ಬೆಂಗಳೂರು: ರಾಜ್ಯಾದ್ಯಂತ ನಗರ ಪ್ರದೇಶಗಳ ವ್ಯಾಪ್ತಿಗಳಲ್ಲಿನ ನಿವೇಶನಗಳಿಗೂ ‘ಬಿ’ ಖಾತಾದಿಂದ ‘ಎ’ ಖಾತೆ ನೀಡಲು ಗುರುವಾರ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಅಲ್ಲದೆ, ಅನಧಿಕೃತ ನಿವೇಶನಗಳಿಗೆ ಖಾತೆ ನೀಡುವುದನ್ನು ನಿಯಂತ್ರಸಲು ಯಾವುದೇ ಖಾತೆ ಹೊಂದಿರದ ನಿವೇಶನಗಳಿಗೆ ಹೊಸದಾಗಿ ಎ-ಖಾತಾ ನೀಡದಿರಲು ನಿರ್ಧರಿಸಲಾಗಿದೆ.
ಈಗಾಗಲೇ ಬೆಂಗಳೂರಿನಲ್ಲಿ ಬಿ ಖಾತೆಗೆ ಎ ಖಾತೆ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇದೇ ರೀತಿಯಲ್ಲಿ ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿನ ಸ್ಥಳೀಯ ಯೋಜನಾ ಪ್ರದೇಶಗಳ ಒಳಗೆ ಅಥವಾ ಹೊರಗೆ ಇರುವ ಬಿ-ಖಾತಾ ನಿವೇಶನಗಳಿಗೂ ಎ ಖಾತೆ ನೀಡಲು ತೀರ್ಮಾನಿಸಲಾಗಿದೆ.
ಮೊದಲನೆಯದಾಗಿ, ಬಿ ಖಾತಾದಲ್ಲಿರುವ ಆಸ್ತಿಯ ಇಲ್ಲಿಯವರೆಗಿನ ಎಲ್ಲ ಬಾಕಿ ಆಸ್ತಿ ತೆರಿಗೆಯನ್ನು ಸಂಪೂರ್ಣವಾಗಿ ಪಾವತಿಸಬೇಕು.
ಯಾವುದೇ ಬಾಕಿ ಉಳಿಸಿಕೊಳ್ಳಬಾರದು. ಆಸ್ತಿಯ ಹಕ್ಕು ಪತ್ರ, ಕ್ರಯ ಪತ್ರ, ಆಸ್ತಿ ತೆರಿಗೆ ಪಾವತಿಸಿದ ರಸೀದಿಗಳು, ಅನುಮೋದಿತ ಕಟ್ಟಡ ನಿರ್ಮಾಣ ನಕ್ಷೆ ಜತೆ ಅರ್ಜಿ ಸಲ್ಲಿಸಿದರೆ ಅಧಿಕಾರಿಗಳು ಪರಿಶೀಲಿಸಿ ಕ್ರಮಬದ್ಧವಾಗಿದ್ದರೆ ಮಾತ್ರ ಎ ಖಾತಾ ನೀಡಬಹುದು.
Laxmi News 24×7