ಚೆನ್ನೈ:ಎಣ್ಣೆ ಪಾರ್ಟಿಗೆ ಸೈಡ್ಸ್ ತರಲಿಲ್ಲ ಎಂದು ಸಿಟ್ಟಿಗೆದ್ದ ವ್ಯಕ್ತಿಯೋರ್ವ ತನ್ನ ಸ್ನೇಹಿತನನ್ನೇ ಬರ್ಬರವಾಗಿ ಕೊಲೆ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಕೊಲೆ ಮಾಡಿದ ಆರೋಪಿಯನ್ನು ವಾಸು(38) ಎಂದು ಗುರುತಿಸಲಾಗಿದ್ದು, ವಿನಯಗಂ(43) ಕೊಲೆಯಾದ ದುರ್ದೈವಿಯಾಗಿದ್ದಾನೆ. ತಮಿಳುನಾಡಿನ ಚೆಂಗಲ್ಪಟ್ಟುವಿನ ಗುಡುವಾಂಚೇರಿ ಪಟ್ಟಣದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ. ವಾಸು ಹಾಗೂ ವಿನಯಗಂ ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ದು, ಹೂವು ಮಾರುವುದು, ಕ್ಯಾಬ್ ಓಡಿಸುವುದು ಹಾಗೂ ರಿಯಲ್ ಎಸ್ಟೇಟ್ ಬ್ರೋಕರ್ಸ್ ಆಗಿದ್ದರು. ಲಾಕ್‍ಡೌನ್ ಸಡಿಲಿಕೆ …
Read More »ಇ-ಪಾಸ್ ಪಡೆದ ಅಂತರ್ ರಾಜ್ಯ ಪ್ರಯಾಣಿಕರಿಗೆ ಬಸ್ ವ್ಯವಸ್ಥೆ – ಕೆಎಸ್ಆರ್ಟಿಸಿ ಸಂಸ್ಥೆ
ಬೆಂಗಳೂರು: ದೇಶದಲ್ಲಿ ಕೊರೋನಾ ವೈರಸ್‌ನ ಅಟ್ಟಹಾಸ ಮುಂದುವರೆದಿದೆ. ಹೀಗಾಗಿ ಈ ಸೋಂಕು ನಿಯಂತ್ರಣಕ್ಕೆ ಜಾರಿಗೊಳಿಸಿದ್ದ ಲಾಕ್‌ಡೌನ್ ವಿಸ್ತರಣೆಯಾಗಿದೆ. ಎರಡು ಹಂತದ ಲಾಕ್‌ಡೌನ್‌ಗಳನ್ನು ಬಹಳ ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದ ಕೇಂದ್ರ ಸರ್ಕಾರ ಮೂರನೇ ಹಂತದ ಲಾಕ್‌ಡೌನ್ ಸಡಿಲಗೊಳಿಸಿ ಹಲವು ಕ್ಷೇತ್ರಗಳಿಗೆ ವಿನಾಯಿತಿ ನೀಡಿದೆ. ಇದರಲ್ಲಿ ಅಂತರ್ ರಾಜ್ಯ ಪ್ರಯಾಣವೂ ಒಂದು. ಹೌದು, ಅಂತರ್ ರಾಜ್ಯ ಪ್ರಯಾಣಕ್ಕಾಗಿ ಜನ ಸರ್ಕಾರದಿಂದ ಇ- ಪಾಸ್ ಪಡೆಯಬೇಕಾದ ಅಗತ್ಯ ಇದೆ. ಯಾವುದೇ ಮುನ್ಸೂಚನೆ ಇಲ್ಲದೇ ದೇಶವ್ಯಾಪಿ …
Read More »ಪಡಿತರ ಅಕ್ಕಿ ದಂಧೆಕೋರರ ಬೆನ್ನಿಗೆ ಅಧಿಕಾರಿಗಳು ನಿಂತ್ರಾ ಅನ್ನೋ ಪ್ರಶ್ನೆ…..?
ದಾವಣಗೆರೆ: ಪಡಿತರ ಅಕ್ಕಿ ದಂಧೆಕೋರರ ಬೆನ್ನಿಗೆ ಅಧಿಕಾರಿಗಳು ನಿಂತ್ರಾ ಅನ್ನೋ ಪ್ರಶ್ನೆಯೊಂದು ಮೂಡಿದೆ. ಪಡಿತರ ಅಕ್ಕಿ ಅಕ್ರಮ ದಾಸ್ತಾನು ಮೇಲೆ ದಾಳಿ ಮಾಡಿ ನಕಲಿ ಎಫ್‍ಐಆರ್ ಹಾಕಿದ್ದಾರೆಂಬ ಆರೋಪವೊಂದು ಅಧಿಕಾರಿಗಳ ವಿರುದ್ಧ ಕೇಳಿಬರುತ್ತಿದೆ. ದಾವಣಗೆರೆ ನಗರದ ಕೆ.ಆರ್ ರಸ್ತೆ ಬಳಿಯ ಗೋದಾಮಿನಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಲಾಗಿದೆ. ಈ ವಿಚಾರ ತಿಳಿದ ಆಹಾರ ನಿರೀಕ್ಷಕ ರವಿ ಶಿವಮೂರ್ತಿ ಹಿಪ್ಪರಗಿ ಹಾಗೂ ತಹಶೀಲ್ದಾರ್ ಗಿರೀಶ್ ನೇತೃತ್ವದಲ್ಲಿ ದಾಳಿ ನಡೆದು ಸುಮಾರು …
Read More »ಕಲಬುರಗಿಯಲ್ಲಿ ಕೊರೊನಾ ಸೋಂಕಿನಿಂದ 13 ಮಂದಿ ಗುಣಮುಖ……..
ಕಲಬುರಗಿ: ಕೊರೊನಾ ಸೋಂಕಿನಿಂದ ಕಲಬುರಗಿ ನಗರದ 12 ಮತ್ತು ಆಳಂದ ಪಟ್ಟಣದ 65 ವರ್ಷದ ವೃದ್ಧೆ ಸೇರಿದಂತೆ ಒಟ್ಟು 13 ಜನ ಕೋವಿಡ್-19 ಪೀಡಿತರು ಸೋಂಕಿನಿಂದ ಗುಣಮುಖರಾಗಿ ರವಿವಾರ ಅಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಡಿ.ಸಿ ಶರತ್ ಬಿ. ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಸೋಂಕು ಪತ್ತೆಯಾದ ನಂತರ ರವಿವಾರ ಪ್ರಥಮ ಬಾರಿಗೆ ಒಂದೇ ದಿನ ಇಷ್ಟೊಂದು ಗರಿಷ್ಠ ಪ್ರಮಾಣದಲ್ಲಿ ರೋಗಿಗಳು ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯ ಆಳಂದ ಪಟ್ಟಣದ 65 ವರ್ಷದ …
Read More »ರಾಜ್ಯದ 34,000 ಅರ್ಚಕರಿಗೆ ದಿನಸಿ ಕಿಟ್: ಕೋಟ ಶ್ರೀನಿವಾಸ ಪೂಜಾರಿ………
ಉಡುಪಿ: ಕೊರೊನಾ ಲಾಕ್‍ಡೌನ್ ಬಿಸಿ ಎಲ್ಲಾ ಕ್ಷೇತ್ರಕ್ಕೆ ತಟ್ಟಿದೆ. ಅದರಲ್ಲೂ ತಟ್ಟೆ ಕಾಣಿಕೆ ನಂಬಿರುವ ಹಳ್ಳಿಯ ದೇವಸ್ಥಾನದ ಅರ್ಚಕರ ಸ್ಥಿತಿ ಕೇಳೋದೇ ಬೇಡ. ರಾಜ್ಯದ ಮುಜರಾಯಿ ಇಲಾಖೆ ಇದೀಗ ರಾಜ್ಯದ ದೇವಸ್ಥಾನಗಳ ಅರ್ಚಕರು ಸಂಕಷ್ಟಕ್ಕೆ ಪರಿಹಾರ ಕೊಡಲು ಮುಂದಾಗಿದೆ. ರಾಜ್ಯದ 34,000 ಅರ್ಚಕರಿಗೆ ದಿನಸಿ ಕಿಟ್ ವಿತರಿಸಲು ನಿರ್ಧಾರಿಸಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ಅರ್ಚಕರಿಗೆ ದಿನಸಿ ಕಿಟ್ ವಿತರಣಾ ಜವಾಬ್ದಾರಿ …
Read More »ಲಾಕ್‍ಡೌನ್‍ನಿಂದ ಮದ್ವೆ ಮುಂದೂಡಿಕೆ – ಮನನೊಂದು ಪ್ರೇಮಿಗಳು ಆತ್ಮಹತ್ಯೆ
ಹೈದರಾಬಾದ್: ಕೊರೊನಾ ಲಾಕ್‍ಡೌನ್‍ನಿಂದ ಮದುವೆಯನ್ನು ಮುಂದೂಡಿದ್ದರಿಂದ ಪ್ರೇಮಿಗಳಿಬ್ಬರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಆದಿಲಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಪೆಂಡೂರ್ ಗಣೇಶ್ (22) ಮತ್ತು ಸೋಯಂ ಸೀತಾಬಾಯಿ (20) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಶುಕ್ರವಾರ ನಾರ್ನೂರ್ ಮಂಡಲದ ಕಣ್ಣಾಪುರ ಗ್ರಾಮದ ಕೃಷಿ ತೋಟದಲ್ಲಿ ಕೀಟನಾಶಕವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಏನಿದು ಪ್ರಕರಣ? ರೈತ ಗಣೇಶ್ ಮತ್ತು ಅದೇ ಗ್ರಾಮದ ಸೀತಾಬಾಯಿ ಇಬ್ಬರು ಎರಡು ವರ್ಷಗಳಿಂದ ಪರಸ್ಪರ …
Read More »ಎಣ್ಣೆ ಮತ್ತಿನಲ್ಲಿ ತನ್ನ ಮನೆಗೇ ಬೆಂಕಿ ಇಟ್ಟ ಕುಡುಕ – ಸೂರಿಲ್ಲದೇ ಪತ್ನಿ ಕಣ್ಣೀರು…………
ಬಳ್ಳಾರಿ: ಕಂಠಪೂರ್ತಿ ಮದ್ಯ ಕುಡಿದು ನಶೆಯಲ್ಲಿ ತೇಲಾಡುತ್ತಿದ್ದ ಕುಡುಕನೋರ್ವ ತನ್ನ ಮನೆಗೇ ಬೆಂಕಿ ಹಚ್ಚಿದ ಘಟನೆ ಬಳ್ಳಾರಿಯ ಕೊಳ್ಳೆಗಲ್ಲು ಗ್ರಾಮದ ಶ್ರೀರಾಮುಲು ನಗರದಲ್ಲಿ ನಡೆದಿದೆ. ಕೊಳಗಲ್ಲು ಗ್ರಾಮದ ನಿವಾಸಿ ಚಿದಾನಂದ ಕುಡಿದ ಮತ್ತಿನಲ್ಲಿ ತನ್ನ ಮನೆಗೆ ಬೆಂಕಿ ಹಚ್ಚಿದ್ದಾನೆ. ಅದೃಷ್ಟವಶಾತ್ ಕುಡುಕನ ಅವಾಂತರದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಾರ್ ಶಾಪ್‍ನಲ್ಲಿ ಕೆಲಸ ಮಾಡುತ್ತಿದ್ದ ಈ ಚಿದಾನಂದ ಶುಕ್ರವಾರ ತಡ ರಾತ್ರಿ ವಿಪರೀತ ಮದ್ಯಸೇವನೆ ಮಾಡಿದ್ದನು. ಮದ್ಯದ ಅಮಲಿನಲ್ಲಿದ್ದ ಚಿದಾನಂದ ತನ್ನ …
Read More »ಹೊರ ರಾಜ್ಯದಿಂದ ಬೆಂಗ್ಳೂರಿಗೆ ಬರುವವರಿಗೆ 14 ದಿನ ಹೋಂ ಕ್ವಾರಂಟೈನ್ ಫಿಕ್ಸ್
ಬೆಂಗಳೂರು: ಹೊರರಾಜ್ಯಗಳಿಂದ ಬೆಂಗಳೂರಿಗೆ ಸಾಕಷ್ಟು ಮಂದಿ ಬರುತ್ತಿರುವ ಹಿನ್ನೆಲೆ ಅವರಿಂದ ನಗರದಲ್ಲಿ ಕೊರೊನಾ ಸೋಂಕು ಹರಡಬಾರದು ಎಂದು ಬೆಂಗಳೂರು ಜಿಲ್ಲಾಡಳಿತ ಹೊಸ ಪ್ಲಾನ್ ಮಾಡಿದೆ. ಹೊರ ರಾಜ್ಯದಿಂದ ಸಿಲಿಕಾನ್ ಸಿಟಿಗೆ ಬರುವವರಿಗೆ ಕಡ್ಡಾಯವಾಗಿ ಕೈಗೆ ಸ್ಟಾಂಪಿಂಗ್ ಮಾಡಲಾಗುತ್ತದೆ. ಅವರು 14 ದಿನ ಕಡ್ಡಾಯವಾಗಿ ಹೋಂ ಕ್ವಾರಂಟೈನ್ ಇರಲೇಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ. ಹೊರ ರಾಜ್ಯದವರಿಂದ ನಗರದಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಗಬಾರದು ಎಂಬ ಕಾರಣಕ್ಕೆ ಅತ್ತಿಬೆಲೆ ಚೆಕ್ ಪೋಸ್ಟ್ ನಲ್ಲಿ ಅಧಿಕಾರಿಗಳು …
Read More »ರಸ್ತೆ ಬದಿಯ ವೈನ್ ಸ್ಟೋರ್ ನಿಂದ ನಟಿ ರಾಕುಲ್ ಪ್ರೀತ್ ಸಿಂಗ್ ಮದ್ಯ ಖರೀದಿ
ಮುಂಬೈ: ಲಾಕ್‍ಡೌನ್‍ನಲ್ಲಿ ಎಣ್ಣೆ ಸಿಗದೆ ಮದ್ಯಪ್ರಿಯರು ಪರದಾಡಿದ್ದರು. ಆದರೆ ಈಗ ಮದ್ಯದಂಗಡಿ ತೆರೆದಿರುವ ಹಿನ್ನೆಲೆ ಕ್ಯೂನಲ್ಲಿ ನಿಂತು ಮದ್ಯಪ್ರಿಯರು ಎಣ್ಣೆ ಖರೀದಿಸುವಲ್ಲಿ ಬ್ಯೂಸಿ ಆಗಿದ್ದಾರೆ. ಮದ್ಯ ಖರೀದಿಗೆ ಪುರುಷರು, ಮಹಿಳೆಯರು, ಯುವಕ-ಯುವತಿಯರು ಕ್ಯೂನಲ್ಲಿನಿಂತ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಮಧ್ಯೆ ರಸ್ತೆ ಬದಿಯ ವೈನ್ ಸ್ಟೋರ್ ನಿಂದ ನಟಿ ರಾಕುಲ್ ಪ್ರೀತ್ ಸಿಂಗ್ ಮದ್ಯ ಖರೀದಿಸಿ ಹೋಗುತ್ತಿದ್ದಾರೆ ಎನ್ನಲಾದ ವಿಡಿಯೋವೊಂದು ಕೂಡ ವೈರಲ್ ಆಗಿದೆ. ಮದ್ಯ ಮಾರಾಟಕ್ಕೆ …
Read More »DSS ಮುಖಂಡನ ಬರ್ಬರ ಕೊಲೆ, ಭಯದ ವಾತಾವರಣ
ಗೋಕಾಕ: ಇಲ್ಲಿನ ಹರಿಜನ ಕೇರಿಯಲ್ಲಿ ದಲಿತ ಸಂಘರ್ಷ ಸಮಿತಿಯ ಮುಖಂಡನ ಬರ್ಬರ ಕೊಲೆ ನಡೆದಿದ್ದು ಗೋಕಾಕನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಸಿದ್ದು ಕನಮಡ್ಡಿ (26), ಗೋಕಾಕ ನಗರದ ಹರಿಜನ ಕೇರಿಯ ನಿವಾಸಿ ಬುಧವಾರ ರಾತ್ರಿ ಊಟದ ಬಳಿಕ ಮನೆಯ ಮುಂದೆಯೇ ಕುಳಿತಿದ್ದಾಗ 5 ಜನರು ಗುಂಪೊಂದು ಮಾರಕಸಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡಿದ್ದ ಸಿದ್ದು ಕನಮಡ್ಡಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಇಂದು ಬೆಳಿಗ್ಗೆ …
Read More »
Laxmi News 24×7