪಡಿಸಿದರೆ ಯಾವ ಪ್ರಕರಣಗಳೂ ಮಧ್ಯಾಹ್ನ 12 ಗಂಟೆವರೆಗೆ ವರದಿಯಾಗಿಲ್ಲ. ಸಂಜೆ ವೇಳೆಗೆ ಮತ್ತಷ್ಟು ಪ್ರಕರಣಗಳು ಪತ್ತೆಯಾಗುವ ಸಾಧ್ಯತೆಗಳಿವೆ.ಮೈಸೂರು, ಬೆಳಗಾವಿ, ವಿಜಯಪುರ ಮತ್ತು ಕಲಬುರಗಿಯಲ್ಲಿ ಮಧ್ಯಾಹ್ನದವರೆಗೆ ಯಾವುದೇ ಪ್ರಕರಣಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ನಾಲ್ಕೂ ಜಿಲ್ಲೆಗಳಲ್ಲಿ ಕೊಂಚ ನೆಮ್ಮದಿ ಕಂಡುಬಂದಿತ್ತು.

ನಿನ್ನೆಯವರೆಗೂ ಈ ನಾಲ್ಕು ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದವು. ಇಂದು ಯಾವುದೇ ಪ್ರಕರಣಗಳು ಕಂಡುಬರಲಿಲ್ಲ. ನಂಜನಗೂಡು ಜ್ಯುಬಿಲಿಯಂಟ್, ಹಂಗಸಂದ್ರದ ಬಿಹಾರಿ ಕಾರ್ಮಿಕನಿಂದ ಹರಡಿದ ಸೋಂಕು ಬೆಳಗಾವಿಯ ಹಿರೇಬಾಗೆವಾಡಿಯಲ್ಲಿ ನಿಜಾಮುದ್ದೀನ್ ನಂಟು, ವಿಜಯಪುರ, ಕಲಬುರಗಿ ತಬ್ಲಿಘೀಗಳಿಂದ ಹರಡಿದ ಸೋಂಕು ಸೇರಿದಂತೆ ಯಾವುದೇ ಪ್ರಕರಣಗಳು ಮಧ್ಯಾಹ್ನದವರೆಗೆ ಕಂಡುಬರಲಿಲ್ಲ.

ಲಾಕ್‍ಡೌನ್ ಆದಾಗಿನಿಂದ ಅತ್ಯಂತ ಕಡಿಮೆ ಎಂದರೆ ಇಂದೇ ಒಂದೇ ಒಂದು ಪ್ರಕರಣ ದಾಖಲಾಗಿರುವುದು. ಒಟ್ಟಾರೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 501ಕ್ಕೆ ಏರಿಕೆಯಾಗಿದ್ದು, ಕೋವಿಡ್-19ನಿಂದ 18 ಮಂದಿ ಮೃತರಾಗಿದ್ದು, 177 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.


Spread the love

About Laxminews 24x7

Check Also

ಪಂಜಾಬ್ ನಲ್ಲಿ ಹಾವೇರಿ ಮೂಲದ ಯೋಧ ಹುತಾತ್ಮ : ಸಿಎಂ ಬೊಮ್ಮಾಯಿ ಸಂತಾಪ

Spread the love ಬೆಂಗಳೂರು : ಪಂಜಾಬ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅಪಘಾತಕ್ಕೊಳಗಾಗಿ ಯೋಧ ಶಿವರಾಜ್ ಎಂಬುವವರು ಸಾವನ್ನಪ್ಪಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ