ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ವಿಷಯಗಳ ಕುರಿತು ಒಂದು ವಾರದ ಅವಧಿಯಲ್ಲಿ ನಾಲ್ಕನೇ ಬಾರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಹಂಚಿಕೊಂಡಿದ್ದಾರೆ. 4ನೇ ಇನ್‌ಸ್ಟಾ ವೀಡಿಯೋದಲ್ಲಿ, ಪ್ರಶ್ನೆಪತ್ರಿಕೆ ಸೋರಿಕೆ ತಡೆ ಮಸೂದೆಯು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರವಾಗಿದ್ದಕ್ಕೆ ಪ್ರಧಾನಿ ಮೋದಿ ಅಭಿನಂದನೆ ತಿಳಿಸಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಗೆ ಶಿಕ್ಷೆಯನ್ನು ಹೆಚ್ಚಿಸಲು ಮತ್ತು ಅಂತಹ ಪ್ರಕರಣಗಳನ್ನು ಇತ್ಯರ್ಥಪಡಿಸಲು ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಲು ಹಲವಾರು ಕ್ರಮಗಳನ್ನು ಪ್ರಸ್ತಾಪಿಸುವ ಮಸೂದೆಯನ್ನು ಬುಧವಾರ …
Read More »ಸೋಮವಾರ ಡಿಕೆ ಸಂಪುಟ ವಿಸ್ತರಣೆ?; ನಾಳೆ-ನಾಡಿದ್ದು ಅಂತಿಮ ಪಟ್ಟಿ ರವಾನೆ
ಬೆಂಗಳೂರು: ಸಿಎಂ ಡಿ.ಕೆ.ಶಿವಕುಮಾರ್ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಸೋಮವಾರ ಡಿಕೆ ಸಂಪುಟ ವಿಸ್ತರಣೆಯಾಗಲಿದ್ದು, ನಾಳೆ ಅಥವಾ ನಾಡಿದ್ದು ಅಂತಿಮ ಪಟ್ಟಿ ರವಾನೆಯಾಗಲಿದೆ. ಸೋಮವಾರ ಅಧಿಕೃತವಾಗಿ ಸಂಪುಟ ವಿಸ್ತರಣೆ ಆಗಲಿದೆ. ಸೋಮವಾರವೇ ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ‘ಪಬ್ಲಿಕ್ ಟಿವಿ’ಗೆ ಉನ್ನತ ಮೂಲಗಳು ಮಾಹಿತಿ ನೀಡಿವೆ. ಇಂದು ಸಿಎಂ ಡಿ.ಕೆ.ಶಿವಕುಮಾರ್ ಅವರು ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದರು. ಭೇಟಿ ಬಳಿಕ, ‘ನೀವು ಹೊರಡಿ.. ನಾವು ಪಟ್ಟಿ …
Read More »ಝೀರೋ ಟ್ರಾಫಿಕ್‌ನಲ್ಲಿ ಸಾಗಿಸುತ್ತಿದ್ದಾಗ ಅಂಬುಲೆನ್ಸ್ ಟೈರ್ ಪಂಕ್ಚರ್ – ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ 4 ತಿಂಗಳ ಮಗು ಸಾವು
ದಾವಣಗೆರೆ: ಅಂಬುಲೆನ್ಸ್‌ನಲ್ಲಿ ಝೀರೋ ಟ್ರಾಫಿಕ್‌ನಲ್ಲಿ ಸಾಗಿಸಿದರೂ ಪ್ರಯತ್ನ ವಿಫಲವಾಗಿ ಶಾಸಕೋಶ ಸೋಂಕಿನಿಂದ ಬಳಲುತ್ತಿದ್ದ 4 ತಿಂಗಳ ಮಗು ಸಾವನ್ನಪ್ಪಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಬಂಡಿ ಗ್ರಾಮದ ಹನುಮೇಶ್ ಹಾಗೂ ಪವಿತ್ರಾ ದಂಪತಿಯ ಹೆಣ್ಣು ಮಗು ಮೃತ ದುರ್ದೈವಿ. ಕಳೆದ 3 ತಿಂಗಳ ಹಿಂದೆ ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಪವಿತ್ರಾಗೆ ಹೆರಿಗೆಯಾಗಿ ಹೆಣ್ಣು ಮಗು ಜನಿಸಿತ್ತು. ಕಳೆದ ಕೆಲವು ದಿನದಿಂದ ಶ್ವಾಸಕೋಶ ಸೊಂಕಿನಿಂದ ಮಗು ಬಳಲುತ್ತಿತ್ತು. ಕಳೆದ …
Read More »ಕಾವೇರಿ ನೀರು ಹೋರಾಟದ ಕನ್ನಡಿಗರ ಕಿಚ್ಚಿಗೆ ಫಿಲ್ಮ್ ಚೇಂಬರ್ ಬೆಂಬಲ
ಕಾವೇರಿ ನೀರು ವಿಚಾರವಾಗಿ ಕರ್ನಾಟಕಕ್ಕೆ ಮತ್ತೊಮ್ಮೆ ಅನ್ಯಾಯವಾಗಿದ್ದು, ಕನ್ನಡ ಜನತೆಯ ಪರ ಸಿನಿಮಾ ರಂಗ ಧ್ವನಿಯೆತ್ತಿದೆ. ನಾಡು-ನುಡಿ ವಿಚಾರವಾಗಿ ಯಾವುದೇ ಹೋರಾಟ ನಡೆದರೂ, ಅಲ್ಲಿ ಸಿನಿ ಕಲಾವಿದರು ಕೈ ಸೇರಿದರೆ ಧ್ವನಿ ಜೋರಾಗಿರುತ್ತೆ ಅನ್ನೋ ಮಾತಿದೆ. ಅದರಂತೆ ಮತ್ತೊಮ್ಮೆ ಕಾವೇರಿ ನೀರಿಗಾಗಿ ಹೋರಾಡುವ ಪರಿಸ್ಥಿತಿ ಕರ್ನಾಟಕಕ್ಕೆ ಎದುರಾಗಿದೆ. ತಮಿಳುನಾಡಿಗೆ ಪ್ರತಿನಿತ್ಯ 3,500 ಟಿಎಂಟಿ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ದೇಶನವನ್ನು ಕನ್ನಡಿಗರು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಹೀಗಾಗಿ ಕನ್ನಡಪರ …
Read More »ಬೆಟ್ಟದಲ್ಲಿ 3ನೇ ಆಷಾಢ ಶುಕ್ರವಾರದ ಸಂಭ್ರಮ – ಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸಿದ ತಾಯಿ ಚಾಮುಂಡಿ
ಮೈಸೂರು: ಆಷಾಢ ಮಾಸದ 3ನೇ ಶುಕ್ರವಾರವಾದ ಇಂದು ನಾಡದೇವತೆ ತಾಯಿ ಚಾಮುಂಡಿ ಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ. ಆಷಾಢ ಶುಕ್ರವಾರ ಹಿನ್ನೆಲೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸಹಸ್ರಾರು ಸಂಖ್ಯೆಯ ಭಕ್ತರು ಹರಿದುಬಂದಿದ್ದಾರೆ. ಬ್ರಾಹ್ಮಿ ಮುಹೂರ್ತದಿಂದಲೇ ಕೆಲ ಭಕ್ತರು ರಸ್ತೆ ಮಾರ್ಗವಾಗಿ ಬಂದ್ರೆ, ಇನ್ನೂ ಕೆಲವರು ಮೆಟ್ಟಿಲುಗಳ ಮಾರ್ಗವಾಗಿ ಬಂದು ತಾಯಿ ಚಾಮುಂಡಿಯ ದರ್ಶನ ಪಡೆಯುತ್ತಿದ್ದಾರೆ. 3ನೇ ಆಷಾಢ ಶುಕ್ರವಾರವಾದ ಇಂದು ತಾಯಿ ಚಾಮುಂಡಿಗೆ ಲಕ್ಷ್ಮಿ ದೇವಿಯ ಅಲಂಕಾರ ಮಾಡಲಾಗಿದೆ. ಇದರೊಂದಿಗೆ ಇಡೀ …
Read More »ಸಚಿವ ಕೆ. ರಾಮಮೋಹನ ನಾಯ್ಡು ಭೇಟಿ ಮಾಡಿದ ಜಗದೀಶ ಶೆಟ್ಟರ್
ಬೆಳಗಾವಿ: ಬೆಳಗಾವಿಗೆ ವಿಮಾನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಬೆಳಗಾವಿ-ಬೆಂಗಳೂರು-ದೆಹಲಿ ಮಾರ್ಗಗಳಲ್ಲಿ ಪ್ರತಿದಿನ ವಿಮಾನ ಸಂಚಾರ ಪುನರಾರಂಭಿಸುವಂತೆ ಗುರುವಾರ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ ನಾಯ್ಡು ಅವರನ್ನು ಸಂಸದ ಜಗದೀಶ ಶೆಟ್ಟರ್ ಒತ್ತಾಯಿಸಿದರು. ನವದೆಹಲಿಯ ಸಂಸತ್ ಭವನದಲ್ಲಿ ಸಚಿವರನ್ನು ಭೇಟಿ ಮಾತನಾಡಿ, ಬೆಂಗಳೂರು-ಬೆಳಗಾವಿ ಹಾಗೂ ನವದೆಹಲಿ-ಬೆಳಗಾವಿ ಮಾರ್ಗಗಳಲ್ಲಿ ಇಂಡಿಗೋ ಸಂಸ್ಥೆ ವಾರದ ಆಯ್ದ ದಿನಗಳಲ್ಲಿ ಮಾತ್ರ ವಿಮಾನ ಸೇವೆ ನೀಡುತ್ತಿರುವುದರಿಂದ ವ್ಯಾಪಾರಿಗಳು, ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಸಾರ್ವಜನಿಕರು …
Read More »ಕೆಎಲ್‌ಇ ಕೆವಿಕೆಗೆ ಕಡೂರ ತಾಲೂಕಿನ ರೈತರ ಭೇಟಿ
ಬೆಳಗಾವಿ: ರೈತರ ಆದಾಯವನ್ನು ಹೆಚ್ಚಿಸಲು ಆಧುನಿಕ ತಂತ್ರಜ್ಞಾನಗಳ ಅಳವಡಿಕೆ, ಬೆಳೆಗಳ ಮೌಲ್ಯವರ್ಧನೆ, ಆಧುನಿಕ ಕೃಷಿ ಉಪಕರಣಗಳ ಬಳಕೆ ಅಗತ್ಯ ಎಂದು ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಾಧ್ಯಕ್ಷ ಬಿ. ಆರ್. ಪಾಟೀಲ ಹೇಳಿದರು. ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪ ಗ್ರಾಮದ ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನಕೇಂದ್ರಕ್ಕೆ ಶೈಕ್ಷಣಿಕ ಅಧ್ಯಯನ ಪ್ರವಾಸದ ನಿಮಿತ್ತವಾಗಿ ಗುರುವಾರ ಭೇಟಿ ನೀಡಿದ್ದ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ವೀರಶೈವ ಸಮಿತಿ ಸದಸ್ಯರು, ಜಿಪಂ ಮಾಜಿ ಅಧ್ಯಕ್ಷರು, ರೈತರನ್ನು ಉದ್ದೇಶಿಸಿ …
Read More »ಕ್ರೀಡಾ ಸ್ಪರ್ಧೆಗಳಲ್ಲಿ ವಯೋಮಿತಿ ಪರಿಶೀಲನೆ ಕಡ್ಡಾಯಗೊಳಿಸಲು ಆಗ್ರಹ
ಬೆಳಗಾವಿ : ಶಾಲೆ ಶಾಲೆ ಹಾಗೂ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳು ನಕಲಿ ವಯೋಮಿತಿ ದಾಖಲೆಗಳನ್ನು ಸಲ್ಲಿಸಿ, ಕ್ರೀಡೆಗಳಲ್ಲಿ ಪಾಲ್ಗೊಂಡು ಆ ಬಳಿಕ ಸಿಗುವ ಸೌಲಭ್ಯಗಳನ್ನು ನಿಯಮಬಾಹಿರವಾಗಿ ಪಡೆದುಕೊಳ್ಳುತ್ತಿದ್ದು, ಪ್ರತಿಯೊಂದು ಕ್ರೀಡಾಸ್ಪರ್ಧೆಯಲ್ಲೂ ವಯೋಮಿತಿ ಪರಿಶೀಲನೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಕ್ರೀಡಾಪಟುಗಳು ಮತ್ತು ಕ್ರೀಡಾಸಕ್ತರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಶಾಲಾ ಹಾಗೂ ವಿವಿಧ ಹಂತದ ಕ್ರೀಡಾಕೂಟಗಳಲ್ಲಿ ಕೆಲವರು ನಕಲಿ ಜನನ ಪ್ರಮಾಣಪತ್ರ ಅಥವಾ ತಪ್ಪು ದಾಖಲೆಗಳನ್ನು …
Read More »ರೈತರ ಸಾಲಮನ್ನಾಗೆ ಆಗ್ರಹಿಸಿ ಬೆಳಗಾವಿಯಲ್ಲಿ ಪ್ರತಿಭಟನೆ
ಬೆಳಗಾವಿ : ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದ್ದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತುಕೊಂಡಿದ್ದು, ಕೂಡಲೇ ಬರಗಾಲ ಘೋಷಣೆ ಮಾಡಿ ಪ್ರತಿ ಎಕರೆಗೆ ಐವತ್ತು ಸಾವಿರ ರೂಪಾಯಿ ಪರಿಹಾರ ಘೋಷಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಗುರುವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪ್ರತಿಭಟನೆ ನಡೆಸಲಾಯಿತು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ನೂರಕ್ಕೂ ಹೆಚ್ಚು ರೈತರು, ಚನ್ನಮ್ಮ ವೃತ್ತದಲ್ಲಿ ಜಮಾಯಿಸಿ ಕೆಲಹ್ತೊತು ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ …
Read More »ಸೈಬರ್, ಮಹಿಳಾ ದೌರ್ಜನ್ಯ ಪ್ರಕರಣ ಹೆಚ್ಚಳ
ಬೆಳಗಾವಿ:ಪ್ರಸ್ತುತ ದಿನಗಳಲ್ಲಿ ಸೈಬರ್ ಅಪರಾಧಗಳ ಜತೆಗೆ ಮಹಿಳೆಯರ ಮೇಲೆ ವಿವಿಧ ತೆರನಾದ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ಕಳವಳ ವ್ಯಕ್ತಪಡಿಸಿದರು. ನಗರದ ಮಹೇಶ್ವರ ಅಂಧ ಮಕ್ಕಳ ಶಾಲೆಯ ಆವರಣದಲ್ಲಿ ಗುರುವಾರ ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾನವ ಕಳ್ಳ ಸಾಗಾಣಿಗೆ ತಡೆ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ನಗರ, ಗ್ರಾಮೀಣ …
Read More »
Laxmi News 24×7