ಮಂಡ್ಯ: ಮುಂಗಾರು ಆರಂಭದಲ್ಲೇ ಮಂಡ್ಯ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದೆ. ಕಬ್ಬು ರಕ್ಷಣೆಗಾಗಿ ನಾಲೆಗೆ ನೀರು ಬಿಡುವಂತೆ ಆಗ್ರಹಿಸಿ ಇಂದು ಕಾವೇರಿ ನೀರಾವರಿ ನಿಗಮದ ಕಚೇರಿ ರೈತರು ಮುತ್ತಿಗೆ ಹಾಕಲಿದ್ದಾರೆ.
ಸಕಾಲಕ್ಕೆ ಮಳೆಯಾಗದೇ, ಇತ್ತ ನಾಲೆಯಲ್ಲಿಯೂ ನೀರಿಲ್ಲದೇ ಕಬ್ಬು ಒಣಗುತ್ತಿದೆ. ಹೀಗಾಗಿ ಬೆಳೆದಿರುವ ಕಬ್ಬು ರಕ್ಷಣೆಗಾಗಿ ನಾಲೆಗೆ ನೀರು ಹರಿಸುವಂತೆ ಆಗ್ರಹಿಸಿ, ಮಂಡ್ಯ ರೈತರು ಇಂದು ಕಾವೇರಿ ನೀರಾವರಿ ನಿಗಮದ ಕಚೇರಿಗೆ ಹಾಕಲಿದ್ದಾರೆ. ಈ ವೇಳೆ ರೈತರು ಕೆಆರ್‌ಎಸ್‌ನಿಂದ ನಾಲೆಗಳಿಗೆ ನೀರು ಹರಿಸಿ ಎಂದು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೀದಿಗಿಳಿಯಲಿದ್ದಾರೆ.
ಸಾಲ ಸೂಲ ಮಾಡಿ ಬೆಳೆದಿರುವ ಕಬ್ಬು ಒಣಗುತ್ತಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಈಗ ನಾಲೆಗೆ ನೀರು ಹರಿಸದಿದ್ದರೆ ರೈತರಿಗೆ ತೀವ್ರ ಸಂಕಷ್ಟ ಎದುರಾಗುತ್ತದೆ. ಕೂಡಲೇ ನಾಲೆಗೆ ನೀರು ಹರಿಸಿ ಎಂದು ಪ್ರತಿಭಟನೆ ಮಾಡಲಿದ್ದಾರೆ. ಆದರೆ ಮತ್ತೊಂದೆಡೆ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಡ್ಯಾಂ ನೀರು ಬಳಕೆಗೆ ಜಿಲ್ಲಾಡಳಿತ ನಿರ್ಧಾರ ಮಾಡಿದ್ದು, ಸದ್ಯ ರೈತರ ಆಗ್ರಹಕ್ಕೆ ಜಿಲ್ಲಾಡಳಿತ ಮಣಿಯುತ್ತಾ ಎಂದು ಕಾದುನೋಡಬೇಕಿದೆ.
Laxmi News 24×7