Breaking News

ಗರ್ಭಿಣಿಯಾದಳೆಂದು ಪತ್ನಿಯನ್ನೇ ಕೊಲೆ ಮಾಡಿದ ಪತಿ!

Spread the love

ಚಾಮರಾಜನಗರ : ಗರ್ಭಿಣಿಯೊಬ್ಬರನ್ನು ತಾಳಿ ಕಟ್ಟಿದ ಪತಿಯೇ ಕೊಲೆ ಮಾಡಿರುವ ಘಟನೆ ತಾಲೂಕಿನ ಡೊಳ್ಳಿಪುರದ ತೋಟದ ಮನೆಯಲ್ಲಿ ನಡೆದಿದೆ.

ಈ ಕುರಿತು ಎಸ್​ಪಿ ಡಾ. ಬಿ. ಟಿ. ಕವಿತಾ ಅವರು ಮಾತನಾಡಿದ್ದು, ಮಹಿಳೆಯ ಕೊಲೆ ಕುರಿತು ಕಂಟ್ರೋಲ್ ರೂಮ್​​ಗೆ ಕರೆ ಬಂದಿತ್ತು. ನಂತರ ನಮ್ಮ ಠಾಣಾ ವ್ಯಾಪ್ತಿಗೆ ಬಂದಿದ್ದರಿಂದಾಗಿ ನಾವು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದೆವು. ಅಲ್ಲಿ ಶುಭಾ(38) ಎಂಬ ಮಹಿಳೆ ಮನೆ ಮುಂದೆ ಕೊಲೆಯಾಗಿ ಬಿದ್ದಿದ್ದರು ಎಂದು ತಿಳಿಸಿದರು.ಮೃತ ಮಹಿಳೆ ತನ್ನ ಗಂಡ ಮಹೇಶ್​ ಹಾಗೂ ಅತ್ತೆ ಭಾರತಿ ಜೊತೆ ತೋಟದ ಮನೆಯಲ್ಲಿ ವಾಸ ಮಾಡುತ್ತಿದ್ದರು. ಮಧ್ಯಾಹ್ನದ ನಂತರ ಬೆಂಗಳೂರಿನಿಂದ ಬಂದ ಶುಭಾ ಅವರ ಸಹೋದರಿ ಠಾಣೆಗೆ ಒಂದು ದೂರು ಅರ್ಜಿಯನ್ನು ಕೊಟ್ಟಿದ್ದರು. ಅದರಲ್ಲಿ ನಮ್ಮ ಅಕ್ಕನನ್ನು ಅವರ ಗಂಡನೇ ಕೊಲೆ ಮಾಡಿರಬಹುದು, ಅದಕ್ಕೆ ಅವರ ಅತ್ತೆಯೇ ಕುಮ್ಮಕ್ಕು ಕೊಟ್ಟಿರಬಹುದು ಎಂದು ಸಂಶಯ ವ್ಯಕ್ತಪಡಿಸಿ ದೂರನ್ನು ದಾಖಲಿಸಿದ್ದರು. ಈ ಕುರಿತು ಪೂರ್ವ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆಯನ್ನ ದಾಖಲಿಸಿಕೊಂಡು ತನಿಖೆಯನ್ನು ನಡೆಸಿದೆವು ಎಂದಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ