Breaking News

ಕಾಗವಾಡ ತಾಲೂಕಿನ ಐನಾಪುರ್ ಪಟ್ಟಣದ ಪದ್ಮಾವತಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಆದರ್ಶ ಸಂಸ್ಥೆ

Spread the love

ಕಾಗವಾಡ ತಾಲೂಕಿನ ಐನಾಪುರ್ ಪಟ್ಟಣದ ಪದ್ಮಾವತಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಆದರ್ಶ ಸಂಸ್ಥೆ
ಕಾಗವಾಡ ತಾಲೂಕಿನ ಐನಾಪುರ್ ಪಟ್ಟಣದ ಪದ್ಮಾವತಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಒಂದು ಆದರ್ಶ ಸಂಸ್ಥೆಯಾಗಿದ್ದು ಇಲ್ಲಿಗೆ ಓದಿದ ಸುಮಾರು 500 ವಿದ್ಯಾರ್ಥಿಗಳು ಅಭಿಯಂತರಾಗಿ, 5 ಜನ ವೈದ್ಯರಾಗಿ, ಸರ್ಕಾರಿ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 
ಪದ್ಮಾವತಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ 34ನೇ ವಾರ್ಷಿಕ ಸ್ನೇಹ ಸಮ್ಮೇಳನ ನಿಮಿತ್ಯವಾಗಿ ಚಿದಾನಂದ ಸವದಿ ಆಗಮಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಜೈನ್ ಅಸೋಸಿಯೇಷನ್ ಉಪಾಧ್ಯಕ್ಷರು ಮತ್ತು ಉಗಾರದ ಪದ್ಮಾವತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶೀತಲಗೌಡ ಪಾಟೀಲ ಮಾತನಾಡಿ ಕಾಗವಾಡ ತಾಲೂಕಿನ ಅನೇಕ ಕುಟುಂಬಗಳು ತಮ್ಮ ಮಕ್ಕಳನ್ನು ಒಳ್ಳೆಯ ಶಿಕ್ಷಣ ಸಂಸ್ಥೆಯಲ್ಲಿ ಓದಿಸಿ ಮಕ್ಕಳಿಗಾಗಿ ಆಸ್ತಿ ಮಾಡದೆ ಮಕ್ಕಳೇ ಆಸ್ತಿ ಮಾಡಿದ್ದಾರೆ. ಅನೇಕ ಮಕ್ಕಳು ದೇಶ ಅಷ್ಟೇ ಅಲ್ಲ ವಿದೇಶದಲ್ಲಿಯೂ ಕಾಗವಾಡ ತಾಲೂಕಿನ ಚಾಪ ಮೂಡಿಸಿದ್ದಾರೆ ಎಂದರು.
ಪದ್ಮಾವತಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಜಿಲ್ಲಾ ನ್ಯಾಯವಾದಿಗಳಾದ ಸಂಜೆಯ ಕುಚನೂರೆ ಮಾತನಾಡಿ ಶಿಕ್ಷಣ ಸಂಸ್ಥೆಯಲ್ಲಿ ಪೂರ್ವ ಪ್ರಾಥಮಿಕದಿಂದ ಪದವಿ ಪೂರ್ವ ವರೆಗೆ ಕನ್ನಡ ಹಾಗೂ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಸುಮಾರು 1400 ವಿದ್ಯಾರ್ಥಿಗಳು ಓದುತ್ತಿದ್ದು. ಇಲ್ಲಿಗೆ ಓದಿರುವ ವಿದ್ಯಾರ್ಥಿಗಳು ದೇಶ ಅಷ್ಟೇ ಅಲ್ಲದೆ ವಿದೇಶದಲ್ಲಿ ಛಾಪು ಮೂಡಿಸಿದ್ದಾರೆ.
ವಿಶೇಷವೆಂದರೆ ಸುಮಾರು 500 ವಿದ್ಯಾರ್ಥಿಗಳು ಅಬ್ಯಂತರಾಗಿ, ಐದು ಜನ ವೈದ್ಯರಾಗಿ, 40 ಜನ ನ್ಯಾಯವಾದಿಗಳಾಗಿ, ಮತ್ತು ಸರ್ಕಾರಿ ವಿವಿಧ ಕ್ಷೇತ್ರದಲ್ಲಿ ತಮ್ಮ ಛಾಪುವನ್ನು ಮೂಡಿಸಿದ್ದಾರೆ.
ಸುಮಾರು 50 ಜನ ತಜ್ಞ ಶಿಕ್ಷಕರು ಬೋಧನೆ ಮಾಡುತ್ತಾರೆ. ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ, ಕಂಪ್ಯೂಟರ್ ಜ್ಞಾನ, ಅಬ್ಯಾಕಸ, ಕರಾಟೆ, ಯೋಗ ತರಬೇತಿಯು ಇಲ್ಲಿಗೆ ನೀಡಲಾಗುತ್ತಿದೆ ಗ್ರಾಮೀಣ ಭಾಗದಲ್ಲಿ ಈ ವ್ಯವಸ್ಥೆ ನೀಡುತ್ತಿದ್ದರಿಂದ ಅನೇಕ ರೈತಾಪಿ ಕುಟುಂಬದ ಮಕ್ಕಳು ಒಳ್ಳೆ ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ನಮ್ಮ ಜೀವನದಲ್ಲಿ ಇದು ಒಂದು ಸಾಧನೆ ಎಂದು ತಿಳಿದುಕೊಳ್ಳುತ್ತೇವೆ ಎಂದು ನ್ಯಾಯವಾದಿ ಸಂಜಯ ಕುಚನೂರೆ ಹೇಳಿದರು.
ಸಂಸ್ಥೆಯ ಹಿತಚಿಂತಕರಾದ ದಾನ ವೀರ ಮಹಾವೀರ ಪಡನಾಡ, ಶ್ರೀಮತಿ ಕಲ್ಪನಾತಾಯಿ ಪಡನಾಡ. ಉಪಾಧ್ಯಕ್ಷರಾದ ರವಿ ಬನಜವಾಡ, ಕಾರ್ಯದರ್ಶಿ ಪ್ರಮೋದ್ ಲಿಂಬಿಕಾಯಿ, ಗಜಕುಮಾರ್ ಪಾಟೀಲ್, ಶೀತಲ್ ಪಾಟೀಲ್, ಶ್ರೀಕಾಂತ್ ಪಾಟೀಲ್, ಮಿಥಾಯ ಯಮ ವಿ. ಜಿನ್ನಪ್ಪ ನಾಂದನಿ, ಕುಮಾರ್ ಮಲಗಾವೆ. ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ