Breaking News
Home / ಜಿಲ್ಲೆ / ಮಹಾರಾಷ್ಟ್ರದ ಮಂತ್ರಿಯನ್ನೇ ಬಂಧಿಸಿನುಡಿದಂತೆ ನಡೆದಿದ್ದಾರೆ ಡಿಸಿ ಬೊಮ್ಮನಹಳ್ಳಿ

ಮಹಾರಾಷ್ಟ್ರದ ಮಂತ್ರಿಯನ್ನೇ ಬಂಧಿಸಿನುಡಿದಂತೆ ನಡೆದಿದ್ದಾರೆ ಡಿಸಿ ಬೊಮ್ಮನಹಳ್ಳಿ

Spread the love

ನುಡಿದಂತೆ ನಡೆದಿದ್ದಾರೆ ಡಿಸಿ ಬೊಮ್ಮನಹಳ್ಳಿ

ನೆಗೂ ಮಹಾರಾಷ್ಟ್ರದ ನಾಯಕರಿಗೆ ಲಗಾಮು ಹಾಕಿಸಿದ್ದಾರೆ . ಬೊಮ್ಮನಹಳ್ಳಿ

ಮಹಾರಾಷ್ಟ್ರದ ಮಂತ್ರಿಯನ್ನೇ ಗಡಿಪಾರು ಮಾಡಿಸಿದ ಕೀರ್ತಿ ನಮ್ಮ ಹೆಮ್ಮೆಯ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಅವರಿಗೆ ಸಲ್ಲುತ್ತದೆ .

ಬೆಳಗಾವಿ- ಭಾಷೆಯ ನೆಪದಲ್ಲಿ ಮಹಾರಾಷ್ಟ್ರದ ನಾಯಕರನ್ನು ಬೆಳಗಾವಿಗೆ ಕರೆಯಿಸಿ ಅವರಿಂದ ಪ್ರಚೋದನಕಾರಿ ಭಾಷಣ ಬೆಳಗಾವಿಯಲ್ಲಿ ಮಾಡಿಸೋದು ಬೇಡ ,ಒಂದು ವೇಳೆ ಮಹಾರಾಷ್ಟ್ರದ ನಾಯಕರು ಬೆಳಗಾವಿಗೆ ಬಂದ್ರೆ ಅವರನ್ನು ಅರೆಸ್ಟ ಮಾಡಬೇಕಾಗುತ್ತದೆ ,ಅವರನ್ನು ಬೆಳಗಾವಿಗೆ ಕರೆಯಿಸಿದ ನಾಯಕರ ವಿರುದ್ಧವೂ ಕ್ರಮ ಕೈಗೊಳ್ಳ ಬೇಕಾಗುತ್ತದೆ ,ಎಂದು ಎಂಈಎಸ್ ನಾಯಕರಿಗೆ ಖಡಕ್ ಎಚ್ಚರಿಕೆ ನೀಡಿದ್ದ ಬೆಳಗಾವಿ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಅವರು ನುಡಿದಂತೆ ನಡೆದಿದ್ದಾರೆ ಕೊನೆಗೂ ಮಹಾರಾಷ್ಟ್ರದ ನಾಯಕರಿಗೆ ಲಗಾಮು ಹಾಕಿಸಿದ್ದಾರೆ .

ಇತ್ತೀಚಿಗೆ ಬೆಳಗಾವಿ ಡಿಸಿ ಬೊಮ್ಮನಹಳ್ಳಿ ಅವರು ಎಂಈಎಸ್ ನಾಯಕರ ಸಭೆ ಕರೆದು ಬೆಳಗಾವಿ ಪೋಲೀಸ್ ಆಯುಕ್ತ ,ಬೆಳಗಾವಿ ಎಸ್ಪಿ ಎದುರೇ ಎಂಈಎಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದ ಜಿಲ್ಲಾಧಿಕಾರಿಗಳು ,ನಾವು ಯಾವುದೇ ಭಾಷೆ ಮತ್ತು ಭಾಷಿಕರ ವಿರೋಧಿಗಳಲ್ಲ ,ಬೆಳಗಾವಿ ಗಡಿಭಾಗದಲ್ಲಿ ದಿನಕ್ಕೊಂದು ಮರಾಠಿ ಸಾಹಿತ್ಯ ಸಮ್ಮೇಳನ ನಡೆಯಲಿ ಅದಕ್ಕೆ ನಮ್ಮ ಸಹಕಾರ ಇರುತ್ತದೆ ಆದ್ರೆ ಸಾಹಿತ್ಯ ಸಮ್ಮೇಳನಗಳಿಗೆ ಮಹಾರಾಷ್ಟ್ರ ನಾಯಕರನ್ನು ಬೆಳಗಾವಿಗೆ ಕರೆಯಿಸಿ ಪ್ರಚೋದನಾಕಾರಿ ಭಾಷಣ ಮಾಡಿಸಬೇಡಿ ಅವರನ್ನು ಬೆಳಗಾವಿಗೆ ಕರೆಯಿಸಬೇಡಿ ಎಂದು ಎಂಈಎಸ್ ನಾಯಕರಿಗೆ ಖಡಕ್ ವಾರ್ನಿಂಗ್ ಮಾಡಿದ್ದರು

ಜಿಲ್ಲಾಧಿಕಾರಿಗಳ ಎಚ್ಚರಿಕೆಗೆ ಕಿವಿಗೊಡದೇ ಮಹಾರಾಷ್ಟ್ರ ಸಚಿವರನ್ನು ಬೆಳಗಾವಿಗೆ ಕರೆಯಿಸಿ ಬೆಳಗಾವಿಯಲ್ಲಿ ಹುತಾತ್ಮ ದಿನಾಚರಣೆಯ ಹೆಸರಿನಲ್ಲಿ ಮುಗ್ದ ಮರಾಠಿಗರನ್ನೇ ಪ್ರಚೋದಿಸಲು ಹೊರಟಿದ್ದ ಮಹಾರಾಷ್ಟ್ರದ ಮಂತ್ರಿಯನ್ನೇ ಬಂಧಿಸಿ ಅವರನ್ನು ಬೆಳಗಾವಿಯಿಂದ ಗಡಿಪಾರು ಮಾಡಿಸಿದ ಕೀರ್ತಿ ನಮ್ಮ ಹೆಮ್ಮೆಯ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಅವರಿಗೆ ಸಲ್ಲುತ್ತದೆ .

Advertisement


Spread the love

About Laxminews 24x7

Check Also

ಕಂಗನಾಗೆ ಮುಂಬೈ ಕೋರ್ಟ್ ಖಡಕ್ ಎಚ್ಚರಿಕೆ: ಹಾಜರಾಗಿಲ್ಲ ಅಂದ್ರೆ ವಾರೆಂಟ್ ಜಾರಿ

Spread the loveಚಿತ್ರಕತೆ ರಚನೆಕಾರ, ಚಿತ್ರಸಾಹಿತಿ, ಮಾಜಿ ಸಂಸದ ಜಾವೇದ್ ಅಖ್ತರ್ ದಾಖಲಿಸಿರುವ ಮಾನಹಾನಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟಿ ಕಂಗನಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ