Breaking News

ರಾಷ್ಟ್ರೀಯ

ಬಿಎಸ್‌ವೈ ಮುಖ್ಯಮಂತ್ರಿಯಾಗಿ ಬಹಳ ದಿನ ಇರುವುದಿಲ್ಲ, ಉತ್ತರ ಕರ್ನಾಟಕದವರೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.

ವಿಜಯಪುರ: ಬಿಎಸ್‌ವೈ ಮುಖ್ಯಮಂತ್ರಿಯಾಗಿ ಬಹಳ ದಿನ ಇರುವುದಿಲ್ಲ, ಉತ್ತರ ಕರ್ನಾಟಕದವರೇ ಮುಂದಿನ ಸಿಎಂ ಆಗೋದು ಎಂದು ವಿಜಯಪುರದಲ್ಲಿ ನಡೆದ ಸಮಾರಂಭವೊಂದರಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ. ಸಮಾರಂಭದಲ್ಲಿ ಮಾತನಾಡಿದ ಯತ್ನಾಳ್ ಸಿಎಂ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಬಿಎಸ್‌ವೈ ಮುಖ್ಯಮಂತ್ರಿಯಾಗಿ ಬಹಳ ದಿನ ಇರುವುದಿಲ್ಲ, ಕೇಂದ್ರ ಸರ್ಕಾರದವರಿಗೂ ಬಿಎಸ್‌ವೈ ಸಾಕಾಗಿ ಹೋಗಿದ್ದಾರೆ. ಉತ್ತರ ಕರ್ನಾಟಕದವರೇ ಮುಂದಿನ ಸಿಎಂ ಆಗೋದು. ಉತ್ತರ ಕರ್ನಾಟಕದವರು 100 ಶಾಸಕರನ್ನ ಗೆಲ್ಲಿಸಿ ಕಳಿಸುತ್ತಾರೆ. …

Read More »

ಅದಕ್ಕಾಗಿಯೇ ಅವರನ್ನು ಕ್ಷೇತ್ರದ ಜನ ಅಂಜಲಿ “ತಾಯಿ’ ಅಂತಾರೆ…!!!

ಬೆಳಗಾವಿ- ಖಾನಾಪೂರ ಶಾಸಕಿ ಡಾ ಅಂಜಲಿ ಹೇಮಂತ್ ನಿಂಬಾಳ್ಕರ್ ಅವರು ಜಗನ್ಮಾತೆ ದುರ್ಗಾ ದೇವಿಗೆ ಹರಕೆ ಹೊತ್ತಿದ್ದಾರೆ. ಕ್ಷೇತ್ರದ ಜನತೆಯ ಸಕಲ ಶ್ರೇಯಸ್ಸಿಗೆ ವಿಶೇಷವಾದ,ವಿಶಿಷ್ಟವಾದ ,ಕಠಿಣ ಆಚರಣೆಯ ಹರಕೆ ಹೊತ್ತಿರುವ ಅವರು ನವರಾತ್ರಿಯ 9 ದಿನಗಳ ಕಾಲ ಬರಿಗಾಲಿನಲ್ಲಿದ್ದು 9 ದಿನಗಳ ಕಾಲ ಊಟ ಮಾಡದೇ ಕೇವಲ ಹಣ್ಣು ಹಂಪಲಗಳನ್ನ ಮಾತ್ರ ಸೇವಿಸುವ ಹರಕೆ ಹೊತ್ತ ಸೇವಾ ಶಾರದೆಯ ಜನಪರ ಕಾಳಜಿ ಪ್ರಶಂಸಾರ್ಹ. ಈ ಹಿಂದೆಯೂ ಶಾಸಕಿ ಅಂಜಲಿ ನಿಂಬಾಳ್ಕರ್ …

Read More »

ಮೈಸೂರಿನ ದೇವರಾಜ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಮೈಸೂರು: ತಮಿಳುನಾಡಿನ ಚಿನ್ನಾಭರಣ ವ್ಯಾಪಾರಿಗೆ ವಂಚನೆ ಪ್ರಕರಣ ಸಂಬಂಧಿಸಿ ಇಬ್ಬರು ವಂಚಕರನ್ನು ಮೈಸೂರಿನ ದೇವರಾಜ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಸೋಮಶೇಖರ್(61) ಮತ್ತು ರಘು(67) ಬಂಧಿತ ಆರೋಪಿಗಳು. ಆರೋಪಿಗಳು ಚಿನ್ನಾಭರಣ ತಯಾರಕ ಕುರುಪಸ್ವಾಮಿಗೆ ವಂಚಿಸಿದ್ದರು. ಚಿನ್ನ ಖರೀದಿಸುವುದಾಗಿ ಹೇಳಿ ಕುರುಪಸ್ವಾಮಿಗೆ ಮೈಸೂರಿಗೆ ಕರೆಸಿಕೊಂಡು ಅಕ್ಟೋಬರ್ 6ರಂದು 10 ಲಕ್ಷ ಮೌಲ್ಯದ 196 ಗ್ರಾಂ ಚಿನ್ನ ಪಡೆದು ಪರಾರಿಯಾಗಿದ್ರು. ಸದ್ಯ ಕುರುಪಸ್ವಾಮಿಗೆ ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ …

Read More »

ಇಬ್ಬರು ಬಾಲಕರು ಸೇರಿ ಮೂವರು ದ್ವಿಚಕ್ರ ವಾಹನ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

ಮೈಸೂರು: ಇಬ್ಬರು ಬಾಲಕರು ಸೇರಿ ಮೂವರು ದ್ವಿಚಕ್ರ ವಾಹನ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 12 ಲಕ್ಷ ಮೌಲ್ಯದ 17 ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ಸ್ಕೂಟರ್ ಮೆಕ್ಯಾನಿಕ್ ಮಹಮದ್ ಶುಹೇಬ್ (19) ಬಂಧಿತ ಆರೋಪಿ. ಹಾಗೂ ಕಳ್ಳತನಕ್ಕೆ ಸಾಥ್ ನೀಡಿದ್ದ 17 ವರ್ಷದ ಬಾಲಕ ಹಾಗೂ 15 ವರ್ಷದ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಕಳುವು ಮಾಡಿದ ದ್ವಿಚಕ್ರ ವಾಹನಗಳಲ್ಲಿ ವೀಲಿಂಗ್ ಮಾಡುತ್ತಿದ್ದರು. ಅದರಲ್ಲೂ ಸಿಲ್ವರ್ ಕಲರ್ ದ್ವಿಚಕ್ರ …

Read More »

20 ವರ್ಷದ ಮಹಿಳೆ ಮೇಲೆ ಪೊಲೀಸ್ ರಿಂದ ಗ್ಯಾಂಗ್ ರೇಪ್

ಭೋಪಾಲ್ : ಐವರು ಪೊಲೀಸರು ಲಾಕಪ್‍ನಲ್ಲಿಯೇ 20 ವರ್ಷದ ಮಹಿಳೆ ಮೇಲೆ ಹತ್ತು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಮಧ್ಯ ಪ್ರದೇಶದ ರೇವಾ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಸ್ಟೇಷನ್ ಇನ್‍ಚಾರ್ಜ್ ಸೇರಿ ಐವರು ಪೊಲೀಸರು 10 ದಿನಗಳ ಕಾಲ ಲಾಕಪ್‍ನಲ್ಲಿಯೇ ನನ್ನ ಮೇಲೆ ನಿರಂತರವಾಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ. ಮಹಿಳೆ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು ಆಕೆಯನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ …

Read More »

ಕಣ್ಣೇದುರು ರೈತರ ಸತ್ತರೂ ಭಾಷಣ ಮುಂದುವರಿಸಿದ ಬಿಜೆಪಿ ನಾಯಕರು

ಮಧ್ಯಪ್ರದೇಶ: ಮಧ್ಯಪ್ರದೇಶದಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಬಿಜೆಪಿಯ ರಾಜ್ಯಸಭಾ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಭಾಷಣ ಮಾಡಬೇಕಿದ್ದ ಸಂದರ್ಭದಲ್ಲಿ ರೈತರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ಭಾನುವಾರ ಸಾರ್ವಜನಿಕ ಸಭೆ ನಡೆಯುವ ಸಂದರ್ಭದಲ್ಲಿ 80 ವರ್ಷದ ರೈತ ಮೃತಪಟ್ಟಿದ್ದಾರೆ. ನವೆಂಬರ್ 3ರಂದು ನಡೆಯುವ ಉಪ ಚುನಾವಣೆ ಸಂಬಂಧ ಈ ಪ್ರಚಾರ ಸಭೆ ಆಯೋಜಿಸಲಾಗಿತ್ತು.ಬಿಜೆಪಿಯ ಪಂಧಾನ ಕ್ಷೇತ್ರದ ಶಾಸಕ ರಾಮ್ ಡಾಂಗೊರೆ ಭಾಷಣ ಮಾಡುವ ಸಂದರ್ಭದಲ್ಲಿ ಕುರ್ಚಿಯ ಮೇಲೆ ಕುಳಿತಿದ್ದ ರೈತ ಜೀವನ್ …

Read More »

ಮನೆ ನಿರ್ಮಾಣ, ಪರಿಹಾರ ಬಿಡುಗಡೆಗೆ ಕಟ್ಟುನಿಟ್ಟಿನ ಸೂಚನೆ

ಬೆಳಗಾವಿ : ಕಳೆದ ವರ್ಷ ಆಗಸ್ಟ್ ನಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡವರ ಸಮೀಕ್ಷೆ ಪೂರ್ಣಗೊಂಡು ವಸತಿ ನಿಗಮದ ತಂತ್ರಾಂಶದಲ್ಲಿ ದಾಖಲಿಸಲಾಗಿರುವ ಕುಟುಂಬಗಳಿಗೆ ತಕ್ಷಣವೇ ಪರಿಹಾರ ಒದಗಿಸಬೇಕು. ಈಗಾಗಲೇ ಪರಿಹಾರ ಪಡೆದವರು ಮನೆ ನಿರ್ಮಿಸಲು ಕ್ರಮಕೈಗೊಳ್ಳಬೇಕು ಎಂದು ಕಂದಾಯ ಇಲಾಖೆಯ ಸಚಿವ ಆರ್. ಅಶೋಕ ಅವರು ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಅತಿವೃಷ್ಟಿ ಹಾಗೂ ಪ್ರವಾಹ ನಿರ್ವಹಣೆಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಕುರಿತು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸೋಮವಾರ(ಅ.19) ನಡೆದ ಪ್ರಗತಿ …

Read More »

ಗೋಕಾಕ್ ತಾಲ್ಲೂಕಿನ ಸಂಗನಕೇರಿಯಲ್ಲಿ ಭೀಕರ ಅಪಘಾತ : 5 ಜನರಿಗೆ ಗಂಭೀರ ಗಾಯ

ಗೋಕಾಕ : ತಾಲ್ಲೂಕಿನ ಸಂಗನಕೇರಿ ಸಮೀಪದಲ್ಲಿ ಟ್ರ್ಯಾಕ್ಟರ್ , ಮಿನಿ ಲೆಗ್ಜರಿ ವಾಹನ ನಡುವೆ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, 5ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರವಷ್ಟೇ ಸಂಗಕೇರಿಯಲ್ಲಿ ಕಬ್ಬು ತುಂಬಿದ ಟ್ರ್ಯಾಕ್ಟರ್ , ಬೈಕ್ ನಡುವೆ ಅಪಘಾತ ಸಂಭಿಸಿ, ಮಗು, ಪತಿ, ಪತ್ನಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದರು. ನೋವು ಮಾಸುವ ಮುನ್ನವೇ ಮತ್ತೊಂದು ಅಪಘಾತ ಸಂಭಿಸಿದ್ದು, ಜನರನ್ನು ಬೆಚ್ಚಿ ಬಿಳಿಸಿದೆ.     …

Read More »

ಚಾಲಾಕಿ ಹೆಣ್ಣಿನ ಚಳಿ ಬಿಡಿಸಿದ ಹಾನಗಲ್ ಪೋಲಿಸರು..

ಹಾನಗಲ್ 13/10/2020 ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ATM ನಲ್ಲಿ ATM ಕಾರ್ಡುಗಳನ್ನು ಅದಲು ಬದಲು ಮಾಡಿ ಜನರಿಗೆ ವಂಚಿಸುವ ಬುರ್ಕಾದಾರಿ ಮಹಿಳೆ ಶಿರಾಳಕೊಪ್ಪದ ಕೆಸರಬಾನು, ಇಸ್ರಾಅಹಮದ್ ಇವರ ಹೆಂಡತಿಯಾದ ಕೆಸರಬಾನು ಬಂಕಾಪುರ, ಶಿರಾಳಕೊಪ್ಪದಲ್ಲಿ ಇಂತಹ ATM ನಲ್ಲಿ ಕಾರ್ಡುಗಳನ್ನು ಅದಲು ಬದಲು ಮಾಡಿ ಜನರಿಗೆ ವಂಚಿಸಿದ. ಈ ಕೆಸರಬಾನು ಸಾಮಾನ್ಯ ಮಹಿಳೆಯಲ್ಲ, ದಿನಾಂಕ 29/06/2020 ರಂದು ಈ ಆರೋಪಿಯ ಮೇಲೆ ಕಲಂ 420 IPCC ಕಾಯ್ದೆ ಪ್ರಕಾರ ಹಾವೇರಿ …

Read More »

ಗಣೇಶ ಹುಕ್ಕೇರಿ,ಅಣ್ಣಾಸಾಬ ಜೊಲ್ಲೆ ನಡುವೆ ಬಿಗ್ ಫೈಟ್….!!!

ಬೆಳಗಾವಿ-ಬೆಳಗಾವಿ ಜಿಲ್ಲೆಯ ಪ್ರತಿಷ್ಠಿತ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಚುನಾವಣೆ ನಡೆಯಲಿದೆ,ನಿರ್ದೇಶಕರ ಸ್ಥಾನಕ್ಕೆ ಅಕ್ಟೋಬರ್ 22 ರಿಂದ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ‌ ಬೆಳಗಾವಿ ಜಿಲ್ಲೆಯ ಹತ್ತು ತಾಲ್ಲೂಕುಗಳಿಂದ ತಲಾ ಒಬ್ಬರು ನಿರ್ದೇಶಕರು ಚುನಾಯಿತರಾಗುತ್ತಾರೆ,ಚಿಕ್ಕೋಡಿ ತಾಲ್ಲೂಕಿನಿಂದ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಲು,ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ,ಮತ್ತು ಶಾಸಕ ಗಣೇಶ್ ಹುಕ್ಕೇರಿ ನಡುವೆ ಬಿಗ್ ಫೈಟ್ ನಡೆಯಲಿದೆ. ಮುಂದುವರಿಸಲು ಸ್ಕ್ರೋಲ್ ಮಾಡಿ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಡಿಸಿಸಿ ಬ್ಯಾಂಕಿನ ಹಾಲಿ ನಿರ್ದೇಶಕರಾಗಿದ್ದಾರೆ, …

Read More »