Breaking News

4ನೇ ಮಹಡಿಯಿಂದ ಬಿದ್ದ ಮಗು – ತಂದೆ-ತಾಯಿ ನಿರ್ಲಕ್ಷ್ಯ; ಪುಟ್ಟ ಕಂದ ಜೀವನ್ಮರಣ ಹೋರಾಟ

Spread the love

ಬೆಂಗಳೂರು: ತಂದೆ-ತಾಯಿ ಮನೆಯ ಮುಂದೆ ಆಟವಾಡಲು ಬಿಟ್ಟಿದ್ದ ಪುಟ್ಟ ಕಂದನೊಬ್ಬ 4ನೇ ಮಹಡಿಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕ ಆಡುಗೋಡಿಯಲ್ಲಿ ನಡೆದಿದೆ.

ಆಗಸ್ಟ್‌ 15ರಂದು ಬೆಳಗ್ಗೆ 10.50ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಮನೆಯ ಮುಂದೆ ಆಟವಾಡುತ್ತಿದ್ದ ಮಗು ಗ್ರಿಲ್‌ ಮೇಲೆ ಹತ್ತಿದ್ದು, ಆಯತಪ್ಪಿ 4ನೇ ಮಹಡಿಯಿಂದ ಕೆಳಗೆ ಬಿದ್ದಿದೆ. ಕೆಳಗೆ ಬಿದ್ದ ಬಳಿಕ ಮಗು ಬೌನ್ಸ್ ಆಗಿ ಮತ್ತೆ ನೆಲಕ್ಕೆ ಅಪ್ಪಳಿಸಿದ್ದು, ಗಂಭೀರವಾಗಿ ಗಾಯಗೊಂಡಿದೆ.

ಮಗು ಮಹಡಿಯಿಂದ ಕೆಳಗೆ ಬೀಳುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಕಣ್ಣಾರೆ ಕಂಡ ಸ್ಥಳೀಯರು ಕ್ಷಣಮಾತ್ರವೂ ತಡಮಾಡದೆ ಮಗುವಿನ ರಕ್ಷಣೆಗೆ ಧಾವಿಸಿದ್ದಾರೆ. ಬೈಕ್‌ನಲ್ಲೇ ಮಗುವನ್ನು ಕರೆದೊಯ್ದ ಸ್ಥಳೀಯರು, ತಕ್ಷಣ ಕೋರಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಸಾವು-ಬದುಕಿನ ನಡುವೆ ಪುಟ್ಟ ಕಂದ ಹೋರಾಟ ನಡೆಸುತ್ತಿದೆ.

ಮಕ್ಕಳನ್ನು ಮನೆಯ ಮುಂದೆ ಆಟವಾಡಲು ಬಿಡುವಾಗ ಪೋಷಕರು ಎಚ್ಚರ ವಹಿಸಬೇಕೆಂಬುದಕ್ಕೆ ಈ ಘಟನೆ ಮತ್ತೊಂದು ಕಹಿ ಎಚ್ಚರಿಕೆಯಾಗಿದೆ.


Spread the love

About Laxminews 24x7

Check Also

ರಾಜ್ಯದಲ್ಲಿ ಬರ – 177 ತಾಲೂಕುಗಳಲ್ಲಿ 46,324 ಕೋಟಿ ಬೆಳೆ ನಷ್ಟ , 7,142 ಕೋಟಿ ನೆರವಿಗೆ ಮನವಿ

Spread the loveಬೆಂಗಳೂರು: ರಾಜ್ಯದ 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನ ಬರಪೀಡಿತ  ಎಂದು ಘೋಷಿಸಲಾಗಿದ್ದು, ಬರ ಪರಿಸ್ಥಿತಿ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ