Breaking News

ರಾಜ್ಯ

ಫೇಸ್​ಬುಕ್​ ಸುಂದರಿಯಗಾಗಿ ಪತ್ನಿಯ ಚಿನ್ನವನ್ನೂ ಮಾರಿ ₹11 ಲಕ್ಷ ಪಂಗನಾಮ ಹಾಕಿಸಿಕೊಂಡ ಪತಿಮಹಾಶಯ!

ಮುಂಬೈ: ಸಾಮಾಜಿಕ ಜಾಲತಾಣದ ವಂಚನೆ ಕುರಿತಂತೆ ನಿತ್ಯವೂ ಹತ್ತಾರು ವರದಿಗಳು ಬರುತ್ತಲೇ ಇವೆ. ಬಹುತೇಕ ಎಲ್ಲಾ ಘಟನೆಗಳಲ್ಲಿಯೂ ಒಂದೇ ತೆರನಾಗಿ ಮೋಸದ ಜಾಲ ಮಾಡಿರುವ ಬಗ್ಗೆ ವರದಿಯಾಗುತ್ತಲೇ ಇವೆ. ಮೊದಲು ಹಣ ಕೇಳುವುದು ನಂತರ ಕಸ್ಟಮ್ಸ್​ ಅಧಿಕಾರಿಗಳ ಹೆಸರಿನಲ್ಲಿ ಕಾಲ್​ ಮಾಡುವುದು, ನಂತರ ಮೋಸ ಮಾಡಿ ಪಂಗನಾಮ ಹಾಕುವುದು… ಹೀಗೆ ವರದಿ ಬಂದರೂ ಯುವತಿಯರ ವಿಷಯ ಬಂದಾಗ ಗಂಡಸರಿಗೆ ಯಾಕೋ ಈ ಸುದ್ದಿಗಳು ನೆನಪಾಗುವುದೇ ಇಲ್ಲದಂತೆ ಕಾಣಿಸುತ್ತದೆ! ಅಂಥದ್ದೇ ಒಂದು …

Read More »

ಎಣ್ಣೆ ಪ್ರಿಯರಿಗೆ ಬಿಗ್ ಶಾಕ್..!

ನವದೆಹಲಿ : ಕೇಂದ್ರ ಸರ್ಕಾರವು ಮದ್ಯ ಪ್ರಿಯರಿಗೆ ಬಿಗ್ ಶಾಕ್ ನೀಡಿದ್ದು, ಈ ಬಾರಿಯ ಬಜೆಟ್ ನಲ್ಲಿ ಮದ್ಯ ದರ ಹೆಚ್ಚಿಸಲಾಗಿದೆ. ಬರೋಬ್ಬರಿ ಶೇ. 100 ರಷ್ಟು ತೆರಿಗೆ ವಿಧಿಸುವ ಮೂಲಕ ಕೇಂದ್ರ ಸರ್ಕಾರ ಎಣ್ಣೆ ಪ್ರಿಯರಿಗೆ ಶಾಕ್ ನೀಡಿದೆ. ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಮದ್ಯದ ಮೇಲೆ ಕೃಷಿ ಸೆಸ್ ವಿಧಿಸಿದ್ದು, ಮದ್ಯದ ಮೇಲೆ ಶೇ. 100 ರಷ್ಟು ತೆರಿಗೆ ವಿಧಿಸಿದೆ. ಸದ್ಯ ಪಾವತಿ ಮಾಡುತ್ತಿರುವ …

Read More »

ಗಣಿಗಾರಿಕೆಗೆ ಸಂಬಂಧಿಸಿದ ಪ್ರಸ್ತಾವನೆಗಳಿಗೆ ಸುಲಭವಾಗಿ ಹಾಗೂ ಸರಳವಾಗಿ ಅನುಮೋದನೆ: ನಿರಾಣಿ

ಬೆಂಗಳೂರು: ಗಣಿಗಾರಿಕೆಗೆ ಸಂಬಂಧಿಸಿದ ಪ್ರಸ್ತಾವನೆಗಳಿಗೆ ಸುಲಭವಾಗಿ ಹಾಗೂ ಸರಳವಾಗಿ ಅನುಮೋದನೆ ನೀಡಲು ಸಾಧ್ಯವಾಗುವಂಥ ‘ಏಕಗವಾಕ್ಷಿ’ ಪದ್ಧತಿ ಅಳವಡಿಸಲು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಮುಂದಾಗಿದ್ದಾರೆ. ಆ ಮೂಲಕ, ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದೆ ಬರುವ ಉದ್ದಿಮೆದಾರರಿಗೆ ಸುಲಭವಾಗಿ ಹಾಗೂ ಸುಲಲಿತವಾಗಿ ವ್ಯಾಪಾರ, ವಹಿವಾಟು ನಡೆಸಲು ಅನುಕೂಲವಾಗುವಂತೆ ಈ ಪದ್ಧತಿ ಜಾರಿಗೊಳಿಸಲು ತೀರ್ಮಾನಿಸಿದ್ದಾರೆ. ಇಲಾಖೆಯ ಅಧಿಕಾರಿಗಳು, ಉದ್ಯಮಿಗಳ ಜೊತೆ ಸಭೆ ನಡೆಸಿದ ಸಚಿವರು, ಹೂಡಿಕೆದಾರರು ಎದುರಿಸುತ್ತಿರುವ ಸಮಸ್ಯೆಗಳ …

Read More »

‘ಅನ್ನಭಾಗ್ಯ’ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್: ‘ಅಂತ್ಯೋದಯ’ ಕಾರ್ಡ್ ದಾರರಿಗೆ 35 ಕೆಜಿ ಅಕ್ಕಿ

ಯಾದಗಿರಿ: ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಡಿ ಯಾದಗಿರಿ ಜಿಲ್ಲೆಯಲ್ಲಿ ಫೆಬ್ರವರಿ ತಿಂಗಳ ಅನ್ನಭಾಗ್ಯ ಯೋಜನೆ ಹಾಗೂ ರಾಜ್ಯ ಸರ್ಕಾರದ ಎನ್.ಎಫ್.ಎಸ್.ಎ ಯೋಜನೆಯಡಿ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ. ಅಂತ್ಯೋದಯ ಅನ್ನ ಯೋಜನೆಯ 29,353 ಪಡಿತರ ಚೀಟಿಗಳಿಗೆ ಮತ್ತು ಎನ್.ಎಫ್.ಎಸ್.ಎ ಅಡಿಯಲ್ಲಿ ಪ್ರತಿ ಪಡಿತರ ಚೀಟಿಗೆ 35 ಕೆ.ಜಿ ಅಕ್ಕಿ ಹಾಗೂ 2,35,356 ಬಿಪಿಎಲ್ ಪಡಿತರ ಚೀಟಿಗಳ 8,49,922 ಪ್ರತಿ ಸದಸ್ಯರಿಗೆ 5 ಕೆ.ಜಿ. ಅಕ್ಕಿ ಹಾಗೂ ಓ.ಎಮ್.ಎಸ್.ಎಸ್.(ಡಿ) ಅಡಿಯಲ್ಲಿ ಬಿ.ಪಿ.ಎಲ್. ಪಡಿತರ …

Read More »

ಸಖತ್ ವೈರಲ್ ಆದ ಈ ವೆಡ್ಡಿಂಗ್ ಮೆನು ವಿಶೇಷತೆ ಏನು ಗೊತ್ತಾ..?

ಕೋಲ್ಕತ್ತಾ: ಆಧಾರ್ ಕಾರ್ಡ್ ಪಡೆಯುವುದು ಅದರಲ್ಲಿನ ಮಾಹಿತಿ ತಿದ್ದುಪಡಿ ಮಾಡಿಸುವುದೆಂದರೆ ದೊಡ್ಡ ಸಾಹಸವೇ ಸರಿ. ಆಧಾರ್ ಕೇಂದ್ರಗಳ ಮುಂದೆ ಉದ್ದದ ಕ್ಯೂ ಇರುವುದನ್ನು ಕಾಯಂ ಕಾಣುತ್ತೇವೆ. ಆದರೆ, ಇವರ ಮದುವೆಗೆ ಬಂದವರಿಗೆಲ್ಲ ಸುಲಭವಾಗಿ ಆಧಾರ್ ಕಾರ್ಡ್ ಸಿಕ್ಕಿದೆ.!!!! ಹೌದು, ಕೊಲ್ಕತ್ತಾದ ಗೋಗೋಲ್ ಶಹಾ ಹಾಗೂ ಸುಬರ್ನಾ ದಾಸ್ ಈ ವಾರದ ಪ್ರಾರಂಭದಲ್ಲಿ ವಿವಾಹವಾದರು. ಅವರ ಮದುವೆಗೆ ಹೋದವರಿಗೆಲ್ಲ ಆಧಾರ್ ಕಾರ್ಡ್ ನೀಡಲಾಗಿತ್ತು. ಆದರೆ, ಕಾರ್ಡ್ ನಿಜವಾದುದಲ್ಲ. ಮದವೆಯ ಊಟದಲ್ಲಿದ್ದ ತಿಂಡಿಗಳ …

Read More »

ಇಂದು ‘ಪೊಗರು’ ಚಿತ್ರದ ಖರಾಬು ಹಾಡು ತಮಿಳಿನಲ್ಲಿ ರಿಲೀಸ್

ನಂದಕಿಶೋರ್ ನಿರ್ದೇಶನದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷೆಯ ‘ಪೊಗರು’ ಚಿತ್ರದ ಖರಾಬು ಹಾಡು ಕನ್ನಡದಲ್ಲಿ ಈಗಾಗಲೇ 200ಮಿಲಿಯನ್ ವೀಕ್ಷಣೆ ಪಡೆಯುವ ಮೂಲಕ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ. ‘ಪೊಗರು’ ಸಿನಿಮಾ ತಮಿಳಿನಲ್ಲೂ ರಿಲೀಸ್ ಆಗುತ್ತಿದ್ದು, ಈ ಚಿತ್ರದ ಖರಾಬು ಹಾಡನ್ನು ತಮಿಳಿನಲ್ಲಿ ಇಂದು 12:12ಕ್ಕೆ ಬಿಡುಗಡೆ ಮಾಡುತ್ತಿದ್ದಾರೆ. ‘ಪೊಗರು’ ಸಿನಿಮಾ ಕನ್ನಡ ಸೇರಿದಂತೆ ತೆಲುಗು ಹಾಗೂ ತಮಿಳು ಭಾಷೆಯಲ್ಲಿ ರಿಲೀಸ್ ಆಗಲಿದೆ. ಬಿ ಕೆ ಗಂಗಾಧರ್ ಈ …

Read More »

ಫೆಬ್ರವರಿ 13ಕ್ಕೆ ‘ಪ್ರೇಮಂ ಪೂಜ್ಯಂ’ ಚಿತ್ರದ ಟೀಸರ್ ರಿಲೀಸ್

ಡಾ.ರಾಘವೇಂದ್ರ ಅವರ ಚೊಚ್ಚಲ ನಿರ್ದೇಶನದ ‘ಪ್ರೇಮಂ ಪೂಜ್ಯಂ’ ಸಿನಿಮಾ ಟೀಸರ್ ಅನ್ನು ಫೆಬ್ರವರಿ 13ರಂದು ಬಿಡುಗಡೆ ಮಾಡಲಿದ್ದಾರೆ. ಈ ಚಿತ್ರದಲ್ಲಿ ನೆನಪಿರಲಿ ಪ್ರೇಮ್ ನಾಯಕನಾಗಿ ಅಭಿನಯಿಸಿದ್ದು, ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಇದು ಅವರ 25ನೇ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ಐಂದ್ರಿತಾ ರೇ ನಾಯಕಿಯಾಗಿ ನಟಿಸಿದ್ದು, ಇತ್ತೀಚೆಗಷ್ಟೇ ಈ ಚಿತ್ರದ ಪ್ರೋಮೋವೊಂದನ್ನು kedambadicreations ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಿದ್ದರು. ಇದೀಗ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.

Read More »

ಭಕ್ತರ ನಂಬಿಕೆಗೆ ಧಕ್ಕೆಯಾಗದಂತೆ ಶಬರಿಮಲೆ ನಿಯಮ

ಕೊಚ್ಚಿ: ಮುಂಬರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಜಯ ಗಳಿಸಿದರೆ, ಶಬರಿಮಲೆಯಲ್ಲಿ ಮಹಿಳಾ ಪ್ರವೇಶಾತಿಗೆ ಸಂಬಂಧಿಸಿದಂತೆ ಭಕ್ತರ ನಂಬಿಕೆಗಳಿಗೆ ಧಕ್ಕೆಯಾಗದಂತೆ ನಿಯಮ ರೂಪಿಸಲಾಗುವುದು ಎಂದು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ (ಕೆಪಿಸಿಸಿ) ಮುಲ್ಲಪ್ಪಳ್ಳಿ ರಾಮಚಂದ್ರನ್ ಹೇಳಿಕೆ ನೀಡಿದ್ದಾರೆ. ಕೊಚ್ಚಿಯಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ರಾಮಚಂದ್ರನ್, ಮುಂಬರುವ ಚುನಾವಣೆಯಲ್ಲಿ ಯುಡಿಎಫ್ ಪ್ರಣಾಳಿಕೆಯಲ್ಲಿ ಶಬರಿಮಲೆ ವಿಷಯ ಪ್ರಮುಖ ಅಂಶವಾಗಿರಲಿದೆ ಎಂದು ಹೇಳಿದರು. ಯುಡಿಎಫ್ ಚುನಾವಣಾ ಪ್ರಣಾಳಿಕೆಯಲ್ಲಿ ಶಬರಿಮಲೆ …

Read More »

ವಿನಯ್‌ಗೆ ಜೋಡಿಯಾಗಿ ನಟಿ ಅದಿತಿ ಪ್ರಭುದೇವ

ಡಾ ರಾಜ್ ಮೊಮ್ಮಗ ವಿನಯ್ ರಾಜ್ ಕುಮಾರ್ ನಟಿಸುತ್ತಿರುವ ಹೊಸ ಚಿತ್ರಕ್ಕೆ ‘ಅದೊಂದಿತ್ತು ಕಾಲ’ ಎಂದು ಹೆಸರಿಡಲಾಗಿದೆ. ಈ ಚಿತ್ರದಲ್ಲಿ ವಿನಯ್‌ಗೆ ಜೋಡಿಯಾಗಿ ನಟಿ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ. ಈ ಚಿತ್ರಕ್ಕೆ ಕೀರ್ತಿ ನಿರ್ದೇಶನ ಮಾಡುತ್ತಿದ್ದು, ಇದು ಇವರ ಚೊಚ್ಚಲ ಸಿನಿಮಾ ಆಗಿದೆ. 90ರ ದಶಕದಲ್ಲಿ ನಡೆಯುವ ಕಥೆಯನ್ನು ಈ ಸಿನಿಮಾ ಹೊಂದಿದೆಯಂತೆ. ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಈ ಪೋಸ್ಟರ್‌ನಲ್ಲಿ ಪುಟ್ಟ ಹುಡುಗನೊಬ್ಬ ಗಾಳಿಪಟ …

Read More »

ಆರು ವರ್ಷಗಳಲ್ಲಿ ಕರ್ನಾಟಕದಲ್ಲಿ ಸಂಭವಿಸಿದ ಆನೆಗಳ ಸಾವು

ಬೆಂಗಳೂರು :ಇತ್ತೀಚೆಗೆ ತಮಿಳುನಾಡಿನ ಮಡುಮಲೈನಲ್ಲಿ ಆನೆಗೆ ಬೆಂಕಿ ಹಚ್ಚಿದ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ದೇಶಾದ್ಯಂತ, ಆನೆಗಳ ರಕ್ಷಣೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ದೇಶದಲ್ಲಿ ಆನೆಗಳ ತವರೂರಾದ ಕರ್ನಾಟಕದಲ್ಲಿ ಕಳೆದ ಆರು ವರ್ಷಗಳ ಅವಧಿಯಲ್ಲಿ ಸುಮಾರು 78 ಆನೆಗಳು ಮಾನವನ ದುಷ್ಕೃತ್ಯಕ್ಕೆ ಬಲಿಯಾಗಿವೆ ಎಂದು ತಿಳಿದು ಬಂದಿದೆ. ಇವುಗಳಲ್ಲಿ ಕ್ರಿಮಿನಾಶಕ ಔಷಧ ಸೇವನೆಯಿಂದ, ವಿದ್ಯುತ್ ಶಾಕ್ ನಿಂದ, ರಸ್ತೆ ಆಘಾತಗಳಿಂದ ಮತ್ತು ಬಂದೂಕುಗಳಿಂದ ಕೊಲ್ಲಲ್ಪಟ್ಟ ಘಟನೆಗಳು ನಡೆದಿವೆ. ಆರು ವರ್ಷಗಳ …

Read More »