Breaking News

Uncategorized

ರಫ್ತು ಉದ್ಯಮಕ್ಕೆ ಬೆಳಗಾವಿಯಲ್ಲಿ ಉತ್ತಮ ಅವಕಾಶ: ಸ್ವಪ್ನಿಲ್ ಶಹ

ಬೆಳಗಾವಿ:  ರಫ್ತು ಉದ್ಯಮಕ್ಕೆ ಬೆಳಗಾವಿಯಲ್ಲಿ ಉತ್ತಮ ಅವಕಾಶವಿದ್ದು, ಉದ್ಯಮಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಬೆಳಗಾವಿ ಚೆಂಬರ್ ಆಫ್ ಕಾಮರ್ಸ್ (ಬಿಸಿಸಿಐ) ಅಧ್ಯಕ್ಷ ಸ್ವಪ್ನಿಲ್ ಶಹ ಹೇಳಿದರು. ಬೆಳಗಾವಿ ಸಣ್ಣ ಕೈಗಾರಿಕೆಗಳ ಸಂಘ (ಬಿಡಿಎಸ್ಎಸ್ಐಎ) ಬುಧವಾರ ಆಯೋಜಿಸಿದ್ದ ಆಮದು ಮತ್ತು ರಫ್ತು ಉದ್ಯಮ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ರೀತಿಯ ಜಾಗೃತಿ ಕಾರ್ಯಕ್ರಮಗಳು ಉದ್ಯಮಿಗಳಿಗೆ, ಉದ್ಯಮಗಳ ಬೆಳವಣಿಗೆಗೆ ಸಹಾಯ ಮಾಡುತ್ತವೆ ಎಂದ ಅವರು, ಚೆಂಬರ್ ಆಫ್ ಕಾಮರ್ಸ್ …

Read More »

ಜೆಸಿಬಿಯನ್ನು ಕದ್ದು ರೇಸ್‌ ಕಾರಿನಂತೆ ಓಡಿಸಿದ ಭೂಪ – ಬ್ಯಾರಿಕೇಡ್‌ಗಳು ಪುಡಿ ಪುಡಿ, ಪೊಲೀಸರಿಂದ ಫಿಲ್ಮಿ ಸ್ಟೈಲ್‌ ಚೇಸಿಂಗ್‌

ಭುವನೇಶ್ವರ: ಬೈಕ್, ಕಾರು ಕದ್ದು ಪೊಲೀಸರಿಂದ ತಪ್ಪಿಸಿಕೊಳ್ಳಲು ಹೆದ್ದಾರಿಯಲ್ಲಿ ವೇಗವಾಗಿ ಪರಾರಿಯಾಗುವ ಕಳ್ಳರ ಬಗ್ಗೆ ಕೇಳಿರುತ್ತೀರಿ. ಆದರೆ ಒಡಿಶಾದ  ಗಂಜಾಂ ಜಿಲ್ಲೆಯಲ್ಲಿ ಖದೀಮನೊಬ್ಬ ಜೆಸಿಬಿಯನ್ನೇ ಕದ್ದು ರಸ್ತೆಯಲ್ಲಿ ಮನ ಬಂದಂತೆ ಚಲಾಯಿಸಿದ್ದಾನೆ. ಸಾಮಾನ್ಯವಾಗಿ ನಿಧಾನವಾಗಿ ಸಾಗುವ ಜೆಸಿಬಿಯಲ್ಲೇ ಈ ಭೂಪ ಹೆದ್ದಾರಿಯಲ್ಲಿ ರೇಸ್ ಕಾರ್ ತರಹ ಅಬ್ಬರಿಸಿದ್ದಾನೆ. ಜೆಸಿಬಿ ಬ್ಯಾರಿಕೇಡ್‌ಗಳನ್ನು ಮುರಿದು ವೇಗವಾಗಿ ಸಾಗುತ್ತಿರುವ ಜೆಸಿಬಿಯನ್ನು ಪೊಲೀಸರು ಚೇಸಿಂಗ್‌ ಮಾಡುತ್ತಿರುವ ದೃಧ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಆಗಸ್ಟ್ 14 …

Read More »

ಉದ್ಯಮಬಾಗ ಪೊಲೀಸರ ಭರ್ಜರಿ ಬೇಟೆ: 1 ಕೆಜಿಗೂ ಅಧಿಕ ಗಾಂಜಾ ವಶಕ್ಕೆ

ಬೆಳಗಾವಿ: ಬೆಳಗಾವಿಯ ಉದ್ಯಮಬಾಗ ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವನನ್ನು ಬಂಧಿಸಿ 60,000 ರೂ ಮೌಲ್ಯದ 1 ಕೆ.ಜಿ 212 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ. ಸಾಗರ ಸುರೇಶ ಮೋರೆ (29) ಬಂಧಿತ ಆರೋಪಿ, ಬೆಳಗಾವಿ ನಗರದ ಉದ್ಯಮಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಉತ್ಸವ ಕ್ರಾಸ್ ಡಬಲ್ ರಸ್ತೆಯ ಪಕ್ಕದಲ್ಲಿರುವ ಪೌಂಡ್ರಿ ಕ್ಲಸ್ಟರ್ ಹತ್ತಿರ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಉದ್ಯಮಬಾಗ ಪೊಲೀಸು ದಾಳಿ ಮಾಡಿ ಆರೋಪಿ …

Read More »

ಸೂಪರ್ ಸೀಡ್ ಆಗುತ್ತಾ ಬೆಳಗಾವಿ ಮಹಾನಗರ ಪಾಲಿಕೆ…? RC ನೋಟಿಸ್ ನಲ್ಲಿ ಏನಿದೆ

ಬೆಳಗಾವಿ : ಬೆಳಗಾವಿ ಕರ್ನಾಟಕ ಅವಿಭಾಜ್ಯ ಅಂಗ ಎಂದು ಗೊತ್ತುವಳಿ ಮಂಡಿಸುವಂತೆ ಬೆಳಗಾವಿ ಮಹಾನಗರ ಪಾಲಿಕೆ ಹಾಗೂ ಕನ್ನಡ ಸಂಘಟನೆಗಳ‌ ನಡುವಿನ ಜಟಾಪಟಿ ಮುಂದುವರಿದಿದೆ. ಮಂಗಳವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಹಾಗೂ ನಾಮನಿರ್ದೇಶಿತ ಸದಸ್ಯರು ಆಡಳಿತ ಪಕ್ಷದ ವಿರುದ್ಧ ಆಕ್ರೋಶ ಹೊರಹಾಕಿದರು. ಬೆಳಗಾವಿ ಮಹಾನಗರ ಪಾಲಿಕೆ ಸೂಪರ್ ಸೀಡ್….? ಕಳೆದ ಮೂರು ತಿಂಗಳಿಂದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ನಡೆಯದೆ ಆಡಳಿತಾತ್ಮಕ ಬಿಕ್ಕಟ್ಟು ಉಂಟಾಗಿರುವ ಹಿನ್ನೆಲೆಯಲ್ಲಿ, ಬೆಳಗಾವಿ …

Read More »

ಜಾರಕಿಹೊಳಿ‌ ನಿವಾಸದಲ್ಲಿ ನಾಗರಪಂಚಮಿಯ ಪವಾಡ – ಶಾಸಕರು ಪೂಜೆ ಸಲ್ಲಿಸ್ತಿದ್ದಂತೆಯೇ ಬೆರಗಾದ ಭಕ್ತರು..!

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನಾಗರಪಂಚಮಿ ಪೂಜೆ ಮುಗಿಸಿದ ಬೆನ್ನಲ್ಲೇ ಅವರ ನಿವಾಸದ ಆವರಣದಲ್ಲಿ ಜೀವಂತ ನಾಗರಹಾವು ಪ್ರತ್ಯಕ್ಷವಾಗಿದೆ. ನಾಗದೇವರ ಮೂರ್ತಿಯ ಬಳಿ ಹಾವು ಕಾಣಿಸಿಕೊಂಡ ಈ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ‘ಪವಾಡ’ ಎಂದು ವೈರಲ್ ಆಗುತ್ತಿದೆ. ಬೆಳಗಾವಿ: ನಾಗರಪಂಚಮಿ ಎಂದರೆ ಭಕ್ತರಿಗೆ ವಿಶೇಷ ಸಂಭ್ರಮ. ಹುತ್ತಕ್ಕೆ ಹಾಲೆರೆದು ನಾಗದೇವನನ್ನು ಪೂಜಿಸುವ ಈ ದಿನದಂದು ಬೆಳಗಾವಿ ಜಿಲ್ಲೆಯ ಗೋಕಾಕನಲ್ಲಿ ಒಂದು ಅಚ್ಚರಿಯ ಘಟನೆ ನಡೆದಿದೆ. ಅರಭಾವಿ ಶಾಸಕ …

Read More »

ಫುಟ್‌ಪಾತ್‌ ಮೇಲೆ ವಾಹನ ಚಲಾಯಿಸಿದ್ರೆ 5 ಸಾವಿರ ರೂ. ದಂಡ; ಸರ್ಕಾರಕ್ಕೆ ಸಾರಿಗೆ ಇಲಾಖೆ ಪ್ರಸ್ತಾವನೆ ಸಲ್ಲಿಕೆ

ಬೆಂಗಳೂರು: ಫುಟ್‌ಪಾತ್‌ ಮೇಲೆ ವಾಹನ ಚಲಾಯಿಸುವ ಸವಾರರಿಗೆ ಇನ್ಮುಂದೆ ಭಾರಿ ದಂಡ ಬೀಳುವ ಸಾಧ್ಯತೆ ಇದೆ. ನಿಯಮ ಉಲ್ಲಂಘಿಸುವವರಿಗೆ ಈಗಿರುವ ದಂಡಕ್ಕಿಂತ ಹಲವು ಪಟ್ಟು ಹೆಚ್ಚಿಸಲು ಸಾರಿಗೆ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಸದ್ಯ ಫುಟ್‌ಪಾತ್‌ ಮೇಲೆ ವಾಹನ ಚಲಾಯಿಸಿದರೆ 500 ರೂ. ದಂಡ ವಿಧಿಸಲಾಗುತ್ತಿದೆ. ಆದರೆ ಮುಂಬರುವ ದಿನಗಳಲ್ಲಿ ಮೊದಲ ಬಾರಿ ಈ ನಿಯಮ ಉಲ್ಲಂಘನೆ ಮಾಡಿದವರಿಗೆ 5,000 ರೂ. ಹೆಚ್ಚಿಸುವಂತೆ ಸಾರಿಗೆ ಇಲಾಖೆ ಪ್ರಸ್ತಾವನೆ ನೀಡಿದೆ. ಇದೇ …

Read More »

ಬಿ.ಸಿ.ನಾಗೇಶ್ ಅಗಲಿಕೆಗೆ ಸಚಿವ ಪ್ರಹ್ಲಾದ್ ಜೋಶಿ ಕಂಬನಿ

ಬೆಂಗಳೂರು: ಸರಳ-ಸಜ್ಜನ, ಸ್ನೇಹಮಯಿ ಆಗಿದ್ದ ಮಾಜಿ ಶಿಕ್ಷಣ ಸಚಿವ, ತಿಪಟೂರು ಮಾಜಿ ಶಾಸಕ ಬಿ.ಸಿ.ನಾಗೇಶ್ ಅವರ ನಿಧನಕ್ಕೆ ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ  ಕಂಬನಿ ಮಿಡಿದಿದ್ದಾರೆ. ಸರಳ-ಸಜ್ಜನಿಕೆ ವ್ಯಕ್ತಿತ್ವದವರಾಗಿದ್ದ ನಾಗೇಶ್ ಅವರು ವೈಚಾರಿಕ ಬದ್ಧತೆ ಹಾಗೂ ಜನಪರ ಕಾಳಜಿಗೆ ಹೆಸರಾಗಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಅವರು ತಂದ ಹಲವು ಸುಧಾರಣೆಗಳು ಮತ್ತು ಸಂಘಟನಾ ಕೌಶಲ್ಯ ಸದಾ ಸ್ಮರಣೀಯ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) ಪೂರ್ಣಾವಧಿ ಕಾರ್ಯಕರ್ತರಾಗಿ ಸಾರ್ವಜನಿಕ ಜೀವನ …

Read More »

ಪ್ರಿಯಕರನೊಂದಿಗೆ ಸೇರಿ ಪತಿ ಕೊಲೆ; ಮೃತದೇಹ ತುಂಗಭದ್ರಾ ನದಿಗೆ ಬಿಸಾಕಿದ ಪತ್ನಿ

ದಾವಣಗೆರೆ: ಅಕ್ರಮ ಸಂಬಂಧದ ಅಡ್ಡಿಯಾಗಿದ್ದಕ್ಕೆ ಪತ್ನಿಯೇ ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಲೆ ಮಾಡಿ, ಬಳಿಕ ಮೃತದೇಹವನ್ನು ತುಂಗಭದ್ರಾ ನದಿಗೆ ಬಿಸಾಕಿರುವ ಘಟನೆ ದಾವಣಗೆರೆ ತಾಲೂಕಿನ ಪಾಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪಾಮೇನಹಳ್ಳಿ ಗ್ರಾಮದ ರಘು (36) ಕೊಲೆಯಾದ ದುರ್ದೈವಿ. ಆತನ ಪತ್ನಿ ಶೃತಿ ಹಾಗೂ ಆಕೆಯ ಪ್ರಿಯಕರ ಉಬೇದುಲ್ಲಾ ಕೊಲೆ ಆರೋಪಿಗಳು. ರಘು ಹಾಗೂ ಶೃತಿ ಕಳೆದ 12 ವರ್ಷಗಳ ಹಿಂದೆ ಮದುವೆಯಾಗಿದ್ದರು. ರಘುವಿನ ಕುಡಿತದ ಚಟದಿಂದ ಇಬ್ಬರ ನಡುವೆ …

Read More »

ಮಾಜಿ ಸಚಿವ ಬಿ.ಸಿ. ನಾಗೇಶ್ ನಿಧನ; ಸಿಎಂ ಸೇರಿ ಗಣ್ಯರಿಂದ ಸಂತಾಪ

ಬೆಂಗಳೂರು: ಮಾಜಿ ಶಿಕ್ಷಣ ಸಚಿವ ಹಾಗೂ ತಿಪಟೂರು ಮಾಜಿ ಶಾಸಕ ಬಿ.ಸಿ. ನಾಗೇಶ್ ನಿಧನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಹಾಗೂ ವಿಜಯೇಂದ್ರ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗಣ್ಯರು ಎಕ್ಸ್ ಖಾತೆ ಮೂಲಕ ಸಂತಾಪ ಸೂಚಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಅರವಿಂದ್ ಬೆಲ್ಲದ್, ಹರೀಶ್ ಪೂಂಜಾ ಸೇರಿದಂತೆ …

Read More »

ಕುಡಿಯಲು ನೀರು ಕೊಡಲ್ಲ ಎಂದಿದ್ದಕ್ಕೆ ಗಲಾಟೆ – ಚಾಕು ಇರಿದು ಲಾರಿ ಕ್ಲೀನರ್ ಹತ್ಯೆ

ಬೆಂಗಳೂರು: ಕುಡಿಯಲು ನೀರು  ಕೊಡಲ್ಲ ಎಂದಿದ್ದಕ್ಕೆ ಚಾಕು ಇರಿದು ಲಾರಿ ಕ್ಲೀನರ್  ಹತ್ಯೆ ಮಾಡಿರುವ ಘಟನೆ ಆರ್‌ಎಂಸಿ ಯಾರ್ಡ್‌ನ ಫ್ಯಾಕ್ಟರಿಯೊಂದರ ಬಳಿ ನಡೆದಿದೆ. ಆಂಧ್ರ ಮೂಲದ ಬರ್ಕತ್ ಕೊಲೆಯಾದ ದುರ್ದೈವಿ. ಮಧುಗಿರಿ ಮೂಲದ ಸೀನಪ್ಪ ಬಂಧಿತ ಆರೋಪಿ. ಬರ್ಕತ್ ಹಾಗೂ ಸೀನಪ್ಪ ಇಬ್ಬರೂ ಲಾರಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ಊಟದ ಬಳಿಕ ಬರ್ಕತ್ ಬಳಿ ಸೀನಪ್ಪ ನೀರು ಕೇಳಿದ್ದಾನೆ. ಈ ವೇಳೆ ಬರ್ಕತ್ ನೀರು ಕೊಡಲ್ಲ ಎಂದಾಗ …

Read More »