): ಒಂದೇ ಕುಟುಂಬದ ಮೂವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವರ ಶವಗಳು ಅನಾಥವೆಂದು ಪೊಲೀಸರೇ ಅಂತ್ಯಕ್ರಿಯೆ ನಡೆಸಿದ್ದರು

Spread the love

ವಿಜಯಪುರ(ಫೆ.28): ಒಂದೇ ಕುಟುಂಬದ ಮೂವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವರ ಶವಗಳು ಅನಾಥವೆಂದು ಪೊಲೀಸರೇ ಅಂತ್ಯಕ್ರಿಯೆ ನಡೆಸಿದ್ದರು. ಆದರೆ, ಆತ್ಮಹತ್ಯೆ ಮಾಡಿಕೊಂಡವರ ಸಂಬಂಧಿಗಳು ಈಗ ಬಂದು ಅವರ ಬಟ್ಟೆಗಳ ಮೂಲಕ ಪತ್ತೆ ಮಾಡಿದ್ದಾರೆ.

ಇಂತಹ ಹೃದಯವಿದ್ರಾವಕ ಘಟನೆ ನಡೆದಿದ್ದು ವಿಜಯಪುರ ಜಿಲ್ಲೆಯಲ್ಲಿ. ಜಿಲ್ಲೆಯ ಕೊಲ್ಹಾರ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಯಿಂದ ಮೂವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಶವಗಳು ದೊರೆತ ನಂತರ ಪೊಲೀಸರೇ ಅನಾಥ ಶವಗಳೆಂದು ಅವರ ಅಂತ್ಯಕ್ರಿಯೆ ಮಾಡಿದ್ದರು.

ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಳಲಿ ಗ್ರಾಮದ, ವಿಜಯಪುರ ನಿವಾಸಿಗಳಾದ ರೇಣುಕಾ ಅಶೋಕ ಹವಾಲ್ದಾರ (45), ಐಶ್ವರ್ಯ ಅಶೋಕ ಹವಾಲ್ದಾರ (23) ಹಾಗೂ ಅಖಿಲೇಶ ಅಶೋಕ ಹವಾಲ್ದಾರ (18) ಆತ್ಮಹತ್ಯೆ ಮಾಡಿಕೊಂಡವರು. ಕುಟುಂಬದಲ್ಲಿ ಮನಸ್ತಾಪ ಉಂಟಾಗಿ ತಾಯಿ, ಮಗಳು, ಮಗ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ, ತಮ್ಮ ಸಾವಿಗೆ ನಾವೇ ಕಾರಣರಾಗಿದ್ದೇವೆ ಎಂಬ ಡೆತ್‌ನೋಟ್‌ ಅನ್ನು ಐಶ್ವರ್ಯ ಬರೆದಿರುವುದು ಗುರುವಾರ ಮನೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ನತದೃಷ್ಟರು ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಳಲಿ ಗ್ರಾಮದವರು. ಕಳೆದ 12 ವರ್ಷಗಳಿಂದ ವಿಜಯಪುರದಲ್ಲಿ ವಾಸವಾಗಿದ್ದರು. ರೇಣುಕಾಳ ಅಕ್ಕ ಉಷಾಳ ಮಗಳು ದೀಪಾಳ ಆರೈಕೆಗಾಗಿ ಈ ಮೂವರು ವಿಜಯಪುರದಲ್ಲಿ ನೆಲೆಸಿದ್ದರು. 10 ವರ್ಷಗಳ ಹಿಂದೆ ರೇಣುಕಾಳ ಅಕ್ಕ ಉಷಾ ಕ್ಯಾನ್ಸರ್‌ನಿಂದ ಸಾವನ್ನಪ್ಪಿದಳು. ಕಳೆದ 7 ವರ್ಷಗಳ ಹಿಂದೆ ಉಷಾ ಪತಿ ನಾರಾಯಣ ಕೂಡ ಮೃತಪಟ್ಟಿದ್ದ. ನಾರಾಯಣ ಮತ್ತು ಅಶೋಕ ಹವಾಲ್ದಾರ (ಮೃತ ರೇಣುಕಾಳ ಪತಿ) ಸಹೋದರ ಜೊತೆಗೆ ಉಷಾ ಮತ್ತು ರೇಣುಕಾ ಸಹೋದರಿಯರ ಮದುವೆಯಾಗಿತ್ತು. ಉಷಾ ಹವಾಲ್ದಾರ ಅವರು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದರು.


Spread the love

About Laxminews 24x7

Check Also

17 ಪಿಎಸ್‌ಐಗಳ ವರ್ಗಾವಣೆ

Spread the loveಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 17 ಪೊಲೀಸ್ ಸಬ್ ಇನ್ಸಪೆಕ್ಟರ್‌ಗಳನ್ನು (ಪಿಎಸ್‌ಐ) ನಗರದ ವಿವಿಧ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ