Breaking News

ತಮಿಳುನಾಡಿಗೆ ನೀರು ಬಿಟ್ರೆ ಮತ್ತೆ ಕರ್ನಾಟಕ ಬಂದ್ – ಸರ್ಕಾರಕ್ಕೆ ವಾಟಾಳ್ ಎಚ್ಚರಿಕೆ

Spread the love

ಬೆಂಗಳೂರು: ತಮಿಳುನಾಡಿಗೆ ನೀರು ಬಿಟ್ಟರೆ ಮತ್ತೆ ಕರ್ನಾಟಕ ಬಂದ್ ಮಾಡುತ್ತೇವೆ ಎಂದು ಸರ್ಕಾರಕ್ಕೆ ವಾಟಾಳ್ ನಾಗರಾಜ್  ಎಚ್ಚರಿಕೆ ನೀಡಿದ್ದಾರೆ.

ಕಾವೇರಿ, ಕಳಸಬಂಡೂರಿ, ಮಹಾದಾಯಿ, ಮೇಕೆದಾಟು, ಉತ್ತರ ಕನ್ನಡ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಸೇರಿದಂತೆ ಹಲವು ವಿಚಾರಗಳ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಖಂಡ ಕರ್ನಾಟಕ ಬಂದ್ ಇಡೀ ರಾಜ್ಯಾದ್ಯಂತ ಚೆನ್ನಾಗಿ ಶಬ್ದ ಮಾಡಿದೆ. ಒಂದಿಲ್ಲೊಂದು ಪ್ರತಿಭಟನೆಯಾಗಿದೆ. ದೇಶ ಹಾಗೂ ರಾಜ್ಯದ ಗಮನ ಸೆಳೆದಿದೆ. ಇದಕ್ಕೆ ಜನರಿಗೆ ಅಭಿನಂದನೆ ಸಲ್ಲಿಸತ್ತೇನೆ. ಸ್ಟೇಷನ್‌ನಲ್ಲಿ ಕುಳಿತಾಗಲೇ ಬಂದ್ ವಾಪಸ್ ಪಡೆದಿದ್ದೇವೆ ಅಂತಾ ಸ್ನೇಹಿತರು ಹೇಳಿದ್ರು. ಒಂದಿಷ್ಟು ಹಿಂದೆ ಪಡೆದಿರಲಿಲ್ಲ. ಕಾವೇರಿ ನೀರು  ಇದರ ಸಮಸ್ಯೆಗಳು ಇವತ್ತಿಗೆ ಮುಗಿಯಲ್ಲ. ಮಂಡ್ಯ,ಬೆಳಗಾವಿ ಎಲ್ಲೆಡೆಯೂ ಬಂದ್ ಆಯಿತು. ನೀರು ಬಿಟ್ಟೇ ಬಿಡುತ್ತಾರೆ. ಸುಪ್ರೀಂಕೋರ್ಟ್‌ಗೆ ಹೋಗುತ್ತಾರೆ. ನೀರು ಬಿಟ್ರೆ ಮತ್ತೆ ಕರ್ನಾಟಕ ಬಂದ್ ಮಾಡತ್ತೇವೆ ಎಂದು ವಾರ್ನ್ ಮಾಡಿದರು.

ಹೋಟೆಲ್ ಮಾಲೀಕರೇ ಹೇಳಿಕೆ ಕೊಡುವಾಗ ಗಮನಹರಿಸಿ. ಇನ್ನೂ ಎರಡು ಗಂಟೆ ಹೋಟೆಲ್ ತೆರೆಯುತ್ತೇವೆ ಅಂತಾರೆ. ಮೊದಲು ನೀರಿಲ್ಲದೇ ಇದ್ರೇ ಎಫೆಕ್ಟ್ ಆಗೋದು ಹೋಟೆಲ್‌ನವರಿಗೆ. ಈ ತಿಂಗಳಲ್ಲೇ ನೀರು ಬಿಡಬಹುದು. ಈ ತಿಂಗಳು ಬಿಟ್ಟರೆ ರಸ್ತೆ ಹೆದ್ದಾರಿ ಬಂದ್ ಮಾಡುತ್ತೇವೆ. ಬಂದ್‌ನಂತಹ ದೊಡ್ಡ ಸಾಧನವಿಲ್ಲ ಎಂದರು.

ನಮ್ಮ ಮನೆಯಲ್ಲಿ ಇವತ್ತು ಬೆಳಗ್ಗೆ ನನ್ನನ್ನು ಅರೆಸ್ಟ್ ಮಾಡಿದ್ರು. ನಮ್ಮ ಮನೆ ಗೇಟ್ ಬಳಿ ಪೋಲಿಸರು ವಶಪಡಿಸಿಕೊಂಡರು. ಮಿಲಿಟರಿ ಪ್ರಭುತ್ವಕ್ಕಿಂತ ಕೆಟ್ಟದಾಗಿ ಪೋಲಿಸರು ನನ್ನನ್ನು ನಡೆಸಿಕೊಂಡರು. ನನ್ನ ಜೀವನದಲ್ಲಿ ನಮ್ಮ ಹಕ್ಕನ್ನು ಕಿತ್ತುಕೊಂಡರು. ಯಾವ ಕಾರಣಕ್ಕೂ ಮಾಧ್ಯಮವರ ಜೊತೆ ಮಾತನಾಡಬಾರದು ಎಂದರು. ಅದಕ್ಕೆ ಬಾಯಿಗೆ ಪ್ಲಾಸ್ಟರ್ ಹಾಕಿದೆ. ಈ ಪ್ಲಾಸ್ಟರ್ ಅನ್ನು ಪೋಲಿಸರು ಎಳೆದಾಡಿದರು. ಪಾಕಿಸ್ತಾನದ ಟೆರರಿಸ್ಟ್ ರೀತಿ ನನ್ನನ್ನು ಎಳೆದಾಡಿದರು. ಹೆಗಡೆನಗರದಲ್ಲಿ 10-15 ಕಿಲೋಮೀಟರ್ ದೂರದಲ್ಲಿ ನನ್ನ ಕರೆದುಕೊಂಡು ಹೋದರು. ನನ್ನ ಪೋನ್ ಕಿತ್ತುಕೊಂಡರು. ಅದಕ್ಕೆ ಪೋಲಿಸರ ಜನ್ಮ ಜಾಲಾಡಿದೆ, ಬಾಯಿ ಬಂದ ಹಾಗೆ ಬೈದೆ ಎಂದು ಪೊಲೀಸರ ನಡೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ನನ್ನ ಜೀವನದಲ್ಲಿ ಯಾವ ಸರ್ಕಾರವೂ ಈ ರೀತಿ ಮಾಡಿರಲಿಲ್ಲ. ಈ ರೀತಿ ನಡೆದುಕೊಳ್ಳಲು ಡಿಕೆ ಶಿವಕುಮಾರ್ ಹೇಳಿದ್ರಾ? ಗೃಹ ಸಚಿವರು ಹೇಳಿದ್ರಾ? ಇವತ್ತು ಆರು ಗಂಟೆಗೆ ಬಂದ್ ಮುಗಿದಿದೆ. ಮಹದಾಯಿ, ಕಳಸಾ ಬಂಡೂರಿ ಯೋಜನೆಯಾಗಬೇಕು. ಬೆಳಗಾವಿ ಅವಿಭಾಜ್ಯ ಅಂಗ ಎಂದು ಘೋಷಿಸಬೇಕು. ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ನೀಡಬೇಕು, ಹೊಸ ಶಾಲೆಗಳಾಗಬೇಕು. ಕನ್ನಡದಲ್ಲಿ ನಾಮಫಲಕವಾಗಬೇಕು. ಬೆಂಗಳೂರಲ್ಲಿ ಲಕ್ಷಾಂತರ ಜನ ತಮಿಳರು ಇದ್ದಾರೆ. ಬಿಡದಿ ಉಪನಗರ ಖಂಡಿತ ಬೇಡ. ಕನ್ನಡ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆ ತುಂಬಬೇಕು. ಸಿಎಂ ಡಿಕೆ ಶಿವಕುಮಾರ್ ಈ ಹಿಂದೆ ಮೇಕೇದಾಟಿಗೆ ಹೋರಾಡಿದ್ದರು. ಮೇಕೆದಾಟು ಮಾಡಲೇಬೇಕು. ಮೇಕೆದಾಟು ಆದರೆ ನೀರು ಬಿಡಬಹುದು, ವಿದ್ಯುತ್ ಸಿಗುತ್ತದೆ. ಮೇಕೆದಾಟಿಗೂ ಮುಂಚೆ ಕಾಡು, ಪ್ರಾಣಿಗಳನ್ನು ಉಳಿಸಬೇಕು ಎಂದರು.

ಮಹದಾಯಿ, ಕಳಸಾ ಬಂಡೂರಿ ಬಗ್ಗೆಯೂ ಹೋರಾಟ ಮಾಡುತ್ತೇವೆ. ಇಡೀ ಅಖಂಡ ಕರ್ನಾಟಕ ಬೇಕು. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದ ಬಗ್ಗೆಯೂ ಹೋರಾಟ ಮಾಡುತ್ತೇವೆ. ಉದ್ಯೋಗಗಳು ಪರಭಾಷಿಕರಿಗೆ ಸಿಗುತ್ತಿವೆ. ಅಸೆಂಬ್ಲಿಯಲ್ಲಿ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕಕ್ಕೆ ಏನು ಮಾಡಿದ್ದೀರಾ ಅಂತಾ ಶ್ವೇತಪತ್ರ ಹೊರಡಿಸಬೇಕು. ಇಂದಿನ ಬಂದ್ ಪೋಲಿಸರ ದರ್ಪವಾಗಿದೆ. ಕಾವೇರಿ ನೀರು ಬಿಟ್ಟ ತಕ್ಷಣ ಸರ್ಕಾರದ ವಿರುದ್ಧ ಬಂದ್‌ಗೆ ಕರೆ ಕೊಡುತ್ತೇನೆ. ನೈತಿಕ ಬೆಂಬಲ ಅನ್ನೋದು ಇವತ್ತಿಗೆ ಬೇಡ. ಹೋಟೆಲ್ ಅಸೋಸಿಯೇಷನ್ ವಿರುದ್ಧ ಬೇರೆ ರೀತಿ ಚಳುವಳಿ ಮಾಡಬೇಕಾಗುತ್ತದೆ ಎಂದು ಹೇಳಿದರು.

ಹೋಟೆಲ್ ಮಾಲೀಕರು ಇನ್ನೊಮ್ಮೆ ಹೇಳಿಕೆ ಕೊಟ್ಟರೆ ಹೋಟೆಲ್‌ಗೆ ನುಗ್ಗಿ ಎಲ್ಲಾ ತಿಂದು ದುಡ್ಡು ಕೊಡದೇ ಕನ್ನಡ ಚಳುವಳಿಗಾರರು ಹೋಗುತ್ತೇವೆ. ಅಶೋಕ್‌ಗೆ, ಕುಮಾರಸ್ವಾಮಿಗೆ ಸರ್ಕಾರಕ್ಕೆ ಮನವಿ ಮಾಡಲು ಹೇಳತ್ತೇವೆ. ಬಿಡದಿ ಟೌನ್ ಶಿಪ್ ಮಾಡಬಾರದು. ಬಿಡದಿ ರೈತರ ಪರವಾಗಿ ಬೀದಿಗೆ ಇಳಿಯುತ್ತೇವೆ ಎಂದು ಎಚ್ಚರಿಸಿದರು.


Spread the love

About Laxminews 24x7

Check Also

ಯಂತ್ರಕ್ಕೆ ಸಿಲುಕಿದ್ದ ಅಡುಗೆ ಸಿಬ್ಬಂದಿಯನ್ನು ರಕ್ಷಿಸಿದ ಬಾಲಕ – ಪುಟಾಣಿಯ ಸಾಹಸಕ್ಕೆ ಡಿಕೆಶಿ ಮೆಚ್ಚುಗೆ

Spread the loveಮಂಗಳೂರು: ಬಂಟ್ವಾಳದ  ನರಿಕೊಂಬು  ಗ್ರಾಮದ ಶಾಲೆಯಲ್ಲಿ ಅಡುಗೆ ಮಾಡುವಾಗ ತೆಂಗಿನ ಕಾಯಿ ತುರಿಯುವ ವಿದ್ಯುತ್ ಯಂತ್ರಕ್ಕೆ ಸಿಲುಕಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ