Breaking News

ಮೇ 15ರೊಳಗೆ ಸಂಪುಟ ಪುನರ್ ರಚನೆಯ ಸುದ್ದಿ ಸಿಗಲಿದೆ: ಬಂಗಾರಪೇಟೆ ನಾರಾಯಣಸ್ವಾಮಿ

Spread the love

ಬೆಂಗಳೂರು: ಮೇ 15ರ ಒಳಗೆ ಸಂಪುಟ ಪುನರ್ ರಚನೆಯ ಸುದ್ದಿ ಸಿಗಲಿದೆ ಅಂತ ಕಾಂಗ್ರೆಸ್ ಶಾಸಕ ಬಂಗಾರಪೇಟೆ ನಾರಾಯಣಸ್ವಾಮಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಂಪುಟ ಪುನರ್ ರಚನೆ ಆಗಲೇಬೇಕು. ದೆಹಲಿಗೆ ಹೋಗಿ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ್ವಿ. ಅವರು ನಮಗೆ ಭರವಸೆ ನೀಡಿದ್ದಾರೆ. ಕೆಲಸ ಮಾಡದ ಮಂತ್ರಿಗಳನ್ನು ಕೈ ಬಿಟ್ಟು ಹೊಸಬರನ್ನು ಸೇರಿಸಬೇಕು. 2028ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದ್ರೆ ಸಂಪುಟ ಪುನರ್ ರಚನೆ ಆಗಲೇಬೇಕು. ಮಂತ್ರಿ ಸ್ಥಾನ ಕೇಳೋದು ನಮ್ಮ ಹಕ್ಕು. ಸಂಪುಟ ಪುನರ್ ರಚನೆ ಆಗುತ್ತದೆ ಅಂತ ನಮಗೆ ವಿಶ್ವಾಸ ಇದೆ. ಮೇ 15ರ ಒಳಗೆ ಶುಭ ಸುದ್ದಿ ಬರಲಿದೆ ಎಂದಿದ್ದಾರೆ.

ಮೇ ಎರಡನೇ ವಾರದಲ್ಲಿ ಪುನರ್ ರಚನೆ ಆಗೋ ವಿಶ್ವಾಸ ಇದೆ. ಸರ್ಕಾರಕ್ಕೆ ಮೂರು ವರ್ಷ ಆಗಿದೆ. ಈಗಲೇ ಪುನರ್ ರಚನೆ ಆಗಬೇಕು. ಈಗ ಮಂತ್ರಿ ಮಾಡಿದ್ರೆ ಇನ್ನೊಂದು ವರ್ಷ ಕೆಲಸ ಮಾಡೋಕೆ ಸಮಯ ಸಿಗಲಿದೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ವಿಶೇಷ ಮುತುವರ್ಜಿ ವಹಿಸಬೇಕು. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕಾದ್ರೆ ಸಂಪುಟ ಪುನರ್ ರಚನೆ ಅಗಲೇಬೇಕು ಅಂತ ತಿಳಿಸಿದ್ದಾರೆ.

ಮೇ 15ಕ್ಕೆ ಡಿಕೆಶಿ ಹುಟ್ಟುಹಬ್ಬಕ್ಕೆ ಶುಭ ಸುದ್ದಿ ಸಿಗುತ್ತದೆ ಎಂಬ ಡಿಕೆಶಿ ಆಪ್ತರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಡಿಕೆ ಶಿವಕುಮಾರ್‌ಗೆ ಶುಭ ಸುದ್ದಿ ಸಿಗೋ ಬಗ್ಗೆ ನಮಗೆ ಮಾಹಿತಿ ಇಲ್ಲ. ಅವರ ಆಪ್ತರಿಗೆ ಮಾಹಿತಿ ಇದೆಯೋ ಗೊತ್ತಿಲ್ಲ. ಕಾಂಗ್ರೆಸ್‌ನ 138 ಜನ ಶಾಸಕರದ್ದು ಒಂದೇ ಗುಂಪು. ಸಿಎಂ-ಡಿಸಿಎಂ ಒಟ್ಟಾಗಿ ಕಾಂಗ್ರೆಸ್ ಅಧಿಕಾರಕ್ಕೆ ತಂದಿದ್ದಾರೆ. ಅಹಿಂದ ವರ್ಗ ಕಾಂಗ್ರೆಸ್ ‌ಕೈ ಹಿಡಿದಿದೆ. ಹೈಕಮಾಂಡ್ ನಾಯಕತ್ವದ ಬದಲಾವಣೆ ಮಾಡ್ತಾರೋ ಇಲ್ಲವೋ ಗೊತ್ತಿಲ್ಲ. ಏನೇ ಇದ್ದರೂ ಹೈಕಮಾಂಡ್ ತೀರ್ಮಾನ ಮಾಡಲಿ. ಆದರೆ ಸಂಪುಟ ಪುನರ್ ರಚನೆ ಮಾತ್ರ ಮಾಡಬೇಕು ಅಂತ ಒತ್ತಾಯಿಸಿದ್ದಾರೆ.

ನಾನು ಸಚಿವ ಸ್ಥಾನದ ಆಕಾಂಕ್ಷಿನೇ. ನಾವು ಖರ್ಗೆ ಅವರನ್ನ ಭೇಟಿ ಮಾಡಿದ್ದೇವೆ. ಒಳ್ಳೆ ತೀರ್ಮಾನ ಮಾಡೋದಾಗಿ ಅವರು ಹೇಳಿದ್ದಾರೆ. ಈ ಬಾರಿ ಸಂಪುಟ ಪುನರ್ ರಚನೆ ಆಗುತ್ತದೆ. ನಮಗೂ ಸ್ಥಾನ ಸಿಗುತ್ತದೆ. ಯಾವ ಸರ್ಕಾರಗಳು ನಮ್ಮ ಜಿಲ್ಲೆಗೆ ಪ್ರಾತಿ‌ನಿದ್ಯ ಕೊಟ್ಟಿಲ್ಲ. ಹೀಗಾಗಿ ಕೋಲಾರದಲ್ಲಿ ಸ್ಥಳೀಯರಿಗೆ ಅವಕಾಶ ಸಿಗಬೇಕು. ಬಲಗೈ ಸಮುದಾಯ ಕೋಲಾರದಲ್ಲಿ ಜಾಸ್ತಿ ಇದೆ. ಹೀಗಾಗಿ ಸಚಿವ ಸ್ಥಾನ ನೀಡಬೇಕು. ಎಡಗೈ ಸಮುದಾಯದ ಮುನಿಯಪ್ಪ ಅವರನ್ನ 7 ಬಾರಿ ಎಂಪಿ ಮಾಡಿದ್ವಿ. ಹೀಗಾಗಿ ಮುನಿಯಪ್ಪ ಸಹಕಾರ ಕೊಡಬೇಕು. ಕೋಲಾರದಲ್ಲಿ ಬಲಗೈ ಸಮುದಾಯಕ್ಕೆ ಮಂತ್ರಿ ಸ್ಥಾನ ಕೊಡಬೇಕು ಎಂದಿದ್ದಾರೆ.


Spread the love

About Laxminews 24x7

Check Also

ನಮ್ಮದು ಸಣ್ಣ ಪಕ್ಷ, ನಾವ್ಯಾಕೆ ಕಾಂಗ್ರೆಸ್ ಶಾಸಕರನ್ನ ಆಪರೇಷನ್ ಮಾಡೋಣ: ಹೆಚ್‌ಡಿಕೆ

Spread the loveಬೆಂಗಳೂರು: ನಮ್ಮದು ಸಣ್ಣ ಪಕ್ಷ ನಾವ್ಯಾಕೆ ಕಾಂಗ್ರೆಸ್  ಶಾಸಕರನ್ನ ಆಪರೇಷನ್ ಮಾಡೋಣ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ  …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ