Breaking News

ಗಣ್ಯಾತಿಗಣ್ಯರಿಗೂ ಕೊರೊನಾ ಕಾಟ, ಅಮೆರಿಕದ ಐವರು ಸಂಸದರಿಗೂ ಸೋಂಕು..!

Spread the love

ವಾಷಿಂಗ್ಟನ್, ಮಾ.28-ಇಡೀ ಜಗತ್ತನ್ನೇ ನಡುಗಿಸುತ್ತಿರುವ ಕಿಲ್ಲರ್ ಕೊರೊನಾ ಸೋಂಕು ವಿವಿಧ ದೇಶಗಳ ಗಣ್ಯಾತಿಗಣ್ಯರು ಮತ್ತು ಖ್ಯಾತನಾಮರನ್ನೂ ಕಾಡುತ್ತಲೇ ಇದೆ. ವಿಶ್ವದಲ್ಲೇ ಅತಿ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗಿರುವ (1 ಲಕ್ಷಕ್ಕೂ ಹೆಚ್ಚು) ಅಮೆರಿಕದಲ್ಲಿ ಐವರು ಸಂಸದರಿಗೂ ಕೋವಿಡ್-19 ಸೋಂಕು ತಗುಲಿದೆ.

ಅಮೆರಿಕದ ಕಾಂಗ್ರೆಸ್ಸಿಗ ಮೈಕ್ ಕೆಲ್ಲಿ ಅವರಿಗೂ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ. ಈವರೆಗೆ ಐವರು ಸಂಸದರಿಗೆ ಈ ಸಾಂಕ್ರಾಮಿಕ ರೋಗ ಹಬ್ಬಿದೆ. ನಿನ್ನೆಯಷ್ಟೇ ಬ್ರಿಟನ್ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಅವರಿಗೂ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ

ಅಲ್ಲದೇ ಅವರ ಸಂಪುಟದ ಆರೋಗ್ಯ ಸಚಿವ ಮ್ಯಾಟಿ ಹಾನ್‍ಕಾಕ್ ಅವರಿಗೂ ಕೋವಿಡ್-19 ಇರುವುದು ಖಚಿತಪಟ್ಟಿದೆ. ಈಗಾಗಲೇ ಕೆನಡಾ ಪ್ರಧಾನಿ ಮತ್ತು ಅವರ ಪತ್ನಿ, ಹಾಲಿವುಡ್‍ನ ಖ್ಯಾತ ನಟರಾದ ಟಾಮ್ ಹಾಂಕ್ಸ್ ಮತ್ತು ಅವರ ಪತ್ನಿ ನಟಿ ರೀಟಾ ವಿಲ್ಸನ್, ಇಂಗ್ಲಿಷ್ ನಟ ಇದ್ರಿಬ್ ಅವರಿಗೂ ಕೊರೊನಾ ಸೋಂಕು ಕಾಟ ಕೊಟ್ಟಿದೆ.


Spread the love

About Laxminews 24x7

Check Also

9ನೇ ಕ್ಲಾಸ್‌ ವಿದ್ಯಾರ್ಥಿನಿ ಆತ್ಮಹತ್ಯೆ,

Spread the loveಗದಗ, (ಜನವರಿ 16): ಹತ್ತಾರು ಕನಸು ಕಂಡಿದ್ದ 9ನೇ ತರಗತಿ ವಿದ್ಯಾರ್ಥಿನಿ ನೇಣಿಗೆ ಶರಣಾಗಿರುವ ಘಟನೆ ಗದಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ