ಚಿಕ್ಕಮಗಳೂರು: ಒಬ್ಬರಿಗೆ 1,800ರಿಂದ 2,000 ರೂ.ನಂತೆ ಪಡೆದು 21 ಜನರನ್ನು ಕರೆದುಕೊಂಡು ಮಂಗಳೂರಿನಿಂದ ವಿಜಯಪುರಕ್ಕೆ ಹೋಗುತ್ತಿದ್ದ ಅಂಬುಲೆನ್ಸ್ ಚಾಲಕನನ್ನು ಪೊಲೀಸರು ಬಂಧಿಸಿರುವ ಘಟನೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ. ದಾವಣಗೆರೆ ಮೂಲದ ಭೀಮಾ ಅಂಬುಲೆನ್ಸ್ ಸರ್ವಿಸ್ ಎಂಬ ಖಾಸಗಿ ಸಂಸ್ಥೆಯ ಚಾಲಕ ಬಸವರಾಜ್ ಬಂಧಿತ ವ್ಯಕ್ತಿ. ಬಸವರಾಜ್ ದಾವಣಗೆರೆಯಿಂದ ಮಂಗಳೂರಿಗೆ ರೋಗಿಯನ್ನು ಕರೆದುಕೊಂಡು ಬಂದಿದ್ದ. ಅಲ್ಲಿದ್ದ ವಿಜಯಪುರ ಹಾಗೂ ಮುದ್ದೆಬಿಹಾಳ ಮೂಲದ ಸುಮಾರು 21 ಜನರನ್ನ ಅಂಬುಲೆನ್ಸ್‌ನಲ್ಲಿ ಕರೆತಂದಿದ್ದಾನೆ. ಅಂಬುಲೆನ್ಸ್ …
Read More »ಆನ್‌ಲೈನ್‌ನಲ್ಲಿ ದ್ರಾಕ್ಷಿ ಮಾರಾಟಕ್ಕೆ ವ್ಯವಸ್ಥೆ : ಸಚಿವ ಬಿ.ಸಿ.ಪಾಟೀಲ್
ವಿಜಯಪುರ, ಏ. 7: ರೈತ ಸಮುದಾಯಕ್ಕಾಗುವ ತೊಂದರೆ ಇಡೀ ದೇಶಕ್ಕಾಗುವ ತೊಂದರೆಯಿದ್ದಂತೆ.ಹೀಗಾಗಿ ರೈತ ಸಮುದಾಯಕ್ಕೆ ಅನುಕೂಲವಾಗಲೆಂದು ಕೃಷಿ ಉತ್ಪನ್ನಗಳ ಸುಲಲಿತ ಮಾರಾಟಕ್ಕೆ ಅಂತರಾಜ್ಯ ನಿರ್ಬಂಧಗಳನ್ನು ಸಹ ತೆಗೆದುಹಾಕಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ವಿಜಯಪುರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೃಷಿ ಸಚಿವರು ಕೊರೊನಾ ಹಿನ್ನಲೆಯಲ್ಲಿ ರೈತ ಮತ್ತು ಕೃಷಿ ಚಟುವಟಿಕೆಗಳ ಕುರಿತು ಜಿಲ್ಲಾ ಕೃಷಿ, ತೋಟಗಾರಿಕೆ, ಆರೋಗ್ಯ, ಪೊಲೀಸ್ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. …
Read More »ದಯಾಸಾಗರ ಪಾಟೀಲ್ ಪೌಂಡೇಶನ್:ಬಡವರಿಗೆ ದಿನಸಿ ವಸ್ತುಗಳ ವಿತರಣೆ”
ದಯಾಸಾಗರ ಪಾಟೀಲ್ ಪೌಂಡೇಶನ್:ಬಡವರಿಗೆ ದಿನಸಿ ವಸ್ತುಗಳ ವಿತರಣೆ” ಇಂಡಿ: ಪಟ್ಟಣದ ದಯಾಸಾಗರ ಪಾಟೀಲ್ ಪೌಂಡೇಶನ್ ವತಿಯಿಂದ ತಾಲೂಕಿನ ಎಲ್ಲ ಗ್ರಾಮಗಳ ಬಡವರ ಮನೆಗಳಿಗೆ ತೆರಳಿ ಉಚಿತ ದಿನಸಿ ವಸ್ತುಗಳ ಕೀಟನ್ನು ವಿತರಿಸಲಾಯಿತು… ಕೊರೋನಾ ಕೋವಿಡ್-19 ವೈರಸ್ ನಿಂದ ಭಾರತ ಲಾಕ್ ಡೌನ್ ಆದಕಾರಣ ಬಡವರಿಗೆ ಕೆಲಸವಿಲ್ಲದೆ ತಿನ್ನಲು ಆಹಾರಕ್ಕಾಗಿ ಪರದಾಟ ನಡೆಸುವಂತಾಗಿದೆ. ಈ ಹಿನ್ನಲೆಯಲ್ಲಿ ಪಟ್ಟಣದ ಸಮಾಜ ಸೇವಕರಾದ ಹಾಗೂ ಬಿಜೆಪಿ ಮುಖಂಡರಾದ ದಯಾಸಾಗರ ಪಾಟೀಲ’ರವರ ದಯಾಸಾಗರ ಪಾಟೀಲ್ ಪೌಂಡೇಶನ್ …
Read More »ಕೊರೊನಾ ಎಮರ್ಜೆನ್ಸಿಗೆ ಮೂರು ತಿಂಗಳ ಸಂಬಳ ನೀಡಿದ ಯತ್ನಾಳ್
ವಿಜಯಪುರ: ಕೊರೊನಾ ಎಮರ್ಜೆನ್ಸಿ ಹಿನ್ನೆಲೆ ಜನರ ಸಂಕಷ್ಟಕ್ಕೆ ಸಹಯ ಮಾಡಲು ರಾಜ್ಯ ಸರ್ಕಾರದ ಮನವಿ ಮಾಡಿದೆ. ಪ್ರಕೃತಿ ವಿಕೋಪ ನಿಧಿಗೆ ಧನ ಸಹಾಯ ಮಾಡಲು ಸೂಚಿಸಿದೆ. ಇದಕ್ಕೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಂದಿಸಿದ್ದಾರೆ. ಕೊರೊನಾ ಎಮರ್ಜೆನ್ಸಿಗೆ ತಮ್ಮ ತಿಂಗಳ ವೇತನವನ್ನ ಸರ್ಕಾರಕ್ಕೆ ನೀಡಲು ಯತ್ನಾಳ್ ನಿರ್ಧರಿಸಿದ್ದಾರೆ. ತಮ್ಮ ಮೂರು ತಿಂಗಳ ವೇತನವನ್ನ ಪ್ರಕೃತಿ ವಿಕೋಪ ನಿಧಿಗೆ ಪಡೆಯುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಯತ್ನಾಳ್ ಪತ್ರ ಬರೆದಿದ್ದಾರೆ. …
Read More »): ಒಂದೇ ಕುಟುಂಬದ ಮೂವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವರ ಶವಗಳು ಅನಾಥವೆಂದು ಪೊಲೀಸರೇ ಅಂತ್ಯಕ್ರಿಯೆ ನಡೆಸಿದ್ದರು
ವಿಜಯಪುರ(ಫೆ.28): ಒಂದೇ ಕುಟುಂಬದ ಮೂವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವರ ಶವಗಳು ಅನಾಥವೆಂದು ಪೊಲೀಸರೇ ಅಂತ್ಯಕ್ರಿಯೆ ನಡೆಸಿದ್ದರು. ಆದರೆ, ಆತ್ಮಹತ್ಯೆ ಮಾಡಿಕೊಂಡವರ ಸಂಬಂಧಿಗಳು ಈಗ ಬಂದು ಅವರ ಬಟ್ಟೆಗಳ ಮೂಲಕ ಪತ್ತೆ ಮಾಡಿದ್ದಾರೆ. ಇಂತಹ ಹೃದಯವಿದ್ರಾವಕ ಘಟನೆ ನಡೆದಿದ್ದು ವಿಜಯಪುರ ಜಿಲ್ಲೆಯಲ್ಲಿ. ಜಿಲ್ಲೆಯ ಕೊಲ್ಹಾರ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಯಿಂದ ಮೂವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಶವಗಳು ದೊರೆತ ನಂತರ ಪೊಲೀಸರೇ ಅನಾಥ ಶವಗಳೆಂದು …
Read More »ಹೊತ್ತಿ ಉರಿಯಿತು ಬೆಂಕಿಪೊಟ್ಟಣ ಸಾಗಿಸುತ್ತಿದ್ದ ಲಾರಿ
ವಿಜಯಪುರ, ಫೆ.22- ಬೆಂಕಿಪೊಟ್ಟಣ ಸಾಗಿಸುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಕರಕಲಾಗಿರುವ ಘಟನೆ ತಾಲ್ಲೂಕಿನ ಅರಕೇರಿ ತಾಂಡಾ ಬಳಿಯ ರಾಷ್ಟ್ರೀಯ ಹೆದ್ದಾರಿ-13ರಲ್ಲಿ ಬೆಳ್ಳಂ ಬೆಳಗ್ಗೆ ನಡೆದಿದೆ. ತಮಿಳುನಾಡಿನಿಂದ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ಬೆಂಕಿಪೊಟ್ಟಣಗಳನ್ನು ಸಾಗಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಚಾಲಕ ಹಾಗೂ ಕ್ಲೀನರ್ ಎಚ್ಚೆತ್ತುಕೊಂಡು ಲಾರಿಯಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿಪೊಟ್ಟಣದ ಬಾಕ್ಸ್‍ಗಳಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಆಗಸದೆತ್ತರಕ್ಕೆ ಚಿಮ್ಮಿದ ಬೆಂಕಿಯ ಕೆನ್ನಾಲಿಗೆಗೆ ನೋಡು ನೋಡುತ್ತಿದ್ದಂತೆಯೇ ಲಾರಿ ಸಂಪೂರ್ಣವಾಗಿ …
Read More »ಶವ ಸಂಸ್ಕಾರಕ್ಕೆ ಹೊದವರೂ ಮಣ್ಣಾದರು – ” ಹಸುಗೂಸಿಗೆ ಮಾತೃತ್ವ ” ಮೆರದ ಶಿಕ್ಷಕಿ ವಸಂತಮ್ಮಳಿಗೆ ಪ್ರಶಂಸೆಯ ಸುರಿಮಳೆ
ಶವ ಸಂಸ್ಕಾರಕ್ಕೆ ಹೊದವರೂ ಮಣ್ಣಾದರು ಹಸುಗೂಸಿಗೆ ಮಾತೃತ್ವ ” ಮೆರದ ಶಿಕ್ಷಕಿ ವಸಂತಮ್ಮ ತಂದೆಯ ಅಂತ್ಯ ಸಂಸ್ಕಾರಕ್ಕೆ ಹೊರಟವರು ಮಾರ್ಗಮಧ್ಯದಲ್ಲಿ ಸಂಭವಿಸಿದ ಅಪಘಾತದಲ್ಲಿ ದುರಂತ ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ಶವ ಸಂಸ್ಕಾರಕ್ಕೆ ಹೊದವರೂ ಮಣ್ಣಾದರು – ” ಹಸುಗೂಸಿಗೆ ಮಾತೃತ್ವ ” ಮೆರದ ಶಿಕ್ಷಕಿ ವಸಂತಮ್ಮಳಿಗೆ ಪ್ರಶಂಸೆಯ ಸುರಿಮಳೆ ತಂದೆಯ ಅಂತ್ಯ ಸಂಸ್ಕಾರಕ್ಕೆ ಹೊರಟವರು ಮಾರ್ಗಮಧ್ಯದಲ್ಲಿ ಸಂಭವಿಸಿದ ಅಪಘಾತದಲ್ಲಿ ದುರಂತ ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ …
Read More »ರಾಜ್ಯ ಮಟ್ಟದ ಇಂಟರ್ ಡೋಜೋ ಕರಾಟೆ ಸ್ಪರ್ಧೆ: ಪ್ರಥಮ ಸ್ಥಾನ ಪಡೆದು ಚಿನ್ನಕ್ಕೆ ಮುತ್ತಿಟ್ಟ ಕಿಶೋರ”
ರಾಜ್ಯ ಮಟ್ಟದ ಇಂಟರ್ ಡೋಜೋ ಕರಾಟೆ ಸ್ಪರ್ಧೆ: ಪ್ರಥಮ ಸ್ಥಾನ ಪಡೆದು ಚಿನ್ನಕ್ಕೆ ಮುತ್ತಿಟ್ಟ ಕಿಶೋರ” ಇಂಡಿ: ಪಟ್ಟಣದ ಗುಪ್ತಚರ ಇಲಾಖೆಯ ಪೋಲಿಸ್ ಚಂದ್ರಶೇಖರ ಕಂಬಾರ ಅವರ ಸುಪುತ್ರರಾದ ಕಿಶೋರ ಕಂಬಾರ ಡೋಜೋ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ತಮ್ಮ ಮುಡಿಗೇರಿಸಿಕೊಂಡಿದ್ದಾರೆ… ಮಂಗಳೂರಿನಲ್ಲಿ ನಡೆದ 2019 ನೇ ಸಾಲಿನ 30 ನೇ ರಾಜ್ಯ ಮಟ್ಟದ ಇಂಟರ್ ಡೋಜೋ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ತನ್ನದಾಗಿಸಿಕೊಂಡು …
Read More »ಸಾರಾಯಿ ಮುಕ್ತ ಗ್ರಾಮಕ್ಕೆ ಪಣ
ಇಂಡಿ ತಾಲ್ಲೂಕಿನ ಇಂಗಳಗಿ ಗ್ರಾಮದಲ್ಲಿ ಕರುನಾಡ ಯುವ ಪಡೆ ಸಂಘಟನೆಯ ನೇತೃತ್ವದಲ್ಲಿ ಸಾರಾಯಿ ಮುಕ್ತ ಸಮಾಜಕ್ಕಾಗಿ ಜನಜಾಗೃತಿ ಆಂದೋಲನ ಕಾರ್ಯಕ್ರಮ ನಡೆಯಿತು. ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ವತಿಯಿಂದ ಊರಿನ ಪ್ರಮುಖ ಬೀದಿಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ಜನರನ್ನು ಜಾಗೃತಿ ಮೂಡಿಸಿದರು ಕರುನಾಡ ಯುವ ಪಡೆ ಸಂಘಟನೆಯ ಅಧ್ಯಕ್ಷರಾದ ತುಕಾರಾಮ ಪವಾರ ಕುಡಿತದಿಂದ ದುಡ್ಡು ಹಾಳಾಗುತ್ತೆ ಮನೆಯಲ್ಲಿ ಗೌರವವಿರುವುದಿಲ್ಲ, ಸುಖ-ಶಾಂತಿ ನೆಮ್ಮದಿಯಿರುವುದಿಲ್ಲ ಅಲ್ಲದೆ ಕುಡಿತದಿಂದ ಸತ್ತು ಹೋದರೆ ಹೆಂಡತಿ ಮಕ್ಕಳು …
Read More »ವೃದ್ಧೆಯೊಬ್ಬರು ತನ್ನ ಮಗನ ಸಾವಿನಿಂದ ಬೇಸತ್ತು ಕಳೆದ ಹದಿನಾಲ್ಕು ವರ್ಷದಿಂದ ಊಟ ಮಾಡದೇ ಕೇವಲ ಚಹಾ ಕುಡಿದು ಜೀವನ ಸಾಗಿಸುತ್ತಿದ್ದಾರೆ!
ವಿಜಯಪುರ: ತ್ರೇತಾಯುಗದಲ್ಲಿ ತಾಯಿ ಬಯಕೆಯಂತೆ ಶ್ರೀರಾಮ ಹದಿನಾಲ್ಕು ವರ್ಷ ವನವಾಸ ಅನುಭವಿಸಿದ್ದನ್ನು ಕೇಳಿದ್ದೇವೆ. ಆದರೆ, ತಾಳಿಕೋಟೆ ತಾಲೂಕಿನ ಸಾಸನೂರ ಗ್ರಾಮದಲ್ಲಿ ವೃದ್ಧೆಯೊಬ್ಬರು ತನ್ನ ಮಗನ ಸಾವಿನಿಂದ ಬೇಸತ್ತು ಕಳೆದ ಹದಿನಾಲ್ಕು ವರ್ಷದಿಂದ ಊಟ ಮಾಡದೇ ಕೇವಲ ಚಹಾ ಕುಡಿದು ಜೀವನ ಸಾಗಿಸುತ್ತಿದ್ದಾರೆ! ಹೌದು, ಆ ಮಹಾತಾಯಿಯೇ ಶಾಂತಮ್ಮ ಬಿರಾದಾರ(75). ಗ್ರಾಮದಲ್ಲಿ ‘ಚಹಾ ಅಜ್ಜಿ’ ಎಂದೇ ಗುರುತಿಸಿ ಕೊಂಡಿರುವ ಇವರು ದಿನಕ್ಕೆ ಮೂರ್ನಾಲ್ಕು ಬಾರಿ ಚಹಾ ಕುಡಿಯುತ್ತಾರಷ್ಟೆ. ಊಟ ಬಿಟ್ಟದ್ದು ಏಕೆ?: …
Read More »