Breaking News
Home / ಬಳ್ಳಾರಿ / ವಷ೯ದಿಂದ ಆರ್ ಓಗೆ ಬೀಗ ಪ್ಲೋರೈಡ್ ನೀರು ಪೂರೈಕೆ:ಆಸ್ಪತ್ರೆಗಳಿಗೆ ಅಲೆದಾಟ-

ವಷ೯ದಿಂದ ಆರ್ ಓಗೆ ಬೀಗ ಪ್ಲೋರೈಡ್ ನೀರು ಪೂರೈಕೆ:ಆಸ್ಪತ್ರೆಗಳಿಗೆ ಅಲೆದಾಟ-

Spread the love

ಬಳ್ಳಾರಿ:ವಷ೯ದಿಂದ ಆರ್ ಓಗೆ ಬೀಗ ಪ್ಲೋರೈಡ್ ನೀರು ಪೂರೈಕೆ:ಆಸ್ಪತ್ರೆಗಳಿಗೆ ಅಲೆದಾಟ-ಕ್ರಮಕ್ಕಾಗಿ ಜಿಲ್ಲಾಧಿಕಾರಿ ಗಳಲ್ಲಿ ಮನವಿಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣ ಪಂಚಾಯ್ತಿ ವ್ಯಾಪ್ತಿ 20ನೇ ವಾಡ್೯ ಗೋವಿಂದಗಿರಿ ಗ್ರಾಮದಲ್ಲಿ,ಗ್ರಾಮದಲ್ಲಿ ಪೂರೈಕೆಯಾಗೋ ಕುಡಿಯೋ ನೀರಿನಲ್ಲಿ ಸಾಕಷ್ಟು ಪ್ಲೋರೈಡ್ ಅಂಶ ಇರೋದು ಸಾಬೀತಾಗಿದೆ.ನೀರು ಸೇವನೆಯಿಂದಾಗಿ ಅಸಂಖ್ಯಾತ ಗ್ರಾಮಸ್ಥರು,ಹಲವಾರು ಖ‍ಯಿಲೆಗಳಿಂದ ನರಳುವಂತಾಗಿದೆ ಹಾಗೂ ಆಸ್ಪತ್ರೆಗೆ ಅಲೆದಾಡುವಂತಾಗಿದೆ ಎಂದು ಕೆಲ ಗ್ರಾಮಸ್ಥರು ದೂರಿದ್ದಾರೆ.ಪಪಂ ಸದಸ್ಯ ಕೆಲವು ನಳಗಳ ಪೈಪ್ ಗಳು ಒಡೆದು ಮಳೆ ನೀರು ಮಿಶ್ರಣವಾಗಿ ಕಲುಷಿತ ವಾಗೋ ಸಾಧ್ಯತೆ ಇದೆ.

ಹಾಗಾಗಿ ನಳದ ನೀರು ಹಾಗೂ ಮಿನಿಟ್ಯಾಂಕ್ ನ ಬೋರ್ ವೆಲ್ ನೀರು ಕುಡಿಯಲು ಯೋಗ್ಯವಾಗಿಲ್ಲ, ಬಹುತೇಕ ಕಲುಷಿತ ನೀರು ಪೂರೈಕೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.ಪಪಂ ಸದಸ್ಯ ಭಾಸುನಾಯ್ಕ ಮಾತನಾಡಿ ಶುದ್ಧ ಕುಡಿಯೋ ನೀರಿನ ಘಟಕ ಪ್ರಾರಂಭವಾಗಿ ಹಲುವು ತಿಂಳಷ್ಟೇ ಚಾಲ್ತಿಯಲ್ಲಿತ್ತು,ನಂತರ ಕೆಟ್ಟು ಹೋಗಿದ್ದು ವಷ೯ದಿಂದಲೂ ಘಟಕ ದುರಸ್ಥಿ ಕಾಣದೇ ಇದ್ದು ಬೀಗ ಹಾಕಲಾಗಿದೆ. ಅನಿವಾಯ೯ವಾಗಿ ಬಹುತೇಕ ಗ್ರಾಮಸ್ಥರು ಪ್ಲೋರೈಡ್ ಅಂಶ ಇರೋ ನಳ ಹಾಗೂ ಬೋರ್ ನೀರು ಸೇವಿಸುತ್ತಿದ್ದು,ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಹಲವು ಅನಾರೋಗ್ಯ ಕಾರಣದಿಂದಾಗಿ ನಿತ್ಯ ಆಸ್ಪತ್ರೆಗೆ ಅಲೆದಾಡುವಂತಾಗಿದೆ.ಈ ಸಂಬಂಧ ಸಾಕಷ್ಟು ಬ‍ಾರಿ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳ ಗಮನಕ್ಕೆ ತರಲಾಗಿದ್ದು ಏನೂ ಪ್ರಯೋಜನವಾಗಿಲ್ಲ,ಜನ ಶುದ್ಧ ಕುಡಿಯೋ ನೀರಿಗಾಗಿ ಹಲವು ಕಿಮೀಗಳ ದೂರ ಸಂಚರಿಸುತ್ತಿದ್ದಾರೆ.

ಇದೆಲ್ಲಾ ತಿಳಿದೂ ಕೂಡ ಅಧಿಕಾರಿ ಸೌಜನ್ಯಕ್ಕಾದರೂ ಘಟಕಕ್ಕೆ ಬೆಟ್ಟಿಕೊಟ್ಟಿಲ್ಲ ಹಾಗೂ ಪರಿಶೀಲಿಸಿಲ್ಲ,ಕಾರಣ ತಾನು ಸೂಕ್ತ ಕ್ರಮಕ್ಕಾಗಿ ಈ ಮೂಲಕ ಜಿಲ್ಲಾಧಿಕಾರಿಗಳಲ್ಲಿ ಕೋರುತ್ತಿರುವುದಾಗಿ ಪಪಂ ಸದಸ್ಯ ಭಾಸುನಾಯ್ಕ ತಿಳಿಸಿದ್ದಾರೆ.ಗ್ರಾಮದ ರೈತ ಸಂಘದ ಮುಖಂಡರು ಹಲವು ಕನ್ನಡ ಪರ ಸಂಘಟನಾಕಾರರು ಹಾಗೂ ಗ್ರಾಮಸ್ಥರು ಇದ್ದರು


Spread the love

About Laxminews 24x7

Check Also

ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯದ ಯಾವ ಕ್ಷೇತ್ರದಲ್ಲಿ ನಿಂತರೂ ಗೆಲ್ಲುವುದಿಲ್ಲ: R..ಅಶೋಕ್

Spread the loveಬಳ್ಳಾರಿ: ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯದ ಯಾವ ಕ್ಷೇತ್ರದಲ್ಲಿ ನಿಂತರೂ ಗೆಲ್ಲುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ