Breaking News

ವಂದೇ ಮಾತರಂ ವಿರೋಧಿಸುವವರು ದೇಶ ಬಿಟ್ಟು ಹೋಗಿ: ಬಿಜೆಪಿ ಶಾಸಕ ಚನ್ನಬಸಪ್ಪ

Spread the love

ಬೆಂಗಳೂರು: ವಂದೇ ಮಾತರಂ ಭಾರತದ ಅಸ್ಮಿತೆ. ಅದನ್ನು ವಿರೋಧಿಸುವವರು ದೇಶ ಬಿಟ್ಟು ಹೋಗಿ ಎಂದು ಬಿಜೆಪಿ ಶಾಸಕ ಚನ್ನಬಸಪ್ಪ ಗರಂ ಆಗಿದ್ದಾರೆ.

ಸೋನಿಯಾ ಗಾಂಧಿ ಅವರಿಂದ ವಂದೇ ಮಾತರಂಗೆ ಅಪಮಾನ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ, ವಂದೇ ಮಾತರಂ ವಿರೋಧಿಸುವ ಅನೇಕ ಜೀವಿಗಳು ಈ ದೇಶದಲ್ಲಿವೆ. ಸ್ವಾತಂತ್ರ‍್ಯ ಪೂರ್ವದಲ್ಲಿ ಕೂಡಾ ಇವರು ಈ ರೀತಿಯ ಚಟುವಟಿಕೆಗಳಿಗೆ ಶಕ್ತಿ ಕೊಡುತ್ತಿದ್ದರು. ದೇಶದ ಕಾನೂನು ವಿರೋಧ ಮಾಡಬಹುದು ಎಂಬ ಮಾನಸಿಕತೆ ಅಕ್ಷಮ್ಯ. ವಂದೇ ಮಾತರಂ ವಿರೋಧ ಮಾಡುವ ಮುಸ್ಲಿಮರು ದೇಶ ಬಿಟ್ಟು ಹೋಗಿ. ನಿಮಗೆ ಅಂತಾನೇ ಪ್ರತ್ಯೇಕ ದೇಶ ಇದೆ. ಯಾಕೆ ಬೇಕು ಈ ದೇಶ ನಿಮಗೆ ಹಾಗಾದರೆ ಎಂದು ಪ್ರಶ್ನಿಸಿದರು.

ಸೋನಿಯ ಗಾಂಧಿ, ರಾಹುಲ್ ಗಾಂಧಿ ಕೂಡಾ ಈ ದೇಶದಲ್ಲಿ ಇರಕೂಡದು. ನೀವು ಕೂಡಾ ಮುಸಲ್ಮಾನರ ಜೊತೆ ತೊಲಗಿಬಿಡಿ. ಕಾಂಗ್ರೆಸ್‌ನದ್ದು ಎಷ್ಟು ನೀಚತನದ ಪರಮಾವಧಿ. ಮುಸಲ್ಮಾನರಿಗೆ ನೋವಾಗುತ್ತದೆ. ಗೀತೆಯಲ್ಲಿ ದುರ್ಗೆ ಬರುತ್ತಾಳೆ ಅಂತಾ ವಂದೇ ಮಾತರಂ ತುಂಡು ಮಾಡಿದೆ ಕಾಂಗ್ರೆಸ್. ಮುಸಲ್ಮಾನರಿಗಾಗಿ ಇರುವ ಕಾಂಗ್ರೆಸ್ ದೇಶಕ್ಕೆ ಅವಶ್ಯಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಅಲ್ಲಾಹ್ ಬಗ್ಗೆ ಹೇಳಿದಾಗ ಹಿಂದೂಗಳು ಸಹಿಸಿಕೊಂಡಿಲ್ವಾ? ಆಜಾನ್ ಕೂಗಿದಾಗ ಹಿಂದೂಗಳು ಸಹಿಸಿಕೊಂಡು ಸುಮ್ಮನೆ ಇಲ್ಲವೇ? ಕಾಂಗ್ರೆಸ್ ಹಿಂದೂ ವಿರೋಧಿ ಮನಸ್ಥಿತಿ ವಿರುದ್ಧ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರಿಯಾಂಕ್ ಖರ್ಗೆಯವರೇ ಆರ್‌ಎಸ್‌ಎಸ್ ಬಗ್ಗೆ ನೀವು ಕಾನೂನು ತರುವ ಪ್ರಯತ್ನ ಮಾಡುತ್ತಿದ್ದೀರಿ. ಮುಸ್ಲಿಮರ ವಿರುದ್ಧ ಯಾವ ಕಾನೂನು ತಂದಿದ್ದೀರಿ ನೀವು? ಮುಸ್ಲಿಮರನ್ನು ನೀವು ಆರಾಧಿಸುತ್ತೀರಾ? ನಿಮಗೆ ಹಿಂದೂಸ್ಥಾನದ ಧಿಕ್ಕಾರ ಇದೆ. ದೇಶದ್ರೋಹಿ ಚಟುವಟಿಕೆಗೆ ಕುಮ್ಮಕ್ಕು ಕೊಡುವ ಕಾಂಗ್ರೆಸ್ ಕ್ಷಮೆಗೆ ಅರ್ಹವಲ್ಲ. ವಂದೇ ಮಾತರಂ ಮುಂದೆ ಇಟ್ಟುಕೊಂಡು ಏನೇನೆಲ್ಲಾ ಮಾಡಿದ್ದೀರಿ ನೀವು ಎಂದು ವಾಗ್ದಾಳಿ ನಡೆಸಿದರು.


Spread the love

About Laxminews 24x7

Check Also

ರಾಜ್ಯದಲ್ಲಿ ಬರ – 177 ತಾಲೂಕುಗಳಲ್ಲಿ 46,324 ಕೋಟಿ ಬೆಳೆ ನಷ್ಟ , 7,142 ಕೋಟಿ ನೆರವಿಗೆ ಮನವಿ

Spread the loveಬೆಂಗಳೂರು: ರಾಜ್ಯದ 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನ ಬರಪೀಡಿತ  ಎಂದು ಘೋಷಿಸಲಾಗಿದ್ದು, ಬರ ಪರಿಸ್ಥಿತಿ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ