Breaking News

ರಾಜ್ಯ

ಯತ್ನಾಳ್ ಭವಿಷ್ಯ ಸುಳ್ಳಾಗಿಸಲು ಸಿಎಂ ಬಿಎಸ್‍ವೈ ಸರಣಿ ಸಭೆ

ಬೆಂಗಳೂರು, ಡಿ.31- ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಕುರಿತು ಎದ್ದಿರುವ ಅಸಮಾಧಾನ ನಿವಾರಿಸಲು ನಿಗದಿಯಾಗಿದ್ದ ಉತ್ತರಾಯಣ ಡೆಡ್ ಲೈನ್ ಸಮೀಪಿಸುತ್ತಿದೆ. ಹೊಸ ವರ್ಷದ ಸಂಕ್ರಮಣಕ್ಕೆ ಭಿನ್ನಮತ ಶಮನಗೊಳಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಂದಾಗಿದ್ದಾರೆ. ಇದರ ಭಾಗವಾಗಿ ಮುಖ್ಯಮಂತ್ರಿ ರೂಪಿಸಿರುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ರಣತಂತ್ರ ಯಶಸ್ಸು ಆಗುತ್ತಾ ಎಂಬುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಲಿದೆ. ಬರುವ ಸಂಕ್ರಮಣದ ಉತ್ತರಾಯಣದವರೆಗೂ ಕಾದು ನೋಡಿ …

Read More »

ಅಕ್ರಮ ಆಸ್ತಿ ಗಳಿಕೆ, ಸಬ್ ರಿಜಿಸ್ಟ್ರಾರ್ ಮನೆ ಮತ್ತು ಕಚೇರಿ ಮೇಲೆ ಎಸಿಬಿ ಅಧಿಕಾರಿಗಳ ದಾಳಿ

: ಅಕ್ರಮ ಆಸ್ತಿ ಗಳಿಕೆ, ಅನಧಿಕೃತವಾಗಿ ಕೆಲ ಆಸ್ತಿಗಳ ರಿಜಿಸ್ಟ್ರಾರ್ ಮಾಡಿರುವ ಆರೋಪ ಹಿನ್ನೆಲೆಯಲ್ಲಿ ಹೊಸಪೇಟೆ ಸಬ್ ರಿಜಿಸ್ಟ್ರಾರ್ ಮನೆ ಮತ್ತು ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಬ್ ರಿಜಿಸ್ಟ್ರಾರ್ ಆಗಿ ಕಾರ್ಯನಿರ್ವಹಿಸುತ್ತಿರುವ ಪ್ರಭಾಕರ್ ಅವರ ಹೊಸಪೇಟೆಯ ಮನೆ, ಕಚೇರಿ ಹಾಗೂ ವಿರುಪಾಪುರ ಗ್ರಾಮದಲ್ಲಿರುವ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಎಸಿಬಿ ಡಿವೈಎಸ್ ಪಿ ಚದ್ರಕಾಂತ ಪೂಜಾರ ನೇತೃತ್ವದಲ್ಲಿ ಈ …

Read More »

ಬಸವರಾಜ್ ಬೊಮ್ಮಾಯಿ, ಈ ವರ್ಷ ಹೊಸ ವರ್ಷಾಚರಣೆಗೆ ಅವಕಾಶವಿಲ್ಲ

ಬೆಂಗಳೂರು: ರೂಪಾಂತರ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆಗೆ ಸಂಪೂರ್ಣ ಬ್ರೇಕ್ ಹಾಕಲಾಗಿದ್ದು, ಸಾರ್ವಜನಿಕವಾಗಿ ಜನರು ಒಂದೆಡೆ ಸೇರುವುದನ್ನೂ ನಿಷೇಧಿಸಲಾಗಿದೆ. ವಿಧಾನಸೌಧದಲ್ಲಿ ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಈ ವರ್ಷ ಹೊಸ ವರ್ಷಾಚರಣೆಗೆ ಅವಕಾಶವಿಲ್ಲ. ಬೆಂಗಳೂರು ಮಾತ್ರವಲ್ಲ ಮಂಗಳೂರು, ಚಿಕ್ಕಮಗಳೂರು, ಮಡಿಕೇರಿ ಸೇರಿದಂತೆ ರಾಜ್ಯದ ಯಾವುದೇ ರೆಸಾರ್ಟ್ ಗಳಲ್ಲಿ ಕೂಡ ಸಾರ್ವಜನಿಕರು ಸೇರುವಂತಿಲ್ಲ. ಅಲ್ಲದೇ ಯಾವುದೇ ಡಿಜೆ, ಮ್ಯೂಸಿಕ್ ಪಾರ್ಟಿಗಳನ್ನು ಆಯೋಜನೆ ಮಾಡುವಂತಿಲ್ಲ. ಈ ಬಗ್ಗೆ ಸ್ಥಳೀಯ ಪೊಲೀಸ್ …

Read More »

ಬಿಬಿಎಂಪಿ ರಸ್ತೆಗಳಿಗೆ ಕೇವಲ ಮುಸ್ಲಿಮರ ಹೆಸರು ನಾಮಕರಣ ವಿರೋಧಿಸಿ ಹೆಗಡೆಯಿಂದ ಆಯುಕ್ತರಿಗೆ ಪತ್ರ

ಬಿಬಿಎಂಪಿ ರಸ್ತೆಗಳಿಗೆ ಕೇವಲ ಮುಸ್ಲಿಮರ ಹೆಸರು ನಾಮಕರಣ ವಿರೋಧಿಸಿ ಹೆಗಡೆಯಿಂದ ಆಯುಕ್ತರಿಗೆ ಪತ್ರ ಕಾರವಾರ: ಬೆಂಗಳೂರು ಮಹಾನಗರ ಪಾಲಿಕೆಯ ಪಾದರಾಯನಪುರದ ವಾರ್ಡ್‌ನಲ್ಲಿರುವ ರಸ್ತೆಗಳಿಗೆ ಕೇವಲ ಮುಸ್ಲಿಮರ ಹೆಸರನ್ನು ನಾಮಕರಣ ಮಾಡುವುದುನ್ನು ವಿರೋಧಿಸಿ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ ಪಾಲಿಕೆಯ ಆಯುಕ್ತರಿಗೆ ಪತ್ರ ಬರೆದು ವಿರೋಧ ವ್ಯಕ್ತಪಡಿಸಿದ್ದಾರೆ. ಪಾದರಾಯನಪುರದ ವಾರ್ಡ್‌ ಸಂಖ್ಯೆ 135 ರಲ್ಲಿ ಬರುವ ಅಡ್ಡ ರಸ್ತೆಗಳಿಗೆ ಸಮಾಜ ಸೇವಕರ ಹೆಸರು ಇಡಲು ತೀರ್ಮಾನಿಸಿತ್ತು. ಈ ಸಂಬಂಧ …

Read More »

ಬಸ್ ಮೇಲೆ ಬಾಂಬ್ ದಾಳಿ; 28ಕ್ಕೂ ಹೆಚ್ಚು ಜನ ಸಾವು

ಸಿರಿಯಾ: ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬಸ್ ಮೇಲೆ ಬಾಂಬ್ ದಾಳಿ ನಡೆಸಲಾಗಿದ್ದು, 28 ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಘಟನೆ ಸಿರಿಯಾದಲ್ಲಿ ನಡೆದಿದೆ. ರಜೆ ಮುಗಿಸಿ ಸೈನಿಕರು ತಮ್ಮ ನೆಲೆಗಳಿಗೆ ಮರಳುತ್ತಿದ್ದಾಗ ಸೈನಿಕರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಮರಭೂಮಿ ಪ್ರದೇಶದ ಗುಹೆಗಳಲ್ಲಿ ಅಡಗಿಕೊಂಡಿದ್ದ ಇಸ್ಲಾಮಿಕ್ ಸ್ಟೇಟ್ ಉಗ್ರರು ಈ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ದಾಳಿಯಲ್ಲಿ ಸೈನಿಕರು ಸೇರಿದಂತೆ ಹಲವರು ಸಾವನಪ್ಪಿದ್ದಾರೆ.

Read More »

ಬೆಳಗಾವಿಯಲ್ಲಿ ಮಹಿಳೆಯ ಭೀಕರ ಕೊಲೆ: ಕೊಲೆಗೆ ಕಾರಣವಾದರೂ ಏನು ?

ತಲವಾರಿನಿಂದ ಮಹಿಳೆಯನ್ನು ಕೊಚ್ಚಿ ಕೊಲೆಗೈದ ಘಟನೆ ಬುಧವಾರ ಬೆಳ್ಳಂಬೆಳಗ್ಗೆ ಬೆಳಗಾವಿ ಜಿಲ್ಲಾಸ್ಪತ್ರೆ ಕ್ಯಾಂಟೀನ್ ಬಳಿ ನಡೆದಿದೆ. ಬೈಲಹೊಂಗಲ ತಾಲೂಕಿನ ಮೂಗಬಸವ ಗ್ರಾಮದ ಸುಧಾರಾಣಿ ಕೊಲೆಯಾಗಿದ್ದು, ಇವರು ಜಿಲ್ಲಾಸ್ಪತ್ರೆಯಲ್ಲಿ ಸೆಕ್ಯುರಿಟಿಯಾಗಿದ್ದರು. ಈರಣ್ಣ ಬಾಬು ಜಗಜಂಪಿ ಕೊಲೆಗೈದವನು. ಹಣಕಾಸು, ಪ್ರೀತಿ-ಪ್ರೇಮವೇ ಈ ಕೊಲೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಕೈಗೊಂಡಿದ್ದಾರೆ.

Read More »

ಪೂಜ್ಯನಿಯ ತಂದೆ ಹಾಗೂ ತಾಯಿ ಅವರಿಗೆ ಸ್ಮರಿಸಿದ ಸಚಿವ ರಮೇಶ ಜಾರಕಿಹೊಳಿ.

ಶ್ರೀ ಲಕ್ಷ್ಮಣರಾವ್ ರಾಮಪ್ಪ ಜಾರಕಿಹೊಳಿ ಹಾಗೂ ಶ್ರೀಮತಿ ಭೀಮವ್ವ ಲಕ್ಷ್ಮಣರಾವ್ ಜಾರಕಿಹೊಳಿ ಅವರ ಪುಣ್ಯತಿಥಿ ; ಪೂಜ್ಯನಿಯ ತಂದೆ ಹಾಗೂ ತಾಯಿ ಅವರಿಗೆ ಸ್ಮರಿಸಿದ ಸಚಿವ ರಮೇಶ ಜಾರಕಿಹೊಳಿ ದೈವಿ ಸ್ವರೂಪಿಯಾಗಿದ್ದ ನೀವುಗಳು ನಮ್ಮನ್ನಗಲಿ 9 ವರ್ಷ ಕಳೆದವು. ನಿಮ್ಮ ಬದುಕು ಆಧರ್ಶಗಳು ನಮಗೆ ದಾರಿದೀಪವಾಗಿದ್ದು, ನಿಮ್ಮ ಸವಿ ನೆನಪು ನಮ್ಮ ಹೃದಯದಲ್ಲಿ ಸದಾ ಹಚ್ಚ್ ಹಸರಾಗಿದೆ. ನಿಮ್ಮ ಸರಳ ಸಜ್ಜನಕೆಯ ಜೀವನ, ಮಾರ್ಗದರ್ಶನ ಅವಿಸ್ಮರಣೇಯ. ಸಹಾಯ ಬಯಸಿದವರಿಗೆ ಪ್ರೀತಿ …

Read More »

ರಮೇಶ್ ಜಾರಕಿಹೊಳಿ ಅವರ ಬಲಗೈ ಬಂಟನಿಗೆ ಗೆಲುವು

ಗೋಕಾಕ ತಾಲೂಕಿನ ಗುಜನಾಳ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಭೀಮಗೌಡ ಪೊಲೀಸ್ ಗೌಡರ ಭರ್ಜರಿ ಜಯ ಸಾಧಿಸಿದ್ದಾರೆ.   ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಬೆಂಬಲಿಗರಾಗಿರುವ ಪೊಲೀಸ್ ಗೌಡರ ವಿಜಯ ಗ್ರಾಮದಲ್ಲಿ ನವೋತ್ಸಾಹ ತಂದಿದೆ.

Read More »

ಗ್ರಾಮ ಪಂಚಾಯತ ಚುನಾವಣೆಯಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ : ಡಿ.22 ರಂದು ನಡೆದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿತ ಅಭ್ಯರ್ಥಿಗಳು ಅರಭಾವಿ ಮತಕ್ಷೇತ್ರದ 33 ಗ್ರಾಮ ಪಂಚಾಯತಿಗಳಲ್ಲಿ ಮೇಲುಗೈ ಸಾಧಿಸುವತ್ತ ಹೆಜ್ಜೆ ಹಾಕುತ್ತಿದ್ದಾರೆ. ನಗರದಲ್ಲಿಂದು ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ ಮತ ಎಣಿಕೆಯಲ್ಲಿ ಅರಭಾವಿ ಮತಕ್ಷೇತ್ರದ ಎಲ್ಲ 33 ಗ್ರಾಮ ಪಂಚಾಯತಿಗಳಲ್ಲಿ ಬಿಜೆಪಿ ಬೆಂಬಲಿತ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದ ಬಣ ಸಂಪೂರ್ಣವಾಗಿ …

Read More »

70 ವರ್ಷ ಕಟ್ಟಿದ ದೇಶವನ್ನ 7 ವರ್ಷದಲ್ಲಿ ಹಾಳು ಮಾಡಿದ B.J.P.: ಸತೀಶ್ ಜಾರಕಿಹೊಳಿ

ಚಿಕ್ಕೋಡಿ ): ಬಿಜೆಪಿ ದೇಶದಲ್ಲಿ ಸುಳ್ಳಿನ ರಾಜಕೀಯ ಮಾಡುತ್ತಲೇ ದೇಶದ ಜನರ ದಾರಿ ತಪ್ಪಿಸುತ್ತಿದೆ. ಬಡವರನ್ನ ಉದ್ದಾರ ಮಾಡುತ್ತೇವೆ ಎಂದು ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ದೇಶದ ಬಡವರನ್ನ ಮತ್ತಷ್ಟು ಬಡವರನ್ನಾಗಿಸುತ್ತಿದೆ. ಇದೆ ಬಿಜೆಪಿಯವರ ಅಜೆಂಡಾ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬಿಜೆಪಿ ವಿರುದ್ದ ಹರಿಹಾಯ್ದಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುತ್ತೇವೆ ಎಂದು ಹೇಳುತ್ತಿರುವ ಬಿಜೆಪಿಯವರೆ ಅತಿ ಹೆಚ್ಚು ಗೋ ಮಾಂಸವನ್ನು ವಿದೇಶಗಳಿಗೆ ರಪ್ತು ಮಾಡುತ್ತಿದ್ದಾರೆ. …

Read More »