Breaking News

ಬೆಂಗಳೂರು

ಆರು ಸಚಿವರು ಹೈಕೋರ್ಟ್‌ ಮೊರೆ ಹೋಗಿರುವುದನ್ನು ವಿಧಾನಸಭೆಯಲ್ಲಿ ಪ್ರಸ್ತಾವಿಸಲು ಕಾಂಗ್ರೆಸ್‌ ಮುಂದಾಗಿದೆ.

ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಸಿ.ಡಿ. ಪ್ರಕರಣ ಹಾಗೂ ಆರು ಸಚಿವರು ಹೈಕೋರ್ಟ್‌ ಮೊರೆ ಹೋಗಿರುವುದನ್ನು ವಿಧಾನಸಭೆಯಲ್ಲಿ ಪ್ರಸ್ತಾವಿಸಲು ಕಾಂಗ್ರೆಸ್‌ ಮುಂದಾಗಿದೆ. ಪ್ರಶ್ನೋತ್ತರ ಹಾಗೂ ಶೂನ್ಯ ವೇಳೆ ತರುವಾಯ ಈ ವಿಷಯದಲ್ಲಿ ನಿಲುವಳಿ ಸೂಚನೆ ಮಂಡಿಸಲು ಅವಕಾಶ ಕೋರಿ ವಿಧಾನಸಭೆ ಕಾರ್ಯದರ್ಶಿಯವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ನೀಡಿದ್ದಾರೆ. ರಮೇಶ್‌ ಜಾರಕಿಹೊಳಿ ಅವರ ಲೈಂಗಿಕ ಸಿ.ಡಿ. ಪ್ರಕರಣ ಹಾಗೂ ಇಂಥದ್ದೇ ಭೀತಿಯಿಂದ ಆರು ಮಂದಿ ಸಚಿವರು ಕೋರ್ಟಿಗೆ …

Read More »

ಪತ್ತೆಯಾಗದ ಸೋಂಕಿತರ ಸಂಪರ್ಕಿತರು; ಆರೋಗ್ಯ ಸಿಬ್ಬಂದಿಗೆ ಸವಾಲಾದ ಇಲಾಖೆ ಗುರಿ

ಬೆಂಗಳೂರು: ಪ್ರತಿಯೊಬ್ಬ ಕೋವಿಡ್‌ ಸೋಂಕಿತ ವ್ಯಕ್ತಿಯ ಜತೆ 20 ಮಂದಿ ನೇರ ಮತ್ತು ಪರೋಕ್ಷ ಸಂಪರ್ಕಿತರನ್ನು ಪತ್ತೆ ಮಾಡಲು ಸಾಧ್ಯವಾಗದೇ ಆರೋಗ್ಯ ಇಲಾಖೆ ಇಕ್ಕಟ್ಟಿಗೆ ಸಿಲುಕಿದೆ. ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ 20 ಮಂದಿ ನೇರ ಮತ್ತು ಪರೋಕ್ಷ ಸಂಪರ್ಕಿತರನ್ನು ಪತ್ತೆ ಮಾಡುವ ಗುರಿಯನ್ನು ನಿಗದಿ ಮಾಡಿತ್ತು. ಆದರೆ, ಆರೋಗ್ಯ ಸಿಬ್ಬಂದಿಗೆ ಸೋಂಕಿತರ ಪ್ರಯಾಣದ ಇತಿಹಾಸ ಹಾಗೂ ಸಂಪರ್ಕದ ಜಾಡನ್ನು ಭೇದಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಸದ್ಯ ಪ್ರತಿ ಕೋವಿಡ್ ಪೀಡಿತ …

Read More »

ಕೆಎಸ್‌ಆರ್‌ಟಿಸಿ ಸಿಬ್ಬಂದಿ ತರಬೇತಿ ಅವಧಿ 2 ರಿಂದ ಒಂದು ವರ್ಷಕ್ಕೆ ಇಳಿಕೆ: ಲಕ್ಷ್ಮಣ ಸವದಿ

ಬೆಂಗಳೂರು: ರಾಜ್ಯದಲ್ಲಿ ಕೆಎಸ್‍ಆರ್‍ ಟಿಸಿ ಸಿಬ್ಬಂದಿ ತರಬೇತಿ ಅವಧಿಯನ್ನು ಎರಡರಿಂದ ಒಂದು ವರ್ಷಕ್ಕೆ ಕಡಿಮೆ ಮಾಡಬೇಕು ಎಂಬ ಸಾರಿಗೆ ಸಿಬ್ಬಂದಿಯ ಬೇಡಿಕೆಗೆ ಸರ್ಕಾರ ಸ್ಪಂದಿಸಿದ್ದು, ತರಬೇತಿ ಅವಧಿಯನ್ನು ಎರಡು ವರ್ಷದಿಂದ ಒಂದು ವರ್ಷಕ್ಕೆ ಇಳಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್‍ ಸವದಿ ಅವರು ಗುರುವಾರ ಹೇಳಿದ್ದಾರೆ. ಇದು ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, …

Read More »

ಖಜಾನೆಯಿಂದ ಹೊರಗುಳಿದ ₹ 17,000 ಕೋಟಿ: ಶ್ವೇತಪತ್ರ ಪ್ರಕಟಿಸಲು ಪಾಟೀಲ್‌ ಆಗ್ರಹ

ಬೆಂಗಳೂರು: ಅಧಿಕಾರಿಗಳ ವೈಯಕ್ತಿಕ ಠೇವಣಿ (ಪಿ.ಡಿ) ಖಾತೆಗಳು ಹಾಗೂ ವಿವಿಧ ಬ್ಯಾಂಕ್‌ಗಳಲ್ಲಿ ಇರಿಸಿರುವ ಪ್ರತ್ಯೇಕ ಠೇವಣಿಗಳು ಸೇರಿದಂತೆ ₹17,000 ಕೋಟಿ ಮೊತ್ತ ರಾಜ್ಯ ಸರ್ಕಾರದ ಖಜಾನೆಯಿಂದ ಹೊರಗಿದೆ. ಈ ಕುರಿತು ತಕ್ಷಣವೇ ಸರ್ಕಾರ ಶ್ವೇತಪತ್ರ ಪ್ರಕಟಿಸಬೇಕು ಎಂದು ಕಾಂಗ್ರೆಸ್‌ನ ಎಚ್‌.ಕೆ. ಪಾಟೀಲ ಗುರುವಾರ ವಿಧಾನಸಭೆಯಲ್ಲಿ ಆಗ್ರಹಿಸಿದರು. ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ನಾನು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಈ ಕುರಿತು ಕೆಲವು ಮಾಹಿತಿ ಲಭಿಸಿತ್ತು. …

Read More »

ಯಾರೋ ಹೇಳಿದಕ್ಕೆ ನಾನು ಆ ಅಸಯ್ಯದ ಕೆಲಸ ಮಾಡಿಬಿಟ್ಟೆ: ದಿನೇಶ್ ಕಲ್ಲಹಳ್ಳಿ

ಬೆಂಗಳೂರು, ಮಾರ್ಚ್ 18: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಸ್ಫೋಟ ಪ್ರಕರಣ ಸಂಬಂಧ ದೂರುದಾರ ದಿನೇಶ್ ಕಲ್ಲಹಳ್ಳಿ “ದೂರು ವೃತ್ತಾಂತ”ವನ್ನು ಎಸ್‌ಐಟಿಗೆ ನಾಲ್ಕು ಪುಟಗಳ ಹೇಳಿಕೆಯನ್ನು ಸಲ್ಲಿಸಿದ್ದಾರೆ. ಕೆಲ ವರ್ಷಗಳಿಂದ ಪರಿಚಯವಿದ್ದ ಯುವಕ ಸಿಡಿ ಕೊಟ್ಟಿದ್ದು, ದೂರು ಕೊಡುವ ನೆಪದಲ್ಲಿ ಸಿಡಿ ಸ್ಫೋಟಿಸಿದ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.   ಯಾರೋ ಹೇಳಿದಕ್ಕೆ ನಾನು ಆ ಅಸಯ್ಯದ ಕೆಲಸ ಮಾಡಿಬಿಟ್ಟೆ ಮಾ. 2 ರಂದು ದಿನೇಶ್ ಕಲ್ಲಹಳ್ಳಿ ಜನ ಸಂಪನ್ಮೂಲ …

Read More »

ಸಿ.ಡಿ ಪ್ರಕರಣ: ಶ್ರವಣ ತಂದೆಯಿಂದ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ

ಬೆಂಗಳೂರು: ಶಾಸಕ ರಮೇಶ ಜಾರಕಿಹೊಳಿ ಸಿ.ಡಿ ಪ್ರಕರಣದ ಆರೋಪಿ ಎನ್ನಲಾದ ಶ್ರವಣಕುಮಾರ್ ಅವರ ತಂದೆ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ಮತ್ತೊಬ್ಬ ಮಗ ಚೇತನ್‌ ಅವರನ್ನು ಎಸ್‌ಐಟಿ ಪೊಲೀಸರು ಅಕ್ರಮವಾಗಿ ಬಂಧನದಲ್ಲಿ ಇರಿಸಿಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ಪಿ.ಸೂರ್ಯಕುಮಾರ್ ದೂರಿದ್ದಾರೆ. ಗೃಹ ಇಲಾಖೆ ಕಾರ್ಯದರ್ಶಿ, ಎಸ್‌ಐಟಿ, ಕಬ್ಬನ್ ಪಾರ್ಕ್ ಹಾಗೂ ಸದಾಶಿವನಗರ ಪೊಲೀಸ್ ಠಾಣಾಧಿಕಾರಿಗಳನ್ನು ಪ್ರತಿವಾದಿ ಮಾಡಲಾಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ. ‘ಮಾ.13ರಂದು ಮನೆಗೆ ದಾಳಿ ಮಾಡಿದ್ದ ಎಸ್‌ಐಟಿ …

Read More »

ಹಸು ಬಿಡಿ, ಹಸಿವಿನತ್ತ ನೋಡಿ: ರಮೇಶ್‌ಕುಮಾರ್

ಬೆಂಗಳೂರು: ‘ರಾಜ್ಯ ಸರ್ಕಾರ ಜಾನುವಾರು ಹತ್ಯೆ ನಿಷೇಧ ಕಾಯ್ದೆ ತಂದ ಮೇಲೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗೋವನ್ನು ಪೂಜಿಸುವುದು ತಪ್ಪಲ್ಲ. ಆದರೆ, ಹಸುವಿನ ಹೆಸರಿನಲ್ಲಿ ರಾಜಕಾರಣ ಮಾಡುವುದಕ್ಕಿಂತ ಹಸಿವು ಮುಕ್ತ ಮಾಡುವುದಕ್ಕೆ ಪೂರಕವಾದ ರಾಜಕೀಯ ಮಾಡೋಣ’ ಎಂದು ಕಾಂಗ್ರೆಸ್‌ನ ಕೆ.ಆರ್‌.ರಮೇಶ್‌ ಕುಮಾರ್‌ ಸಲಹೆ ನೀಡಿದರು. ವಿಧಾನಸಭೆಯಲ್ಲಿ ಗುರುವಾರ ಬಜೆಟ್‌ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ‘ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣೆ ಕಾಯ್ದೆ ಜಾರಿಗೆ ಬಂದ ಬಳಿಕ ಹೈನುಗಾರಿಕೆ ವೃತ್ತಿಯಲ್ಲಿರುವವರ …

Read More »

ಕಾನ್‍ಸ್ಟೆಬಲ್ ಹುದ್ದೆಗಳ ಭರ್ತಿ ನಂತರ ಪೊಲೀಸರಿಗೆ ಪಾಳಿ ಕರ್ತವ್ಯದ ವ್ಯವಸ್ಥೆ ಜಾರಿ : ಬೊಮ್ಮಾಯಿ

ಬೆಂಗಳೂರು, ಮಾ.18- ಪೊಲೀಸ್ ಕಾನ್‍ಸ್ಟೆಬಲ್ ಹುದ್ದೆಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಿದ ಬಳಿಕ ಪಾಳಿ ಕರ್ತವ್ಯದ ವ್ಯವಸ್ಥೆಯನ್ನು ಜಾರಿಗೆ ತರುವ ಕುರಿತು ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದರು.ವಿಧಾನಪರಿಷತ್‍ನಲ್ಲಿ ಪ್ರಶ್ನೋತ್ತರದ ಅವಯಲ್ಲಿ ಸದಸ್ಯ ಎಸ್.ರವಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ 2 ವರ್ಷಗಳಿಂದ ದೊಡ್ಡ ಪ್ರಮಾಣದಲ್ಲಿ ನೇಮಕಾತಿ ನಡೆದಿದೆ. ಪಿಎಸ್‍ಐನಿಂದ ಕಾನ್‍ಸ್ಟೆಬಲ್‍ವರೆಗೆ 15 ಸಾವಿರ ಹುದ್ದೆ ಭರ್ತಿ ಮಾಡಿಕೊಳ್ಳಲಾಗಿದೆ. ಇನ್ನು 23 ಸಾವಿರ ಹುದ್ದೆಗಳು ಖಾಲಿ …

Read More »

C.D. ಪ್ರಕರಣ – ಮಾಜಿ ಪತ್ರಕರ್ತರು ಹೇಳಿದ್ದೇನು?

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಹೆಸರು ಕೇಳಿ ಬಂದಿರುವುದಕ್ಕೆ ಮಾಜಿ ಪತ್ರಕರ್ತರಾದ ನರೇಶ್ ಗೌಡ ಮತ್ತು ಭವಿತ್ ಎಂಬುವವುರು ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿ ಮಾತನಾಡಿದ್ದಾರೆ. ಭವಿತ್ ಮಾತನಾಡಿ, ಸಿಡಿ ಪ್ರಕರಣದಲ್ಲಿ ನನ್ನ ಹೆಸರು ಕೇಳಿ ಬಂದಿರುವುದು ಆಘಾತ ಉಂಟು ಮಾಡಿದೆ. ನಾನು ಪ್ರಕರಣದ ಸೂತ್ರದಾರನೂ ಅಲ್ಲ, ಭಾಗಿಯೂ ಆಗಿಲ್ಲ ಎಂದು ಹೇಳಿದ್ದಾರೆ. ಎಸ್ ಐಟಿ ಅಧಿಕಾರಿಗಳು ವಿಚಾರಣೆಗೆ …

Read More »

ಸಂಪರ್ಕಿತರನ್ನ ಪತ್ತೆ ಹಚ್ಚಲು ಕ್ರಮ ಕೈಗೊಳ್ಳಿ, ನಿರ್ಲಕ್ಷ್ಯ ಮಾಡಿದ್ರೆ, ನೀವೇ‌ ಹೊಣೆ: ಆಯುಕ್ತ ಮಂಜುನಾಥ್ ಪ್ರಸಾದ್

ಬೆಂಗಳೂರು: ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವ್ರು ಇಂದು ವಲಯವಾರು ಅಧಿಕಾರಿಗಳ‌ ಜೊತೆ ವಿಶೇಷ ಸಭೆ ನಡೆಸಿದ್ದು, ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಹವಾಳಿಯನ್ನ ಹತೋಟಿಗೆ ತರಲು ಬಿಬಿಎಂಪಿ ಮುಂದಾಗಿದೆ. ಸಭೆಯ ಮಾತನಾಡಿದ ಆಯುಕ್ತರು, ‘ ಸೋಂಕು ಪತ್ತೆಯಾದ ಕೂಡಲೇ ಅವ್ರ ಜೊತೆ ಸಂಪರ್ಕದಲ್ಲಿ ಇರೋರನ್ನ ಪತ್ತೆ ಹಚ್ಚಿ. ಸೋಂಕಿತರ ಮೊಬೈಲ್ ನಂಬರ್, ಪಿನ್‌ ನಂಬರ್, ಅಡ್ರೆಸ್ ನಂಬರ್ ತೆಗೆದುಕೊಂಡು ಹುಡುಕಿ. ನೀವು ಸರಿಯಾಗಿ ಅಡ್ರೆಸ್ ತೆಗೆದುಕೊಳ್ಳದಿದ್ರೆ ಕಾಂಟ್ಯಾಕ್ಟ್ ಮಿಸ್ ಆಗುತ್ತೆ. …

Read More »