Breaking News

ಶಹಾಪುರ-ವಡಗಾವಿ ಮುಖ್ಯ ರಸ್ತೆಗೆ ದೇವರ ದಾಸಿಮಯ್ಯನವರ ಹೆಸರಿಡುವಂತೆ ಆಗ್ರಹಿಸಿ ಮನವಿ

Spread the love

ಬೆಳಗಾವಿ : ನಗರದ ಶಹಾಪುರ-ವಡಗಾವಿ ಮುಖ್ಯ ರಸ್ತೆಗೆ ದೇವರ ದಾಸಿಮಯ್ಯನವರ ಹೆಸರಿಡುವಂತೆ ಆಗ್ರಹಿಸಿ ಜಿಲ್ಲಾ ನೇಕಾರರ ಬಳಗದ ಸದಸ್ಯರು ಗುರುವಾರ ಗುರುವಾರ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತ ಹಾಗೂ ಮೇಯರ್‌ಗೆ ಮನವಿ ಸಲ್ಲಿಸಿದ್ದಾರೆ.
ವಡಗಾವಿ, ಭಾರತ ನಗರ, ಖಾಸಬಾಗ ಹಾಗೂ ಹಳೇಬೆಳಗಾವಿ ಭಾಗದಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಜನ ನೇಕಾರರು ವಾಸವಾಗಿದ್ದೇವೆ. ನಾವು ನೇಕಾರರ ಸಂತ ಆದ್ಯ ವಚನಕರ ದೇವರ ದಾಸಿಮಯ್ಯನವರನ್ನು ಪೂಜಿಸುವ ಸಮುದಾಯದವರಾಗಿದ್ದೇವೆ. ಈ ಭಾಗದ ರಸ್ತೆಗೆ ನಮ್ಮ ಸಮುದಾಯದ ಸಂತರ ಹೆಸರಿಡಬೇಕು. ಶಹಾಪುರ-ವಡಗಾವಿಯ ಮುಖ್ಯ ರಸ್ತೆ 1ಕಿಮೀ ಅಂತರದಲ್ಲಿ ಯಾರ ಹೆಸರು ಇರುವುದಿಲ್ಲ. ಈ ರಸ್ತೆಗೆ ದಾಸಿಮಯ್ಯನವರ ಹೆಸರು ಸೂಕ್ತವೆಂದು ಆಗ್ರಹಿಸಿ ಕಳೆದ ಆರು ವರ್ಷಗಳಿಂದ ಹೋರಾಟ ಮಾಡುತ್ತ ಬಂದಿದ್ದೇವೆ. ಹೀಗಾಗಿ ನಮ್ಮ ಮನವಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಬಳಗದ ಅಧ್ಯಕ್ಷ ಶ್ರೀನಿವಾಸ ತಾಳೂಕರ, ಆನಂದ ಲೋಕರಿ, ಎಸ್.ಸಿ.ಬಣಕಾರ, ಕೆ.ಬಿ.ತಾಳೂಕರ, ಈರಣ್ಣ ಗರಗ ಇತರರಿದ್ದರು.

Spread the love

About Laxminews 24x7

Check Also

ಕುಟುಂಬ ಸಮೇತರಾಗಿ ಬೆಳ್ಳಂಬೆಳಗ್ಗೆ ತಿರುಪತಿ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದ ಡಿಕೆಶಿ

Spread the love ಬೆಂಗಳೂರು: ಮೊದಲಿನಿಂದಲೂ ದೇವರಲ್ಲಿ ಅಪಾರ ಭಕ್ತಿ, ನಂಬಿಕೆ ಹೊಂದಿರುವ ಸಿಎಂ ಡಿ.ಕೆ ಶಿವಕುಮಾರ್‌  ಅವರು ರಾಜ್ಯದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ