ಬೆಂಗಳೂರು/ನೆಲಮಂಗಲ: ಮನೆಯಿಂದ ಹೊರಗೆಬರಬೇಡಿ ಅಂದರೂ ಜನರು ಕೇಳುತ್ತಿಲ್ಲ. ನೆಲಮಂಗಲದಲ್ಲಿಯೂ ಇಂತದ್ದೇ ಘಟನೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ
ಹೌದು. ನವಯುಗ ಟೋಲ್ ಬಳಿ ಜನರನ್ನು ಸೇರಿಸಿಕೊಂಡು ಹೀರೋ ಆಗಲು ಹೋಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ವ್ಯಕ್ತಿ ಟೋಲ್ ಬಳಿ ವಾಹನಗಳನ್ನ ಬಿಡದಿದ್ದಕ್ಕೆ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾನೆ. ಅಲ್ಲದೆ ಜನರನ್ನು ಗುಂಪು ಕಟ್ಟಿಕೊಂಡು ಪೊಲೀಸರೊಂದಿಗೆ ವಾಗ್ವದಕ್ಕಿಳಿದಿದ್ದ. ಈ ವೇಳೆ ಪೊಲೀಸರು ಎಷ್ಟೇ ಮನವೊಲಿಸಿದ್ರೂ ಕೇಳಲಿಲ್ಲ. ಹೀಗಾಗಿ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಪೊಲೀಸ್ ವಾಹನದ ಮೂಲಕ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
9 ದಿನಗಳ ಕರ್ನಾಟಕ ಲಾಕ್ ಡೌನ್ ಆದೇಶ ಮಾಡಿದ್ದು, ರಾಜ್ಯಾದ್ಯಂತ 144 ಸೆಕ್ಷನ್ ಜಾರಿ ಮಾಡಿದೆ. ಆದರೂ ಸರ್ಕಾರದ ಆದೇಶ ಪಾಲಿಸದೇ ವಾಹನಗಳು ಇಂದು ರಸ್ತೆಗಿಳಿದಿವೆ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಮಾಡುತ್ತಿವೆ. ಯಾವುದೇ ಮುಂಜಾಗೃತೆ ವಹಿಸದೇ ವಾಹನ ಸವಾರರು ಓಡಾಟ ಮಾಡುತ್ತಿದ್ದಾರೆ.
ನೆಲಮಂಗಲ ತಾಲೂಕಿನ ಎರಡು ಗಡಿ ಭಾಗದಲ್ಲಿ ಅಂದರೆ ಮಹದೇವಪುರ ಹಾಗೂ ಹಳೇನಿಜಗಲ್ಲು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ತಪಾಸಣೆ ನಡೆಸಲಾಗುತ್ತಿದೆ.