Breaking News
Home / Uncategorized (page 3)

Uncategorized

ಎ. 20ರಂದು ಮತ್ತೆ ರಾಜ್ಯಕ್ಕೆ ಪ್ರಧಾನಿ ಮೋದಿ?

ಬೆಂಗಳೂರು: ಮೈಸೂರು, ಮಂಗಳೂರಿನಲ್ಲಿ ಲೋಕಸಭಾ ಚುನಾವಣೆಯ ರಣಕಹಳೆ ಮೊಳಗಿಸಿದ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನಲ್ಲೂ “ನಮೋ’ ಹವಾ ಸೃಷ್ಟಿಗೆ ಬಿಜೆಪಿ ಮುಂದಾಗಿದೆ. ಎ. 20ರಂದು ಪ್ರಧಾನಿ ಮೋದಿ ಮತ್ತೆ ರಾಜ್ಯಕ್ಕೆ ಭೇಟಿ ನೀಡಲಿದ್ದು, ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್‌ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.   ಜತೆಗೆ ಚಿಕ್ಕಬಳ್ಳಾಪುರ ಅಥವಾ ತುಮಕೂರಿನಲ್ಲಿ ರೋಡ್‌ ಶೋ ವನ್ನೂ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Read More »

ಈಶ್ವರಪ್ಪ ಬಂಡಾಯವನ್ನು ರಾಜಾಹುಲಿ ಶಮನ ಮಾಡಲಿ: ಯತ್ನಾಳ್

ವಿಜಯಪುರ: ಯಾವುದೇ ಕಾರಣಕ್ಕೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಬದಲಾವಣೆ ಮಾಡುವ ಪ್ರಶ್ನೆ ಇಲ್ಲ ಎಂದು ಸಾರಿದ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಬಿ.ಆರ್.ಅಂಬೇಡ್ಕರ್ ಅವರಿಗೆ ಭಾರತರತ್ನ ಕೊಟ್ಟದ್ದು ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಂದು ಹೇಳಿದರು.   ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಯಾರು ಏನೇ ಮಾತನಾಡಿದರೂ ಭಾರತದ ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಿಲ್ಲ, ಈ ವಿಷಯದನ್ನು ನಾನಲ್ಲ ಸ್ವಯಂ ಪ್ರಧಾನಿ ನರೇಂದ್ರ ಮೋದಿ ಅವರೇ ಸ್ಪಷ್ಟಪಡಿಸಿದ್ದಾರೆ ಎಂದರು. …

Read More »

ಡಿಕೆಶಿ ಆತ್ಮಹತ್ಯೆ ಮಾಡಿಕೊಂಡರೆ ₹50 ಕೋಟಿ ಕೊಡುತ್ತೇನೆ: ಯತ್ನಾಳ

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ‘ರೈತರ ವಿಚಾರವಾಗಿ ಹಗುರವಾಗಿ ಮಾತನಾಡಿದ ಸಚಿವ ಶಿವಾನಂದ ಪಾಟೀಲ ಅತ್ಮಹತ್ಯೆ ಮಾಡಿಕೊಂಡರೆ ನಾನು ₹5 ಕೋಟಿ ಪರಿಹಾರ ಕೊಡುತ್ತೇನೆ. ಅವರ ಮಾತನ್ನು ಬೆಂಬಲಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಆತ್ಮಹತ್ಯೆ ಮಾಡಿಕೊಂಡರೆ ₹50 ಕೋಟಿ ಕೊಡುತ್ತೇನೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಪಟ್ಟಣದಲ್ಲಿ ಸೋಮವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ‘ರೈತರು ಪರಿಹಾರದ ಆಸೆಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಸಚಿವ ಶಿವಾನಂದ ಅವರು ವಿಧಾನಸೌಧದಲ್ಲೇ ಹೇಳಿದ್ದಾರೆ. …

Read More »

ಗ್ರಾಮದೇವಿ ಜಾತ್ರೆಗೆ ಯರಡಾಲ ಸಜ್ಜು; 9 ವರ್ಷಗಳ ಬಳಿಕ ಮರುಕಳಿಸಿದ ವೈಭವ

ಬೈಲಹೊಂಗಲ: ತಾಲ್ಲೂಕಿನ ಯರಡಾಲ ಗ್ರಾಮದಲ್ಲಿ ಏ.15 ರಿಂದ 27 ರವರೆಗೆ ಗ್ರಾಮದೇವಿ ಜಾತ್ರೆ ನೆರವೇರಲ್ಲಿದ್ದು, ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಸುಮಾರು ಒಂಬತ್ತು ವರ್ಷಗಳ ನಂತರ ನೆರವೇರುತ್ತಿರುವ ಜಾತ್ರೆಗೆ ಗ್ರಾಮಕ್ಕೆ ರಾಜ್ಯ, ಹೊರ ರಾಜ್ಯದಲ್ಲಿರುವ ಬಂಧು, ಬಳಗ, ಸ್ನೇಹಿತರು ಕುಟುಂಬ ಸಮೇತರಾಗಿ ಗ್ರಾಮಕ್ಕೆ ಲಗ್ಗೆ ಇಡುತ್ತಿದ್ದಾರೆ.   ಗ್ರಾಮದ ಪ್ರತಿ ಬೀದಿಗಳನ್ನು ಶುಚಿಗೊಳಿಸಲಾಗುತ್ತಿದ್ದು, ತಳಿರು, ತೋರಣ, ರಂಗೋಲಿ ಬಿಡಿಸಲಾಗುತ್ತಿದೆ. ಗ್ರಾಮ ಸಂಪೂರ್ಣ ಸಿಂಗಾರಗೊಂಡಿದೆ. ಪೂರ್ಣಗೊಂಡ ಸಿದ್ಧತೆ: ಜಾತ್ರೆಗೆ ಈಗಾಗಲೇ ಬಹುತೇಕ ಎಲ್ಲ …

Read More »

ಹಿರಿಯ ನಾಗರಿಕರ ಮತದಾನ ಗೌಪ್ಯತೆ ಉಲ್ಲಂಘನೆ: ರಾಜ್ಯ ಚುನಾವಣೆ ಆಯೋಗ ಮಹತ್ವದ ಹೇಳಿಕೆ

ಹಿರಿಯ ನಾಗರಿಕರ ಮತದಾನ ಗೌಪ್ಯತೆ ಉಲ್ಲಂಘನೆ: ರಾಜ್ಯ ಚುನಾವಣೆ ಆಯೋಗ ಮಹತ್ವದ ಹೇಳಿಕೆ ಬೆಂಗಳೂರು, ಏಪ್ರಿಲ್ 14: ಲೋಕಸಭಾ ಚುನಾವಣೆಗಾಗಿ 85 ವರ್ಷ ಮೇಲ್ಪಟ್ಟವರು ಹಾಗೂ ಅಂಗವಿಕಲರಿಗೆ ಮನೆಯಿಂದ ಮತದಾನಕ್ಕೆ ಅವಕಾಶ ನೀಡಲಾಗಿದೆ. ಶನಿವಾರ ಏಪ್ರಿಲ್ 13ರಿಂದಲೇ ಗೌಪ್ಯ ಮತದಾನ ಮಾಡಿಕೊಳ್ಳಲಾಗಿದೆ. ಇಂದು ಭಾನುವಾರ ಎರಡನೇ ದಿನದ ಮತದಾನ ನಡೆಯುತ್ತಿದೆ. ಈ ಹಿರಿಯ ನಾಗರಿಕರ ಮನೆಯಿಂದ ಮತದಾನದ ಗೌಪ್ಯತೆ ಕುರಿತು ಕರ್ನಾಟಕ ರಾಜ್ಯ ಚುನಾವಣೆ ಆಯೋಗ ಮಹತ್ವದ ಹೇಳಿಕೆ ನೀಡಿದೆ. …

Read More »

BJP ಸಂಜಯ ಪಾಟೀಲ ಮನೆ ಎದುರು ರಾತ್ರೋರಾತ್ರಿ ಮಹಿಳೆಯರ ಪ್ರತಿಭಟನೆ

ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಬಿಜೆಪಿ ಮಾಜಿ ಶಾಸಕ ಸಂಜಯ ಪಾಟೀಲ ಅವರ ಮನೆ ಎದುರು ಕಾಂಗ್ರೆಸ್ ನ ಮಹಿಳಾ ಕಾರ್ಯಕರ್ತೆಯರು ಶನಿವಾರ ರಾತ್ರಿ ಪ್ರತಿಭಟನೆ ನಡೆಸಿ, ಸಂಜಯ ಭಾವಚಿತ್ರಕ್ಕೆ ಬಳೆ, ಸೀರೆ ತೊಡಿಸಿ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿರುವ ಸಂಜಯ ಪಾಟೀಲ ಅವರ ನಿವಾಸದ ಎದುರು ಪ್ರತಿಭಟನೆ ನಡೆಸಿದ ನೂರಾರು ಮಹಿಳಾ ಕಾರ್ಯಕರ್ತೆಯರು, ಸಂಜಯ ಪಾಟೀಲ ಅವರು ಕೂಡಲೇ ಮನೆಯಿಂದ ಹೊರಗೆ ಬಂದು ನಾಡಿನ ಎಲ್ಲ …

Read More »

ಬಯಲುಸೀಮೆಯಲ್ಲಿ ಸಾವಯವ ಸೇಬು l ಧರ್ಮಪುರದ ರೈತನ ಯಶಸ್ವಿ ಕಥೆ

ವಿಜಯಪುರ(ದೇವನಹಳ್ಳಿ): ಸಾಮಾನ್ಯವಾಗಿ ಕಾಶ್ಮೀರದಲ್ಲಿ ಬೆಳೆಯುತ್ತಿದ್ದ ಸೇಬನ್ನು ಈಚಿನ ವರ್ಷಗಳಲ್ಲಿ ಬಯಲು ಸೀಮೆಯ ರೈತರು ಬೆಳೆದು ಯಶಸ್ವಿಯಾಗುತ್ತಿದ್ದಾರೆ. ಧರ್ಮಪುರದ ಮುಖೇಶ್ ಬಾಬು ಎಂಬ ರೈತರೊಬ್ಬರು ಸಾವಯವ ಕೃಷಿ ಪದ್ಧತಿಯಲ್ಲಿ ಸೇಬು ಗಿಡಗಳನ್ನು ನಾಟಿ ಮಾಡಿ ಒಂದೇ ವರ್ಷದಲ್ಲಿ ಉತ್ತಮ ಫಸಲು ಪಡೆದಿದ್ದಾರೆ. 1,750 ಕೆ.ಜಿ ಸೇಬು ಕಟಾವಿಗೆ ಸಿದ್ಧವಾಗಿದೆ. ಸಾಮಾನ್ಯವಾಗಿ ಸೇಬು ಕಟಾವಿಗೆ ಬರಲು 2-3 ವರ್ಷ ಬೇಕು. ಆದರೆ ಇಲ್ಲಿ ಒಂದೇ ವರ್ಷದಲ್ಲಿ ಕಟಾವಿಗೆ ಬಂದಿದೆ. ಹಿಮಾಚಲ ಪ್ರದೇಶದ ತಳಿಗಳಾದ ‘ಎಚ್.ಆರ್.ಎಂ.ಎಸ್-99’, …

Read More »

ಅಪ್ಪ-ಮಕ್ಕಳ ಕೈಯಲ್ಲಿರುವ ಬಿಜೆಪಿಯನ್ನು ಶುದ್ದೀಕರಣ ಮಾಡಬೇಕು.: ಈಶ್ವರಪ್ಪ

ಶಿವಮೊಗ್ಗ: ‘ಅಪ್ಪ-ಮಕ್ಕಳ ಕೈಯಲ್ಲಿರುವ ಬಿಜೆಪಿಯನ್ನು ಶುದ್ದೀಕರಣ ಮಾಡಬೇಕು. ಇದಕ್ಕಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ಈ ಚುನಾವಣೆ ನಂತರ ರಾಘವೇಂದ್ರ ಸೋತು ಮನೆಗೆ ಹೋಗುತ್ತಾರೆ. ವಿಜಯೇಂದ್ರ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ಕಳೆದುಕೊಳ್ಳುತ್ತಾರೆ’ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದರು.   ಇಲ್ಲಿನ ಸೀನಪ್ಪ ಶೆಟ್ಟಿ ವೃತ್ತದಲ್ಲಿ ಶುಕ್ರವಾರ ಬೆಂಬಲಿಗರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ಬಿಜೆಪಿ ಸಿದ್ದಾಂತ ಉಳಿವಿಗಾಗಿ ಪ್ರತಿ ಮನೆಗೆ ಹೋಗಿ ನನಗೆ ಮತ ಹಾಕಲು ಹೇಳಿ. ಏ.19ಕ್ಕೆ ನನ್ನ …

Read More »

ಯತ್ನಾಳ್ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ.: ಶಿವಾನಂದ ಪಾಟೀಲ್ ಸವಾಲು

ಬಾಗಲಕೋಟೆ: ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಕ್ಕೆ ಸಚಿವ ಶಿವಾನಂದ ಪಾಟೀಲ್ ತಿರುಗೇಟು ನೀಡಿದ್ದು, “ಸಕ್ಕರೆ ಕಾರ್ಖಾನೆಗಳಿಂದ‌ 50 ಲಕ್ಷ ಕೇಳಿದ್ದಾರೆ ಎಂಬ ಆರೋಪ ಸಾಬೀತು ಮಾಡಿದರೆ ನಾನು ರಾಜಕೀಯ ತ್ಯಜಿಸುವೆ” ಎಂದು ಸವಾಲು ಹಾಕಿದ್ದಾರೆ. ಒಂದು ವೇಳೆ ಆರೋಪವನ್ನು ಸಾಬೀತು ಮಾಡಲು ವಿಫಲರಾದರೆ ಶಾಸಕ ಯತ್ನಾಳ್ ಅವರು ರಾಜಕೀಯ ಬಿಡಲಿ ಎಂದಿದ್ದಾರೆ. ವಿಜಯಪುರದಿಂದ ಪಕ್ಷೇತರರಾಗಿ ಸ್ಪರ್ಧೆಗೆ ಸವಾಲೆಸೆದ ಸಚಿವ ಶಿವಾನಂದ, ಒಂದು ವೇಳೆ ಯತ್ನಾಳ್ ನನಗಿಂತ ಒಂದೇ …

Read More »

ಸಿಡಿಲು ಬಡಿದು 18 ಕುರಿ ಸಾವು

ಕುಂಸಿ: ಸಿಡಿಲು ಬಡಿದು 18 ಕುರಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಸಮೀಪದ ಆಯನೂರು ಕೋಟೆಯಲ್ಲಿ ಶುಕ್ರವಾರ ನಡೆದಿದೆ. ಸಂಜೆ ಸಾಧಾರಣ ಮಳೆಯಾಗುತ್ತಿತ್ತು. ನಂತರ ಬಡಿದ ಸಿಡಿಲಿಗೆ 18 ಕುರಿಗಳು ಬಲಿಯಾಗಿವೆ. ಮಾಲೀಕ ಝಾಕಿರ್ ಹುಸೇನ್ ಅವರು ಕುರಿಗಳನ್ನು ಮೇಯಿಸಲು ಮಕ್ಕಳೊಂದಿಗೆ ಆಯನೂರು ಕೋಟೆ ಪಕ್ಕದ ಬಯಲಿಗೆ ಹೊಡೆದುಕೊಂಡು ಹೋಗಿದ್ದರು‌.ಸಾಧಾರಣ ಮಳೆಯ ನಂತರ ಆಕಸ್ಮಿಕವಾಗಿ ಬಡಿದ ಸಿಡಿಲಿಗೆ ಹದಿನೆಂಟು ಕುರಿಗಳು ಬಲಿಯಾಗಿವೆ. ಝಾಕಿರ್ ಅವರ ಕುಟುಂಬ ಕುರಿ ಮಾರಾಟದಿಂದಲೇ ಜೀವನ ನಡೆಸುತ್ತಿತ್ತು. …

Read More »