Breaking News

ರಾಜ್ಯ

ಚೇಂಬರ್ ನಲ್ಲೇ ವಿದ್ಯಾರ್ಥಿನಿ ಮೇಲೆ ಅಧ್ಯಾಪಕನಿಂದ ಅತ್ಯಾಚಾರ: ಫೇಲ್ ಮಾಡುವುದಾಗಿ ಬೆದರಿಸಿ ಕೃತ್ಯ

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದಲ್ಲಿ ಅಧ್ಯಾಪಕನೊಬ್ಬ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಘಟನೆ ಬಗ್ಗೆ ದೂರು ದಾಖಲಾಗಿದೆ. ರಾಣೆಬೆನ್ನೂರು ಗ್ರಾಮಾಂತರ ಠಾಣೆ ಪೊಲೀಸರಿಗೆ ವಿದ್ಯಾರ್ಥಿನಿ ದೂರು ನೀಡಿದ್ದು, ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದಲ್ಲಿ ಸಹಾಯಕ ಅಧ್ಯಾಪಕ 2019 ರಿಂದ ನೀನು ನನಗೆ ಇಷ್ಟ, ನನಗೆ ಸಹಕರಿಸಿದರೆ ನನ್ನ ವಿಷಯದ ಪರೀಕ್ಷೆಯಲ್ಲಿ ಪಾಸ್ ಮಾಡುತ್ತೇನೆ. ಇಲ್ಲದಿದ್ದರೆ ಫೇಲ್ ಮಾಡುತ್ತೇನೆ ಎಂದು ಬೆದರಿಸಿ ಚೇಂಬರ್ ನಲ್ಲಿಯೇ ಅತ್ಯಾಚಾರ ಎಸಗಿರುವುದಾಗಿ ವಿದ್ಯಾರ್ಥಿನಿ …

Read More »

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರಿಗೆ ಗುಡ್ ನ್ಯೂಸ್

ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸೇವಾ ಹಿರಿತನದ ಮೇಲೆ ಗೌರವ ಧನ ನಿಗದಿ ಮಾಡುವ ಕುರಿತಾಗಿ ಕ್ರಮಕೈಗೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಅವರು ಅಂಗನವಾಡಿ ಕಾರ್ಯಕರ್ತೆಯರ ಹೋರಾಟದ ಬಗ್ಗೆ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದಾಗ ಸಚಿವರು ಈ ಬಗ್ಗೆ ಮಾಹಿತಿ ನೀಡಿ, ಸೇವಾ ಹಿರಿತನದ ಮೇಲೆ ಗೌರವ ಧನ ನಿಗದಿ ಮಾಡುವ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚನೆ …

Read More »

ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ ಕಂದಾಯ ಸಚಿವ ಆರ್. ಅಶೋಕ್‌ ವಾಸ್ತವ್ಯ

ಹುಬ್ಬಳ್ಳಿ: ಕಂದಾಯ ಸಚಿವ ಆರ್​ ಅಶೋಕ್ ಮತ್ತೊಂದು ಗ್ರಾಮ ವಾಸ್ತವ್ಯಕ್ಕೆ ಮುಂದಾಗಿದ್ದಾರೆ. ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ಅಂಗವಾಗಿ ಮಾರ್ಚ್​ 20ರಂದು ಕಂದಾಯ ಸಚಿವ ಅಶೋಕ್ ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದಾರೆ ಎಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. Grama Vastavya ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ: ಮೆರವಣಿಗೆ ಮುಖಾಂತರ ಕಂದಾಯ ಸಚಿವ ಅರ್. ಅಶೋಕ ‌ಅವರಿಗೆ ಸ್ವಾಗತ ‌ಮಾಡಿಕೊಳ್ಳಲು ಸಿದ್ದತೆ ನಡೆದಿದೆ. …

Read More »

ವಿಜಯಪುರದಲ್ಲೂ ಕೋವಿಡ್ ಎರಡನೇ ಅಲೆ ಸ್ಫೋಟ; ಆತಂಕ

ವಿಜಯಪುರ: ಜಿಲ್ಲೆಯಲ್ಲಿ ಕೋವಿಡ್ -19 ಎರಡನೇ ಅಲೆ ಪ್ರಾರಂಭವಾಗಿರುವ ಲಕ್ಷಣಗಳು ಕಂಡು ಬಂದಿದೆ. ಗುರುವಾರ ಒಂದೇ ದಿನ 46 ಕೋವಿಡ್ ಪಾಸಿಟಿವ್‌ ಪ್ರಕರಣಗಳು ವರದಿಯಾಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 14,719 ಜನರಲ್ಲಿ ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ವರದಿಯಾಗಿದ್ದು, 14,403 ಜನ ಗುಣಮುಖವಾಗಿದ್ದಾರೆ. 206 ಜನ ಕೋವಿಡ್‌ನಿಂದ ಸಾವಿಗೀಡಾಗಿದ್ದಾರೆ. ಸದ್ಯ 110 ಸಕ್ರಿಯ ಪ್ರಕರಣಗಳು ಇವೆ. ಕಳೆದ ನಾಲ್ಕೈದು ತಿಂಗಳಿಂದ ಈಚೆಗೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಪಾಸಿಟಿವ್‌ ಪ‍್ರಕರಣಗಳು …

Read More »

ಲಂಚ ಪಡೆಯುತ್ತಿದ್ದಾಗ ಬೆಳಗಾವಿ ಸ್ಮಾರ್ಟ್ ಸಿಟಿ ಟೆಕ್ನಿಕಲ್ ಮ್ಯಾನೇಜರ್ ಸಿದ್ದನಾಯ್ಕ್  ದೊಡ್ಡಬಸಪ್ಪ ನಾಯ್ಕರ್ ಎಸಿಬಿ ಬಲೆಗೆ

ಬೆಳಗಾವಿ – ಬಿಲ್ ಪಾಸ್ ಮಾಡಲು 60 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಬೆಳಗಾವಿ ಸ್ಮಾರ್ಟ್ ಸಿಟಿ ಟೆಕ್ನಿಕಲ್ ಮ್ಯಾನೇಜರ್ ಸಿದ್ದನಾಯ್ಕ್  ದೊಡ್ಡಬಸಪ್ಪ ನಾಯ್ಕರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.   ಸ್ಮಾರ್ಟ್ ಸಿಟಿ ಯೋಜನೆಯಿಂದ ಬೆಳಗಾವಿ ನಗರದಲ್ಲಿ ನಿರ್ಮಿಸಲಾಗುತ್ತಿರುವ ಬಸ್ ನಿಲ್ದಾಣದ ಕಾಮಗಾರಿಯ ಬಿಲ್ ಪಾಸ್ ಮಾಡಲು ಶೇ.0.5ರಷ್ಟು ಅಂದರೆ, 60 ಸಾವಿರ ರೂ. ಲಂಚ ಕೇಳಿದ್ದರು. 60 ಸಾವಿರ ರೂಗಳನ್ನು ತಮ್ಮ ಮನೆಯಲ್ಲಿ ಸ್ವೀಕರಿಸುತ್ತಿದ್ದಾಗ ಗುರುವಾರ ಸಂಜೆ ಎಸಿಬಿ …

Read More »

ಮಕ್ಕಳನ್ನ ಸರ್ಕಾರಿ ಶಾಲೆಗೆ ಸೇರಿಸಿ ಋಣ ತೀರಿಸಿ-ಗುನ್ನಳ್ಳಿ ರಾಘವೇಂದ್ರ-

ಮಕ್ಕಳನ್ನ ಸರ್ಕಾರಿ ಶಾಲೆಗೆ ಸೇರಿಸಿ ಋಣ ತೀರಿಸಿ-ಗುನ್ನಳ್ಳಿ ರಾಘವೇಂದ್ರ-ಸರ್ಕಾರಿ ನೌಕರರು ಸಾರ್ವಜನಿಕ ಕ್ಷೇತ್ರದಲ್ಲಿರುವವರು ಸಂಘಟನಾಕಾರರು ಹಾಗೂ ಜನಪ್ರತಿನಿಧಿಗಳು,ಮೊದಲು ಅವರ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕಿದೆ ಎಂದು ಎಸ್ಡಿ ಎಮ್ಸಿ ಮೇಲುಸ್ತುವಾರಿ ಸಮಿತಿ ರಾಜ್ಯ ಮುಖಂಡ ಗುನ್ನಳ್ಳಿ ರಾಘವೇಂದ್ರ ಹೇಳಿದರು. ಅವರು ಪಟ್ಟಣದ ಆದರ್ಶ ಮಹಾವಿದ್ಯಾಲಯದಲ್ಲಿ,ಎಸ್ಡಿಎಮ್ಸಿ ಪದಾಧಿಕಾರಿಗಳ ಆಯ್ಕೆ ಸಭೆಯನ್ನುದ್ದೇಶಿಸಿ ಮಾತನಾಡಿದರು.ಸರ್ಕಾರಿ ನೌಕರರು ಮೊದಲು ಅವರ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲಿ,ಈ ಮೂಲಕ ಅವರು ಸರ್ಕಾರದ ಋಣ ತೀರಿಸಲಿ ರಾಜಕಾರಣಿಗಳು ಹಾಗೂ …

Read More »

ಒಬ್ಬನೊಂದಿಗೇ ಅಮ್ಮ-ಮಗಳ ಅಕ್ರಮ ಸಂಬಂಧ!

ದಾವಣಗೆರೆ: ಅಮ್ಮ-ಮಗಳಿಗೆ ಒಬ್ಬನೇ ಪ್ರಿಯಕರ. ಅಮ್ಮನ ಅಕ್ರಮ ಸಂಬಂಧಕ್ಕೆ ಸಾಥ್​​ ಕೊಟ್ಟ ಮಗಳು ಕೂಡ ಅಮ್ಮನ ಹಾದಿಯನ್ನೇ ಹಿಡಿದಳು. ಅದೂ ಅಮ್ಮನ ಪ್ರಿಯಕರನೊಟ್ಟಿಗೆ. ಈ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ವೃದ್ಧನೊಬ್ಬನನ್ನ ಪ್ರಿಯಕರನ ಮೂಲಕವೇ ತಾಯಿ-ಮಗಳು ಕೊಲೆ ಮಾಡಿಸಿ ಅಸಹಜ ಸಾವು ಎಂದು ಬಿಂಬಿಸಿದ್ದರು. ಇದೀಗ ಕೊಲೆ ರಹಸ್ಯ ಬಯಲಾಗಿದೆ. ಹೊನ್ನಾಳಿ ತಾಲೂಕಿನ‌ ಕುಳಗಟ್ಟ ಗ್ರಾಮದಲ್ಲಿ ಮಾ.2ರಂದು ಮಂಜಪ್ಪ(70) ಮೃತಪಟ್ಟಿದ್ದ. ಅಸಹ ಸಾವು‌ ಎಂದು ಪ್ರಕರಣ ದಾಖಲಾಗಿತ್ತು. ಅನುಮಾನಗೊಂಡ ಪೊಲೀಸರು ಸಾವಿನ …

Read More »

ಬೆಳಗಾವಿ ಜಿಲ್ಲೆಯಲ್ಲಿ ಇಂದು 24 ಕೊರೊನಾ ಕೇಸ್ ಪತ್ತೆ..ಸದಾಶಿವನಗರ ಈಗ ಮೈಕ್ರೋ ಕಂಟೇನ್ಮೆಂಟ್ ಪ್ರದೇಶ

ದಿನದಿಂದ ದಿನಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಆರ್ಭಟ ಶುರುವಾಗಿದೆ. ಜಿಲ್ಲೆಯ್ಲಿ ಇಂದು ಒಟ್ಟು 24 ಕೊರೊನಾ ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿವೆ. ಇದರಿಂದ ಕುಂದಾನಗರಿ ಜನರಲ್ಲಿ ಆತಂಕ ಮನೆ ಮಾಡಿದೆ. ಹೌದು ಗುರುವಾರ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿದ ಹೆಲ್ತ್ ಬುಲೆಟಿನ್‍ನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 24 ಜನರಿಗೆ ಮಹಾಮಾರಿ ಕೊರೊನಾ ವಕ್ಕರಿಸಿಕೊಂಡಿದೆ. ಇದರಲ್ಲಿ ಸದಾಶಿವನಗರದಲ್ಲಿಯೇ 7 ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿರುವ ಹಿನ್ನೆಲೆ ಸರ್ಕಾರದ ಆದೇಶದಂತೆ ಮೈಕ್ರೋ …

Read More »

ತಂದೆಯ ಆಶೀರ್ವಾದ ಪಡೆದು ಮಸ್ಕಿಯತ್ತ ಹೊರಟ ಸಿಎಂ ಪುತ್ರ ವಿಜಯೇಂದ್ರ

ಬೆಂಗಳೂರು : ಉಪ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಸಿಎಂ ಪುತ್ರ ವಿಜಯೇಂದ್ರ ಮಸ್ಕಿಗೆ ಪ್ರಯಾಣ ಬೆಳೆಸಿದ್ದಾರೆ. ಚುನಾವಣೆವರೆಗೂ ಕ್ಷೇತ್ರದಲ್ಲೇ ಬೀಡುಬಿಟ್ಟು ಪ್ರಚಾರ ಕಾರ್ಯ ನಡೆಸಲಿದ್ದಾರೆ. ಕೆ.ಆರ್. ಪೇಟೆ ಹಾಗೂ ಶಿರಾ ಕ್ಷೇತ್ರದ ಉಪ ಕದನದಲ್ಲಿ ಪಕ್ಷದ ಗೆಲುವಿಗೆ ಕಾರಣರಾದ ವಿಜಯೇಂದ್ರಗೆ ಮಸ್ಕಿ ಕ್ಷೇತ್ರದ ಉಸ್ತುವಾರಿ ನೀಡಲಾಗಿದೆ. ಸಂಭಾವ್ಯ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ ಮನವಿಯಂತೆ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನೇ ಕ್ಷೇತ್ರದ ಉಸ್ತುವಾರಿಯನ್ನಾಗಿ ನೇಮಕ ಮಾಡಿದ್ದು, ಜವಾಬ್ದಾರಿ ನಿರ್ವಹಿಸಲು …

Read More »

ಬಸ್ ಬ್ರೇಕ್ ಫೇಲ್: ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತ

ಗದಗ: ಸಾರಿಗೆ ಸಂಸ್ಥೆಯ ಬಸ್ ನ ಬ್ರೇಕ್ ವೈಫಲ್ಯವಾದರೂ, ಚಾಲಕನ ಸಮಯ ಪ್ರಜ್ಞೆಯಿಂದ ನಡೆಯಬಹುದಾಗಿದ್ದ ಭಾರಿ ಅಪಾಯವೊಂದು ತಪ್ಪಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.     ಶಿರಹಟ್ಟಿಯಿಂದ ಮುಂಡರಗಿ ಪಟ್ಟಣಕ್ಕೆ ತೆರಳುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ನಲ್ಲಿ 30ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಆದರೆ ಬಾಗೇವಾಡಿ ಗ್ರಾಮದ ಬಳಿ ಬಸ್ ಬ್ರೇಕ್ ವೈಫಲ್ಯವಾಗಿತ್ತು. ತಕ್ಷಣ ಎಚ್ವೆತ್ತುಕೊಂಡ ಬಸ್ ಚಾಲಕ ಸಿದ್ದಪ್ಪ ಗುದ್ದಿನ್, ರಸ್ತೆಗೆ ಹೊಂದಿಕೊಂಡಿರುವ ಗುಡ್ಡಕ್ಕೆ ಬಸ್ ಏರಿಸಿದ್ದಾರೆ. ಇದರಿಂದ …

Read More »