Breaking News

ಬಳ್ಳಾರಿ

ಲಸಿಕೆ ಹಾಕಿಸಿಕೊಂಡರೆ ಪುರುಷತ್ವ ಹೋಗುತ್ತದೆ’:ಆರೋಗ್ಯ ಸಿಬ್ಬಂದಿಗಳ ಜತೆ ಗ್ರಾಮಸ್ಥರ ವಾಗ್ವಾದ

ಬಳ್ಳಾರಿ : ಲಸಿಕೆ ಬಗ್ಗೆ ಜಾಗೃತಿ ಮೂಡಿಸಲು ಬಂದ ಆರೋಗ್ಯ ಸಿಬ್ಬಂದಿಗಳೊಂದಿಗೆ ಗ್ರಾಮಸ್ಥರು ವಾಗ್ವಾದ ಮಾಡಿರುವ ಘಟನೆ ಸಂಡೂರು ತಾಲೂಕಿನ ಹಳೆದರೋಜಿ, ಕುರೇಕುಪ್ಪ ಗ್ರಾಮದಲ್ಲಿ ನಡೆದಿದೆ. ಲಸಿಕೆಯನ್ನು ಹಾಕಿಸಿಕೊಳ್ಳಿ ಎಂದ ಆರೋಗ್ಯ ಸಿಬ್ಬಂದಿಗಳೊಂದಿಗೆ ಗ್ರಾಮಸ್ಥರು, ವ್ಯಾಕ್ಸಿನ್ ಹಾಕಿಸಿಕೊಂಡರೆ ನಮ್ಮ ಪುರುಷತ್ವ ಹೋಗುತ್ತದೆ, ಜ್ವರ ಬರುತ್ತದೆ, ಕೈ ಕಾಲು ಸ್ವಾದೀನ ಕಳೆದುಕೊಳುತ್ತದೆ ಎಂದು ವಾಗ್ವಾದ ಮಾಡಿದ್ದಾರೆ. ನಮಗೆ ಏನಾದರು ಆಗಲಿ ಪರವಾಗಿಲ್ಲ. ನೀವು ನಮ್ಮನ್ನು ಬಂದು ಕರೆಯಬೇಡಿ. ನಾವು ಸತ್ತರು ನಡೆಯುತ್ತೆ …

Read More »

ಕಚ್ಚಿದ ಹಾವನ್ನು ಹಿಡಿದುಕೊಂಡೇ ಆಸ್ಪತ್ರೆಗೆ ಬಂದ ಭೂಪ

ಬಳ್ಳಾರಿ: ಸಾಮಾನ್ಯವಾಗಿ ಹಾವು ಕಂಡರೆ ಮಾರುದ್ದ ಓಡಿ ಹೋಗುವ ಜನರ ಮಧ್ಯೆ, ತನಗೆ ಕಚ್ಚಿದ ಹಾವನ್ನು ಹಿಡಿದುಕೊಂಡು ಯುವನೋರ್ವ ಆಸ್ಪತ್ರೆಗೆ ಬಂದಿರುವ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಉಪ್ಪಾರಳ್ಳಿಯಲ್ಲಿ ನಡೆದಿದೆ. ಇಂದು ಮುಂಜಾನೆ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಗ್ರಾಮದ ಯುವಕ ಕಾಡಪ್ಪನ ಕಾಲಿಗೆ ಹಾವು ಕಚ್ಚಿದೆ. ಹಾವು ಕಚ್ಚಿದ ತಕ್ಷಣ ಎಚ್ಚರಗೊಂಡ ಕಾಡಪ್ಪ ಪಕ್ಕದಲ್ಲಿ ಇದ್ದ ಹಾವನ್ನು ನೋಡಿದ್ದಾನೆ. ಕೂಡಲೇ ಆ ಹಾವನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಗ್ರಾಮದ …

Read More »

ತಾಯಿಗೆ ಮಗಳು ಹೊಸ ಸೀರೆ ಕೊಡಿಸಬೇಕು ಎನ್ನುವ ವದಂತಿ ಹಬ್ಬಿದ್ದು ಬಟ್ಟೆ ಅಂಗಡಿಗಳಿಗೆ ಮುಗಿಬಿದ್ದಿದ್ದಾರೆ.

ಬಳ್ಳಾರಿ : ಗಣಿನಾಡು ಬಳ್ಳಾರಿಯಲ್ಲಿ ವದಂತಿಯೊಂದು ಹಬ್ಬಿದ್ದು, ತಾಯಿಗೆ ಮಗಳು ಹೊಸ ಸೀರೆ ಕೊಡಿಸಬೇಕು ಎನ್ನುವ ವದಂತಿ ಹಬ್ಬಿದ್ದು, ಮಹಿಳೆಯರು ತಾಯಿಗೆ ಸೀರೆ ಕೊಡಲು ಬಟ್ಟೆ ಅಂಗಡಿಗಳಿಗೆ ಮುಗಿಬಿದ್ದಿದ್ದಾರೆ.   ಹೌದು, ಬಳ್ಳಾರಿ ಜಿಲ್ಲೆಯ ಗ್ರಾಮೀಣಾ ಭಾಗದಲ್ಲಿ ತಾಯಿಗೆ ಮಗಳು ಸೀರೆ ಕೊಡಿಸಬೇಕು. ಸೀರೆ ಕೊಡದಿದ್ದರೆ ಕೇಡಾಗುತ್ತದೆ ಎಂಬ ವದಂತಿ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳು ತಮ್ಮ ತಾಯಿಗೆ ಸೀರೆ ಖರೀದಿಸಲು ಮುಗಿಬಿದ್ದಿದ್ದಾರೆ. ಬಳ್ಳಾರಿಯ ಸೀರೆ ಅಂಗಡಿಗಳಲ್ಲಿ ಈಗ ಎಲ್ಲಿ ನೋಡಿದರೂ …

Read More »

ಕಲ್ಲು ಗಣಿಗಾರಿಕೆ: ಬಿರುಕು ಬಿಟ್ಟ ಮನೆ ಗೋಡೆಗಳು, ಸ್ಫೋಟಕ್ಕೆ ಬೆಚ್ಚಿ ಬೀಳುವ ಜನ

ಶಿರಹಟ್ಟಿ (ಗದಗ ಜಿಲ್ಲೆ): ತಾಲ್ಲೂಕಿನ ಮಾಗಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪರಸಾಪುರ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ವ್ಯಾಪಕವಾಗಿ ನಡೆಯುತ್ತಿದ್ದು, ಮನೆಯ ಗೋಡೆಗಳು ಬಿರುಕು ಬಿಡುತ್ತಿವೆ. ಕೊಳವೆಬಾವಿಗಳು ಕುಸಿಯುತ್ತಿದ್ದು ರೈತರಲ್ಲಿ ಆತಂಕ ಹೆಚ್ಚಿಸಿದೆ. ಈ ಭಾಗದಲ್ಲಿ ಬೆಳಿಗ್ಗೆ ಹಾಗೂ ರಾತ್ರಿ ವೇಳೆ ನಡೆಸುವ ಸ್ಫೋಟಕದ ಶಬ್ದಕ್ಕೆ ಮಕ್ಕಳು ಮತ್ತು ವೃದ್ಧರು ಬೆಚ್ಚಿ ಬೀಳುವಂತಾಗಿದೆ. ಆದರೂ, ಸಂಬಂಧಪಟ್ಟ ಅಧಿಕಾರಿ ವರ್ಗ ಕ್ರಮ ಕೈಗೊಳ್ಳದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ‘ಅಳತೆಗೂ ನಿಲುಕದಷ್ಟು …

Read More »

ರಾಜ್ಯದಲ್ಲಿ ಗಣಿ ವಿಶ್ವವಿದ್ಯಾಲಯ: ಸಚಿವ ಮುರುಗೇಶ ನಿರಾಣಿ

ಬೆಂಗಳೂರು: ‘ಗಣಿಗಾರಿಕೆಯನ್ನು ವೈಜ್ಞಾನಿಕವಾಗಿ ನಡೆಸುವಂತೆ ಸಾಧ್ಯವಾಗಲು ರಾಜ್ಯದಲ್ಲಿ ಗಣಿ ವಿಶ್ವವಿದ್ಯಾಲಯ ಸ್ಥಾಪಿಸುವ ಚಿಂತನೆ ಇದೆ. ಈ ಬಗ್ಗೆ ಮುಖ್ಯಮಂತ್ರಿಯವರ ಜೊತೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಹೇಳಿದರು. ವಿಧಾನ ಪರಿಷತ್‌ನಲ್ಲಿ ಮಂಗಳವಾರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಜಾರ್ಖಂಡ್ ಮಾದರಿಯಲ್ಲಿ ಈ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು’ ಎಂದರು. ‘ಖನಿಜ ಅಭಿವೃದ್ಧಿ ನಿಧಿ ಮತ್ತು ಗಣಿಗಳಿಂದ ಬರುವ ಬಡ್ಡಿ ಹಣವನ್ನು ಬಳಸಿ ಈ …

Read More »

ರೈತರ ಹಣದೊಂದಿಗೆ ವ್ಯಾಪಾರಿ ನಾಪತ್ತೆ

ಸಿರುಗುಪ್ಪ :ರೈತರ ಹಣದೊಂದಿಗೆ ವ್ಯಾಪಾರಿ ನಾಪತ್ತೆ ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಕರ್ಚಿಗನೂರು ಶಾನವಾಸಪುರ,ಸೂಗೂರು, ಹಚ್ಚೊಳ್ಳಿ, ಅರಳಿಗನೂರು ಸೇರಿದಂತೆ ಹಲವು ಗ್ರಾಮಗಳ.35ಕ್ಕೂ ಹೆಚ್ಚು ರೈತರಿಂದ18 ಕೋಟಿ 30 ಲಕ್ಷ ರೂ ಮೌಲ್ಯದ ಭತ್ತವನ್ನು ಮಾರುಕಟ್ಟೆ ಧರಕ್ಕಿಂತ ಹೆಚ್ಚಿನ ಧರದಲ್ಲಿ ಖರೀದಿಸಿದ ವ್ಯಕ್ತಿ ಈಗ ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದಾನಂತೆ. ಮೂಲತಃ ಕಾರಟಿಗಿಯ ಮೆಹಬೂಬ್ ಭಾಷಾ ಎನ್ನುವಾತ ಸಿರುಗುಪ್ಪದಲ್ಲಿ ವಾಸವಾಗಿದ್ದ ಕಳೆದ ವರ್ಷ ಭತ್ತ ಖರೀದಿಸಿ ರೈತರಿಗೆ ಸಮರ್ಪಕವಾಗಿ ಹಣ ಪಾವತಿ …

Read More »

ಸಪ್ತಗಿರಿ ಆಸ್ಪತ್ರೆ,ರುದ್ರ ವೆಲ್ಫೇರ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತ ಚಿಕಿತ್ಸೆ

ಬಳ್ಳಾರಿ: ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾದ ಸಪ್ತಗಿರಿ ಆಸ್ಪತ್ರೆ ಮತ್ತು ಬಳ್ಳಾರಿಯ ರುದ್ರ ವೆಲ್ಫೇರ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಇದೇ ಡಿ.28 ರಂದು ಕಂಪ್ಲಿ ಬಳಿಯ ಎಮ್ಮಿಗನೂರಿನ ಶ್ರೀ ಆಂಜನೇಯ ದೇವಸ್ಥಾನದಲ್ಲಿ, ಮತ್ತು 29 ರಂದು ಬಳ್ಳಾರಿಯ ಪಾರ್ವತಿನಗರದಲ್ಲಿರುವ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಹೃದಯ, ನರರೋಗ, ಮೂತ್ರಪಿಂಡ, ಕ್ಯಾನ್ಸರ್ ಮತ್ತು ಸಾಮಾನ್ಯ ರೋಗಗಳಿಗೆ ಚಿಕಿತ್ಸೆ ನೀಡಲು ಶಿಬಿರ ಏರ್ಪಡಿಸಲಾಗಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರುದ್ರ ವೆಲ್ಫೇರ್ ಮತ್ತು …

Read More »

ಬೆಳಗಾವಿ ವಿಭಜನೆ ಮಾಡಲು ತಾಂತ್ರಿಕ ತೊಂದರೆ ಇದೆ ಎಂದು ಹೇಳಿದ ಲಕ್ಷ್ಮಣ ಸವದಿ

ಬಳ್ಳಾರಿ : ಕಾಂಗ್ರೆಸ್, ಜೆಡಿಎಸ್ ಪಕ್ಷದ 17 ಜನರು ಬಿಜೆಪಿ ಪಕ್ಷಕ್ಕೆ ಬಂದ ಕಾರಣದಿಂದ ರಾಜ್ಯದಲ್ಲಿ ನಮ್ಮ ಸರ್ಕಾರ ಬಂದಿದೆ. ಅವರ ಬಗ್ಗೆ ಗೌರವವಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬರಲು 17 ಜನರು ಕಾರಣ. ಕೆಲವೇ ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬುವುದು ಪಕ್ಷ ತೀರ್ಮಾನ ಮಾಡುತ್ತದೆ. ಸಿಎಂ ಬಿ.ಎಸ್.ಯಡಿಯೂರಪ್ಪ ಫೈನಲ್ …

Read More »

ಲಾರಿಗೆ ಹಿಂಬದಿಯಿಂದ ಬಂದ್ ಕಾರ್ ಡಿಕ್ಕಿ 7 ಮಂದಿಗೆ ಗಂಭೀರ ಗಾಯ

ಬಳ್ಳಾರಿ: ಲಾರಿಗೆ ಹಿಂಬದಿಯಿಂದ ಬಂದ್ ಕಾರ್ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಗಾಯಗೊಂಡಿದ್ದಾರೆ. ಬಳ್ಳಾರಿ ಜಿಲ್ಲೆತ ಕೂಡ್ಲಿಗಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 50ರ ಗೌಡ್ರು ಪೆಟ್ರೋಲ್ ಬಂಕ್ ಬಳಿ ಅಪಘಾತ ಸಂಭವಿಸಿದೆ. ಮಲ್ಲಪ್ಪ (40), ವೀರೇಶ್ (17), ಶರಣಪ್ಪ (15), ಸಾಬಮ್ಮ(19), ಮಹದೇವಮ್ಮ (52), ಮರಿಯಮ್ಮ (35) ಹಾಗೂ ಕಾರ್ ಚಾಲಕ ಸಿದ್ದು (22) ಗಾಯಗೊಂಡಿದ್ದರು. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಗಾಯಾಳುಗಳ ಪೈಕಿ ಮೂವರನ್ನ …

Read More »

ವಷ೯ದಿಂದ ಆರ್ ಓಗೆ ಬೀಗ ಪ್ಲೋರೈಡ್ ನೀರು ಪೂರೈಕೆ:ಆಸ್ಪತ್ರೆಗಳಿಗೆ ಅಲೆದಾಟ-

ಬಳ್ಳಾರಿ:ವಷ೯ದಿಂದ ಆರ್ ಓಗೆ ಬೀಗ ಪ್ಲೋರೈಡ್ ನೀರು ಪೂರೈಕೆ:ಆಸ್ಪತ್ರೆಗಳಿಗೆ ಅಲೆದಾಟ-ಕ್ರಮಕ್ಕಾಗಿ ಜಿಲ್ಲಾಧಿಕಾರಿ ಗಳಲ್ಲಿ ಮನವಿಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣ ಪಂಚಾಯ್ತಿ ವ್ಯಾಪ್ತಿ 20ನೇ ವಾಡ್೯ ಗೋವಿಂದಗಿರಿ ಗ್ರಾಮದಲ್ಲಿ,ಗ್ರಾಮದಲ್ಲಿ ಪೂರೈಕೆಯಾಗೋ ಕುಡಿಯೋ ನೀರಿನಲ್ಲಿ ಸಾಕಷ್ಟು ಪ್ಲೋರೈಡ್ ಅಂಶ ಇರೋದು ಸಾಬೀತಾಗಿದೆ.ನೀರು ಸೇವನೆಯಿಂದಾಗಿ ಅಸಂಖ್ಯಾತ ಗ್ರಾಮಸ್ಥರು,ಹಲವಾರು ಖ‍ಯಿಲೆಗಳಿಂದ ನರಳುವಂತಾಗಿದೆ ಹಾಗೂ ಆಸ್ಪತ್ರೆಗೆ ಅಲೆದಾಡುವಂತಾಗಿದೆ ಎಂದು ಕೆಲ ಗ್ರಾಮಸ್ಥರು ದೂರಿದ್ದಾರೆ.ಪಪಂ ಸದಸ್ಯ ಕೆಲವು ನಳಗಳ ಪೈಪ್ ಗಳು ಒಡೆದು ಮಳೆ ನೀರು ಮಿಶ್ರಣವಾಗಿ ಕಲುಷಿತ …

Read More »