ಬೆಂಗಳೂರು : ಕೊರೋನಾ ಲಾಕ್‌ಡೌನ್ ಮೊದಲ ಹಂತದ ಅಂತಿಮ ಚರಣದಲ್ಲಿರುವ ಸಂದರ್ಭದಲ್ಲಿ ಜನರ ತೊಂದರೆಗೆ ಕಿವಿಗೊಡಲು ಖುದ್ದು ಸಿಎಂ ಯಡಿಯೂರಪ್ಪ ರೋಡಿಗಿಳಿದರು. ಭಾನುವಾರ ಅಧಿಕಾರಿಗಳ ಸಮೇತ ಯಡಿಯೂರಪ್ಪ ಬೆಂಗಳುರಿನ ಸಿಟಿ ರೌಂಡ್ಸ್ ಕೈಗೊಂಡು ಜನ ಮತ್ತು ವ್ಯಾಪಾರಸ್ಥರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದರು. ಸಿಟಿ ರೌಂಡ್ಸ್ ವೇಳೆ ಮುಖ್ಯಮಂತ್ರಿಗೆ ವ್ಯಾಪಾರಿಗಳಿಂದ ದೂರುಗಳ ಸುರಿಮಳೆಯೇ ಆಯಿತು. ವ್ಯಾಪಾರ ಕಮ್ಮಿ, ಪಾಸ್ ಕೊಡ್ತಿಲ್ಲ. ಪೊಲೀಸರು ಬಿಡ್ತಿಲ್ಲ ಎಂದು ವ್ಯಾಪಾರಿಗಳು ಗೋಳು ತೋಡಿಕೊಂಡರು. ಈ ಮಧ್ಯೆ …
Read More »ನನ್ನಂಥವರಿಗೆ ಡಾ. ರಾಜ್ ಸ್ಫೂರ್ತಿ’ : ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು : ನನ್ನಂಥವರು ವರನಟ ಡಾ. ರಾಜ್ ಅವರ ಸಿನಿಮಾಗಳನ್ನು ನೋಡಿ ಸ್ಫೂರ್ತಿಗೊಂಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.ಡಾ. ರಾಜ್ ಕುಮಾರ್ ಜಗತ್ತು ಕಂಡ ಮೇರು ನಟರಾಗಿದ್ದರು ಎಂದು ಟ್ವಿಟರ್ ನಲ್ಲಿ ಅವರು ತಿಳಿಸಿದ್ದಾರೆ. ಕನ್ನಡ ಸಿನಮಾ ಲೋಕದ ಉತ್ತುಂಗದ ಸ್ಟಾರ್ ಅಷ್ಟೇ ಅಲ್ಲ. ತಮ್ಮ ನಾಡು ನುಡಿಯ ಬಗ್ಗೆ ಅದಮ್ಯ ಕಾಳಜಿ ಇಟ್ಟುಕೊಂಡಿದ್ದ ಹೋರಾಟಗಾರ ಎಂದು ಹೇಳಿದ್ದಾರೆ. ತಮ್ಮ ಅಭಿನಯ ಮತ್ತು ಬದುಕು ಎರಡರ ಮೂಲಕವೂ ಸಾಂಸ್ಕೃತಿಕ …
Read More »ಕಾರ್ಮಿಕರ ಊಟದಲ್ಲಿಯೂ ರಾಜಕೀಯ : ತನಿಖೆಗೆ ಸಿದ್ದರಾಮಯ್ಯ ಒತ್ತಾಯ
ಬೆಂಗಳೂರು : ಬೆಂಗಳೂರು ನಗರದಲ್ಲಿ ಕಾರ್ಮಿಕರಿಗೆ ಸಿದ್ದ ಆಹಾರ ಮತ್ತು ಆಹಾರ ಸಾಮಾಗ್ರಿಗಳನ್ನು ವಿತರಿಸುವ ಕಾರ್ಮಿಕ ಇಲಾಖೆಯ ಯೋಜನೆಯನ್ನು ಬಿಜೆಪಿ ರಾಜಕೀಯವಾಗಿ ದುರುಪಯೋಗಗೊಳಿಸುತ್ತಿದ್ದು ಪಾರದರ್ಶಕತೆ ಇಲ್ಲದೆ ನಡೆಯುತ್ತಿರುವ ಈ ಯೋಜನೆಯ ಬಗೆಗಿನ ದೂರುಗಳ ಬಗ್ಗೆ ತನಿಖೆ ನಡೆಸಬೇಕೆಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಒತ್ತಾಯಿಸಿದ್ದಾರೆ. ಕಟ್ಟಡ ನಿರ್ಮಾಣ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ನಿಧಿಯಿಂದ ನೀಡಲಾಗುತ್ತಿರುವ ಆಹಾರದ ಪೊಟ್ಟಣಗಳನ್ನು ಬಿಜೆಪಿ …
Read More »ಸರಳವಾಗಿ ಅಂಬೇಡ್ಕರ್ ಜಯಂತಿ ಆಚರಿಸಲು ಡಿಸಿಎಂ ಕಾರಜೋಳ ಮನವಿ
ಬೆಂಗಳೂರು. : ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ರಾಷ್ಟದಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಏಪ್ರಿಲ್ 14 ರಂದು ಸಂವಿಧಾನ ಶಿಲ್ಪಿ , ಭಾರತ ರತ್ನ, ಮಹಾ ಮಾನವತಾವಾದಿ ಡಾ. ಬಿ. ಆರ್ . ಅಂಬೇಡ್ಕರ್ ರವರ 129 ನೇ ಜನ್ಮ ದಿನಾಚರಣೆ ಪ್ರಯುಕ್ತ ಅಂದು ಬೆಳಿಗ್ಗೆ 10.00 ಗಂಟೆಗೆ ವಿಧಾನಸೌಧದ ಮುಂಭಾಗ ದಲ್ಲಿರುವ ಅವರ ಪ್ರತಿಮೆಗೆ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ ಮತ್ತು ಇತರೇ …
Read More »ಅನುಪಮಾ ಪರಮೇಶ್ವರನ್ ಎಫ್‍ಬಿ ಹ್ಯಾಕ್, ಫೋಟೋ ಮಾರ್ಫ್- ಗರಂ ಆದ ನಟಸಾರ್ವಭೌಮ ಬೆಡಗಿ
ಬೆಂಗಳೂರು: ಸಿನಿಮಾ ತಾರೆಯ ಫೋಟೋಗಳನ್ನು ಎಡಿಟ್ ಮಾಡಿ ವಿಕೃತಗೊಳಿಸುವುದನ್ನು ಕಿಡಿಗೇಡಿಗಳು ಮಾಡುತ್ತಲೇ ಇರುತ್ತಾರೆ. ಇದಕ್ಕಾಗಿ ಹಲವು ನಟಿಯರು ಮುಜುಗರಕ್ಕೆ ಈಡಾಗಿರುವುದೂ ಉಂಟು. ಇದೀಗ ನಟ ಸಾರ್ವಭೌಮ ಬೆಡಗಿ ಸಹ ಇಂತಹದ್ದೇ ಕಷ್ಟಕ್ಕೆ ಸಿಲುಕಿಕೊಂಡಿದ್ದು, ಬೇರೆ ಯುವತಿಯ ದೇಹಕ್ಕೆ ಅನುಪಮಾ ಪರಮೇಶ್ವರನ್ ಮುಖವನ್ನು ಜೋಡಿಸಲಾಗಿದೆ ಇದನ್ನು ಕಂಡ ಅವರು ಆಶ್ಚರ್ಯಕ್ಕೊಳಗಾಗಿದ್ದಾರೆ. ಇಂಟರ್ನೆಟ್ ಜಾಲಾಡಿದರೆ ನೈಜ ಫೋಟೋಗಳಿಗಿಂತ ಫೇಕ್, ಎಡಿಟೆಡ್, ಮಾರ್ಫ್ ಮಾಡಿದ ಫೋಟೋಗಳು ಕಾಣುವುದೇ ಹೆಚ್ಚು. ಅದರಲ್ಲೂ ನಟ, ನಟಿಯರ ಫೋಟೋಗಳನ್ನು …
Read More »ರಾಯಬಾಗದ ಕ್ಯಾನ್ಸರ್ ಪೀಡಿತ ಮಹಿಳೆ ಸಮಸ್ಯೆಗೆ ತುರ್ತು ಸ್ಪಂದನೆ: ಬಿ.ಎಸ್.ಯಡಿಯೂರಪ್
ಬೆಂಗಳೂರು – ಕೊರೋನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಿಸಿದ್ದರಿಂದ ಕ್ಯಾನ್ಸರ್ ರೋಗಿಯೊಬ್ಬರಿಗೆ ವ್ಯವಸ್ಥೆಯಾಗಿದ್ದ ಆಪರೇಶನ್ ರದ್ದಾಗಿತ್ತು. ಈ ಕುರಿತು ರೋಗಿಯ ಸಂಬಂಧಿಯೊಬ್ಬರಿಂದ ಬಂದ ಮಾಹಿತಿ ಆಧರಿಸಿ ತಕ್ಷಣ ಸ್ಪಂದಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸೋಮವಾರವೇ ಆಪರೇಶನ್ ಗೆ ವ್ಯವಸ್ಥೆ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕು ಶಿರಗೂರ ಗ್ರಾಮದ ಬಾಹುಸಾಬ ಲಕ್ಷ್ಮಣ್ ಕಾಂಬಳೆ ಎನ್ನುವವರು ಮುಖ್ಯಮಂತ್ರಿಗಳಿಗೆ ಸಂದೇಶವೊಂದನ್ನು ಕಳುಹಿಸಿದ್ದರು. “ನಮ್ಮ ಮನೆಯ ಹಿರಿಯ ಮಹಿಳೆ ಕಮಲವ್ವ ಹಿಡಕಲ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾಳೆ. …
Read More »ತಬ್ಲಿಘಿ ಬಗ್ಗೆ ಪೋಸ್ಟ್ ಶೇರ್ ಮಾಡಿದರೆ ತಪ್ಪೇನು – ಸಿಟಿ ರವಿ
ಬೆಂಗಳೂರು: ಕೊರೊನಾ ಸಂಬಂಧ ತಬ್ಲಿಘಿ ಜಮಾತ್ ಬಗ್ಗೆ ಪೋಸ್ಟ್ ಶೇರ್ ಮಾಡಿದರೆ ತಪ್ಪೇನು ಎಂದು ಕನ್ನಡ ಮತ್ತು ಸಂಸ್ಕøತಿ ಖಾತೆಯ ಸಚಿವ ಸಿಟಿ ರವಿ ಪ್ರಶ್ನಿಸಿದ್ದಾರೆ. ಬಿಜೆಪಿ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ ವಿಚಾರಕ್ಕೆ, ಕೊರೊನಾ ಸಂಬಂಧ ತಬ್ಲಿಘಿ ಜಮಾತ್ ಬಗ್ಗೆ ಪೋಸ್ಟ್ ಶೇರ್ ಮಾಡಿದರೆ ತಪ್ಪೇನು? ಇದಕ್ಕಾಗಿ ಬೇಲೂರಿನ ನಮ್ಮ ಕಾರ್ಯಕರ್ತ ತೇಜ್ ಕುಮಾರ್ ಶೆಟ್ಟಿ ಅವರ ಮೇಲೆ ಕೇಸ್ ಹಾಕಿದ್ದಾರೆ. ಈ ವಿಷಯದಲ್ಲಿ ಅತಿರೇಕದ ವರ್ತನೆ ತೋರಿಸಿದ …
Read More »ಬೆಳಗಾವಿಯಲ್ಲಿ ಒಬ್ಬನಿಂದಲೇ ಮೂವರಿಗೆ ಕೊರೊನಾ ಸೋಂಕು ಹರಡಿದ್ದು, ಇಂದು ಒಟ್ಟು ನಾಲ್ಕು ಪ್ರಕರಣಗಳು ಪತ್ತೆಯಾಗಿವೆ
ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಇಂದು ಒಂದೇ ದಿನದಲ್ಲಿ 11 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಅವರಲ್ಲಿ ಬೆಳಗಾವಿಯಲ್ಲಿ ಹೆಚ್ಚು ಪ್ರಕರಣ ಪತ್ತೆಯಾಗಿದೆ. ಬೆಳಗಾವಿಯಲ್ಲಿ ಒಬ್ಬನಿಂದಲೇ ಮೂವರಿಗೆ ಕೊರೊನಾ ಸೋಂಕು ಹರಡಿದ್ದು, ಇಂದು ಒಟ್ಟು ನಾಲ್ಕು ಪ್ರಕರಣಗಳು ಪತ್ತೆಯಾಗಿವೆ. ಬೆಳಗಾವಿ ಜಿಲ್ಲೆಯ ರಾಯಭಾಗದ ಮೂವರಿಗೆ ಮತ್ತು ಹೀರೇಬಾಗೆವಾಡಿಯ ಒಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ವಿಜಯಪುರದಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿದ್ದು, ಜನತೆಯಲ್ಲಿ ಆತಂಕ ಮನೆ ಮಾಡಿದೆ. …
Read More »ರಮ್ಯಾ ಅಭಿಮಾನಿಗಳಿಗೆ ಗುಡ್ ನ್ಯೂಸ್ – ಮತ್ತೆ ಟ್ವಿಟ್ಟರ್‌ಗೆ ಮರಳಿದ ಪದ್ಮಾವತಿ
ಬೆಂಗಳೂರು: ಸ್ಯಾಂಡಲ್‍ವುಡ್ ಬ್ಯೂಟಿಕ್ವೀನ್ ರಮ್ಯ ಮತ್ತೆ ಸಾಮಾಜಿಕ ಜಾಲತಾಣಕ್ಕೆ ವಾಪಸ್ ಬಂದಿದ್ದು, ಅವರ ಟ್ವಿಟ್ಟರ್ ಖಾತೆ ಸಕ್ರಿಯವಾಗಿದೆ. ಒಂದು ಕಾಲದಲ್ಲಿ ಚಂದನವದ ಬುಹುಬೇಡಿಕೆಯ ನಟಿಯಾಗಿ ಮರೆದಿದ್ದ ರಮ್ಯಾ, ಸದ್ಯ ಇತ್ತೀಚಿನ ದಿನಗಳಲ್ಲಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಸಿನಿಮಾದ ಜೊತೆಗೆ ರಾಜಕೀಯದಲ್ಲೂ ಸಖತ್ ಸಕ್ರಿಯವಾಗಿ ಇದ್ದ ರಮ್ಯಾ ಅವರು, ಇದ್ದಕ್ಕಿದ್ದಂತೆ ಕಾಣೆಯಾಗಿದ್ದರು. ಆದರೆ ಈಗ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆ್ಯಕ್ಟಿವ್ ಆಗಿ ಇಟ್ಟುಕೊಳ್ಳುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಈ …
Read More »ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೂ ಸಿಗುತ್ತೆ ರೇಷನ್…
ಬೆಂಗಳೂರು: ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೂ ಪಡಿತರ ನೀಡುವ ಮಹತ್ವದ ಘೋಷಣೆಯನ್ನು ರಾಜ್ಯ ಸರ್ಕಾರ ಹೊರಡಿಸಿದೆ. ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದವರಿಗೂ ಏಪ್ರಿಲ್‍ನಿಂದ ಜೂನ್‍ವರೆಗೆ ಅಕ್ಕಿ ವಿತರಣೆ ಮಾಡಲು ಸರ್ಕಾರ ಆದೇಶ ನೀಡಿದೆ. ಈ ಮೂಲಕ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ಸಿಗಲಿದೆ. ಆದರೆ ಎಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಸರ್ಕಾರ ಹಣ ನಿಗದಿ ಮಾಡಿದೆ. …
Read More »