Breaking News

ಡಿಸಿಎಂ ಪ್ರಪೋಸಲ್ ಬಂದಿಲ್ಲ, ಜೂನ್ 3ರಂದು ಸಭೆ ಮಾಡಿ ಫೈನಲ್ ಆಗುತ್ತೆ: ಮಲ್ಲಿಕಾರ್ಜುನ ಖರ್ಗೆ

Spread the love

ಕಲಬುರಗಿ: ಸದ್ಯ ಡಿಸಿಎಂ ಪ್ರಪೋಸಲ್ ಬಂದಿಲ್ಲ, ಬಂದ ಮೇಲೆ ಎಷ್ಟು ಡಿಸಿಎಂ ಮಾಡಬೇಕು, ಎಷ್ಟು ಸಚಿವರನ್ನಾಗಿ ಮಾಡಬೇಕು ಎಂದು ನೋಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ  ಹೇಳಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊದಲು ಒಂದು ಹಂತದಲ್ಲಿ ಕೆಲವರನ್ನು ಸಚಿವರನ್ನಾಗಿ ಮಾಡಲಾಗುತ್ತದೆ. ಆಮೇಲೆ ಹದಿನೈದು ದಿನದ ನಂತರ ಮತ್ತೊಂದು ಸುತ್ತಿನಲ್ಲಿ ಸಚಿವ ಸ್ಥಾನ ನೀಡುತ್ತಾರೆ. ಮೊದಲ ಹಂತದಲ್ಲಿ 8ರಿಂದ 10 ಜನ ಆಗುತ್ತಾರಾ ಏನು ಅಂತಾ ನೋಡಬೇಕು. ಸಿಎಂ ಸಚಿವರ ಲಿಸ್ಟ್ ಕೊಡಲಿ, ಎಷ್ಟು ಜನ ಸೇರಿಸಿಕೊಳ್ಳಬೇಕು ಅಂತಾ ಗೊತ್ತಾಗುತ್ತದೆ. ಜೂನ್ 3ರಂದು ಸಭೆ ಮಾಡಿ ಎಲ್ಲಾ ಫೈನಲ್ ಆಗುತ್ತದೆ ಎಂದು ತಿಳಿಸಿದರು.

ಡಿಕೆಶಿ ಸಿಎಂ ಆದ ಮೇಲೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಹಜವಾಗಿ ಬದಲಾವಣೆ ಆಗೇ ಆಗುತ್ತದೆ. ಜನ ಬೆಂಬಲ ಇರುವ ಸೂಕ್ತ ವ್ಯಕ್ತಿಯನ್ನ ಮಾಡುತ್ತೇವೆ. ಸಿಎಂ ಅವರಿಗೂ ಒಳ್ಳೆಯ ಕೋ-ಆರ್ಡಿನೇಷನ್ ಇರಬೇಕು. ಅಂತಹ ವ್ಯಕ್ತಿಯನ್ನ ಆಯ್ಕೆ ಮಾಡಬೇಕಾಗುತ್ತದೆ ಎಂದರು.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ