Breaking News

ಇಬ್ಬರಿಗೂ ಅತಿಯಾದ ಕೋಪ – ಟೆಕ್ಕಿ ದಂಪತಿ ದುರಂತ ಅಂತ್ಯಕ್ಕೆ ಕಾರಣ ರಿವೀಲ್

Spread the love

ಬೆಂಗಳೂರು: ಕೋಪ ಸೆರಗಲ್ಲಿ ಬೆಂಕಿ ಕಟ್ಟಿಕೊಂಡ ಹಾಗೆ ಎಂಬ ಮಾತು ಅದೆಷ್ಟು ಸತ್ಯ ಅಲ್ವಾ? ಈ ಮಾತಿಗೆ ಪೂರಕವಾಗಿದೆ ಬೆಂಗಳೂರಿನ ಈ ಟೆಕ್ಕಿ ದಂಪತಿಯ ದುರಂತ ಅಂತ್ಯ ಪ್ರಕರಣ.

ಇತ್ತೀಚೆಗೆ ರಾಜಗೋಪಾಲ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದರ ಹಿಂದಿನ ಕಾರಣ ರಿವೀಲ್ ಆಗಿದೆ. ಇಬ್ಬರಿಗೂ ಅತಿಯಾದ ಕೋಪವೇ ಈ ದುರಂತಕ್ಕೆ ಕಾರಣ ಎಂಬುದು ತಿಳಿದು ಬಂದಿದೆ.

ಎರಡು ದಿನಗಳ ಹಿಂದೆ ಟೆಕ್ಕಿ ಸುಮಂತ್ ಜೈನ್ ತನ್ನ ಪತ್ನಿ ಪದ್ಮಾವತಿಯ ಕತ್ತುಹಿಸುಕಿ ಕೊಲೆ ಮಾಡಿ ತಾನು ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಟೆಕ್ಕಿ ದಂಪತಿ ಸಾವಿಗೆ ನಿಖರ ಕಾರಣ ತಿಳಿದಿರಲಿಲ್ಲ. ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ರಾಜಗೋಪಾಲ ನಗರ ಪೊಲೀಸರು ಘಟನೆ ಹಿಂದೆ ಕಾರಣದ ಬಗ್ಗೆ ತನಿಖೆ ನಡೆಸಿದಾಗ, ಇಬ್ಬರ ಅತಿಯಾದ ಕೋಪವೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ.

ಸುಮಂತ್ ಜೈನ್ ಚಿಕ್ಕಮಗಳೂರಿನಲ್ಲಿ ಕೆಲಸ ಮಾಡಿಸುತ್ತಿದ್ದರಂತೆ. ದಿನ ಬಿಟ್ಟು ದಿನ ಮನೆಗೆ ಬರುತ್ತಿದ್ದರು. ಉದ್ಯೋಗದ ಒತ್ತಡಕ್ಕೆ ಇಬ್ಬರ ನಡುವೆ ಮನಸ್ಥಾಪವಾಗಿತ್ತು. ಪತಿ ಮನೆಗೆ ಸರಿಯಾಗಿ ಬರುತ್ತಿಲ್ಲ ಎನ್ನುವ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಜಗಳ ವಿಕೋಪಕ್ಕೆ ಹೋದಾಗ ಕೊಲೆ ಆಗಿರುವ ಬಗ್ಗೆ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ವೃತ್ತಿಯಲ್ಲಿ ಇಬ್ಬರು ಇಂಜಿನಿಯರ್‌ ಆಗಿದ್ದರು, ಕೈತುಂಬ ಸಂಬಳ ಕೂಡ ಬರುತ್ತಿತ್ತು. ಇಬ್ಬರಿಗೂ ಇದ್ದ ಅತಿಯಾದ ಕೋಪ ದಂಪತಿಯ ದುರಂತ ಅಂತ್ಯಕ್ಕೆ ಕಾರಣವಾಗಿದೆ.


Spread the love

About Laxminews 24x7

Check Also

ರಾಜ್ಯದಲ್ಲಿ ಬರ – 177 ತಾಲೂಕುಗಳಲ್ಲಿ 46,324 ಕೋಟಿ ಬೆಳೆ ನಷ್ಟ , 7,142 ಕೋಟಿ ನೆರವಿಗೆ ಮನವಿ

Spread the loveಬೆಂಗಳೂರು: ರಾಜ್ಯದ 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನ ಬರಪೀಡಿತ  ಎಂದು ಘೋಷಿಸಲಾಗಿದ್ದು, ಬರ ಪರಿಸ್ಥಿತಿ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ