Breaking News
Home / ಜಿಲ್ಲೆ / ಯಶ್ ಅಭಿಮಾನಿಗಳಿಗೆ ಕೆಜಿಎಫ್-2 ಚಿತ್ರತಂಡ ನಿರಾಸೆ ಮೂಡಿಸಿದೆ.

ಯಶ್ ಅಭಿಮಾನಿಗಳಿಗೆ ಕೆಜಿಎಫ್-2 ಚಿತ್ರತಂಡ ನಿರಾಸೆ ಮೂಡಿಸಿದೆ.

Spread the love

ಬೆಂಗಳೂರು: ಕೆಜಿಎಫ್-2 ಚಿತ್ರದ ಟೀಸರ್ ಬಿಡುಗಡೆಯಾಗುತ್ತೆ ಎಂಬ ನಿರೀಕ್ಷೆಯಲ್ಲಿ ಇದ್ದ ಯಶ್ ಅಭಿಮಾನಿಗಳಿಗೆ ಕೆಜಿಎಫ್-2 ಚಿತ್ರತಂಡ ನಿರಾಸೆ ಮೂಡಿಸಿದೆ.

ಇಡೀ ಭಾರತ ಚಿತ್ರರಂಗವೇ ಕೆಜಿಎಫ್-2 ಚಿತ್ರದ ಬಿಡುಗಡೆಯ ಕಡೆ ನೋಡುತ್ತಿದೆ. ಕೆಜಿಎಫ್-1ರ ಭರ್ಜರಿ ಯಶಸ್ಸಿನ ನಂತರ ಯಶ್ ಕೆಜಿಎಫ್-2 ಚಿತ್ರವನ್ನು ಮಾಡುತ್ತಿದ್ದಾರೆ. ಈಗಾಗಲೇ ಚಿತ್ರತಂಡ ಸಿನಿಮಾದ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡಿದೆ. ಆದರೆ ಇಲ್ಲಿಯವರೆಗೂ ಚಿತ್ರ ಕೆಲ ಪೋಸ್ಟರ್ ಗಳನ್ನು ಮಾತ್ರ ಬಿಡುಗಡೆ ಮಾಡಿದ್ದು, ಚಿತ್ರದ ಟೀಸರ್ ನೋಡಲು ಯಶ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಈ ವಿಚಾರವಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಟೀಸರ್ ಬಿಡುಗಡೆ ಮಾಡುವಂತೆ ಬೇಡಿಕೆ ಇಡುತ್ತಿದ್ದಾರೆ. ಪ್ರೀತಿಯ ಯಶ್ ಮತ್ತು ಹೊಂಬಾಳೆ ಫಿಲ್ಮ್ ಅವರೇ ನಾವು ನಿಮ್ಮ ಅಪ್ಪಟ ಅಭಿಮಾನಿಗಳಾಗಿದ್ದು, ಕೆಜಿಎಫ್-2 ಚಿತ್ರದ ಟೀಸರ್ ಗಾಗಿ ಬಹಳ ತಿಂಗಳುಗಳಿಂದ ಕಾಯುತ್ತಿದ್ದೇವೆ. ದಯವಿಟ್ಟು ಸಿನಿಮಾದ ಟೀಸರ್ ಬಿಡುಗಡೆಯ ದಿನಾಂಕವನ್ನು ಘೋಷಿಸಿ ಅಭಿಮಾನಿಗಳ ಆಸೆ ಈಡೇರಿಸಿ ಎಂದು ಟ್ವೀಟ್ ಮಾಡುವ ಮೂಲಕ ಕೇಳಿಕೊಳ್ಳುತ್ತಿದ್ದಾರೆ

ಅಭಿಮಾನಿಗಳ ಟ್ವೀಟ್ ಗೆ ಉತ್ತರಿಸಿರುವ ಹೊಂಬಾಳೆ ಸಂಸ್ಥೆಯ ಕಾರ್ತಿಕ್ ಗೌಡ, ಕೆಜಿಎಫ್-2 ಚಿತ್ರದ ಟೀಸರ್ ಸದ್ಯದಲ್ಲೇ ಬಿಡುಗಡೆಯಾಗುವುದಿಲ್ಲ. ಚಿತ್ರದ ಬಿಡುಗಡೆಯ ವೇಳೆಗೆ ಟೀಸರ್ ಮತ್ತು ಟ್ರೈಲರ್ ಅನ್ನು ಬಿಡುಗಡೆ ಮಾಡುತ್ತೇವೆ. ಸದ್ಯಕ್ಕೆ ಈಗ ಮನೆಯಲ್ಲೇ ಇರಿ, ಸೇಫ್ ಆಗಿ ಇರಿ ಮುಂದೆ ನೋಡೋಣ ಎಂದು ಟ್ವೀಟ್ ಮಾಡಿದ್ದಾರೆ.

ಸತತ ಎರಡು ವರ್ಷದಿಂದ ಕೆಜಿಎಫ್-2 ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈಗಾಗಲೇ ಚಿತ್ರದ ಬಹುತೇಕ ಶೂಟಿಂಗ್ ಮುಗಿದಿದ್ದು, ಚಿತ್ರತಂಡ ಅಕ್ಟೋಬರ್ 23ರಂದು ಸಿನಿಮಾವನ್ನು ಬಿಡುಗಡೆ ಮಾಡುತ್ತೇವೆ ಎಂದು ಕೂಡ ಘೋಷಿಸಿದೆ. ಈ ನಡುವೆ ಯಶ್ ಹುಟ್ಟುಹಬ್ಬದಂದೇ ಬಿಡುಗಡೆಯಾಗಬೇಕಿದ್ದ ಟೀಸರ್ ಇಷ್ಟು ದಿನ ಕಳೆದರೂ ಬಿಡುಗಡೆಯಾಗಿಲ್ಲ. ಆದ್ದರಿಂದ ಬೇಸರಗೊಂಡ ಯಶ್ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಟೀಸರ್ ಬಿಡುಗಡೆ ಮಾಡುವಂತೆ ಕೇಳಿಕೊಳ್ಳುತ್ತಿದ್ದಾರೆ.

ಭಾರತ ಚಿತ್ರರಂಗದಲ್ಲೇ ಒಂದು ಹೊಸ ಟ್ರೆಂಡ್ ಸೆಟ್ ಮಾಡಿರುವ ಕೆಜಿಎಫ್-2 ಚಿತ್ರಕ್ಕಾಗಿ ಇಡೀ ದೇಶವೇ ಕಾಯುತ್ತಿದೆ. ಈ ಚಿತ್ರದಲ್ಲಿ ಭಾರತ ಚಿತ್ರರಂಗದ ಘಟಾನುಘಟಿ ಕಲಾವಿದರು ಅಭಿನಯಿಸುತ್ತಿದ್ದಾರೆ. ಈಗಾಗಲೇ ಅಧಿರನ ಪಾತ್ರದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸಂಜಯ್ ದತ್, ಪ್ರಧಾನಿ ರಮಿಕಾ ಸೇನ್ ಪಾತ್ರದಲ್ಲಿ ರವೀನಾ ಟಂಡನ್ ನಟಿಸಿದ್ದಾರೆ. ಹೀಗಾಗಿ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.


Spread the love

About Laxminews 24x7

Check Also

ಗ್ರಾಹಕರಿಗೆ ಬಿಗ್ ಶಾಕ್ : ಶೀಘ್ರವೇ ಹೋಟೆಲ್ ಊಟ, ತಿಂಡಿ ದರ ಹೆಚ್ಚಳ..!

Spread the loveಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಮತ್ತೊಂದು ಶಾಕ್ ಎದುರಾಗುವ ಸಾಧ್ಯತೆ ಇದ್ದು, ಸಿಲಿಂಡರ್ ಬೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ