Breaking News

ಈಗ ಏನ್ ಮಾಡ್ತಿದ್ದಾರೆ ಖ್ಯಾತ ಪತ್ರಕರ್ತ ಲಕ್ಷ್ಮಣ‌ ಹೂಗಾರ್…?

Spread the love

ತುಂಬಾ ಜನರಲ್ಲಿ ಈ‌ ಪ್ರಶ್ನೆ ಇದೆ. ಕಳೆದ ಹತ್ತು ವರ್ಷಗಳ ಹಿಂದೆ ಕನ್ನಡ ಸುದ್ದಿ ವಾಹಿನಿಗಳಲ್ಲಿ ಕುಳಿತು ರಾಜಕೀಯ ನಾಯಕರನ್ನು ಖಡಕ್ ಪ್ರಶ್ನೆಗಳ ಮೂಲಕ ಕಟ್ಟಿ ಹಾಕುತ್ತಿದ್ದ ಈ‌ ಗಟ್ಟಿ ಪತ್ರಕರ್ತ ಈಗ ಎಲ್ಲಿ ಅಂತ.

ಸಧ್ಯ ಲಕ್ಷ್ಮಣ ಹೂಗಾರ್ ಅವರು‌ ಕೃಷಿ ‌ಕಾಯದಲ್ಲಿ ತೊಡಗಿರುವ ಒಂದು‌ ಫೋಟೋ ಸಾಮಾಜಿಕ‌ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.‌ ಆದರೆ ಲಕ್ಷ್ಮಣ ಹೂಗಾರ್ ಯಾಕೆ ಪತ್ರಿಕೋದ್ಯಮದಿಂದ‌ ದೂರ ಉಳಿದರು ಎಂಬ ಪ್ರಶ್ನೆಗೆ ಈವರೆಗೂ ಉತ್ತರ ಸಿಕ್ಕಿಲ್ಲ.

ಕೊಂಚ ಹೆಸರು ಮಾಡಿದರೆ ಸಾಕು, ಕೆಲವರ ಕಾಲು ನೆಲದ ಮೇಲೆ‌ ನಿಲ್ಲುವುದಿಲ್ಲ. ಆದರೆ ಇದೆಲ್ಲದಕ್ಕೂ ವಿಭಿನ್ನ ಎನ್ನುವಂತೆ ಲಕ್ಷ್ಮಣ ಹೂಗಾರ ಕೃಷಿ ಕಾಯಕದಲ್ಲಿ ತೊಡಗಿದ್ದಾರೆ ಎಂಬ ಸುದ್ದಿ ಎಲ್ಲೆಡೆಯೂ ಇದೆ.

ವಿಷಯ ಏನೇ ಇರಲಿ ಪತ್ರಿಕೋದ್ಯಮದಿಂದ ಲಕ್ಷ್ಮಣ ಹೂಗಾರ್ ಅವರು ದೂರ ಇದ್ದರೂ ಈಗಲೂ ಅವರನ್ನು ಪ್ರೀತಿಸುವ ಅಸಂಖ್ಯಾತ ಹೃದಯಗಳು ಇದ್ದಾವೆ ಎಂಬುವುದೇ ಖುಷಿ ಸಂಗತಿ.
ಈ ಕುರಿತು ಲಕ್ಷ್ಮಣ ಹೂಗಾರ್ ಅವರೇ ಮಾಹಿತಿ ನೀಡಿದರೆ ಇನ್ನೂ ಉತ್ತಮ.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ