ಗೋಕಾಕ: ರಮೇಶ ಜಾರಕಿಹೊಳಿ ಅವರ ಕೌಜಲಗಿ ಗ್ರಾಮದ ಅಭಿಮಾನಿ ಬಳಗ ಹಾಗೂ ಬೆಂಬಲಿಗರು ಗುರುವಾರದಂದು ವಿವಾದಿತ ಸಿಡಿ ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಸಿಐಡಿಗೆ ವಹಿಸಬೇಕೆಂದು ಆಗ್ರಹಿಸಿ ಕಂದಾಯ ನಿರೀಕ್ಷಕ ಎಮ್.ಆಯ್.ಮಠ ಅವರ ಮುಖಾಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದರು. ಗ್ರಾಮದ ರವಿವರ್ಮ ಚೌಕದಲ್ಲಿ ಸೇರಿದ ರಮೇಶ ಜಾರಕಿಹೊಳಿ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ, ಟೈರ್ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ, …
Read More »ಪಡಿತರ ಚೀಟಿ ಹೊಂದಿರುವವರಿಗೆ ʼನೆಮ್ಮದಿʼ ಸುದ್ದಿ: ವಿತರಣೆಯಲ್ಲಿ ವ್ಯತ್ಯಯವಾದರೆ ಈ ಸಂಖ್ಯೆಗೆ ಕರೆ ಮಾಡಿ
ಪಡಿತರ ಚೀಟಿ ಅನ್ನೋದು ಸರ್ಕಾರ ನೀಡಿರುವ ಸವಲತ್ತುಗಳಲ್ಲಿ ಒಂದಾಗಿದ್ದು, ಇದನ್ನ ಬಳಸಿ ಸಾರ್ವಜನಿಕರು ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತ ಇಲ್ಲವೇ ಕನಿಷ್ಟ ದರಕ್ಕೆ ದಿನಸಿ ಸಾಮಗ್ರಿಗಳನ್ನ ಪಡೀತಾರೆ. ಆದರೆ ನ್ಯಾಯಬೆಲೆ ಅಂಗಡಿಗಳಲ್ಲಿ ದಿನಸಿ ವಿತರಣೆ ವಿಚಾರವಾಗಿ ಸಾಕಷ್ಟು ದೂರುಗಳು ಕೇಳಿ ಬರ್ತಿದೆ. ಫಲಾನುಭವಿಗಳಿಗೆ ಸರಿಯಾದ ಪ್ರಮಾಣ ಆಹಾರ ಧಾನ್ಯಗಳನ್ನ ವಿತರಿಸಲಾಗ್ತಿಲ್ಲ ಎಂಬ ಆರೋಪವೂ ಕೆಲವು ಕಡೆ ಕೇಳಿ ಬಂದಿದೆ. ಒಂದು ವೇಳೆ ನೀವು ಕೂಡ ಇಂತಹದ್ದೇ ಯಾವುದಾದರೊಂದು ಸಮಸ್ಯೆಯನ್ನ ಎದುರಿಸ್ತಾ ಇದ್ದರೆ …
Read More »ಡ್ರಗ್ಸ್ ಜಾಲ ಪ್ರಕರಣ: ರಾಗಿಣಿ, ಸಂಜನಾ ಸಹಿತ 25 ಮಂದಿ ವಿರುದ್ಧ ಚಾರ್ಜ್ ಶೀಟ್
ಬೆಂಗಳೂರು: ನಟಿ ರಾಗಿಣಿ ದ್ವಿವೇದಿ, ಸಂಜನಾ ಗರ್ಲಾನಿ ಸಹಿತ 25 ಮಂದಿ ವಿರುದ್ಧ ಅಂತಾರಾಷ್ಟ್ರೀಯ ಡ್ರಗ್ಸ್ ಜಾಲ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಸಿಸಿಬಿ ಪೊಲೀಸರು ಡ್ರಗ್ಸ್ ಪ್ರಕರಣದಲ್ಲಿ ಹಲವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಕೆಲವರು ಜಾಮೀನು ಪಡೆದು ಹೊರ ಬಂದಿದ್ದಾರೆ. ತನಿಖೆ ಪೂರ್ಣಗೊಳಿಸಿರುವ ಪೊಲೀಸರು ನ್ಯಾಯಾಲಯಕ್ಕೆ 2900 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿರುವರು. ರಾಗಿಣಿ, ಸಂಜನಾ ಸಹಿತ 25 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಇದರಲ್ಲಿ …
Read More »ಬಸವಕಲ್ಯಾಣ ಉಪ ಚುನಾವಣೆ: ಬಿಜೆಪಿ ಆಕಾಂಕ್ಷಿಗಳ ಪ್ರತ್ಯೇಕ ಚಟುವಟಿಕೆ ಬಂದ್?
ಬಸವಕಲ್ಯಾಣ: ಈ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪ್ರತ್ಯೇಕ ಚಟುವಟಿಕೆಗೆ ವರಿಷ್ಠರು ಕಡಿವಾಣ ಹಾಕಿದ್ದು ಏನೇ ಕಾರ್ಯಕ್ರಮ ಆಯೋಜಿಸಿದರೂ ಪಕ್ಷದ ಬ್ಯಾನರ್ ಅಡಿಯಲ್ಲಿ ಒಗ್ಗಟ್ಟಾಗಿಯೇ ಹಮ್ಮಿಕೊಳ್ಳಿ ಎಂದಿದ್ದರಿಂದ ಇನ್ನುಮುಂದೆ ಶಕ್ತಿ ಪ್ರದರ್ಶನಕ್ಕೆ ಯಾರಿಗೂ ಅವಕಾಶ ಇಲ್ಲದಂತಾಗಿದೆ. ಬೆಂಗಳೂರಿನಲ್ಲಿ ಈಚೆಗೆ ನಡೆದ ಆಕಾಂಕ್ಷಿಗಳ ಸಭೆಯಲ್ಲಿ ಈ ಕ್ಷೇತ್ರದ ಚುನಾವಣಾ ಉಸ್ತುವಾರಿಗಳಾದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವರಾದ ವಿ.ಸೋಮಣ್ಣ, ಪ್ರಭು ಚವಾಣ್ ಅವರು ಇನ್ನು ಮುಂದೆ ಕಾರ್ಯಕರ್ತರು …
Read More »ನೋಟು ಅಮಾನ್ಯೀಕರಣದ ನಿರ್ಧಾರದ ಕಾರಣ ನಿರುದ್ಯೋಗ ಹೆಚ್ಚಾಗಿದೆ : ಮಾಜಿ ಪ್ರಧಾನಿ ಸಿಂಗ್
ನವ ದೆಹಲಿ : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. 2016 ರಲ್ಲಿ ಪ್ರಧಾನಿ ಮೋದಿ ಅವರ ಸರ್ಕಾರ ತೆಗೆದುಕೊಂಡ “ಕೆಟ್ಟದಾಗಿ ಪರಿಗಣಿಸಲಾದ ನೋಟು ಅಮಾನ್ಯೀಕರಣ ನಿರ್ಧಾರ”ದ ನಂತರ ಅದರ ಅನೌಪಚಾರಿಕ ವಲಯವು ಅಸ್ತವ್ಯಸ್ತವಾಗಿದೆ ಎಂದು ಅವರು ಕಿಡಿ ಕಾರಿದ್ದಾರೆ. ರಾಜ್ಯಗಳೊಂದಿಗೆ ಸರಿಯಾದ ರೀತಿಯಲ್ಲಿ ಕೇಂದ್ರ ಸರ್ಕಾರ ಸಮಾಲೋಚನೆಯನ್ನು ಮಾಡುತ್ತಿಲ್ಲ ಎಂದು ಕೂಡ ಮನಮಹೋಹನ್ ಸಿಂಗ್ ಕೇಂದ್ರ …
Read More »ವಂಶಪಾರಂಪರ್ಯ ರಾಜಕೀಯದಿಂದ ಕಾಂಗ್ರೆಸ್ ಉದ್ಧಾರ ಆಗಲ್ಲ: ಜಗದೀಶ್ ಶೆಟ್ಟರ್
ಮಂಡ್ಯ: ಕಾಂಗ್ರೆಸ್‌ನ ಕುಟುಂಬ ರಾಜಕಾರಣ ವಿರುದ್ಧ ಪಕ್ಷದ ಹಿರಿಯ ಮುಖಂಡರು ಸಿಡಿದು ನಿಂತಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್‌ನ 17ಕ್ಕೂ ಹೆಚ್ಚು ಹಿರಿಯ ನಾಯಕರು ಕಾಶ್ಮೀರದಲ್ಲಿ ಸಭೆ ನಡೆಸಿದ್ದು, ಪಕ್ಷದ ನಾಯಕತ್ವದ ವಿರುದ್ಧ ಬಂಡೆದ್ದಿದ್ದಾರೆ. ವಂಶಪಾರoಪರ್ಯ ವ್ಯವಸ್ಥೆ ಇರುವವರೆಗೂ ದೇಶದಲ್ಲಿ ಕಾಂಗ್ರೆಸ್ ಪಕ್ಷ ಉದ್ಧಾರ ಆಗುವುದಿಲ್ಲ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ವಂಶಪಾರoಪರ್ಯ ರಾಜಕಾರಣ ನಿಲ್ಲದಿದ್ದರೆ ಪಕ್ಷದ ಬೆಳವಣಿಗೆ ಅಸಾಧ್ಯ ಎಂದು …
Read More »ನಿವೃತ್ತಿಗೊಂಡು ತವರಿಗೆ ಮರಳಿದ ಯೋಧನಿಗೆ ಗ್ರಾಮಸ್ಥರಿಂದ ಸಾಂಪ್ರದಾಯಿಕ ಸ್ವಾಗತ
ವಿಜಯಪುರ : ದೇಶ ರಕ್ಷಣೆಯ ಸುದೀರ್ಘ ಕರ್ತವ್ಯ ಮುಗಿಸಿ ನಿವೃತ್ತಿಗೊಂಡು ತವರಿಗೆ ಮರಳಿದ ಭಾರತೀಯ ಯೋಧನಿಗೆ ನಾಲತವಾಡ ಗ್ರಾಮಸ್ಥರು ಸಾಂಪ್ರದಾಯಿಕ ಸ್ವಾಗತದ ಮೂಲಕ ಅದ್ದೂರಿ ಸ್ವಾಗತ ಕೋರಿದ್ದಾರೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ತವರಿಗೆ ಮರಳಿದ ವೀರಯೋಧ ರಾಘವೇಂದ್ರ ಅವರನ್ನು ಪಟ್ಟಣದ ಪ್ರವೇಶ ದ್ವಾರದಲ್ಲೇ ತಡೆದು, ಹೂ ಮಳೆಗೈದು, ಮಹಿಳೆಯರು ಸಾಂಪ್ರದಾಯಿಕವಾಗಿ ಅದ್ಧೂರಿಯಾಗಿ ಸ್ವಾಗತಿಸಿದರು. ದೇಶಮುಖ ಕಾಲೋನಿಯ ವೀರಯೋಧ ರಾಘವೇಂದ್ರ ಸಂಗಪ್ಪ ಕ್ಷತ್ರಿ ಇವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ …
Read More »TRP ತಿರುಚಿದ ಪ್ರಕರಣದ ಆರೋಪಿ ಪಾರ್ಥೋ ದಾಸ್ ಗುಪ್ತಾಗೆ ಬಾಂಬೆ ಕೋರ್ಟ್ ಜಾಮೀನು..!
ನವ ದೆಹಲಿ : ಟಿ ಆರ್ ಪಿ ತಿರುಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಾಡ್ ಕಾಸ್ಟ್ ಆಡಿಯೆನ್ಸ್ ರಿಸರ್ಚ್ ಕೌನ್ಸಿಲ್ ನ ಮಾಜಿ ಸಿಇಒ ಪಾರ್ಥೋ ದಾಸ್ ಗುಪ್ತಾ ಅವರಿಗೆ ಬಾಂಬೆ ಹೈಕೋರ್ಟ್ ಶ್ಯೂರಿಟಿ ಮೇರೆಗೆ ಜಾಮೀನು ನೀಡಿದೆ. 2 ಲಕ್ಷ ಶ್ಯೂರಿಟಿ ಮೇರೆಗೆ ಪಾರ್ಥೋ ಗುಪ್ತಾ ಅವರಿಗೆ ಬಾಂಬೆ ಕೋರ್ಟ್ ಜಾಮೀನು ನೀಡಿದ್ದು, ಆರು ತಿಂಗಳುಗಳ ಕಾಲ ಪ್ರತಿ ಶನಿವಾರ ಮುಂಬೈ ಪೊಲೀಸರ ಅಪರಾಧ ಶಾಖೆಗೆ ವಿಚಾರಣೆಗಾಗಿ ಭೇಟಿ ನೀಡಬೇಕು …
Read More »ಕೈ-ಕಾಲು ಕಟ್ಟಿದ ಸ್ಥಿತಿಯಲ್ಲಿ ನಿರ್ಜನ ಪ್ರದೇಶದಲ್ಲಿ ಕಾಲೇಜು ವಿದ್ಯಾರ್ಥಿನಿ ಪತ್ತೆ..!
ವಿಜಯವಾಡ: ದುಷ್ಕರ್ಮಿಗಳು ಪದವಿ ವಿದ್ಯಾರ್ಥಿನಿಯ ಕೈಕಾಲು ಕಟ್ಟಿ ನಿರ್ಜನ ಪ್ರದೇಶವೊಂದರಲ್ಲಿ ಎಸೆದು ಹೋಗಿರುವ ಆತಂಕಕಾರಿ ಘಟನೆ ಆಂಧ್ರ ಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ನಡೆದಿದೆ. ಥೇರ್ಲಂ ಪೊಲೀಸ್ ಠಾಣೆಯ ಸಮೀಪವಿದ್ದ ನಿರ್ಜನ ಪ್ರದೇಶದಲ್ಲಿ ಪ್ರಜ್ಞೆಯಿಲ್ಲದೆ ಬಿದ್ದಿದ್ದ ವಿದ್ಯಾರ್ಥಿನಿಯನ್ನು ನೋಡಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರು. ಸದ್ಯ ವಿದ್ಯಾರ್ಥಿನಿ ಕೋಮಾದಲ್ಲಿದ್ದು, ಆಕೆಯನ್ನು ಥೇರ್ಲಂ ವಲಯದ ಚಾರ್ಲಾ ಗ್ರಾಮದ ನಿವಾಸಿ ರಮಾ ಎಂದು …
Read More »ಈ ಸರ್ಕಾರದಲ್ಲಿ ಯಾರು ಏನು ಬೇಕಾದ್ರೂ ಮಾಡಬಹುದು: H.D.K.
ಬೆಂಗಳೂರು: ಮನೆಯಲ್ಲಿಯೇ ಕೊರೊನಾ ಲಸಿಕೆ ಪಡೆದ ಕೃಷಿ ಸಚಿವ ಬಿ.ಸಿ.ಪಾಟೀಲ್ ವರ್ತನೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಈ ಸರ್ಕಾರದಲ್ಲಿ ಏನು ಬೇಕಾದರೂ ಮಾಡಬಹುದಾಗಿದೆ ಎಂದು ಕಿಡಿಕಾರಿದ್ದಾರೆ. ಕೊರೊನಾ ಮಾರ್ಗಸೂಚಿಯನ್ನೂ ಪಾಲಿಸದೇ ಬಿ.ಸಿ.ಪಾಟೀಲ್ ಮನೆಗೆ ಆಸ್ಪತ್ರೆ ಸಿಬ್ಬಂದಿ ಕರೆಸಿ ಲಸಿಕೆ ಹಾಕಿಸಿಕೊಂಡಿದ್ದು, ಸಚಿವರ ನಡೆಗೆ ಸರ್ಕಾರದ ಸಚಿವರೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಮಾಜಿ ಸಿಎಂ, ಕುಮಾರಸ್ವಾಮಿ ಈ ಸರ್ಕಾರಲ್ಲಿ ಯಾರು ಏನು …
Read More »
Laxmi News 24×7