ಗದಗ: ಕಲಬುರಗಿಯಿಂದ ಅಣ್ಣಿಗೇರಿಗೆ ಬಂದ 21 ವರ್ಷದ ಯುವಕನಿಗೆ ಕೊರೊನಾ ವೈರಸ್ ಇರುವ ಶಂಕೆ ವ್ಯಕ್ತವಾಗುತ್ತಿದೆ.
ಸದ್ಯ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಸೌಲಭ್ಯದೊಂದಿಗೆ ಯುವಕನ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಕೆಲಸ ಮಾಡ್ತಿದ್ದ ಯುವಕನಿಗೆ ಕೆಮ್ಮು, ಶೀತ, ಜ್ವರ ಗಂಟಲು ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಮುಂದಾದ ವೇಳೆ ಖಾಸಗಿ ಆಸ್ಪತ್ರೆ ವೈದ್ಯರು ಗದಗ ಜಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.ಯುವಕ ಗದಗ ಜಿಮ್ಸ್ ಆಸ್ಪತ್ರೆ ಕೊರೊನಾ ವಾರ್ಡಿಗೆ ದಾಖಲಾಗಿದ್ದಾನೆ. ಜಿಮ್ಸ್ ವೈದ್ಯರ ಆತನನ್ನು ತಪಾಸಣೆ ನಡೆಸಿ, ರಕ್ತದ ಮಾದರಿ ಹಾಗೂ ಗಂಟಲಿನ ದ್ರವವನ್ನು ಬೆಂಗಳೂರಿಗೆ ತಪಾಸಣೆಗೆ ಕಳುಹಿಸಿದ್ದಾರೆ. 15 ದಿನಗಳ ಕಾಲ ಯುವಕನ ಮೇಲೆ ಆರೋಗ್ಯ ಇಲಾಖೆ ನಿಗಾವಹಿಸಲಿದೆ.
ಈಗಾಲೇ ಕಲಬುರಗಿಯಲ್ಲಿ ಕರೊನಾ ವೈರಸ್‍ನಿಂದ ಓರ್ವ ಸಾವನ್ನಪ್ಪಿರುವುದರಿಂದ ಗದಗ ಜಿಲ್ಲೆಯಲ್ಲಿ ಈತನಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ. ನಾಳೆ ವರದಿ ಬರುವ ಸಾಧ್ಯತೆಯಿದ್ದು, ಪಾಸಿಟಿವ್ ಅಥವಾ ನೆಗೆಟಿವ್ ನಾ ಎಂಬ ವರದಿ ಬಂದ ಮೇಲೆ ಸತ್ಯಾಸತ್ಯತೆ ತಿಳಿದುಬರಲಿದೆ.