ಗದಗ: ಕಲಬುರಗಿಯಿಂದ ಅಣ್ಣಿಗೇರಿಗೆ ಬಂದ 21 ವರ್ಷದ ಯುವಕನಿಗೆ ಕೊರೊನಾ ವೈರಸ್ ಇರುವ ಶಂಕೆ ವ್ಯಕ್ತವಾಗುತ್ತಿದೆ. ಸದ್ಯ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಸೌಲಭ್ಯದೊಂದಿಗೆ ಯುವಕನ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಕೆಲಸ ಮಾಡ್ತಿದ್ದ ಯುವಕನಿಗೆ ಕೆಮ್ಮು, ಶೀತ, ಜ್ವರ ಗಂಟಲು ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಮುಂದಾದ ವೇಳೆ ಖಾಸಗಿ ಆಸ್ಪತ್ರೆ ವೈದ್ಯರು ಗದಗ ಜಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.ಯುವಕ ಗದಗ …
Read More »ಕೊರೊನಾ ಎಫೆಕ್ಟ್- ನಿಖಿಲ್ ಕುಮಾರಸ್ವಾಮಿ ಮದುವೆ ಶಿಫ್ಟ್
ರಾಮನಗರ: ಮಹಾಮಾರಿ ಕೊರೊನಾ ವೈರಸ್ ದೇಶಾದ್ಯಂತ ವ್ಯಾಪಿಸಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿ ವಿವಾಹ ಕಾರ್ಯಕ್ರಮಕ್ಕೂ ಇದರ ಬಿಸಿ ತಟ್ಟಿದೆ. ಹೀಗಾಗಿ ವಿವಾಹ ಕಾರ್ಯಕ್ರಮವನ್ನು ರಾಮನಗರದಿಂದ ಬೆಂಗಳೂರಿನ ಅರಮನೆ ಮೈದಾನಕ್ಕೆ ಶಿಫ್ಟ್ ಮಾಡಲಾಗುತ್ತಿದೆ. ಮದುವೆಗಾಗಿ ಕಳೆದ 1 ತಿಂಗಳಿನಿಂದ ಮಾಡಲಾಗುತ್ತಿದ್ದ ಸ್ಥಳದ ಸಿದ್ಧತೆಯ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೆ ಈಗಾಗಲೇ ಹಾಕಿದ್ದ ಸೆಟ್, ಟೆಂಟ್ ಗಳ ತೆರವು ಸಹ ನಡೆಯುತ್ತಿದ್ದು, ಮದುವೆ ಸಿದ್ಧತೆಗಾಗಿ ತಂದಿದ್ದ ವಸ್ತುಗಳನ್ನು ಮರಳಿ ಸಾಗಿಸಲಾಗುತ್ತಿದೆ. …
Read More »ಮತ್ತಿತರ ಕಾರಣಗಳಿಂದ ಹೊರದೇಶದಲ್ಲಿ ವಾಸಿಸುತ್ತಿದ್ದು, ಸದ್ಯದಲ್ಲಿ ಸ್ವದೇಶಕ್ಕೆ ಆಗಮಿಸುತ್ತಿದ್ದರೆ ಅಂತಹವರ ಹೆಸರು, ವಿಳಾಸ ಮತ್ತಿತರ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ಒದಗಿಸಬೇಕು
ಜಿಲ್ಲೆಯ ನಿವಾಸಿಗಳ ಪೈಕಿ ಯಾರಾದರೂ ಉದ್ಯೋಗ ಶಿಕ್ಷಣ ಮತ್ತಿತರ ಕಾರಣಗಳಿಂದ ಹೊರದೇಶದಲ್ಲಿ ವಾಸಿಸುತ್ತಿದ್ದು, ಸದ್ಯದಲ್ಲಿ ಸ್ವದೇಶಕ್ಕೆ ಆಗಮಿಸುತ್ತಿದ್ದರೆ ಅಂತಹವರ ಹೆಸರು, ವಿಳಾಸ ಮತ್ತಿತರ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಮೂಲತಃ ಇದೇ ಜಿಲ್ಲೆಯವರಾಗಿದ್ದು ಉದ್ಯೋಗ, ಶಿಕ್ಷಣ ಅಥವಾ ಇನ್ಯಾವುದೇ ಉದ್ಧೇಶದಿಂದ ಹೊರದೇಶಗಳಲ್ಲಿ ಇರುವರ ಬಗ್ಗೆ ಸಂಬಂಧಿಸಿದ ಕುಟುಂಬದವರು ಮಾಹಿತಿಯನ್ನು ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.ಕೋವಿಡ್ ೧೯ ಹರಡದಂತೆ …
Read More »ಕೊರೊನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಯಲ್ಲಮ್ಮಾ ದೇವಸ್ಥಾನದಲ್ಲಿ ಗುರುವಾರದಿಂದ ಎರಡು ವಾರದ ಅವಧಿಯವರೆಗೆ ದೇವಿಯ ದರ್ಶನವನ್ನು ನಿಷೇಧಿಸಲಾಗಿದೆ
2 ವಾರ ಸವದತ್ತಿ ಯಲ್ಲಮ್ಮ ದರ್ಶನವಿಲ್ಲ ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ತೀರ್ಮಾನ ಸವದತ್ತಿ: ಕೊರೊನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಯಲ್ಲಮ್ಮಾ ದೇವಸ್ಥಾನದಲ್ಲಿ ಗುರುವಾರದಿಂದ ಎರಡು ವಾರದ ಅವಧಿಯವರೆಗೆ ದೇವಿಯ ದರ್ಶನವನ್ನು ನಿಷೇಧಿಸಲಾಗಿದೆ ಎಂದು ದೇವಸ್ಥಾನ ಕಾರ್ಯನಿರ್ವಣಾಧಿಕಾರಿ ರವಿ ಕೊಟಾರಗಸ್ತಿ ತಿಳಿಸಿದ್ದಾರೆ. ಶ್ರೀ ಕ್ಷೇತ್ರದಲ್ಲಿ ಬುಧವಾರದಂದು ನಡೆದ ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಭಕ್ತಾಧಿಗಳ ಆರೋಗ್ಯದ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಸಮಿತಿಯು ತೀರ್ಮಾನ ತೆಗೆದುಕೊಂಡಿದೆ. …
Read More »ಭಾರತಕ್ಕೆ ಭೇಷ್ ಎಂದ ವಿಶ್ವ ಆರೋಗ್ಯ ಸಂಸ್ಥೆ!
ನವದೆಹಲಿ [ಮಾ.18]: ವಿಶ್ವದಾದ್ಯಂತ ತಲ್ಲಣ ಹುಟ್ಟುಹಾಕಿರುವ ಕೊರೋನಾ ವೈರಸ್ ತಡೆ ಮತ್ತು ನಿವಾರಣೆ ನಿಟ್ಟಿನಲ್ಲಿ ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್ಒ) ಬಹುವಾಗಿ ಮೆಚ್ಚಿಕೊಂಡಿದೆ. ಅಲ್ಲದೆ ಕೊರೋನಾ ವೈರಸ್ ಅನ್ನು ನಿರ್ವಹಿಸುವಲ್ಲಿ ಭಾರತ ವಿಶ್ವಕ್ಕೇ ಮಾದರಿಯಾಗಿ ಹೊರಹೊಮ್ಮಿದೆ ಎಂದು ಹಾಡಿ ಹೊಗಳಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತದಲ್ಲಿನ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಹೆಂಕ್ ಬೆಕೆಡಮ್, ‘ಕೊರೋನಾ ವೈರಸ್ ನಿಯಂತ್ರಣಕ್ಕೆ ಭಾರತ ಸರ್ಕಾರದ …
Read More »ಕಲಬುರಗಿ ವೈದ್ಯರಿಗೆ ಕೊರೊನಾ- ಸೋಂಕಿತರ ಸಂಖ್ಯೆ 11ಕ್ಕೆ ಏರಿಕೆ
ಕಲಬುರಗಿ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 11ಕ್ಕೆ ಏರಿಕೆ ಕಂಡಿದೆ. ಕಲಬುರಗಿಯಲ್ಲಿ ಸಾವನ್ನಪ್ಪಿದ್ದ ವೃದ್ಧನಿಗೆ ಚಿಕಿತ್ಸೆ ನೀಡಿದ್ದ ವೈದ್ಯರಿಗೆ ಕೊರೊನಾ ವೈರಸ್ ತಗುಲಿರೋದು ವರದಿಯಲ್ಲಿ ದೃಢಪಟ್ಟಿದೆ. ಮೃತ ಕಲಬುರಗಿ ವೃದ್ಧನಿಗೆ ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರಿಗೆ ಕೊರೊನೊ ಸೋಂಕು ತಗುಲಿದೆ. ಮೃತ ವೃದ್ಧನಿಗೆ ವೈದ್ಯರು ಆತನ ಮನೆಯಲ್ಲಿ ಚಿಕಿತ್ಸೆ ನೀಡಿದ್ದರು ಎಂದು ಕಲಬುರಗಿ ಜಿಲ್ಲಾಧಿಕಾರಿ ಬಿ. ಶರತ್ ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಮತ್ತೆರಡು ಕೋವಿಡ್- 19 ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆಯಾಗಿ …
Read More »ವೈರಸ್‍ಗೆ ಜಾತಿ ಇಲ್ಲ. ಹಾಗಾಗಿ ಒಂದು ವಾರ ಮಂದಿರ, ಮಸೀದಿಗಳಿಗೆ ದಯವಿಟ್ಟು ಹೋಗಬೇಡಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರು: ವೈರಸ್‍ಗೆ ಜಾತಿ ಇಲ್ಲ. ಹಾಗಾಗಿ ಒಂದು ವಾರ ಮಂದಿರ, ಮಸೀದಿಗಳಿಗೆ ದಯವಿಟ್ಟು ಹೋಗಬೇಡಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಮನವಿ ಮಾಡಿಕೊಂಡಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ಅಧೀಕ್ಷಕರ ಜೊತೆ ವೈದ್ಯಕೀಯ ಶಿಕ್ಷಣ ಸಚಿವರು ಇಂದು ಸಭೆ ನಡೆಸಿದರು. ಬಳಿಕ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ನಿನ್ನೆ ಸಿಕ್ಕಿರುವ ಮಾಹಿತಿ ಪ್ರಕಾರ ವಿದೇಶದಿಂದ ಬಂದಿರುವ ಓರ್ವ ವಿದ್ಯಾರ್ಥಿನಿ ಹಾಗೂ ಅವರನ್ನು ಕರೆದುಕೊಂಡ ಬಂದ ವೈದ್ಯರೊಬ್ಬರಿಗೆ ವೈರಸ್ ಸೋಂಕು …
Read More »ಕೊರೊನಾ ಭಯ : ಹಾಸ್ಟೆಲ್-ಪಿಜಿ ಬಿಟ್ಟು ಮನೆಗಳಿಗೆ ವಾಪಸಾಗುವಂತೆ ಸೂಚನೆ.
ಬೆಂಗಳೂರು, ಮಾ.17- ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಸ್ಟೆಲ್ ಮತ್ತು ಪಿಜಿಯಲ್ಲಿರುವವರು ತಮ್ಮ ಮನೆಗಳಿಗೆ ವಾಪಸಾಗುವಂತೆ ಬಿಬಿಎಂಪಿ ಮನವಿ ಮಾಡಿಕೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ಹೊರ ಊರಿನಿಂದ ಆಗಮಿಸಿ ನಗರದ ಹಾಸ್ಟೆಲ್ ಮತ್ತು ಪಿಜಿಯಲ್ಲಿ ತಂಗಿರುವವರು ಕೂಡಲೇ ತಮ್ಮ ಊರುಗಳಿಗೆ ಹಿಂದಿರುಗುವಂತೆ ಬಿಬಿಎಂಪಿ ಆಯುಕ್ತ ಅನಿಲ್‍ಕುಮಾರ್ ಮನವಿ ಮಾಡಿಕೊಂಡಿದ್ದಾರೆ. ಊರಿಗೆ ತೆರಳಲು ಸಾಧ್ಯವಾಗದೆ ಹಾಸ್ಟೆಲ್‍ನಲ್ಲೇ ತಂಗಿರುವ ವಿದ್ಯಾರ್ಥಿಗಳು ವೈಯಕ್ತಿಕ ಶುಚಿತ್ವಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಅನಿಲ್‍ಕುಮಾರ್ …
Read More »ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೊಂಕು ಹರಡದಂತೆ ತಡೆಯಲು ಜಿಲ್ಲಾಡಳಿತ ಮುಂಜಾಗೃತವಾಗಿ ಇಂದಿನಿಂದ ಒಂದು ವಾರದವರೆಗೆ ಜಿಲ್ಲೆಯ ಎಲ್ಲ ಸಂತೆ,ಮತ್ತು ಜಾತ್ರೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ
ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೊಂಕು ಹರಡದಂತೆ ತಡೆಯಲು ಜಿಲ್ಲಾಡಳಿತ ಮುಂಜಾಗೃತವಾಗಿ ಇಂದಿನಿಂದ ಒಂದು ವಾರದವರೆಗೆ ಜಿಲ್ಲೆಯ ಎಲ್ಲ ಸಂತೆ,ಮತ್ತು ಜಾತ್ರೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ ದಿನನಿತ್ಯದ ಪೂಜೆ ಮತ್ತು ಇನ್ನಿತರ ಧಾರ್ಮಿಕ ಕಾರ್ಯಗಳಿಗೆ ವಿನಾಯತಿ ನೀಡಲಾಗಿದ್ದು,ಇಂದಿನಿಂದ ಒಂದು ವಾರದವರೆಗೆ ಜಿಲ್ಲೆಯಲ್ಲಿ ಸಂತೆ ,ಮತ್ರು ಜಾತ್ರೆ ನಡೆಯುವಂತಿಲ್ಲ ಎಂದು ಕಟ್ಟು ನಿಟ್ಟಿನ ಆದೇಶ ಮಾಡಲಾಗಿದೆ ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೊಂಕು ಹರಡದಂತೆ ತಡೆಯಲು ದೊಡ್ಡ,ದೊಡ್ಡ ಶಾಪಿಂಗ್ ಮಾಲ್ ಮತ್ತು ಸೂಪರ್ …
Read More »ಮಹಾಮಾರಿ ಕೊರೊನಾ ಭೀತಿ- ಮಣಿಪಾಲ ವಿವಿಗೆ 15 ದಿನ ರಜೆ
ಉಡುಪಿ: ಕರೊನಾ ವೈರಸ್ ಭೀತಿ ಹಿನ್ನೆಲೆ ರಾಜ್ಯ ಸರ್ಕಾರ ಒಂದು ವಾರ ಹೈ ಅಲರ್ಟ್ ಘೋಷಿಸಿದೆ. ಇದೀಗ ಜಿಲ್ಲೆಯ ಮಣಿಪಾಲ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಎರಡು ವಾರಗಳ ಕಾಲ ರಜೆ ಘೋಷಿಸಿದೆ. ವಿವಿಯ ಸಾವಿರಾರು ವಿದ್ಯಾರ್ಥಿಗಳು ವಿದೇಶದ ಸಂಪರ್ಕ ಹೊಂದಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ಆದೇಶವನ್ನು ಹೊರಡಿಸಿದೆ. ಹೊರ ರಾಜ್ಯದ ವಿದ್ಯಾರ್ಥಿಗಳು ಮಣಿಪಾಲದಿಂದ ತಮ್ಮ ರಾಜ್ಯಗಳಿಗೆ ತೆರಳಿದ್ದು, ವಿದೇಶದ ವಿದ್ಯಾರ್ಥಿಗಳು ಮಣಿಪಾಲದಲ್ಲೇ ಉಳಿದುಕೊಳ್ಳುವ ಸೂಚನೆಯನ್ನು ವಿವಿ ಕೊಟ್ಟಿದೆ. ಇಂಗ್ಲಿಷ್ ಮಾತನಾಡುವ ಐವತ್ನಾಲ್ಕು …
Read More »
Laxmi News 24×7